Australian Open-2025: ವಾವ್ರಿಂಕ ಔಟ್; ಫ್ರಿಟ್ಜ್ ಗೆಲುವು
Team Udayavani, Jan 14, 2025, 11:05 PM IST
ಮೆಲ್ಬರ್ನ್: ಅಮೆರಿಕದ 22 ವರ್ಷಗಳ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಬರವನ್ನು ನೀಗಿಸುವ ಒತ್ತಡದಲ್ಲಿರುವ ಟೇಲರ್ ಫ್ರಿಟ್ಜ್, ಆಸ್ಟ್ರೇಲಿಯನ್ ಓಪನ್ ಪಂದ್ಯಾವಳಿಯ ಮೊದಲ ಸುತ್ತನ್ನು ಯಶಸ್ವಿಯಾಗಿ ದಾಟಿದ್ದಾರೆ. ಹಾಗೆಯೇ ಡ್ಯಾನಿಲ್ ಮೆಡ್ವಡೇವ್, ಎಮ್ಮಾ ನವಾರೊ, ಎಮ್ಮಾ ರಾಡುಕಾನೊ, ದರಿಯಾ ಕಸತ್ಕಿನಾ, ಮ್ಯಾಟಿಯೊ ಬರೆಟಿನಿ, ಹೋಲ್ಜರ್ ರುನೆ ಅವರೆಲ್ಲ ಗೆಲುವಿನ ಆರಂಭ ಪಡೆದಿದ್ದಾರೆ.
ಆದರೆ 2014ರ ಚಾಂಪಿಯನ್ ಸ್ವಿಜರ್ಲೆಂ ಡ್‌ನ ಸ್ಟಾನಿಸ್ಲಾಸ್ ವಾವ್ರಿಂಕ ಮೊದಲ ಸುತ್ತಿ ನಲ್ಲೇ ಸೋತು ಹೊರಬಿದ್ದರು. ಇವರನ್ನು ಮಣಿ ಸಿದವರು ಇಟಲಿಯ ಲೊರೆಂಜೊ ಸೊನೆಗೊ. ಅಂತರ 6-4, 5-7, 7-5, 7-5.
ಟೇಲರ್ ಫ್ರಿಟ್ಜ್ ತನ್ನದೇ ದೇಶದ ಎದುರಾಳಿ ಪೇಟನ್ ಸ್ಟೀಯರ್ನ್ಸ್ ಅವರನ್ನು 7-6 (5), 6-7 (5), 7-5 ಅಂತರದಿಂದ ಮಣಿಸಿದರು. 2024ರ ಯುಎಸ್ ಓಪನ್ ಫೈನಲ್ ತಲುಪಿದ್ದ ಫ್ರಿಟ್ಜ್ ಅಲ್ಲಿ ಪರಾಭವಗೊಂಡಿದ್ದರು. ಇದೀಗ ಆಸ್ಟ್ರೇಲಿಯನ್ ಓಪನ್‌ನಲ್ಲಿ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಚಿಲಿಯ ಕ್ರಿಸ್ಟಿಯನ್ ಗಾರಿನ್ ಇವರ ಮುಂದಿನ ಎದುರಾಳಿ.
ಮ್ಯಾಟಿಯೊ ಬರೆಟಿನಿ ಬ್ರಿಟನ್‌ನ ಕ್ಯಾಮರಾನ್ ನೂರಿ ವಿರುದ್ಧ ಮೊದಲ ಸೆಟ್ ಕಳೆದುಕೊಂಡ ಬಳಿಕ ಲಯಕ್ಕೆ ಮರಳಿದರು. ಗೆಲುವಿನ ಅಂತರ 6-7 (4), 6-4, 6-1, 6-3. ಇದು 2022ರ ಸೆಮಿಫೈನಲ್ ಬಳಿಕ “ಮೆಲ್ಬರ್ನ್ ಪಾರ್ಕ್’ನಲ್ಲಿ ಬರೆಟಿನಿ ಸಾಧಿಸಿದ ಮೊದಲ ಗೆಲುವು. ಇವರಿನ್ನು ಡೆನ್ಮಾರ್ಕ್‌ನ ಹೋಲ್ಜರ್ ರುನೆ ಸವಾಲನ್ನು ಎದುರಿಸಬೇಕಿದೆ. ರುನೆ 5 ಸೆಟ್‌ಗಳ ಮ್ಯಾರಥಾನ್ ಹೋರಾಟದಲ್ಲಿ ಚೀನದ ಜಾಂಗ್ ಜಿಜೆನ್ ಅವರನ್ನು ಮಣಿಸಿದರು. ಅಂತರ 4-6, 6-3, 6-4, 3-6, 6-4.
