Mangaluru: ಕರ್ನಾಟಕ ಕ್ರೀಡಾಕೂಟಕ್ಕೆ 5 ಕೋ.ರೂ.: ಮುಲ್ಲೈ ಮುಗಿಲನ್
Team Udayavani, Jan 15, 2025, 10:54 PM IST
ಮಂಗಳೂರು: ರಾಜ್ಯ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಿಂಪಿಕ್ ಸಂಸ್ಥೆ ಹಾಗೂ ದ.ಕ. ಮತ್ತು ಉಡುಪಿ ಜಿಲ್ಲಾಡಳಿತಗಳ ಸಹಭಾಗಿತ್ವದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗಿರುವ “ಕರ್ನಾಟಕ ಕ್ರೀಡಾಕೂಟ’ಕ್ಕೆ 2024-25ನೇ ಸಾಲಿನ ಬಜೆಟ್‌ನಲ್ಲಿ 5 ಕೋಟಿ ರೂ.ಗಳನ್ನು ಸರಕಾರ ಒದಗಿಸಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳಾ ಕ್ರೀಡಾಂಗಣದಲ್ಲಿ ಜ. 17ರಂದು ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಸಮಾರೋಪ ಸಮಾರಂಭ ಜ. 23ರಂದು ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದರು.
ಕಳೆದ ವರ್ಷ ದಸರಾ ಕ್ರೀಡಾ ಕೂಟದ ಜತೆಗೆ ರಾಜ್ಯ ಮಟ್ಟದ ಕ್ರೀಡಾಕೂಟವನ್ನು ಆಯೋಜಿಸಲಾಗಿತ್ತು. ಈ ವರ್ಷದಿಂದ ಪ್ರತ್ಯೇಕವಾಗಿ ಕರ್ನಾಟಕ ಕ್ರೀಡಾಕೂಟ ಹೆಸರಿನಲ್ಲಿ ಆಯ್ದ ಉನ್ನತ ಮಟ್ಟದ ಕ್ರೀಡಾಪಟುಗಳೊಂದಿಗೆ ಒಲಿಂಪಿಕ್ ಮಾದರಿಯಲ್ಲಿ ಆಯೋಜಿಸಲಾಗಿದೆ. ಭಾಗವಹಿಸುವ ಕ್ರೀಡಾಪಟುಗಳ ಸಮಗ್ರ ಮಾಹಿತಿಯೊಂದಿಗೆ, ಫಲಿತಾಂಶವನ್ನು ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲ ಆಟಗಾರರಿಗೆ ಕ್ಯೂಆರ್ ಕೋಡ್ ಹೊಂದಿರುವ ಐಡಿ ಕಾರ್ಡ್ ವಿತರಿಸುವ ವ್ಯವಸ್ಥೆಯಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ನಿರ್ದೇಶಕ ಜಿತೇಂದ್ರ ಶೆಟ್ಟಿ ತಿಳಿಸಿದರು.
ಕರ್ನಾಟಕ ಕ್ರೀಡಾಕೂಟ 2025ರ ವಿಶೇಷ ಆಕರ್ಷಣೆಯಾಗಿ ಉದ್ಘಾಟನ ಸಮಾರಂಭದ ವೇಳೆ ಮಂಗಳಾ ಕ್ರೀಡಾಂಗಣದಲ್ಲಿ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಆಯೋ ಜಿಸಲಾಗಿದೆ.
ಜಿ.ಪಂ. ಸಿಇಒ ಡಾ| ಆನಂದ್, ಯುವ ಜನ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿ’ ಸೋಜಾ, ಮನಪಾ ಆಯುಕ್ತ ಆನಂದ್ ಸಿ.ಎಲ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಜ್ಜಾಗುತ್ತಿದೆ ಮಂಗಳೂರು
ಕರ್ನಾಟಕ ಕ್ರೀಡಾಕೂಟಕ್ಕೆ ಮಂಗಳೂರು ಸಜ್ಜಾಗುತ್ತಿದೆ. ದ.ಕ. ಜಿಲ್ಲಾಡಳಿತ, ಜಿಲ್ಲಾ ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಇತರ ಇಲಾಖೆಗಳ ಸಹಕಾರದಿಂದ ತಯಾರಿಗಳು ಪೂರ್ಣಗೊಳ್ಳುತ್ತಿವೆ.
ಉದ್ಘಾಟನಾ ಸಮಾರಂಭ ನಡೆಯಲಿರುವ ಮಂಗಳಾ ಕ್ರೀಡಾಂಗಣ ವನ್ನು ಅಭಿವೃದ್ಧಿ ಗೊಳಿಸ ಲಾಗುತ್ತಿದ್ದು, ಸ್ವತ್ಛಗೊಳಿಸಿ ಗ್ಯಾಲರಿಗೆ ಬಣ್ಣ ಬಳಿದು ಆಕರ್ಷಣೆ ಗೊಳಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ವಾಕಿಂಗ್ ಟ್ರಾÂಕ್, ಲೈಟಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಮಂಗಳೂರು ಮಹಾ ನಗರ ಪಾಲಿಕೆಯ ಮೂಲಕ ಕ್ರೀಡಾ ಪಟು ಗಳಿಗೆ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಮಂದಿ, ಮೂರು ಮಂದಿ ಉಳಿದುಕೊಳ್ಳುವ ಕೊಠಡಿಗಳನ್ನು ಕಾದಿರಿಸಲಾಗಿದ್ದು, ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸುಮಾರು 20ಕ್ಕೂ ಅಧಿಕ ಹೊಟೇಲ್‌ಗಳನ್ನು ಕಾಯ್ದಿರಿಸಲಾಗಿದೆ.
