ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

Team Udayavani, Jan 15, 2025, 2:35 PM IST

ನಿರ್ವಹಣೆಯೇ ಇಲ್ಲದ ಬಸ್‌ ನಿಲ್ದಾಣ! ರಾತ್ರಿ ವೇಳೆ ಬಸ್‌ಗಳ ಓಡಾಟ ತೀರಾ ಕಡಿಮೆ

ಉದಯವಾಣಿ ಸಮಾಚಾರ
ಗುಳೇದಗುಡ್ಡ: ಇಲ್ಲಿಯ ಗುಳೇದಗುಡ್ಡ ಬಸ್‌ ನಿಲ್ದಾಣದಲ್ಲಿ ಮೂಲಸೌಕರ್ಯಗಳಿದ್ದರೂ ಸಮರ್ಪಕ ನಿರ್ವಹಣೆ ಇಲ್ಲದೇ ನಿಲ್ದಾಣ ಸೊರಗಿ ಹೋಗಿದ್ದು, ಜನಸಂಚಾರಕ್ಕೆ ತೊಂದರೆಯಾಗುತ್ತಿದೆ. ಬಸ್‌ ನಿಲ್ದಾಣದ ಶೌಚಾಲಯವು ಗಬ್ಬೆದ್ದು ನಾರುತ್ತಿದೆ. ಶೌಚಾಲಯ ಸಮರ್ಪಕ ನಿರ್ವಹಣೆ ಇಲ್ಲ. ಶೌಚಾಲಯದ ಒಳಗಡೇ ಕೊಳಚೆ ನಿಂತಿದೆ.

ಬಾಗಿಲುಗಳಿಗೆ ಸಮರ್ಪಕವಾದ ಚಿಲಕಗಳಿಲ್ಲ. ಕಬ್ಬಿಣದ ಕೊಂಡಿಗಳನ್ನೇ ಚಿಲಕಗಳಂತೆ ಮಾಡಿದ್ದಾರೆ. ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಕುಡಿಯುವ ನೀರಿನ ವ್ಯವಸ್ಥೆಯಿದ್ದರೂ ಸ್ವಚ್ಛತೆ ಕಂಡುಬರುತ್ತಿಲ್ಲ. ಹೀಗಾಗಿ ನೀ ಕುಡಿಯುವ ಬಗ್ಗೆ ಜನರು ಆಲೋಚಿಸುವಂತಾಗಿದೆ.

ಪಟ್ಟಣದ ಬೆಳವಣಿಗೆ ಹೊಂದಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುವುದರಿಂದ ನಿಲ್ದಾಣದಲ್ಲಿ ಆಸನಗಳ ಸಂಖ್ಯೆ ಹೆಚ್ಚಿಸಬೇಕಾದ ಅವಶ್ಯಕತೆಯಿದೆ. ಅಲ್ಲದೇ ರಾತ್ರಿ ವೇಳೆ ಪಟ್ಟಣದಿಂದ ಬಾದಾಮಿಗೆ ತೆರಳಲು ರಾತ್ರಿ 8:45ಗಂಟೆಯ ನಂತರ ಬಸ್‌ ವ್ಯವಸ್ಥೆಯಿಲ್ಲ.

ಬಾಗಲಕೋಟೆಗೆ ರಾತ್ರಿ 7:45ರ ನಂತರ ಬಸ್‌ ಗಳೇ ಇಲ್ಲ. ಇಳಕಲ್ಲದಿಂದ ಪಟ್ಟಣಕ್ಕೆ ರಾತ್ರಿ 7:30ರ ನಂತರ ವ್ಯವಸ್ಥೆಯಿಲ್ಲ. ಹೀಗಾಗಿ ಈ ಮಾರ್ಗದಲ್ಲಿ ರಾತ್ರಿ ಸಂಚರಿಸುವವರು ಯೋಚನೆ ಮಾಡುವಂತಾಗಿದೆ.

ಗುಳೇದಗುಡ್ಡದಿಂದ ಸೊಲ್ಲಾಪುರ, ಮಿರಜ, ಇಚಲಕರಂಜಿ, ನಿಡಗುಂದಿ, ರಾಯಚೂರ, ಬೆಳಗಾವಿ, ಜಮಖಂಡಿ, ಮಂಗಳೂರು ಗಂಗಾವತಿ, ಇಳಕಲ್‌, ಬಾಗಲಕೋಟೆ ನಿತ್ಯವು 49 ಮಾರ್ಗಗಳಲ್ಲಿ ಸಂಚರಿಸುತ್ತವೆ.

