BBK11: ದೈತ್ಯರನ್ನೇ ಮಣ್ಣು ಮುಕ್ಕಿಸಿ ಮಹತ್ವದ ಟಾಸ್ಕ್ ನಲ್ಲಿ ಮಿಂಚಿದ ಧನರಾಜ್
Team Udayavani, Jan 14, 2025, 11:02 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ಭೀತಿ ಶುರುವಾಗಿದೆ. ಟಾಸ್ಕ್ ನಲ್ಲಿ ಹೇಗಾದರೂ ಮಾಡಿ ಗೆದ್ದು ಸೇಫ್ ಆಗುವ ಬಗ್ಗೆ ಸ್ಪರ್ಧಿಗಳು ಯೋಚನೆ ಮಾಡಲು ಶುರು ಮಾಡಿದ್ದಾರೆ.
ಮೋಕ್ಷಿತಾ ಅವರು ಎಲಿಮಿನೇಷನ್ ವಿಚಾರದಲ್ಲಿ ಬೇಸರದಲ್ಲಿದ್ದಾಗ, ಮಂಜು ಅವರು ಬಂದು ನೀವು ಹಾಗೂ ಭವ್ಯಾ ಫಿನಾಲೆವರೆಗೂ ಬರುತ್ತೀರಿ ತಲೆ ಕೆಡಿಸಿಕೊಳ್ಳಬೇಡಿ ಎಂದು ಸಮಾಧಾನ ಪಡಿಸಿದ್ದಾರೆ.
ನನ್ನನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದೀರಿ. ಈ ರೀತಿ ಮಾಡಿಕೊಳ್ಳುವ ಅಗತ್ಯ ಇರಲಿಲ್ಲ ಭವ್ಯಾ ಎಂದು ತಿವಿಕ್ರಮ್ ಅವರು ಹೇಳಿದ್ದಾರೆ. ನನ್ನನ್ನು ಈ ಮನೆಯಲ್ಲಿ ನಿಮ್ಮಗಿಂತ ಒಳ್ಳೆ ರೀತಿ ಅರ್ಥ ಮಾಡಿಕೊಳ್ಳುವವರು ಬೇರೆ ಯಾರು ಇದ್ದಾರೆ ಎಂದಾಗ ನಾನು ನಿಮ್ಮನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡಿಲ್ಲ ತಿವಿಕ್ರಮ್ ಎಂದು ಭವ್ಯಾ ಹೇಳಿದ್ದಾರೆ.
ಈ ಆಟದಲ್ಲಿ ಗೆದ್ದು ಸೇಫ್ ಆಗಬೇಕೆಂದು ಧನರಾಜ್ ಹನುಮಂತು ಬಳಿ ಹೇಳಿಕೊಂಡಿದ್ದಾರೆ. ಟಾಸ್ಕ್ ಗೆದ್ದು ಒಳ್ಳೆಯ ಪಾಯಿಂಟ್ಸ್ ಗಳಿಸಬೇಕೆಂದು ಹೇಳಿದ್ದಾರೆ. ಇನ್ನೊಂದು ಕಡೆ ರಜತ್ – ತಿವಿಕ್ರಮ್ ಅವರು ಮಂಜು ಅವರು ಯಾವುದೇ ಪಾಯಿಂಟ್ಸ್ ಗಳಿಸಿಲ್ಲವೆಂದು ನಕ್ಕಿದ್ದಾರೆ.
ಧನರಾಜ್ ಅವರು ರಜತ್, ಮೋಕ್ಷಿತಾ ಹಾಗೂ ಮಂಜು ಅವರನ್ನು ತಮ್ಮ ಎದುರಾಳಿಯಾಗಿ ಟಾಸ್ಕ್ ಆಡಲು ಆಯ್ಕೆ ಮಾಡಿದ್ದಾರೆ. ಈ ಸುತ್ತಿನಲ್ಲಿ ಮಂಜು ಅವರು ಟಾಸ್ಕ್ ಮುಗಿಸಿದ್ದಾರೆ. ಎರಡನೇದಾಗಿ ಮೋಕ್ಷಿತಾ ಅವರು ಪೂರ್ತಿಗೊಳಿಸಿದ್ದಾರೆ. ಮಂಜು, ಮೋಕ್ಷಿತಾ ಅವರಿಗೆ ಪಾಯಿಂಟ್ಸ್ ಸಿಕ್ಕಿದೆ.
