Kumbh Mela: ಮೊದಲ ಶಾಹಿ ಸ್ನಾನ: 3.5 ಕೋಟಿ ಮಂದಿ ಭಾಗಿ; ಎರಡನೇ ಶಾಹಿಸ್ನಾನ ಜ.29ಕ್ಕೆ ನಿಗದಿ

Team Udayavani, Jan 15, 2025, 6:19 AM IST

Kumbh Mela: First Shahi Snan: 3.5 crore people participated

ಲಕ್ನೋ: ಮಕರ ಸಂಕ್ರಮಣದ ಪುಣ್ಯದಿನದಂದೇ ಮಹಾ ಕುಂಭಮೇಳದ ಮೊದಲ ಶಾಹಿ ಸ್ನಾನ (ಅಮೃತ ಸ್ನಾನ) ಮಂಗಳವಾರ ಸಂಪನ್ನಗೊಂಡಿದೆ. ಸಂಜೆ ವೇಳೆಗೆ ಸುಮಾರು 3.5 ಕೋಟಿ ಭಕ್ತರು ಶಾಹಿಸ್ನಾನ ಮಾಡಿದ್ದಾರೆಂದು ಕುಂಭಮೇಳ ಆಡಳಿತ ಮಾಹಿತಿ ನೀಡಿದೆ.

ಶಿವನ ಪರಮ ಆರಾಧಕರು, ಧರ್ಮ ರಕ್ಷಕರು ಎಂದು ಕರೆಯಲ್ಪಡುವ ಶೈವ ಅಖಾಡಗಳ ಸದಸ್ಯರಾದ ನಾಗಾ ಸಾಧುಗಳು ತ್ರಿವೇಣಿ ಸಂಗಮದಲ್ಲಿ ಮೊದಲು ಮಿಂದೇಳುವ ಮೂಲಕ ಶಾಹಿ ಸ್ನಾನಕ್ಕೆ ಚಾಲನೆ ನೀಡಿ ದ್ದಾರೆ. ಅವರ ಬಳಿಕ 13 ಅಖಾಡಗಳ ಇತರೆ ಸಂತರು, ಸಾಧುಗಳು ಮಿಂದಿದ್ದಾರೆ. ನಂತರದಲ್ಲಿ ಭಕ್ತರಿಗೆ ಶಾಹಿ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸೋಮವಾರ ನಡೆದ ಪುಣ್ಯಸ್ನಾನದಲ್ಲಿಯೂ 1.60 ಕೋಟಿ ಭಕ್ತರು ಮಿಂದೆದ್ದಿದ್ದರು.

ಈ ಕುಂಭದಲ್ಲಿ 6 ಪುಣ್ಯಸ್ನಾನ ನಡೆಯಲಿದ್ದು, ಈ ಪೈಕಿ 3 ಶಾಹಿ ಸ್ನಾನಗಳೂ ಸೇರಿವೆ. ಪ್ರತೀ ಪುಣ್ಯಸ್ನಾನದ ದಿನ ಭಕ್ತರ ಮೇಲೆ ಪುಷ್ಪವೃಷ್ಟಿಗರೆಯಲು ಸರಕಾರ ತಲಾ 20 ಕ್ವಿಂಟಲ್‌ ಗುಲಾಬಿ ಬಳಸುತ್ತಿರುವುದಾಗಿ ಹೇಳಿದೆ.

8 ಡಿ.ಸೆ.ಗೆ ತಾಪಮಾನ ಇಳಿಕೆ ಸಾಧ್ಯತೆ: ಉತ್ತರ ಪ್ರದೇಶದ ಹಲವೆಡೆ ಮಳೆಯಾಗುತ್ತಿದ್ದು, ಪ್ರಯಾಗ್‌ರಾಜ್‌ನಲ್ಲಿ ತೀವ್ರ ಚಳಿ ಆರಂಭವಾಗಿದೆ. ಪ್ರಯಾಗ್‌ನಲ್ಲಿ ಕನಿಷ್ಠ ತಾಪಮಾನ 8 ಡಿ.ಸೆ.ಗೆ ಇಳಿಯುವ ಸಾಧ್ಯತೆಗಳಿದೆ.

ಕುಂಭಮೇಳದ ಶಾಹಿಸ್ನಾನದಲ್ಲಿ ನಾಗಾ ಸಾಧುಗಳಿಗೇ ಮೊದಲ ಆದ್ಯತೆ ಏಕೆ?

