Udupi: ಶ್ರೀಕೃಷ್ಣಮಠದಲ್ಲಿ ಚೂರ್ಣೋತ್ಸವ ಸಂಭ್ರಮ
Team Udayavani, Jan 15, 2025, 11:29 PM IST
ಉಡುಪಿ: ಶ್ರೀಕೃಷ್ಣಮಠದಲ್ಲಿ ಸಪ್ತೋತ್ಸವ, ಮಕರಸಂಕ್ರಾಂತಿ ಉತ್ಸವದ ಮರುದಿನ ನಡೆಯುವ ಚೂರ್ಣೋತ್ಸವ ಬುಧವಾರ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದಲ್ಲಿ ಸಂಭ್ರಮದಿಂದ ನೆರವೇರಿತು.
ಬೆಳಗ್ಗೆ ಪರ್ಯಾಯ ಶ್ರೀಪಾದರು ಮಹಾಪೂಜೆಯನ್ನು ಮುಗಿಸಿದ ಬಳಿಕ ಚೂರ್ಣೋತ್ಸವ ಆರಂಭಗೊಂಡಿತು. ಬ್ರಹ್ಮರಥದಲ್ಲಿ ಶ್ರೀಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವಮೂರ್ತಿಗಳನ್ನು ಇರಿಸಿ ಪೂಜೆ ಸಲ್ಲಿಸಿದ ಬಳಿಕ ರಥೋತ್ಸವದ ವೇಳೆ “ಗೋವಿಂದಾ ಗೋವಿಂದಾ’ ಎಂದು ಹೇಳುತ್ತ ಭಕ್ತರು ರಥವನ್ನು ಎಳೆದರು.
ರಥಬೀದಿಗೆ ಸಾವಿರಾರು ಭಕ್ತರ ಸಮ್ಮುಖ ಪ್ರದಕ್ಷಿಣೆ ಬಂದು ಪಲ್ಲಪೂಜೆ, ವಸಂತಮಹಲ್‌ನಲ್ಲಿ ಅಷ್ಟಾವಧಾನ, ಓಲಗಮಂಟಪ ಪೂಜೆ ನಡೆಯಿತು. ಅನಂತರ ಮಧ್ವ ಸರೋವರದಲ್ಲಿ ಉತ್ಸವಮೂರ್ತಿ ಸಹಿತವಾಗಿ ಅವಭೃಥಸ್ನಾನ ಮಾಡಿ ಸಪ್ತೋತ್ಸವವನ್ನು ಕೃಷ್ಣಾರ್ಪಣಗೈದರು.
ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು, ವೃಂದಾವನದ ಶ್ರೀರಾಧಾರಮಣ ಮಂದಿರದ ಮಧ್ವ ಗೌಡೀಯ ಸಂಪ್ರದಾಯದ ಮುಖ್ಯಸ್ಥ ಡಾ| ಪುಂಡರೀಕ ಗೋಸ್ವಾಮಿ ಪಾಲ್ಗೊಂಡಿದ್ದರು. ಸಪ್ತೋತ್ಸವದ ಸೇವಾಕರ್ತ ರಾದ ದಿ| ಕಾರಿಂಜೆ ಸುಬ್ರಹ್ಮಣ್ಯ ಉಪಾಧ್ಯಾಯ, ದಿ| ನಾಗವೇಣಿ ಅಮ್ಮನವರ ಸ್ಮರಣಾರ್ಥ ಅವರ ಮಕ್ಕಳಿಗೆ, ಹುಬ್ಬಳ್ಳಿಯ ಉದ್ಯಮಿ ಶ್ರೀಕಾಂತ್ ಭಟ್ ಕೆಮ್ತೂರು, ಬೆಂಗಳೂರಿನ ಶ್ರೀ ಮುಖ್ಯಪ್ರಾಣ ಸೇವಾ ಸಮಿತಿಯವರಿಗೆ ಪ್ರಸಾದ ನೀಡಿ ಪುತ್ತಿಗೆ ಸ್ವಾಮೀಜಿಯವರು ಹರಸಿದರು.
ಮಧ್ಯಾಹ್ನ ಪುತ್ತಿಗೆ ಶ್ರೀಪಾದರು ಪಲ್ಲಪೂಜೆ ನಡೆಸಿದ ಬಳಿಕ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಜರಗಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ ಚಿರತೆ ಸೆರೆ ಕಾರ್ಯಾಚರಣೆ ಸ್ಥಗಿತ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.