ಮಂಜು ಅವರಿಗೆ ಬಿಗ್ ಬಾಸ್ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಅದರಂತೆ ಮಂಜು ಅವರು ಧನರಾಜ್, ಗೌತಮಿ ಹಾಗೂ ಮೋಕ್ಷಿತಾ ಅವರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಟಾಸ್ಕ್ ಮೊದಲಿಗೆ ಧನರಾಜ್ ಅವರು ಪೂರ್ತಿಗೊಳಿಸಿದ್ದಾರೆ. ಎರಡನೇದಾಗಿ ಗೌತಮಿ ಅವರು, ಮೂರನೆಯದಾಗಿ ಮಂಜು ಅವರು ಪೂರ್ತಿಗೊಳಿಸಿದ್ದಾರೆ.
ನಿಮ್ಮ ಅವಶ್ಯಕತೆ ನನ್ನಗಿಲ್ಲ.. ಭವ್ಯಾ – ತಿವಿಕ್ರಮ್ ವಾಗ್ವಾದ:
ಸೆಡೆ ಎಂದು ತಿವಿಕ್ರಮ್ ಅವರು ಭವ್ಯಾ ಅವರಿಗೆ ಹೇಳಿದ್ದಾರೆ. ಇದಕ್ಕೆ ಭವ್ಯಾ ಈ ರೀತಿ ಮಾತನಾಡಬೇಡಿ . ನಿಮ್ಮ ಹತ್ರ ತಾಕತ್ ಇದ್ರೆ ಟೀಮ್ ಅಪ್ ಆಗಿ ಆಡಿ. ನಿನ್ನ ಅವಶ್ಯಕತೆ ನನಗಿಲ್ಲವೆಂದು ತಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಭವ್ಯಾ ನಿಮ್ಮ ಅವಶ್ಯಕತೆಯೂ ನನಗಿಲ್ಲವೆಂದು ಹೇಳಿದ್ದಾರೆ. ನಾನು ನಿನ್ನ ಹತ್ರ ಮಾತನಾಡಿಲ್ಲವೆಂದು ಇಬ್ಬರು ಮಾತಿಗೆ ಮಾತು ಬೆಳೆಸಿದ್ದಾರೆ.
ಈ ಮನೆಯಲ್ಲಿ ನಾನು ಯಾರ ಜತೆ ಮಾತನಾಡಬೇಕೆಂದು ನನಗೆ ನೀವು ಹೇಳಬೇಕಾಗಿಲ್ಲವೆಂದು ಗೌತಮಿ ಮಂಜು ಅವರಿಗೆ ಹೇಳಿದ್ದಾರೆ. ನಾನು ಮಿಡ್ ವೀಕ್ ಅಲ್ಲಿ ಹೋಗುತ್ತೇನೆ. ನೀವಿಬ್ಬರು ಫಿನಾಲೆಗೆ ಹೋಗಬೇಕೆಂದು ಮಂಜು ಹೇಳಿದ್ದಾರೆ.
ನೀವು ಗೌತಮಿ ಜತೆ ಸೇರಿಕೊಂಡು ಹಾಳಾಗಿದ್ದೀರಿ ಎಂದು ಭವ್ಯಾ ಅವರು ಮಂಜುಗೆ ಹೇಳಿದ್ದಾರೆ. ಇದಕ್ಕೆ ಮಂಜು ಇದು ತಪ್ಪು ಹೇಳಿಕೆ ನಾನು ಯಾರ ಜತೆ ಸೇರಿಯೂ ಹಾಳಾಗಿಲ್ಲವೆಂದಿದ್ದಾರೆ.
