UV Fusion: ಹಕ್ಕಿಯ ಹಾಡಿಗೆ ತಲೆದೂಗಲು ಹಕ್ಕಿಗಳೇ ಇಲ್ಲ!


Team Udayavani, Jan 14, 2025, 5:12 PM IST

7

ಒಮ್ಮೆ ಯೋಚಿಸಿ, ‘ಹಕ್ಕಿಯ ಹಾಡಿಗೆ ತಲೆದೂಗುವ ಹೂವು ನಾನಾಗುವ ಆಸೆ’ ಎಂದು ಹಾಡಲು ಹಕ್ಕಿಗಳ ಸದ್ದೇ ಇರದೆ ಹೋದರೆ? ಸಂಪಿಗೆ ಮರದ ಹಸಿರೆಲೆಯಲ್ಲಿ ಕೂತು ಹಾಡಲು ಕೋಗಿಲೆಗಳೇ ಇರದೆ ಹೋದರೆ? ಪಕ್ಷಿಕಾಶಿಯ ಕರ್ತೃ ಕುವೆಂಪು ಅವರಿಗೆ ಆಗಸದಲ್ಲಿ ಹಾರುವ ಬೆಳ್ಳಕ್ಕಿಯ ಹಿಂಡು ದೇವರ ರುಜುವಿನಂತೆ ಕಂಡಿತ್ತಂತೆ, ಭವಿಷ್ಯದಲ್ಲಿ ಅವುಗಳು ಕೂಡ ಮಾಯವಾದರೆ? ಇದೆಲ್ಲಾ ನಿಜರೂಪ ಪಡೆಯಲು ಬಹಳ ವರ್ಷಗಳು ಕಾಯಬೇಕಿಲ್ಲ. ಅದು ಸರಿ, ಇಂದು ನಿಮ್ಮ ಕಣ್ಣಿಗೆ ಎಲ್ಲಾದರೂ ಹಕ್ಕಿಗಳು ಕಂಡವಾ? ಅಥವಾ ಅವುಗಳ ಸದ್ದು ನಿಮ್ಮ ಕಿವಿಗಳಿಗೆ ಬಿತ್ತಾ? ಪ್ರಾಯಶಃ ಹಕ್ಕಿಗಳೆಲ್ಲಾ ಸೇರಿ ಒಂದೆಡೆ ದೌಡಾಯಿಸಿ ಮೌನ ಪ್ರತಿಭಟನೆ ನಡೆಸುತ್ತಿರಬೇಕು! ಮನುಷ್ಯರ ಸ್ವಾರ್ಥಕ್ಕೆ ಬಲಿಯಾಗಿ, ತಮ್ಮ ಇಂಪಾದ ದನಿಯಿಂದ ಪ್ರಕೃತಿಯ ಸೊಗಸನ್ನು ಹೆಚ್ಚಿಸುತ್ತಾ, ಪರಿಸರ ವ್ಯವಸ್ಥೆಯಲ್ಲಿ ಪ್ರಾಮುಖ್ಯ ವಹಿಸುತ್ತಿದ್ದ ಪಕ್ಷಿ ಸಮೂಹದ ಶೋಕಗೀತೆಯಿದು.

