Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Team Udayavani, Jan 16, 2025, 11:00 AM IST
ಬಿಗ್ ಬಾಸ್ ಮನೆ ಫಿನಾಲೆ ವಾರದತ್ತ ಕಾಲಿಡುತ್ತಿದ್ದಂತೆ ರೋಚಕವಾಗಿ ಸಾಗುತ್ತಿದೆ. ಒಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ವಾರದ ಮಧ್ಯಯೇ ಆಚೆ ಹೋಗಿದ್ದಾರೆ. ಆಚೆ ಹೋದ ಸ್ಪರ್ಧಿಯ ಹೆಸರು ಕೇಳಿ ವೀಕ್ಷಕರು ಶಾಕ್ ಆಗಿದ್ದಾರೆ.
ವಿಜಯ್ ಸೇತುಪತಿ ನಡೆಸಿಕೊಡುವ ಬಿಗ್ ಬಾಸ್ ತಮಿಳು -8 (Bigg Boss Tamil Season 8) ರಲ್ಲಿ ಫಿನಾಲೆಗೆ ಹೋಗುವ 5 ಸ್ಪರ್ಧಿಗಳು ಫೈನಾಲಿಸ್ ಆಗಿದ್ದಾರೆ. ಫಿನಾಲೆಗೆ ಹೋಗುವ ಅವಕಾಶವನ್ನು ಒಬ್ಬ ಸ್ಪರ್ಧಿ ಕೊನೆಯ ಹಂತದಲ್ಲಿ ಕೈತಪ್ಪಿಸಿಕೊಂಡು ಮನೆಯಿಂದಲೇ ಆಚೆ ಹೋಗಿದ್ದಾರೆ.
ಮನೆಮಂದಿಗೆ ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದಾರೆ. ಮನೆಯ ಹೊರಗೆ ಹಾಕಲಾಗಿದ್ದ 50,000 ನಗದುವುಳ್ಳ ಪೆಟ್ಟಿಗೆಯನ್ನು ಹಿಂಪಡೆಯುವಂತೆ ಮನೆಯವರಿಗೆ ಸವಾಲು ಹಾಕಲಾಗಿದೆ. ಈ ಪೆಟ್ಟಿಗೆಯನ್ನು ಸ್ಪರ್ಧಿಗಳು ಪಡೆದು ನಿರ್ದಿಷ್ಟ ಸಮಯದಲ್ಲಿ ಮನೆಯೊಳಗೆ ಬರಬೇಕು. ಮನೆಯ ಬಾಗಿಲು ಓಪನ್ ಆದ ತಕ್ಷಣ ಆ ಪೆಟ್ಟಿಗೆಯನ್ನು ಸ್ಪರ್ಧಿಗಳು ಕೊಟ್ಟಿರುವ ಸಮಯದೊಳಗೆ ತರಬೇಕು. ಈ ಪ್ರಕ್ರಿಯೆಯಲ್ಲಿ ರಾಯನ್ ಮತ್ತು ಮುತ್ತುಕುಮಾರನ್ ಸಮಯಕ್ಕೆ ಸರಿಯಾಗಿ ಟಾಸ್ಕ್ ಪೂರ್ಣಗೊಳಿಸಿದ್ದಾರೆ. ಆದರೆ ಜಾಕ್ವೆಲಿನ್ ಅವರು ಟಾಸ್ಕ್ ಮಾಡಲು ವಿಫಲರಾದ ಕಾರಣ ವಾರದ ಮಧ್ಯದಲ್ಲೇ ಎಲಿಮಿನೇಟ್ ಆಗಿದ್ದಾರೆ.
15 ವಾರದಿಂದ ಜಾಕ್ವೆಲಿನ್ ಅವರು ಡೇಂಜರ್ ಝೋನ್‌ನಲ್ಲಿದ್ದರು. ಅವರನ್ನು ಪ್ರತಿಬಾರಿ ವೀಕ್ಷಕರು ವೋಟ್ ಮಾಡಿ ಸೇಫ್ ಮಾಡುತ್ತಿದ್ದರು. ದೊಡ್ಮನೆಯ ಮಹಿಳಾ ಸ್ಪರ್ಧಿಯಲ್ಲಿ ಜಾಕ್ವೆಲಿನ್ ಪ್ರಬಲ ಸ್ಪರ್ಧಿಯೆಂದೇ ಗುರುತಿಸಿಕೊಂಡಿದ್ದರು. ಆದರೆ ಅವರ ಅನಿರೀಕ್ಷಿತ ಎಲಿಮಿನೇಷನ್ ವೀಕ್ಷಕರು ಶಾಕ್ ಆಗುವಂತೆ ಮಾಡಿದೆ.
ಬಿಗ್ ಬಾಸ್ ತಮಿಳಿನಲ್ಲಿ ಕೆಲ ವಾರಗಳ ಹಿಂದೆ ಸತತ ಎರಡು ಡಬಲ್ ಎಲಿಮಿನೇಷನ್ ನಡೆದಿತ್ತು. ಜಾಕ್ವೆಲಿನ್ ಅವರ ನಿರ್ಗಮನದ ನಂತರ ಟ್ರೋಫಿ ಗೆಲ್ಲುವ ರೇಸ್‌ನಲ್ಲಿ ಅಂತಿಮವಾಗಿ ರಾಯನ್, ವಿಶಾಲ್, ಮುತ್ತುಕುಮಾರನ್, ಸೌಂದರ್ಯ ಮತ್ತು ಪವಿತ್ರ ಅವರು ಉಳಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಮಿಡ್ ವೀಕ್ ಎಲಿಮಿನೇಷನ್ ವಿಚಾರಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್; ಏನದು?
BBK11: ಇಂದು ರಾತ್ರಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗೋ ಸ್ಪರ್ಧಿ ಇವರೇ..? ಶಾಕಿಂಗ್!
BBK11: ಫಿನಾಲೆಗೂ ಮುನ್ನ ವಿನ್ನರ್ ಹೆಸರು ಲೀಕ್!- ಇವರೇನಾ ಟ್ರೋಫಿ ಗೆಲ್ಲೋರು?
BBK11: ವಾರದ ಮಧ್ಯದಲ್ಲೇ ಒಬ್ಬ ಸ್ಪರ್ಧಿ ಔಟ್; ರಜತ್ ಮೇಲೆ ಭವ್ಯಾ, ಮೋಕ್ಷಿತಾ ಟಾರ್ಗೆಟ್
BBK11: ಮಾತನ್ನೇ ಬಂಡವಾಳ ಆಗಿಸಿಕೊಂಡಿದ್ದ ಪ್ರಬಲ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್
MUST WATCH
ಹೊಸ ಸೇರ್ಪಡೆ
Just Married: ಮಚ್ಚನಿಗೆ ಕಿಚ್ಚನ ಸಾಥ್; ʼಜಸ್ಟ್ ಮ್ಯಾರೀಡ್ʼನಿಂದ ಹಾಡು ಬಂತು
800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್ ಅಲಿ ಆಸ್ತಿ ಎಷ್ಟು?
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.