ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ
ಪುರುಷರ ದಾಖಲೆಯೂ ಪತನ ... ಪ್ರತೀಕಾ ರಾವಲ್ ಅತ್ಯಮೋಘ ಶತಕ
Team Udayavani, Jan 15, 2025, 4:42 PM IST
ರಾಜ್‌ಕೋಟ್: ಏಕದಿನ ಸರಣಿಯಲ್ಲಿ ಪ್ರವಾಸಿ ಐರ್ಲೆಂಡ್ ಮೇಲೆ ಪ್ರಭುತ್ವ ಸಾಧಿಸಿರುವ ಭಾರತದ ವನಿತೆಯರು ಮೂರನೇ ಏಕದಿನ ಪಂದ್ಯದಲ್ಲಿ ದಾಖಲೆಯ ಮೊತ್ತ ಕಲೆ ಹಾಕಿದ್ದಾರೆ.
ಭಾರತದ ವನಿತೆಯರು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕ್ಲೀನ್ ಸ್ವೀಪ್ ಯೋಜನೆಯೊಂದಿಗೆ ಆಡಲಿಳಿದರು. ನಾಯಕಿ ಸ್ಮೃತಿ ಮಂಧಾನ ಕೇವಲ 70 ಎಸೆತಗಳಲ್ಲಿ ಶತಕ ಪೂರ್ಣಗೊಳಿಸುವ ಮೂಲಕ ಮಹಿಳಾ ಕ್ರಿಕೆಟ್‌ನಲ್ಲಿ ಭಾರತದ ವೇಗದ ಏಕದಿನ ಅಂತಾರಾಷ್ಟ್ರೀಯ ಶತಕ ಸಿಡಿಸಿದ ದಾಖಲೆ ಬರೆದರು. 80 ಎಸೆತಗಳಲ್ಲಿ 135 ರನ್ ಬಾರಿಸಿ ಅಬ್ಬರಿಸಿ ಔಟಾದರು.12ಬೌಂಡರಿ ಮತ್ತು 7 ಸಿಕ್ಸರ್ ಸಿಡಿಸಿದರು.
ನಾಯಕಿಗೆ ಸಾಥ್ ನೀಡಿದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 154 ರನ್ ಗಳಿಸಿದರು.(129 ಎಸೆತ) ಅಮೋಘ ಆಟವಾಡಿದ ಅವರು ಬರೋಬ್ಬರಿ 20 ಬೌಂಡರಿ ಮತ್ತು 1 ಸಿಕ್ಸರ್ ಸಿಡಿಸಿದರು. ರೀಚಾ ಘೋಷ್ 59, ತೇಜಲ್ ಹಸಬ್ನಿಸ್ 28, ಹರ್ಲೀನ್ ಡಿಯೋಲ್15, ಜೆಮಿಮಾ ರಾಡ್ರಿಗಸ್ 4 ಮತ್ತು ದೀಪ್ತಿ ಶರ್ಮ 11 ರನ್ ಕೊಡುಗೆಯಿಂದ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.
ಭಾರತ ಕ್ಕೆ ಇದು ಅತ್ಯಧಿಕ ಏಕದಿನ ಮೊತ್ತ ದಾಖಲೆಯಾಗಿದೆ. ಪುರುಷರ ಅಥವಾ ವನಿತೆಯರ ಎರಡೂ ವಿಭಾಗದಲ್ಲಿ ಭಾರತದ ಅತ್ಯಧಿಕ ಏಕದಿನ ಮೊತ್ತವಾಗಿದೆ. 2011 ರಲ್ಲಿ ಇಂದೋರ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪುರುಷರ ತಂಡ 418/5 ಸ್ಕೋರ್ ಮಾಡಿದ್ದು ಹಿಂದಿನ ದಾಖಲೆಯಾಗಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹರ್ಮನ್ ಪ್ರೀತ್ ಕೌರ್ 87 ಎಸೆತಗಳಲ್ಲಿ ಶತಕ ಸಿಡಿಸಿದ್ದರು.ಆ ದಾಖಲೆಯನ್ನು ಸ್ಮೃತಿ ಮುರಿದರು. ತನ್ನ 10 ನೇ ಏಕದಿನ ಶತಕದೊಂದಿಗೆ, ಮಂಧಾನಾ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಜತೆಗೆ ಮಹಿಳಾ ಏಕದಿನ ಅತಿ ಹೆಚ್ಚು ಶತಕಗಳ ಸಾರ್ವಕಾಲಿಕ ಪಟ್ಟಿಯಲ್ಲಿ ಜಂಟಿ ಮೂರನೇ ಸ್ಥಾನಕ್ಕೆ ಏರಿದರು. ಪಟ್ಟಿಯಲ್ಲಿ ಆಸ್ಟ್ರೇಲಿಯದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ (15) ಆಗ್ರ ಸ್ಥಾನದಲ್ಲಿದ್ದಾರೆ.