ಇಂದು ಜನವರಿ 5 ಪಕ್ಷಿಗಳ ದಿನ. ಈ ದಿನದಂದು ಆಚರಣೆ ಒಂದೆಡೆ ಇರಲಿ, ಪಕ್ಷಿಗಳ ರಕ್ಷಣೆಯ ಬಗ್ಗೆ ನಾವೆಲ್ಲಾ ಚರ್ಚಿಸಬೇಕಿದೆ. ವರ್ಷದಿಂದ ವರ್ಷಕ್ಕೆ ಅಪಾರ ಪ್ರಮಾಣದಲ್ಲಿ ಅನೇಕ ಅಪರೂಪದ ಪಕ್ಷಿ ಸಂಕುಲಗಳು ಕಣ್ಮರೆಯಾಗುತ್ತಿವೆ. ನಗರೀಕರಣ ದಿಂದಾಗಿಯೋ, ಬೇಟೆಗಾರರ ದುರಾಸೆಯಿಂದಾಗಿಯೋ, ಆವಾಸಸ್ಥಾನದ ನಷ್ಟದಿಂದಾಗಿಯೋ, ಇನ್ನೂ ಹಲವು ಕಾರಣಗಳಿಂದ ಎಷ್ಟೋ ಹಕ್ಕಿ ಸಮೂಹಗಳ ಮಾರಣ ಹೋಮ ನಡೆದಿದೆ. ಕೆಲವು ಸಮೀಕ್ಷೆಗಳ ಪ್ರಕಾರ ಇದುವರೆಗೂ 1,430 ಪಕ್ಷಿ ಪ್ರಭೇದಗಳ ಅಳಿವಿಗೆ ಅತ್ಯಂತ ಬುದ್ಧಿವಂತ ಪ್ರಾಣಿ ಅನಿಸಿಕೊಂಡಿರುವ ಮಾನವರು ಕಾರಣರಾಗಿದ್ದಾರೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೂಂದಿಲ್ಲ. ‘ಬರ್ಡ್ಸ್‌ ಆಫ್ ಇಂಡಿಯಾ’ ವೆಬ್‌ಸೈಟ್‌ನ ಪ್ರಕಾರ, ಭಾರತದಲ್ಲಿನ 182 ಜಾತಿಯ ಪಕ್ಷಿಗಳು ಅಳಿವಿನಂಚಿನಲ್ಲಿರುವ, ತೀವ್ರವಾಗಿ ಅಳಿವಿನಂಚಿನಲ್ಲಿರುವ, ದುರ್ಬಲವಾಗಿ ಅಥವಾ ಕಡಿಮೆ ಪ್ರಮಾಣದಲ್ಲಿ ಅಳಿವಿನಂಚಿನಲ್ಲಿರುವ ಕೆಂಪು ಪಟ್ಟಿಯಲ್ಲಿದೆ. ಅದರಲ್ಲಿ ಪ್ರಮುಖವಾಗಿ ಒಂದು ಕಾಲದಲ್ಲಿ ಭಾರತದ ರಾಷ್ಟ್ರಪಕ್ಷಿಯಾಗಿಸಲು ಪ್ರಸಿದ್ಧ ಪಕ್ಷಿತಜ್ಞ ‘ಸಲೀಂ ಅಲಿ’ಯವರು ಸೂಚಿಸಿದ ಕನ್ನಡದಲ್ಲಿ ‘ಹೆಬ್ಬಕ’ಗಳೆಂದು ಕರೆಸಿಕೊಳ್ಳುವ The Great Indian Bustard ‘ಗಳು ಅಗ್ರ ಸ್ಥಾನದಲ್ಲಿದೆ. ಬಹುಶಃ ಅಂದು ನವಿಲಿಗೆ ಪೈಪೋಟಿ ಕೊಟ್ಟು ಹೆಬ್ಬಕಗಳು ಭಾರತದ ರಾಷ್ಟ್ರಪಕ್ಷಿಯಾಗಿದ್ದರೆ ಇಂದು ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಬೇಧಗಳ ಪಟ್ಟಿಯಲ್ಲಿ ಇರುತ್ತಿರಲಿಲ್ಲವೇನೋ. ಆಗಲಾದರೂ ಸರಕಾರಗಳು ಇವುಗಳ ರಕ್ಷಣೆಗಾಗಿ ಇನ್ನೂ ಹೆಚ್ಚು ಕಠಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದವು. ಇದರ ಜತೆಗೆ ಕೆಂಪು ತಲೆಯ ರಣಹದ್ದುಗಳು, ಕಾಡು ಗೂಬೆಗಳು, ಸ್ಪೂನ್‌ ಬಿಲ್ಡ್‌ ಸ್ಯಾಂಡ್‌ಪೈಪರ್‌ಗಳು, ಜೆರ್ಡನ್ಸ್‌ ಕೋರ್ಸರ್‌ಗಳು, ಬಂಗಾಲ ಫ್ಲೋರಿಕನ್‌ಗಳನ್ನು ಸೇರಿ ಅನೇಕ ಅಪರೂಪದ ಪ್ರಬೇಧಗಳು ಭಾರತದಲ್ಲಿ ಅಳಿವಿನಂಚಿ ನಲ್ಲಿರುವುದು ಎಚ್ಚರಿಕೆಯ ಗಂಟೆಯಾಗಿದೆ.

