ಆಸ್ಟ್ರೇಲಿಯನ್‌ ಓಪನ್‌-2025: ಫೆಡರರ್‌ ದಾಖಲೆ ಮುರಿದ ಜೊಕೋ

Team Udayavani, Jan 15, 2025, 10:59 PM IST

ಆಸ್ಟ್ರೇಲಿಯನ್‌ ಓಪನ್‌-2025: ಫೆಡರರ್‌ ದಾಖಲೆ ಮುರಿದ ಜೊಕೋ

ಮೆಲ್ಬರ್ನ್: ಟೆನಿಸ್‌ ಬಾಳ್ವೆಯ 430ನೇ ಪಂದ್ಯಕ್ಕೆ ಕಾಲಿಡುವ ಮೂಲಕ ನೊವಾಕ್‌ ಜೊಕೋವಿಕ್‌ ನೂತನ ದಾಖಲೆಯೊಂದನ್ನು ಬರೆದರು. ರೋಜರ್‌ ಫೆಡರರ್‌ ಅವರ 429 ಪಂದ್ಯಗಳ ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಮೀರಿಸಿ ಮುನ್ನುಗ್ಗಿದರು.

ಬುಧವಾರ ಜೇಮ್‌ ಫಾರಿಯ ವಿರುದ್ಧದ ಆಸ್ಟ್ರೇಲಿಯನ್‌ ಓಪನ್‌ ಪಂದ್ಯವನ್ನು 6-1, 6-7 (4), 6-3, 6-2ರಿಂದ ಜಯಿಸುವ ಮೂಲಕ ಜೊಕೋವಿಕ್‌ ನೂತನ ಮೈಲುಗಲ್ಲು ನೆಟ್ಟರು. ಅವರೀಗ 3ನೇ ಸುತ್ತು ತಲುಪಿದ್ದಾರೆ.

ರೂಡ್‌, ಕ್ವಿನ್ವೆನ್‌ ಪರಾಭವ
ಕಾರ್ಲೋಸ್‌ ಅಲ್ಕರಾಜ್‌, ಜೇಕಬ್‌ ಮೆನ್ಸಿಕ್‌, ಕೊಕೊ ಗಾಫ್, ನವೋಮಿ ಒಸಾಕಾ ಮೊದಲಾದವರೆಲ್ಲ ಮುನ್ನಡೆ ಸಾಧಿಸಿದ್ದಾರೆ. ಇವರಲ್ಲಿ ಶ್ರೇಯಾಂಕ ರಹಿತ ಯುವ ಆಟಗಾರ ಜೇಕಬ್‌ ಮೆನ್ಸಿಕ್‌ ದೊಡ್ಡ ಬೇಟೆಯ ಮೂಲಕ ಕ್ಯಾಸ್ಪರ್‌ ರೂಡ್‌ ಅವರನ್ನು ಮನೆಗೆ ಕಳುಹಿಸಿದರು. ಹಾಗೆಯೇ ಕಳೆದ ವರ್ಷದ ರನ್ನರ್ ಅಪ್‌, ಪ್ಯಾರಿಸ್‌ ಒಲಿಂಪಿಕ್ಸ್‌ ಬಂಗಾರ ವಿಜೇತೆ ಜೆಂಗ್‌ ಕ್ವಿನ್ವೆನ್‌ ಕೂಡ ಕೂಟದಿಂದ ಹೊರಬಿದ್ದರು.

19 ವರ್ಷದ ಜೆಕ್‌ ಆಟಗಾರ ಜೇಕಬ್‌ ಮೆನ್ಸಿಕ್‌ 6-2, 3-6, 6-1, 6-4 ಅಂತರದಿಂದ ಕ್ಯಾಸ್ಪರ್‌ ರೂಡ್‌ ಅವರನ್ನು ಸೋಲಿಸಿ ಅಮೋಘ ಸಾಧನೆಗೈದರು. ಮೆನ್ಸಿಕ್‌ ಗ್ರ್ಯಾನ್‌ಸ್ಲಾಮ್‌ ಕೂಟದ 3ನೇ ಸುತ್ತು ತಲುಪಿದ್ದು ಇದೇ ಮೊದಲು. ಕ್ಯಾಸ್ಪರ್‌ ರೂಡ್‌ ಈ ಕೂಟದಿಂದ ಹೊರಬಿದ್ದ 4ನೇ ಟಾಪ್‌-10 ಆಟಗಾರನೆನಿಸಿದರು. ಉಳಿದವರೆಂದರೆ ಸ್ಟೆಫ‌ನಸ್‌ ಸಿಸಿಪಸ್‌, ಆ್ಯಂಡ್ರೆ ರುಬ್ಲೇವ್‌ ಮತ್ತು ಗ್ರಿಗರ್‌ ಡಿಮಿಟ್ರೋವ್‌. ಕಾರ್ಲೋಸ್‌ ಅಲ್ಕರಾಜ್‌ ಜಪಾನ್‌ನ ಯೊಶಿಟೊ ನಿಶಿಯೋಕ ವಿರುದ್ಧ 6-0, 6-1, 6-4ರಿಂದ ಗೆದ್ದು ಬಂದರು.