ಬೆಂಗಳೂರಿನ ತಂಡದ ಮೂಲಕ ಕ್ರೀಡಾಪಟುಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲೇ ಬೇಕಾದ ಆಹಾರಗಳನ್ನು ತಯಾರಿಸಿ ಬಿಸಿಬಿಸಿಯಾಗಿ ವಿತರಿಸುವ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲಾಧಿಕಾರಿ ವೀಕ್ಷಣೆ
ಕರ್ನಾಟಕ ಕ್ರೀಡಾಕೂಟದ ಸಿದ್ಧತೆಗಳನ್ನು ಮಂಗಳಾ ಕ್ರೀಡಾಂ ಗಣ ದಲ್ಲಿ ಜಿಲ್ಲಾಧಿಕಾರಿ ಮುಲ್ಲೆ ç ಮುಗಿಲನ್ ಅವರು ಬುಧವಾರ ವೀಕ್ಷಿಸಿದರು. ಈ ವೇಳೆ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಡಿಸಿಪಿ ಸಿದ್ದಾರ್ಥ್ ಗೋಯಲ್, ಕ್ರೀಡಾಧಿ ಕಾರಿ ಪ್ರದೀಪ್ ಡಿ”ಸೋಜಾ ಸಹಿತ ಮತ್ತಿತರ ಅಧಿಕಾರಿ ಗಳು ಇದ್ದರು.
**
ಉಡುಪಿ: ಕರ್ನಾಟಕ ಕ್ರೀಡಾಕೂಟಕ್ಕೆ ಉಡುಪಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಪುನರ್ ಜೋಡಣೆಯ ಜತೆಗೆ ಪ್ರೇಕ್ಷಕರ ಗ್ಯಾಲರಿ ದುರಸ್ತಿ, ಸ್ವತ್ಛತೆ ಕಾರ್ಯ ನಡೆಯುತ್ತಿದೆ. ಬಾಕ್ಸಿಂಗ್, ಟೆನಿಸ್, ಅರ್ಚರಿ, ಜೂಡೋ ಮೊದಲಾದ ಕ್ರೀಡೆಗೆ ಅಗತ್ಯವಾಗಿ ಬೇಕಿರುವ ಕೋರ್ಟ್, ಪರಿಕರ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಆ್ಯತ್ಲೆಟಿಕ್‌ಗೆ ಸಿಂಥೆಟಿಕ್ ಕೋರ್ಟ್ ರಚನೆ ಹಾಗೂ ಟ್ರ್ಯಾಕ್‌ಗೆ ಪೇಂಟಿಂಗ್ ಕೂಡ ಮಾಡಲಾಗುತ್ತಿದೆ. ಕಯಾಕಿಂಗ್ ಮತ್ತು ಕನೋಯಿಂಗ್ ನಡೆಯುವ ಬ್ರಹ್ಮಾವರ ಸ್ವರ್ಣಾ ನದಿ ತಟದಲ್ಲಿ ಕ್ರೀಡೆಗೆ ಬೇಕಾದ ಪರಿಕರಗಳ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ. ಉಪ್ಪೂರು ಸ. ಪ್ರೌಢ ಶಾಲೆ ಆವರಣದಲ್ಲಿ ಸೈಕ್ಲಿಂಗ್‌ಗೆ ಬೇಕಾದ ಟ್ರ್ಯಾಕ್, ಮಾರ್ಕಿಂಗ್ ಇತ್ಯಾದಿ ಮಾಡಲಾಗುತ್ತಿದೆ.
ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ, ಎಸ್‌ಪಿ ಡಾ| ಕೆ.ಅರುಣ್ ಸಹಿತ ಜಿಲ್ಲೆಯ ಹಿರಿಯ ಅಧಿಕಾರಿಗಳು ಕ್ರೀಡಾಳುಗಳು ಹಾಗೂ ಅಧಿಕಾರಿಗಳಿಗೆ ವ್ಯವಸ್ಥೆ ಮಾಡಲಾದ ಹಾಸ್ಟೆಲ್‌ಗಳ ಪರಿವೀಕ್ಷಣೆ ಕಾರ್ಯ ನಡೆಸುತ್ತಿದ್ದಾರೆ. ಜ. 16ರ ಸಂಜೆ ಹಾಗೂ ಜ. 17ರ ಬೆಳಗ್ಗೆ ಬಹುತೇಕ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳು ಜಿಲ್ಲೆಗೆ ಆಗಮಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
Mangaluru: ಆಟವಾಡುತ್ತಿದ್ದಾಗಲೇ ಯುವಕ ಸಾವು
Mulki: ಮಾದಕ ವಸ್ತು ತಡೆ-88 ಪ್ರಕರಣ: 6.80 ಕೋಟಿ ರೂ. ಮೌಲ್ಯದ ವಸ್ತು ನಾಶ: ಕಮಿಷನರ್
Mangaluru: ನಾಳೆ(ಜ.17) ಸಿಎಂ ಮಂಗಳೂರಿಗೆ… ಬಹು ಸಂಸ್ಕೃತಿ ಉತ್ಸವದಲ್ಲಿ ಭಾಗಿ
Mangaluru: ಕಷ್ಟದ ಸಮಯದಲ್ಲಿ ದಾರಿ ತೋರುವ ದೇವರು: ಡಾ| ಎಲಿಯಾಸ್ ಫ್ರ್ಯಾಂಕ್
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.