ಈ ಪಟ್ಟಿಯಲ್ಲಿ ಅಳಿವಿನಂಚಿನಲ್ಲಿ ಇಲ್ಲದೆ ಇದ್ದರೂ ದುರ್ಬಲ (Vulnerable) ಪಕ್ಷಿ ಪ್ರಭೇದಗಳ ಸಾಲಿನಲ್ಲಿ ಬುಡುಬುಡಿಕೆಯ ಶಕುನದ ಹಕ್ಕಿಗಳಾದ “ಹಾಲಕ್ಕಿ’ಗಳೂ ಇರುವುದು ಮತ್ತೂಂದು ಶೋಚನೀಯ ಸಂಗತಿ. ‘ಹಾಲಕ್ಕಿ ನುಡಿತೈತೆ’ ಎಂದು ಬುಡುಬುಡಿಕೆ ಬಾರಿಸಿ ಶಕುನ ಹೇಳುತ್ತಿದ್ದ ಕಲಾವಿದರಿಗೆ ಹಾಲಕ್ಕಿ (Spotted Owlet) ಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ತಮ್ಮ ಕಸುಬಿಗೆ ಭಾರಿ ಪೆಟ್ಟು ಕೊಟ್ಟಂತಾಗಿದೆ, ಆಧುನಿಕ ಯುಗದಲ್ಲಿ ತಮ್ಮ ವಂಶಪಾರಂಪರ್ಯವಾಗಿ ಬಂದ ಕಲೆಯನ್ನು ಉಳಿಸಲು ಪರದಾಡುತ್ತಿರುವ ಕಲಾವಿದರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಇದೇ ರೀತಿ ಸಾಕಷ್ಟು ಪಕ್ಷಿ ಪ್ರಬೇಧಗಳು ಅಳಿವಿನಂಚಿನಲ್ಲಿವೆ, ಅಳಿವಿನಂಚಿಗೆ ಸಮೀಪಿಸುತ್ತಿವೆ ಮತ್ತು ಎಷ್ಟೋ ಪ್ರಬೇಧಗಳು ನಶಿಸಿ ಹೋಗಿವೆ. ಇದರ ಬಗ್ಗೆ ಚರ್ಚೆಗಳು ಅತ್ಯಗತ್ಯ. ಪರಿಸರ ವ್ಯವಸ್ಥೆಯಲ್ಲಿ ಆವಾಸಸ್ಥಾನದ ಬದಲಾವಣೆಯ ಪ್ರಮುಖ ಸಂವೇದನಾಶೀಲವಾಗಿರುವ ಕಾರಣಕ್ಕೆ ಮತ್ತು ಹಕ್ಕಿಗಳ ಜನಗಣತಿಗೆ ಸುಲಭವಾಗಿರುವುದರಿಂದ, ಪರಿಸರದ ಆರೋಗ್ಯವನ್ನು, ಅಪಾಯಗಳನ್ನು ಅಳೆಯುವ ಪರಿಸರಶಾಸ್ತ್ರಜ್ಞರಿಗೆ ಪಕ್ಷಿಗಳು ಪ್ರಮುಖ ಸಾಧನವಾಗಿದೆ. ನಾವು ಜೀವಿಸುತ್ತಿರುವ ಪ್ರಕೃತಿಯಲ್ಲಿ ನಮಗಿಂತಲೂ ಹೆಚ್ಚು ಬದುಕಲು ಯೋಗ್ಯವುಳ್ಳಂಥ ಪಕ್ಷಿ ಸಮೂಹದ ರಕ್ಷಣೆಯ ಬಗ್ಗೆ ಎಲ್ಲರೂ ಗಮನ ನೀಡಬೇಕಾಗಿದೆ. ವನ ನಾಶ, ಬೇಟೆ, ಹವಾಮಾನ ಬದಲಾವಣೆ, ಮಾಲಿನ್ಯಗಳು, ತಂತ್ರಜ್ಞಾನದ ಹೆಸರಿನಲ್ಲಿ ಮಾಡುತ್ತಿರುವ ಹುಚ್ಚಾಟಗಳು, ಅತಿಯಾದ ಮೀನುಗಾರಿಕೆ, ಅಕ್ರಮ ವ್ಯಾಪಾರ, ಆಧುನಿಕ ಕೃಷಿ ಪದ್ಧತಿಗಳು. ಅಬ್ಬಬ್ಟಾ! ಬುದ್ಧಿವಂತ ಪ್ರಾಣಿಗಳು ಅನಿಸಿಕೊಂಡಿರುವ ಮನುಷ್ಯ ಜಾತಿಯ ನಾವು ಇಡೀ ಪಕ್ಷಿಸಮೂಹ ನಾಶವಾಗಿ ಹೋಗಲು ಬೇಕಾದ ಎಲ್ಲವನ್ನು ಮಾಡಿಬಿಟ್ಟಿದ್ದೇವೆ. ಈಗ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಅಷ್ಟೇ ಪ್ರಮಾಣದ ರಕ್ಷಣಾ ಕ್ರಮಗಳನ್ನು ಅನುಸರಿಸಬೇಕಿದೆ. ಇಲ್ಲದೇ ಹೋದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳು – ಪಕ್ಷಿಗಳು ಎಂದರೇನು? ಅವು ಹೇಗಿರುತ್ತವೆ? ಎಂದು ಪ್ರಶ್ನೆ ಕೇಳಿದರೆ ಆಶ್ಚರ್ಯ ಇಲ್ಲ.