ಇದುವರೆಗಿನ ಏಕದಿನ ದಾಖಲೆ ಮೊತ್ತಗಳು
491/4 – ನ್ಯೂಜಿಲ್ಯಾಂಡ vs ಐರ್ಲೆಂಡ್ 2018
455/5 – ನ್ಯೂಜಿಲ್ಯಾಂಡ್ vs ಪಾಕಿಸ್ಥಾನ, 1997
440/3 – ನ್ಯೂಜಿಲ್ಯಾಂಡ್ vs ಐರ್ಲೆಂಡ್, 2018
435/5 – ಭಾರತ vs ಐರ್ಲೆಂಡ್, ಇಂದು
418 – ನ್ಯೂಜಿಲ್ಯಾಂಡ್ vs ಐರ್ಲೆಂಡ್, 2018
ವನಿತಾ ಏಕದಿನದಲ್ಲಿ ಭಾರತದ ಅತಿ ಹೆಚ್ಚು ವೈಯಕ್ತಿಕ ಸ್ಕೋರ್
188 – ದೀಪ್ತಿ ಶರ್ಮ vs ಐರ್ಲೆಂಡ್ , ಪಾಚೆಫ್‌ಸ್ಟ್ರೂಮ್, 2017
171* – ಹರ್ಮನ್‌ಪ್ರೀತ್ ಕೌರ್ vs ಆಸ್ಟ್ರೇಲಿಯ ಡರ್ಬಿ, 2017
154 – ಪ್ರತೀಕಾ ರಾವಲ್ vs ಐರ್ಲೆಂಡ್, ರಾಜ್‌ಕೋಟ್, 2025
143* – ಹರ್ಮನ್‌ಪ್ರೀತ್ ಕೌರ್ vs ಇಂಗ್ಲೆಂಡ್- ಕ್ಯಾಂಟರ್ಬರಿ, 2022
138* – ಜಯ ಶರ್ಮ vs ಪಾಕಿಸ್ಥಾನ, ಕರಾಚಿ, 2005
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
Champions Trophy: ಭಾರತ ತಂಡಕ್ಕೆ ಆಯ್ಕೆಯಾಗುವ ವಿಕೆಟ್‌ಕೀಪರ್ ಗಳಿಬ್ಬರು ಯಾರು?
Women’s ODI: ಒತ್ತಡದಲ್ಲಿ ಐರ್ಲೆಂಡ್: ಭಾರತದ ಯೋಜನೆ ಕ್ಲೀನ್‌ಸ್ವೀಪ್
Vijay Hazare Trophy: ಕರ್ನಾಟಕ-ಹರಿಯಾಣ ಸೆಮಿ ಸೆಣಸಾಟ
Los Angeles wildfires: ಒಲಿಂಪಿಕ್ಸ್ ಆಯೋಜನೆಗೆ ಭೀತಿ?
MUST WATCH
ಹೊಸ ಸೇರ್ಪಡೆ
Vijay Hazare Trophy: ಚಾಂಪಿಯನ್ ಹರಿಯಾಣ ಪರಾಭವ… ಫೈನಲ್ ಪ್ರವೇಶಿಸಿದ ಕರ್ನಾಟಕ
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Ramesh Bidhuri: ದೆಹಲಿ ಸಿಎಂ ಆತಿಶಿಯನ್ನು ಜಿಂಕೆಗೆ ಹೋಲಿಸಿ ವಿವಾದ ಸೃಷ್ಟಿಸಿದ ಬಿಧೂರಿ
Wayanad Landslide: ನಾಪತ್ತೆ ಆದವರು ಮೃತರೆಂದು ಘೋಷಣೆಗೆ ಕೇರಳ ತೀರ್ಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.