ಕುಂಭಮೇಳ ಆರಂಭವಾದ ಕಾಲದಿಂದಲೂ ಮಹಾಶಿವಭಕ್ತರು, ತಪಸ್ವಿಗಳಾದ ನಾಗಾಸಾಧುಗಳಿಗೇ ಶಾಹಿ ಸ್ನಾನದಲ್ಲಿ ಮೊದಲ ಆದ್ಯತೆ ನೀಡುವ ಪರಂಪರೆ ಇದೆ. ಸಮುದ್ರ ಮಥನದಲ್ಲಿ ಶಿವನು ವಿಷ ಸೇವಿಸಿ, ಜಗತ್ತನ್ನು ರಕ್ಷಿಸಿದ ಕಾರಣ ಆತನ ಪರಮಭಕ್ತರಾದ ನಾಗಾಗಳಿಗೆ ಈ ಅವಕಾಶ ನೀಡಲಾಗುತ್ತದೆ ಎನ್ನುವ ನಂಬಿಕೆ ಇದೆ.

ಕುಂಭದಲ್ಲಿ ಭಕ್ತರ ಸಾವು ವದಂತಿ: ಎಸ್‌ಪಿ ಕಾರ್ಯಕರ್ತನ ಮೇಲೆ ಕೇಸು

ಕುಂಭಮೇಳಕ್ಕೆ ಆಗಮಿಸಿದ್ದ ಭಕ್ತರ ಪೈಕಿ 11 ಮಂದಿ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಕಾರ್ಯಕರ್ತ ಎನ್ನಲಾದ ಲಾಲು ಯಾದವ್‌ ಸಂಜೀವ್‌ ಎಂಬ ಯುವಕನ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ಸ್ಟೀವ್‌ ಪತ್ನಿಗೆ ಅಲರ್ಜಿ: ಗಂಗಾ ಸ್ನಾನ ಬಳಿಕ ಚೇತರಿಕೆ

ಕುಂಭಮೇಳದಲ್ಲಿ ಕಲ್ಪವಾಸ್‌ ವ್ರತ ಕೈಗೊಂಡಿರುವ ಆ್ಯಪಲ್‌ ಸಹಸಂಸ್ಥಾಪಕ ಸ್ಟೀವ್‌ ಜಾಬ್ಸ್ ಪತ್ನಿ ಲಾರೆನ್‌ ಪೂವೆಲ್‌ ಅವರಿಗೆ ಅಲರ್ಜಿ ಉಂಟಾಗಿದೆ. ಆದಾಗ್ಯೂ ಅವರು ಗಂಗಾಸ್ನಾನ ಮಾಡಿದ್ದಾರೆ. ಮೊದಲ ಬಾರಿ ತೀವ್ರ ಜನಸಂದಣಿ ನಡುವೆ ಇರುವ ಕಾರಣ ಅವರಿಗೆ ಅಲರ್ಜಿ ಆಗಿದೆ ಎಂದು ಲಾರೆನ್‌ಗೆ ದೀಕ್ಷೆ ನೀಡಿರುವ ಸ್ವಾಮಿ ಕೈಲಾಸಾನಂದ ಗಿರಿ ಹೇಳಿದ್ದಾರೆ. ಬೆನ್ನಲ್ಲೇ ಗಂಗಾ ಸ್ನಾನದ ಬಳಿಕ ಲಾರೆನ್‌ ಚೇತರಿಸಿ ಕೊಂಡಿದ್ದಾರೆ ಎಂದು ಸರಕಾರ ಹೇಳಿದೆ.

ಮಹಾಕುಂಭಮೇಳಕ್ಕೆ ಗೂಗಲ್‌ ಪುಷ್ಪವೃಷ್ಟಿ

ಗೂಗಲ್‌ ಮಹಾಕುಂಭಮೇಳಕ್ಕೆ ವಿಶೇಷ ಎಐ ಆ್ಯನಿ­ಮೇಷನ್‌ ರೂಪಿಸಿದೆ. ಗೂಗಲ್‌ನಲ್ಲಿ ಕುಂಭ­ಮೇಳ, ಮಹಾ ಕುಂಭ ಎಂದು ಸರ್ಚ್‌ ಮಾಡುತ್ತಿದ್ದಂತೆ ಪೇಜ್‌ನಲ್ಲಿ ಗುಲಾಬಿ ದಳಗಳ ವೃಷ್ಟಿಯಾಗುತ್ತಿರುವಂತೆ ಆ್ಯನಿಮೇಷನ್‌ ಮಾಡಲಾಗಿದೆ.