ಮಾನ್‌ಫಿಲ್ಸ್ 5 ಸೆಟ್ ಕಾಳಗ
ಫ್ರಾನ್ಸ್‌ನ ಅನುಭವಿ ಆಟಗಾರ ಗೇಲ್ ಮಾನ್‌ಫಿಲ್ಸ್ ಆಲ್ ಫ್ರೆಂಚ್ ಕಾಳಗವೊಂದರಲ್ಲಿ ಮಪೆಟಿÏ ಪೆರ್ರಿಕಾರ್ಡ್ ವಿರುದ್ಧ ಗೆಲ್ಲಲು 5 ಸೆಟ್‌ಗಳ ಕಠಿನ ಕಾಳಗವನ್ನೇ ನಡೆಸಬೇಕಾಯಿತು. ಅಂತರ 7-6 (7), 6-3, 6-7 (6), 7-6 (5), 6-4. ಪೆರ್ರಿಕಾರ್ಡ್ ಅವರಿಗೆ ಇದು ಆಸ್ಟ್ರೇಲಿಯನ್ ಓಪನ್ ಪದಾರ್ಪಣ ಪಂದ್ಯವಾಗಿತ್ತು. ಇನ್ನೊಂದೆಡೆ ಮಾನ್‌ಫಿಲ್ಸ್ ಕಳೆದ ವಾರವಷ್ಟೇ ಆಕ್ಲೆಂಡ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ಡ್ಯಾನಿಲ್ ಮೆಡ್ವಡೇವ್ ಥಾಯ್ಲೆಂಡ್‌ನ ಕಸಿದಿತ್ ಸಾಮ್ರೆಜ್ ವಿರುದ್ಧ ಸೋಲಿನ ದವಡೆಯಿಂದ ಪಾರಾಗಿ 6-2, 4-6, 3-6, 6-1, 6-2 ಅಂತರದ ಮೇಲುಗೈ ಸಾಧಿಸಿ ನಿಟ್ಟುಸಿರೆಳೆದರು.
ವನಿತಾ ವಿಭಾಗ
ವನಿತಾ ಸಿಂಗಲ್ಸ್‌ನಲ್ಲಿ ಬ್ರಿಟನ್‌ನ ಎಮ್ಮಾ ರಾಡುಕಾನು ರಷ್ಯಾದ ಎಕತೆರಿನಾ ಅಲೆಕ್ಸಾಂ ಡ್ರೋವಾ ವಿರುದ್ಧ 7-6 (4), 7-6 (2) ಅಂತರದ ಕಠಿನ ಜಯ ಸಾಧಿಸಿದರು. ಅಮೆ ರಿಕದ ಅಮಂಡಾ ಅನಿಸಿಮೋವಾ ಇವರ ದ್ವಿತೀಯ ಸುತ್ತಿನ ಎದುರಾಳಿ. ಇವರು ಆರ್ಜೆಂಟೀನಾದ ಮರಿಯಾ ಲಾರ್ಡೆಸ್ ವಿರುದ್ಧ 6-2, 6-3 ಅಂತರದ ಸುಲಭ ಜಯ ಸಾಧಿಸಿದರು.