ಬಂದ್‌ ಆಗಿರುವ ಮಾರ್ಗ: ಈ ಮೊದಲು ಗುಳೇದಗುಡ್ಡದಿಂದ ಹೈದ್ರಾಬಾದ್‌, ಪಣಜಿ, ಬೀದರ, ಧರ್ಮಸ್ಥಳ, ಗದಗ, ದಾಂಡೇಲಿ ನಗರಗಳಿಗೆ ಬಸ್‌ ಓಡಿಸಲಾಗುತ್ತಿತ್ತು. ಆದರೆ, ಕಳೆದ ಹಲವು ವರ್ಷಗಳಿಂದ ಈ ಮಾರ್ಗದ ಬಸ್‌ಗಳು ಬಂದ್‌ ಆಗಿರುವುದರಿಂದ ಜನರಿಗೆ ಜನರು ಬಾದಾಮಿ, ಬಾಗಲಕೋಟೆಗೆ ತೆರಳಿ ಸಂಚರಿಸುವಂತಾಗಿದೆ. ಈ ಮಾರ್ಗಗಳನ್ನು ಪುನರಾಂಭಿಸುವಂತೆ ಪ್ರಯಾಣಿಕರ ಆಗ್ರಹವಾಗಿದೆ.

ಗುಳೇದಗುಡ್ಡ ಘಟಕದಲ್ಲಿ ಹಳೆಯ ಬಸ್‌ಗಳಿದ್ದು, ಅವುಗಳ ನಿರ್ವಹಣೆ ಸಮರ್ಪಕವಾಗಿಲ್ಲದ ಕಾರಣ ನಿತ್ಯ ಬಾಗಲಕೋಟೆ ಮಾರ್ಗದಲ್ಲಿರುವ ಕೆಲವು ಬಸ್‌ ಎಲ್ಲಿ ನಿಲ್ಲುತ್ತದೆ. ಎಲ್ಲಿ ಕೆಡುತ್ತದೆ ಎಂಬುದೇ ತಿಳಿಯದಂತಾಗಿದೆ. ಎಲ್ಲೆಂದರಲ್ಲಿ ಕೆಡುವುದು, ಇಲ್ಲವೇ ಟೈಯರ್‌ ಕಳಚುವುದು. ಇದು ಕೆಲವು ತಿಂಗಳಿಂದ ಸಾಮಾನ್ಯವಾಗಿ ಬಿಟ್ಟಿದೆ.

ಕೆರೂರಿಗಿಲ್ಲ ಬಸ್‌: ಕೆರೂರು ಪಟ್ಟಣದೊಂದಿಗೆ ಗುಳೇದಗುಡ್ಡ ಅಷ್ಟೇ ಅಲ್ಲದೇ ಇಳಕಲ್‌ವರೆಗೆ ನಿತ್ಯ ಒಂದಿಲ್ಲೊಂದು ಕೆಲಸಕ್ಕೆ ತೆರಳುವ ಪ್ರಯಾಣಿಕರಿದ್ದಾರೆ. ಆದರೆ, ಇದುವರೆಗೂ ಕೆರೂರು ಪಟ್ಟಣಕ್ಕೆ ಸಮರ್ಪಕವಾಗಿ ಬಸ್‌ ಓಡಿಸುತ್ತಿಲ್ಲ. ಈ ಹಿಂದೆ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಮುತುವರ್ಜಿ ವಹಿಸಿ ಕೆರೂರಿಗೆ ಬಸ್‌ ಬಿಟ್ಟಿದ್ದರು.

ಆದರೆ, ಅದು ಜನರಿಗೆ ತಿಳಿಯುವ ಮೊದಲೆ ಆದಾಯ ಕೊರತೆ ನೆಪ ಹೇಳಿ ಬಂದ್‌ ಮಾಡಿದರು. ಇದರಿಂದ ಈ ಮಾರ್ಗದ ಗುಳೇದಗುಡ್ಡ ರೈಲ್ವೆ ಸ್ಟೇಶನ್‌ ಹಂಗರಗಿ ಹಿರೇಬೂದಿಹಾಳ, ಜಮ್ಮನಕಟ್ಟಿ, ಖಾಜಿಬೂದಿಹಳ, ಕೊಂಕಣಕೊಪ್ಪ, ಕಟಗೇರಿ, ಹುಲಸಗೇರಿ, ಲಕ್ಕಸಕೊಪ್ಪ ಗ್ರಾಮಗಳು ಗುಳೇದಗುಡ್ಡ ತಾಲೂಕು ವ್ಯಾಪ್ತಿಗೆ ಬಂದರೂ ಸಹ ಬಸ್‌ ಓಡಿಸದಿರುವುರಿಂದ ಗ್ರಾಮಸ್ಥರು ನಿತ್ಯದ ಕೆಲಸಕ್ಕೆ ಬಾದಾಮಿ ಮಾರ್ಗವಾಗಿ ಗುಳೇದಗುಡ್ಡಕ್ಕೆ ಬರುವಂತಹ ಸ್ಥಿತಿ ನಿರ್ಮಾಣವಾಗಿದೆ.

