Arrested: ಪಾಲಿಕೆ ಆಯುಕ್ತರ ನಕಲಿ ಸಹಿ ಹಾಕಿ ಹಣ ಡ್ರಾ ಮಾಡಿದ ಪ್ರಕರಣ.. ಪಿಎ ಸೇರಿ ಐವರ ಬಂಧನ
Team Udayavani, Jan 15, 2025, 2:39 PM IST
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿ ಹಣ ಡ್ರಾ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಆಯುಕ್ತರ ಆಪ್ತ ಸಹಾಯಕ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಚೆಕ್ ಬುಕ್ ನಲ್ಲಿ ಆಯುಕ್ತರ ಹೆಸರು ಉಲ್ಲೇಖ ಮಾಡಿ 1.32 ಕೋಟಿ ಮೊತ್ತ ಚೆಕ್ ಬಳಕೆ ಹಿನ್ನಲೆ ಹಣ ಡ್ರಾ ಮಾಡಿಕೊಂಡ ಪ್ರಕರಣ ಸಂಬಂಧ ಪಾಲಿಕೆ ಆಯುಕ್ತರ ಪಿಎ ಸೇರಿ ಐವರ ಬಂಧನ.
ಪಾಲಿಕೆ ಆಯುಕ್ತರ ಪಿಎ ಮೊಹಮ್ಮದ್ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮೀರ್ಜಾ ಬೇಗ್, ನಸೀರ್ ಅಹ್ಮದ್,( ಗುತ್ತಿಗೆ ಆದಾರದ ಅಕೌಂಟೆಂಟ್) ಮೊಹಮ್ಮದ್ ರೆಹಮಾನ್ (ಪ್ರಾಜೆಕ್ಟ್ ಮ್ಯಾನೆಜರ್ ) ಬಂಧಿತ ಆರೋಪಿಗಳು.
ಬಂಧಿತರಿಂದ 30 ಲಕ್ಷ ಹಣ ಜಪ್ತಿ ಮಾಡಿದ ಪೊಲೀಸರು, ಬ್ರಹ್ಮಪೂರ ಪೊಲೀಸರಿಂದ ಆರೋಪಿಗಳ ಬಂಧನ. ಮೊದಲು ಒಂದು ಚೆಕ್ ಅನ್ನು ಬ್ಯಾಂಕ್ ಗೆ ಕಳುಹಿಸಿ 35,56,640 ಡ್ರಾ ಮಾಡಿಕೊಂಡಿದ್ದ ಖದೀಮರು. ಬಳಿಕ ಮತ್ತೆರಡೂ ಚೆಕ್ ಗಳನ್ನ ಡ್ರಾ ಮಾಡಲು ಬ್ಯಾಂಕಿಗೆ ಕಳುಹಿಸಿದ್ದರು. ಈ ವೇಳೆ ಅನುಮಾನ ಬಂದು ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದ ಬ್ಯಾಂಕ್ ಸಿಬ್ಬಂದಿ. ತಕ್ಷಣವೇ ಎಚ್ಚೆತ್ತುಕೊಂಡು ದೂರು ದಾಖಲಿಸಿದ್ದ ಪಾಲಿಕೆ.
ಸದ್ಯ ಪಾಲಿಕೆ ಆಯುಕ್ತ ಪಿಎ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
MUDA Case: ಸಿಎಂ ಸಿದ್ದು ಮುಡಾ ಹಗರಣ… ಜ.27ಕ್ಕೆ ಮುಂದೂಡಿದ ಧಾರವಾಡ ಹೈಕೋರ್ಟ್
ಮೀಟರ್ ಬಡ್ಡಿ ದಂಧೆಗೆ ಮನನೊಂದು ವಿಎಸ್‌ಕೆ ವಿವಿ ಅಟೆಂಡರ್ ಆತ್ಮಹತ್ಯೆ… ಪೊಲೀಸರಿಂದ ತನಿಖೆ
MUST WATCH
ಹೊಸ ಸೇರ್ಪಡೆ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Los Angeles Wildfires: ಇನ್ನೂ 60 ಲಕ್ಷ ಜನರಿಗೆ ಸಂಕಷ್ಟ, ಸಾವಿನ ಸಂಖ್ಯೆ 25ಕ್ಕೇರಿಕೆ
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
Udupi: ಎಂಜಿಎಂ ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.