ಆಲ್ ಅಮೆರಿಕನ್ ಮುಖಾಮುಖೀ ಯೊಂದರಲ್ಲಿ ಎಮ್ಮಾ ನವಾರೊ 6-7 (5-7), 7-6 (7-5), 7-5 ಅಂತರದಿಂದ ಪೇಟನ್ ಸ್ಟಿಯರ್ನ್ಸ್ ಅವರನ್ನು ಮಣಿಸಿದರು.
ಎಲೆನಾ ರಿಬಾಕಿನಾ ಕೂಡ ಸುಲಭ ಗೆಲುವನ್ನು ಕಂಡರು. ತವರಿನ ಎಮರ್ಸನ್ ಜೋನ್ಸ್ ವಿರುದ್ಧ 6-1, 6-1ರ ಮೇಲುಗೈ ಸಾಧಿಸಿದರು. ದರಿಯಾ ಕಸತ್ಕಿನಾ ಬೆಲ್ಜಿಯಂನ ವಿಕ್ಟೋರಿಯಾ ಟೊಮೋವಾ ಅವರನ್ನು 6-1, 6-3ರಿಂದ ಮಣಿಸಿದರು.
ಬೋಪಣ್ಣ ಜೋಡಿ ನಿರ್ಗಮನ
ನೂತನ ಜತೆಗಾರ, ಕೊಲಂಬಿಯಾದ ನಿಕೋಲಸ್ ಬಾರಿಂಟೋಸ್ ಅವರೊಂದಿಗೆ ಆಡಲಿಳಿದ ರೋಹನ್ ಬೋಪಣ್ಣ, ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಸೋಲುಂಡು ನಿರ್ಗಮಿಸಿದರು. ಈ 14ನೇ ಶ್ರೇಯಾಂಕದ ಜೋಡಿ ಎದುರು ಸ್ಪೇನ್‌ನ ಪೆಡ್ರೊ ಮಾರ್ಟಿನೆಜ್-ಜೌಮ್ ಮುನಾರ್ 7-5, 7-6 (5) ಅಂತರದ ಗೆಲುವು ಸಾಧಿಸಿದರು. ಇದಕ್ಕೂ ಮೊದಲು ಸುಮಿತ್ ನಾಗಲ್ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲನುಭವಿಸಿದ್ದರು.
ರೋಹನ್ ಬೋಪಣ್ಣ 2024ರ ಪಂದ್ಯಾವಳಿಯಲ್ಲಿ ಮ್ಯಾಥ್ಯೂ ಎಬೆxನ್ ಜತೆಗೂಡಿ ಚಾಂಪಿಯನ್ ಆಗಿದ್ದರು. ಆಗ ಬೋಪಣ್ಣ ಅವರಿಗೆ 43 ವರ್ಷವಾಗಿತ್ತು. ಓಪನ್ ಯುಗದಲ್ಲಿ ಅತೀ ಹಿರಿಯ ಟೆನಿಸಿಗ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಹೆಗ್ಗಳಿಕೆಗೆ ಬೋಪಣ್ಣ ಪಾತ್ರರಾಗಿದ್ದರು. ನವಂಬರ್‌ನಲ್ಲಿ ನಡೆದ ಎಟಿಪಿ ಫೈನಲ್ಸ್ ಪಂದ್ಯಾವಳಿ ಬಳಿಕ ಬೋಪಣ್ಣ-ಎಬೆxನ್ ಬೇರ್ಪಟ್ಟಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್ ಬಿಸಿ; ಕಾರಣವೇನು
Vitla: ಮಣಿಯಾರಪಾದೆ, ಅಮೈ, ಕುದ್ದುಪದವು ರಸ್ತೆ ಅಭಿವೃದ್ಧಿ ಎಂದು?
Uppinangady: ಎಲ್ಲೆಂದರಲ್ಲಿ ಪಾರ್ಕಿಂಗ್; ದಂಡ ವಿಧಿಸಲು ನಿರ್ಣಯ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
ಆಕಳುಗಳ ಕೆಚ್ಚಲು ಕೊಯ್ದ ಪ್ರಕರಣ; ಶಾಸಕ,ಉಸ್ತುವಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.