ಶಾಸಕರ ಊರಿಗೆ ಇಲ್ಲ ಬಸ್‌ ಸಂಚಾರ: ಮಾಜಿ ಸಚಿವ ಬಿ.ಬಿ.ಚಿಮ್ಮನಕಟ್ಟಿ ಹಾಗೂ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ಹುಟ್ಟೂರು ಜಮ್ಮನಕಟ್ಟಿ ಗ್ರಾಮಕ್ಕೆ ಹಲವು ವರ್ಷಗಳಿಂದ ಬಸ್‌ ಸಂಪರ್ಕವಿಲ್ಲ. ಈ ಭಾಗದ ಜನರು ಬಸ್‌ ಇಲ್ಲದಿರುವುದರಿಂದ ಗುಳೇದಗುಡ್ಡ ಸಂಪರ್ಕ ಬಿಟ್ಟು ಕೆರೂರು ಮಾರ್ಗದತ್ತ ಮುಖ ಮಾಡುತ್ತಿದ್ದಾರೆ.

ಕೋಟೆಕಲ್‌ನಲ್ಲಿಲ್ಲ ತಂಗುದಾಣ: ಕೋಟೆಕಲ್‌ ಗ್ರಾಮದಲ್ಲಿ ಬಸ್‌ ತಂಗುದಾಣ ಲ್ಲದಿರುವದರಿಂದ ನಿತ್ಯವು ಪ್ರಯಾಣಿಕರು ಬಿಸಿಲಿನಲ್ಲಿಯೇ ನಿಲ್ಲುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಅಕ್ಕಪಕ್ಕದ ಚಹಾ ಅಂಗಡಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ನಿಂತು ಆಶ್ರಯ ಪಡೆಯುವಂತಾಗಿದೆ.

ಪಟ್ಟಣಕ್ಕೆ ಹೊಂದಿಕೊಂಡಿರುವ ಕೋಟೆಕಲ್‌ ಗ್ರಾಮದಿಂದ ನಿತ್ಯವು ಬಾಗಲಕೋಟೆ, ಬಾದಾಮಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಜನರು ಸಂಚರಿಸುತ್ತಾರೆ. ಆದರೆ, ಬಸ್‌ ನಿಲ್ದಾಣ ಇಲ್ಲದಿರುವುದರಿಂದ ಮಳೆ ಗಾಳಿ, ಬಿಸಿಲಿನಲ್ಲಿ ಬಸ್‌ಗಾಗಿ ಕಾಯುವಂತಹ ಸ್ಥಿತಿಯಿದೆ.

15 ವರ್ಷ ಕಳೆದಿರುವ ಬಸ್‌ಗಳನ್ನು ಈ ವರ್ಷ ಗುಜರಿ (ಸ್ಕ್ರ್ಯಾ ಪ್‌)ಗೆ ಕಳುಹಿಸಲಾಗುತ್ತಿದೆ. 8 ಹೊಸ ಬಸ್‌ ಇದ್ದು, ಶಕ್ತಿ ಯೋಜನೆಯಿಂದ ಈ ಬಾರಿ ನಿತ್ಯವು ಹೆಚ್ಚಿನ ಆದಾಯ ಬರುತ್ತಿದೆ. ಜಮಖಂಡಿ ಮಾರ್ಗಕ್ಕೆ ಬಸ್‌ ಆರಂಭಿಸಲಾಗಿದೆ. ಕೆರೂರ ಮಾರ್ಗಕ್ಕೆ ಬಸ್‌ ಬಿಡಲು ಯೋಚಿಸಿದ್ದು, ಸಿಬ್ಬಂದಿ ಕೊರತೆಯಿಂದ ಬಿಟ್ಟಿಲ್ಲ. ಶೀಘ್ರದಲ್ಲಿ ಆರಂಭಿಸುತ್ತೇವೆ.
ವಿದ್ಯಾ ನಾಯಕ,
ಡಿಪೋ ಮ್ಯಾನೇಜರ್‌, ಗುಳೇದಗುಡ್ಡ

*ಮಲ್ಲಿಕಾರ್ಜುನ ಕಲಕೇರಿ

ಟಾಪ್ ನ್ಯೂಸ್

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-rabakavi

Rabakavi-Banahatti: ಯಲ್ಲಟ್ಟಿ ಬಳಿ ಸಿಎನ್‌ಜಿ ಟ್ಯಾಂಕರ್ ಪಲ್ಟಿ

Mudhol: ಹಸುಗಳ ಕೆಚ್ಚಲು ಕೋಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್

Mudhol: ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದವರನ್ನು ಕೂಡಲೇ ಬಂಧಿಸಿ: ಪ್ರಮೋದ್ ಮುತಾಲಿಕ್

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

Mudhol:‌‌ ಎರಡು ದಿನಗಳ ಕಾರ್ಯಾಚರಣೆ ಬಳಿಕ ಮೊಸಳೆ‌ ಸೆರೆ

1-cc

ಕೌನ್ ಬನೇಗಾ ಕರೋಡ್ ಪತಿ: 50 ಲಕ್ಷ ರೂ.ಗೆದ್ದ ಬಾಗಲಕೋಟೆಯ ರಮಜಾನ್

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Puttur; ಕಾರು ಢಿಕ್ಕಿ: ಯುವಕ ಸಾವು

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Road Mishap; ಸುಬ್ರಹ್ಮಣ್ಯ: ಕಾರು-ಸ್ಕೂಟಿ ಢಿಕ್ಕಿ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

Malpe: ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹ*ತ್ಯೆ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.