ಮಿಡ್ ವೀಕ್ ಎಲಿಮಿನೇಷನ್ ನಿಂದ ಪಾರಾಗಲು ಬಿಗ್ ಬಾಸ್ ಮನೆ ಮಂದಿಗೆ ಟಾಸ್ಕ್ ವೊಂದನ್ನು ನೀಡಿದ್ದಾರೆ.
ಈ ಟಾಸ್ಕ್ ಗೆದ್ದ ಸದಸ್ಯರು 100 ಅಂಕ ಪಡೆಯವುದರ ಜತೆ ಉಳಿದ ಸದಸ್ಯರ ಶೇ.50 ರಷ್ಟು ಅಂಕ ಕಸಿಯುವ ಅಧಿಕಾರವನ್ನು ಪಡೆಯಲಿದ್ದಾರೆ.
ಧನರಾಜ್ ಅವರು ಅಂತಿಮ ಟಾಸ್ಕ್ ಗಾಗಿ ಎದುರಾಳಿಯಾಗಿ ರಜತ್, ತಿವಿಕ್ರಮ್, ಮೋಕ್ಷಿತಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಮೂವರ ನಡುವೆ ಪೈಪೋಟಿ ನಡೆದಿದೆ. ‘ಬಿಗ್ ಬಾಸ್’ ಪಜಲ್ ಜೋಡಣೆಯಲ್ಲಿ ಧನರಾಜ್ ಅವರು ಮೊದಲು ಟಾಸ್ಕ್ ಪೂರ್ತಿಗೊಳಿಸಿದ್ದಾರೆ. ಎರಡನೇದಾಗಿ ತಿವಿಕ್ರಮ್ ಅವರು ಟಾಸ್ಕ್ ಪೂರ್ತಿಗೊಳಿಸಿದ್ದಾರೆ. ಮೂರನೆಯದಾಗಿ ರಜತ್ ಅವರು ಪೂರ್ತಿಗೊಳಿಸಿದ್ದಾರೆ.
ಆದರೆ ನೀವು ಜೋಡಿಸಿದರಲ್ಲಿ ತಪ್ಪಿದೆ ಎಂದು ರಜತ್ ಅವರಿಗೆ ಹೇಳಿದ್ದು, ಅದಕ್ಕೆ ಮೋಕ್ಷಿತಾ ಅವರು ಬೆಲ್ ಹೊಡೆದಿದ್ದಾರೆ.
ಧನರಾಜ್ ಅವರು ಭವ್ಯಾ ಅವರ ಅರ್ಧ ಪಾಯಿಂಟ್ಸ್ ಕಸಿದುಕೊಂಡಿದ್ದಾರೆ. ಧನರಾಜ್ ಅವರು 440 ಪಾಯಿಂಟ್ಸ್ ಗಳನ್ನು ಪಡೆದು ವಾರದ ಟಾಸ್ಕ್ ನಲ್ಲಿ ಗೆದ್ದು ಎಲಿಮಿನೇಷನ್ ನಿಂದ ಪಾರಾಗಿದ್ದಾರೆ.
ಭವ್ಯಾ, ಗೌತಮಿ, ಮಂಜು, ಗೌತಮಿ, ತಿವಿಕ್ರಮ್, ರಜತ್ ಅವರು ನಾಮಿನೇಷನ್ ನಲ್ಲಿ ಉಳಿಯಲಿದ್ದಾರೆ. ಇವರುಗಳ ಪೈಕಿ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಆಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್ ಬಿಸಿ; ಕಾರಣವೇನು
Vitla: ಮಣಿಯಾರಪಾದೆ, ಅಮೈ, ಕುದ್ದುಪದವು ರಸ್ತೆ ಅಭಿವೃದ್ಧಿ ಎಂದು?
Uppinangady: ಎಲ್ಲೆಂದರಲ್ಲಿ ಪಾರ್ಕಿಂಗ್; ದಂಡ ವಿಧಿಸಲು ನಿರ್ಣಯ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.