ವನಿತಾ ವಿಭಾಗ
ನವೋಮಿ ಒಸಾಕಾ 1-6, 6-1, 6-3ರಿಂದ ಜೆಕ್‌ ಆಟಗಾರ್ತಿ ಕ್ಯಾರೋಲಿನಾ ಮುಖೋವಾ ಅವರನ್ನು ಪರಾಭವ ಗೊಳಿಸಿದರು. ಇವರ 3ನೇ ಸುತ್ತಿನ ಎದುರಾಳಿ ಸ್ವಿಜರ್ಲೆಂಡ್‌ನ‌ ಬೆಲಿಂಡಾ ಬೆನ್ಸಿಕ್‌. ಚೀನದ ಜೆಂಗ್‌ ಕ್ವಿನ್ವೆನ್‌ ಅವರನ್ನು 97ನೇ ರ್‍ಯಾಂಕ್‌ನ ಲಾರಾ ಸಿಗ¾ಂಡ್‌ 7-6 (7-3), 6-3 ಅಂತರದಿಂದ ಪರಾಭವಗೊಳಿಸಿದರು.

ಕೊಕೊ ಗಾಫ್ ಬ್ರಿಟನ್‌ನ ಜೋಡಿ ಬರೇಜ್‌ ವಿರುದ್ಧ 6-3, 7-5 ಅಂತರದ ಮೇಲುಗೈ ಸಾಧಿಸಿದರು.

ಯೂಕಿ-ಒಲಿವೆಟ್ಟಿ ಜೋಡಿಗೆ ಆಘಾತ
ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಭಾರತದ ಟೆನಿಸಿಗರಿಗೆ ಮೊದಲ ಸುತ್ತಿನ ಸೋಲೇ ಸಂಗಾತಿಯಾದಂತಿದೆ. ಬುಧವಾರದ ಪುರುಷರ ಡಬಲ್ಸ್‌ನಲ್ಲಿ ಫ್ರಾನ್ಸ್‌ನ ಅಲಾºನೊ ಒಲಿವೆಟ್ಟಿ ಜತೆಗೂಡಿ ಆಡಿದ ಯೂಕಿ ಭಾಂಬ್ರಿ, ಆತಿಥೇಯ ಆಸ್ಟ್ರೇಲಿಯದ ಟ್ರಿಸ್ಟನ್‌ ಸ್ಕೂಲ್‌ಕೇಟ್‌-ಆ್ಯಡಂ ವಾಲ್ಟನ್‌ ವಿರುದ್ಧ 2-6, 6-7 (3-7) ಅಂತರದಿಂದ ಪರಾಭವಗೊಂಡರು.

ಟಾಪ್ ನ್ಯೂಸ್

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

Kho Kho World Cup 2025: ಭಾರತದ ತಂಡಗಳು ಕ್ವಾರ್ಟರ್‌ ಫೈನಲ್‌ಗೆ

3rd ODI: ಐರ್ಲೆಂಡ್‌ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

3rd ODI: ಐರ್ಲೆಂಡ್‌ ವಿರುದ್ಧ 3-0 ಕ್ಲೀನ್‌ಸ್ವೀಪ್ ಸಾಧಿಸಿದ ಭಾರತ

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

Vijay Hazare Trophy: ಚಾಂಪಿಯನ್‌ ಹರಿಯಾಣ ಪರಾಭವ… ಫೈನಲ್‌ ಪ್ರವೇಶಿಸಿದ ಕರ್ನಾಟಕ

1-ssss

ODI;ಸ್ಪೋಟಕ ಶತಕ ಸಿಡಿಸಿದ ನಾಯಕಿ ಸ್ಮೃತಿ: ಟೀಮ್ ಇಂಡಿಯಾ ದಾಖಲೆ ಮೊತ್ತ

RIshab Panth

Champions Trophy: ಭಾರತ ತಂಡಕ್ಕೆ ಆಯ್ಕೆಯಾಗುವ ವಿಕೆಟ್‌ಕೀಪರ್ ಗಳಿಬ್ಬರು ಯಾರು?

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

BJp-pro-cow2

Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ

infosys

ಮೈಸೂರಿನ ಇನ್ಫೋಸಿಸ್‌ ಕ್ಯಾಂಪಸ್‌ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ

Varooru1

Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ

CKM–Shoola

Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ

Cow-zammer

Chamarajpete: ಕೆಚ್ಚಲು ಕೊಯ್ದ ಕೇಸ್‌; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.