Congress Office: ಬೆಳಗಾವಿ ಸಚಿವರ ಪ್ರತಿಷ್ಠೆಯ ಜಟಾಪಟಿ: ಸಿಎಂ ಸಿದ್ದರಾಮಯ್ಯ ಅಂಗಳಕ್ಕೆ?
ಮುಖ್ಯಮಂತ್ರಿ ಭೇಟಿಯಾದ ಸಚಿವರಾದ ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್
Team Udayavani, Jan 15, 2025, 7:45 AM IST
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‌ಪಿ)ದ ಸಭೆಯಲ್ಲಿ ರಾಜ್ಯದ ಉಸ್ತುವಾರಿ ಸಮ್ಮುಖ ನಡೆದ ಬೆಳಗಾವಿ ಸಚಿವರ ಪ್ರತಿಷ್ಠೆಯ ಜಟಾಪಟಿ ಈಗ ಸಿಎಂ ಸಿದ್ದರಾಮಯ್ಯ ಅಂಗಳ ತಲುಪಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ದಿಲ್ಲಿಯವರೆಗೆ ತೆಗೆದುಕೊಂಡು ಹೋಗುವಂತೆ ನಾಯಕರಿಗೆ ಒತ್ತಡ ಹಾಕಲಾಗುತ್ತಿದೆ.
ಸಂಕ್ರಾಂತಿ ಹಬ್ಬದ ಶುಭಾಶಯ ಕೋರುವ ನೆಪದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ಸತೀಶ್ ಜಾರಕಿಹೊಳಿ, ಮುಂದೂಡಲ್ಪಟ್ಟ ದಲಿತ ಮುಖಂಡರ ಔತಣಕೂಟ ಸಭೆ, ವರಿಷ್ಠರು ನೀಡಿದ ಶಿಸ್ತಿನ ಪಾಠ, ಸಿಎಲ್‌ಪಿ ಅನಂತರ ತಾವು ಸುರ್ಜೇವಾಲ ಅವರನ್ನು ಭೇಟಿ ಮಾಡಿದ್ದರ ಸಹಿತ ಹಲವು ವಿಷಯಗಳ ಕುರಿತು ಸುಮಾರು ಒಂದೂವರೆ ತಾಸು ಚರ್ಚೆ ನಡೆಸಿದರು. ಈ ವೇಳೆ ಸಿಎಲ್‌ಪಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ತಮ್ಮ ನಡುವೆ ನಡೆದ ಜಟಾಪಟಿ ಬಗ್ಗೆ ಪ್ರಮುಖವಾಗಿ ಪ್ರಸ್ತಾವವಾಯಿತು ಎನ್ನಲಾಗಿದೆ
ಸಿಎಂಗೆ ಜಾರಕಿಹೊಳಿ ಆಗ್ರಹ
ಈ ವೇಳೆ ಬೆಳಗಾವಿಯಲ್ಲಿ ಕಾಂಗ್ರೆಸ್ ಕಚೇರಿಯ ಕಟ್ಟಡ ಕಟ್ಟಿದ್ದು ನಾವು. 3 ಕೋಟಿ ರೂ. ಖರ್ಚು ಮಾಡಿದ್ದೇವೆ. ಹಿಂದೆಲ್ಲ ಪಕ್ಷಕ್ಕೆ ಖರ್ಚು ಮಾಡಿದ್ದು ನಾವು. ತಮಗೂ ಅದು ಗೊತ್ತಿದೆ. ಹೀಗಿರುವಾಗ ಸುರ್ಜೇವಾಲ ಮುಂದೆ ನನ್ನ ಮೇಲೆ ಗೂಬೆ ಕೂರಿಸಲಾಗಿದೆ. ದಿಲ್ಲಿಗೆ ಹೋದಾಗ ವರಿಷ್ಠರ ಗಮನಕ್ಕೆ ಇದನ್ನು ತರಬೇಕು ಎಂದು ಸತೀಶ್ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು ಎಂದು ಮೂಲಗಳು ತಿಳಿಸಿವೆ.
ಇವರ ಬೆನ್ನಲ್ಲೇ ಸಚಿವ ಎಂ.ಬಿ. ಪಾಟೀಲ್ ಕೂಡ ಸಿಎಂ ಅವರನ್ನು ಭೇಟಿಯಾದರು. ಅನಂತರ ಬೆಳಗಾವಿ ರಾಜಕಾರಣ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಮತ್ತು ಸತೀಶ ಜಾರಕಿಹೊಳಿ ನಡುವೆ ಯಾವುದೇ ಜಗಳ ಅಥವಾ ಮನಸ್ತಾಪಗಳಿಲ್ಲ. ಎಲ್ಲರೂ ಸೇರಿಯೇ ಪಕ್ಷದ ಕಚೇರಿ ನಿರ್ಮಿಸಿದ್ದಾರೆ ಎಂದಿದ್ದಾರೆ. ಹಾಗಾಗಿ ಈ ವಿಷಯದಲ್ಲಿ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.
ಸತೀಶ್ ಜಾರಕಿಹೊಳಿ ಪರ ಗೃಹ ಸಚಿವ ಡಾ.ಪರಮೇಶ್ವರ್ ಹೇಳಿಕೆ
ಬೆಳಗಾವಿ ಸಚಿವರ ಜಟಾಪಟಿ ವಿಷಯದಲ್ಲಿ ಗೃಹ ಸಚಿವ ಡಾ| ಪರಮೇಶ್ವರ ಅವರು ಸತೀಶ್ ಜಾರಕಿಹೊಳಿ ಪರ ಮಾತನಾಡಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗ ಬೆಳಗಾವಿಗೆ ಹೋದಾಗ ಕಚೇರಿ ಇರಲಿಲ್ಲ. ಆಗ ಪಕ್ಷದ ಕಚೇರಿ ನಿರ್ಮಿಸಿ ಎಂದು ನಾನು ಸತೀಶ್ ಜಾರಕಿಹೊಳಿಗೆ ಹೇಳಿದ್ದೆ. ಅದಕ್ಕಾಗಿ 45 ಲಕ್ಷ ರೂ. ಕೊಟ್ಟಿದ್ದೆ. ನಾನು ಕೆಳಗಿಳಿದ ಮೇಲೆ ಆ ಕಚೇರಿ ಉದ್ಘಾಟನೆ ಆಯಿತು. ಯಾರು ಹಣ ಕೊಟ್ಟರು ಎಂದು ಕೂಡ ಡಿ.ಕೆ. ಶಿವಕುಮಾರ್ ಹೇಳಿಲ್ಲ. ಆದರೆ ಸತೀಶ್ ಹೆಚ್ಚು ಹಣ ಕೊಟ್ಟಿದ್ದರು ಅಂತ ಹೇಳಬಹುದಿತ್ತು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ
Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ
ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ
Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ
Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.