ಟಾಪ್ ನ್ಯೂಸ್

Road Mishap; ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

Road Mishap; ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

Ramulu-Reddy-Agraval

BJP: ಸಂಡೂರು ಕ್ಷೇತ್ರ ಸೋಲಿಗೆ ನೀವೇ ಕಾರಣ; ಉಸ್ತುವಾರಿ ಅಗರ್‌ವಾಲ್‌ ಆರೋಪ, ಶ್ರೀರಾಮುಲು ಗರಂ

ನನ್ನ, ಯತ್ನಾಳ್‌ರ ಉಚ್ಚಾಟಿಸಲು ಆ ಪಕ್ಷಗಳಿಗೆ ಧಮ್‌ ಬೇಕು: ಜಿಟಿಡಿ

ನನ್ನ, ಯತ್ನಾಳ್‌ರ ಉಚ್ಚಾಟಿಸಲು ಆ ಪಕ್ಷಗಳಿಗೆ ಧಮ್‌ ಬೇಕು: ಜಿಟಿಡಿ

ನೀವು ಬೆಂಕಿಯಾದ್ರೆ, ನಾವು ಬಿರುಗಾಳಿ: ಕಾಂಗ್ರೆಸ್‌ಗೆ ಛಲವಾದಿ ತಿರುಗೇಟು

ನೀವು ಬೆಂಕಿಯಾದ್ರೆ, ನಾವು ಬಿರುಗಾಳಿ: ಕಾಂಗ್ರೆಸ್‌ಗೆ ಛಲವಾದಿ ತಿರುಗೇಟು

Congress: ಚನ್ನಮ್ಮಗೆ ಪ್ರಿಯಾಂಕಾ ಹೋಲಿಕೆ ಭಟ್ಟಂಗಿತನ: ಸಿ.ಟಿ.ರವಿ ಕಿಡಿ

Congress: ಚನ್ನಮ್ಮಗೆ ಪ್ರಿಯಾಂಕಾ ಹೋಲಿಕೆ ಭಟ್ಟಂಗಿತನ: ಸಿ.ಟಿ.ರವಿ ಕಿಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

Harassment by Wife: ಮಧ್ಯಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣು

Harassment by Wife: ಮಧ್ಯಪ್ರದೇಶದಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆಗೆ ಶರಣು

Maha Kumbh: ಕುಂಭಮೇಳದಲ್ಲಿ ಸುಧಾಮೂರ್ತಿ ಭಾಗಿ… ಇಸ್ಕಾನ್‌ ದಾಸೋಹಕ್ಕೆ ಭೇಟಿ

Maha Kumbh: ಕುಂಭಮೇಳದಲ್ಲಿ ಸುಧಾಮೂರ್ತಿ ಭಾಗಿ… ಇಸ್ಕಾನ್‌ ದಾಸೋಹಕ್ಕೆ ಭೇಟಿ

Delhi Election: ಕೇಂದ್ರ ಸರ್ಕಾರಕ್ಕೆ ಆಪ್‌ನಿಂದ 7 ಬೇಡಿಕೆ!

Delhi Election: ಕೇಂದ್ರ ಸರ್ಕಾರಕ್ಕೆ ಆಪ್‌ನಿಂದ 7 ಬೇಡಿಕೆ!

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

Road Mishap; ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

Road Mishap; ಬಸ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

ನಮ್ಮ ಪಕ್ಷಕ್ಕೆ ಮಾನ್ಯತೆ ಸಿಗುತ್ತಿಲ್ಲ, ಸಚಿವ ಸ್ಥಾನ ತೊರೆವೆ: ಮಾಂಜಿ ಎಚ್ಚರಿಕೆ

Ramulu-Reddy-Agraval

BJP: ಸಂಡೂರು ಕ್ಷೇತ್ರ ಸೋಲಿಗೆ ನೀವೇ ಕಾರಣ; ಉಸ್ತುವಾರಿ ಅಗರ್‌ವಾಲ್‌ ಆರೋಪ, ಶ್ರೀರಾಮುಲು ಗರಂ

ನನ್ನ, ಯತ್ನಾಳ್‌ರ ಉಚ್ಚಾಟಿಸಲು ಆ ಪಕ್ಷಗಳಿಗೆ ಧಮ್‌ ಬೇಕು: ಜಿಟಿಡಿ

ನನ್ನ, ಯತ್ನಾಳ್‌ರ ಉಚ್ಚಾಟಿಸಲು ಆ ಪಕ್ಷಗಳಿಗೆ ಧಮ್‌ ಬೇಕು: ಜಿಟಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.