South Korea; 2ನೇ ಪ್ರಯತ್ನದಲ್ಲಿ ಅಧ್ಯಕ್ಷ ಯೂನ್ ಸುಕ್ ಯೋಲ್ ಬಂಧನ : ವರದಿ

3,000 ಕ್ಕೂ ಹೆಚ್ಚು ಪೊಲೀಸರಿಂದ ಕಾರ್ಯಾಚರಣೆ.. ಅಧಿಕಾರದಲ್ಲಿದ್ದಾಗಲೇ ಬಂಧನದ ಅಪಖ್ಯಾತಿ

Team Udayavani, Jan 15, 2025, 8:03 AM IST

1-yoon-sook

ಸಿಯೋಲ್: ವಾಗ್ದಂಡನೆಗೆ ಗುರಿಯಾಗಿದ್ದ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಉನ್ನತ ಶ್ರೇಣಿಯ ಅಧಿಕಾರಿಗಳಿಗಾಗಿ ದೇಶದ ಭ್ರಷ್ಟಾಚಾರ ತನಿಖಾ ಕಚೇರಿಯಿಂದ ಬಂಧಿಸಲಾಗಿದೆ ಎಂದು ವರದಿಯಾಗಿದೆ, ಇದು ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧಿಕಾರದಲ್ಲಿದ್ದಾಗಲೆ ಬಂಧನಕ್ಕೊಳಗಾದ ಮೊದಲ ಅಧ್ಯಕ್ಷ ಎನಿಸಿ ಅಪಖ್ಯಾತಿಗೆ ಗುರಿಯಾಗಿದ್ದಾರೆ.

ದೋಷಾರೋಪಣೆಗೊಳಗಾದ ಅಧ್ಯಕ್ಷ ಯೂನ್ ಸುಕ್ ಅವರನ್ನು ಬಂಧಿಸಲು ಇದು ಎರಡನೇ ಪ್ರಯತ್ನವಾಗಿತ್ತು, ಜನವರಿ 3 ರಂದು ವಿಫಲವಾದ ಪ್ರಯತ್ನದ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷೀಯ ಭದ್ರತಾ ಸೇವೆಯ ಏಜೆಂಟರು ತನಿಖಾಧಿಕಾರಿಗಳನ್ನು ಯೂನ್ ಅವರ ನಿವಾಸಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿದ್ದರು.

ಸುಮಾರು 3,000 ಪೊಲೀಸ್ ಅಧಿಕಾರಿಗಳು ಯೂನ್‌ ಅವರ ನಿವಾಸದ ಕಾಂಪೌಂಡ್‌ಗೆ ಪ್ರವೇಶಿಸಿ ಎರಡನೇ ಪ್ರಯತ್ನದಲ್ಲಿ ಬಂಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಯೋನ್‌ಹಾಪ್ ತಿಳಿಸಿದೆ.

ಈ ಮೊದಲೇ ರೆಕಾರ್ಡ್ ಮಾಡಿದ ವಿಡಿಯೋವೊಂದರಲ್ಲಿ ಯೂನ್ “ದೇಶದ ಕಾನೂನು ಕುಸಿದಿದೆ” ಮತ್ತು CIO ತನಿಖೆ ಕಾನೂನುಬಾಹಿರ ಎಂದು ಕರೆದಿದ್ದಾರೆ ಎಂದು ದಕ್ಷಿಣ ಕೊರಿಯಾದ ಮಾಧ್ಯಮಗಳು ವರದಿ ಮಾಡಿವೆ. “ಅಹಿತಕರ ರಕ್ತಪಾತವನ್ನು ತಡೆಗಟ್ಟಲು CIO ಮುಂದೆ ಹಾಜರಾಗುತ್ತಿರುವುವುದಾಗಿ ಯೂನ್ ಹೇಳಿದ್ದಾರೆ.

ಯೂನ್‌ ಭದ್ರತಾ ಸಿಬಂದಿಗಳು ಮತ್ತು ಭ್ರಷ್ಟಾಚಾರ ನಿಗ್ರಹ ಅಧಿಕಾರಿಗಳ ನಡುವೆ ಸಂಘರ್ಷ ನಡೆದ ನಂತರ ಕಳೆದ ಶುಕ್ರವಾರ ಬಂಧನ ವಾರಂಟ್‌ ಜಾರಿಗೊಳಿಸಲು ತಡೆ ನೀಡಿತ್ತು.