ಸ್ವಾಮಿ ಶಶಾಂಕ್‌ ಟಿ.ಹೆಚ್‌.ಎಂ., ದಾವಣಗೆರೆ

ಟಾಪ್ ನ್ಯೂಸ್

1-vijayapura

Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

1-koragajja

C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

rajnath 2

PoK ಇಲ್ಲದೆ ಜಮ್ಮು ಮತ್ತು ಕಾಶ್ಮೀರವು ಅಪೂರ್ಣ: ಪಾಕ್ ಗೆ ರಾಜನಾಥ್ ಎಚ್ಚರಿಕೆ

siddaramaiah

Congress; ಗೊಂದಲಗಳ ಮಧ್ಯೆ ದೆಹಲಿ ಪ್ರವಾಸ ಕೈಗೊಂಡ ಸಿಎಂ ಸಿದ್ದರಾಮಯ್ಯ

1-yoon-sook

South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ

Kenchappa-Gowda

ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Motherhood: ತಾಯ್ತನದ ಪ್ರೀತಿ..

12-uv-fusion

Mother: ಅಮ್ಮಾ ನಿನಗೂ ಅವಕಾಶ ಸಿಗಬೇಕಿತ್ತು!

11-uv-fusion

UV Fusion: ದುಡುಕಿನ ತೊಡಕುಗಳಿಗೆ ತಾಳ್ಮೆಯೇ ಮದ್ದು

13

UV Fusion: ಚಿಂತೆಯನ್ನು ಚಿಂದಿ ಮಾಡಿ ಒಮ್ಮೆ ನೀ ನಗು…

12

UV Fusion: ನಿಮ್ಮೊಳಗಿರಲಿ ಜೀವಕಳೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

Bengaluru: ಬಿಬಿಸಿಯಲ್ಲಿ ಬೆಂಕಿ ಅವಘಡ: 152 ಕೋಟಿ ನಷ್ಟ

2

Bengaluru: ಮಗು ಮೇಲೆ ಲೈಂಗಿಕ ದೌರ್ಜನ್ಯ, ಹ*ತ್ಯೆ

1-vijayapura

Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

Actor Darshan: 7 ತಿಂಗಳ ಬಳಿಕ ಮೊದಲ ಸೋಶಿಯಲ್‌ ಮೀಡಿಯಾ ಪೋಸ್ಟ್‌ ಹಂಚಿಕೊಂಡ ʼದಾಸʼ

1-koragajja

C.T.Ravi ಪರವಾಗಿ ಸ್ವಾಮಿ ಕೊರಗಜ್ಜನ ಮೊರೆ ಹೋದ ಬಿಜೆಪಿ ಕಾರ್ಯಕರ್ತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.