ದಕ್ಷಿಣ ಕೊರಿಯಾದಲ್ಲಿ ಡಿಸೆಂಬರ್‌ 3ರಂದು ದಿಢೀರನೆ ಮಿಲಿಟರಿ ಆಡಳಿತ ಜಾರಿಗೊಳಿಸಿದ್ದ ಯೂನ್‌ ಅವರನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿದ್ದ ನಂತರ ಭ್ರಷ್ಟಾಚಾರ ನಿಗ್ರಹ ಪಡೆ ಮತ್ತು, ಪೊಲೀಸರು, ರಕ್ಷಣಾ ಸಚಿವಾಲಯ ಸೇರಿ ತನಿಖೆ ನಡೆಸುತ್ತಿತ್ತು.

ಟಾಪ್ ನ್ಯೂಸ್

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

10-bike

ಬೈಕ್ ನಲ್ಲಿ ಚಲಿಸುತ್ತಿದ್ದ ವೇಳೆ ತುಂಡಾಗಿ ಬಿದ್ದ ಕೊಂಬೆ;ಸವಾರರಿಗೆ ಗಂಭೀರ ಗಾಯ, ಮೂಳೆ ಮುರಿತ

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

rasaleele

Belagavi: ಇಬ್ಬರು ಅಪ್ರಾಪ್ತೆಯರ ಮೇಲೆ ಸಾಮೂಹಿಕ ಅತ್ಯಾಚಾ*ರ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

ಶಿವಮೊಗ್ಗದಲ್ಲಿ ಹೆಚ್ಚಾಯ್ತು ಪುಂಡರ ಹಾವಳಿ… ಕಚೋರಿ ವ್ಯಾಪಾರಿಗೆ ಚಾಕು ಇರಿದು ಪರಾರಿ

Ram Jarakiholi

Belagavi ಕಾಂಗ್ರೆಸ್ ಒಳಜಗಳ: ಸತೀಶ್ ಬೆಂಬಲಕ್ಕೆ ನಿಂತ ಅಣ್ಣ ರಮೇಶ್ ಜಾರಕಿಹೊಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel, Hamas agree to ceasefire?

Ceasefire: ಇಸ್ರೇಲ್‌, ಹಮಾಸ್‌ ಕದನ ವಿರಾಮಕ್ಕೆ ಒಪ್ಪಿಗೆ?

Italian Man Who Spent 32 Years Alone on Island passed away

Mauro Morandi: 32 ವರ್ಷ ದ್ವೀಪದಲ್ಲಿದ್ದ ಇಟಲಿಗ ನಾಡಿಗೆ ಬಂದ 3 ವರ್ಷದಲ್ಲೇ ನಿಧನ!

Fear of capture from Ukraine: suicide of 300 soldiers of North Korea?

War: ಉಕ್ರೇನ್‌ನಿಂದ ಸೆರೆ ಭೀತಿ: ಉ.ಕೊರಿಯಾದ 300 ಯೋಧರ ಆತ್ಮಹತ್ಯೆ?

1-singa

Canada ಮಾರಾಟಕ್ಕಿಲ್ಲ: ಟ್ರಂಪ್‌ಗೆ ಎನ್‌ಡಿಪಿ ನಾಯಕ ಸಿಂಗ್‌ ಚಾಟಿ

1-atlantaa

Los Angeles;ಕಾಳ್ಗಿಚ್ಚು ಆರಿಸಲು ಸೂಪರ್‌ ಸ್ಕೂಪರ್‌:ಬೆಂಕಿಯ ಕೆನ್ನಾಲಿಗೆಗೆ ಬದುಕು ಭಸ್ಮ!

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

Sandalwood: ಜ.17ಕ್ಕೆ ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ

1-aaad

Lakshmi Hebbalkar ಕಾರು ಅಪಘಾ*ತ ಹಿಟ್ & ರನ್ ಪ್ರಕರಣ: ಬೆಳಗಾವಿ ಎಸ್ ಪಿ

11-betel-leaf-1

Betel leaf: ಮೈಸೂರ ಚಿಗುರೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.