ಗಮನ ಬೇರೆಡೆ ಸೆಳೆದು ಚಿನ್ನಾಭರಣ, ಹಣ ಕಳ್ಳತನ: ಓಜಿಕುಪ್ಪಂ ಗ್ಯಾಂಗ್ ಸದಸ್ಯರ ಸೆರೆ
Team Udayavani, Jan 16, 2025, 12:10 PM IST
ಬೆಂಗಳೂರು: ಬ್ಯಾಂಕ್‌ನಿಂದ ಹೊರಬರುವ ಗ್ರಾಹಕರನ್ನು ಗುರಿಯಾಗಿಸಿಕೊಂಡು ಗಮನ ಬೇರೆಡೆ ಸೆಳೆದು ನಗದು ಕಳ್ಳತನ ಮಾಡುತ್ತಿದ್ದ ತಮಿಳುನಾಡಿನ ಓಜಿಕುಪ್ಪಂ ಗ್ಯಾಂಗ್‌ನ ಮೂವರು ಸದಸ್ಯರನ್ನು ಕೆ.ಆರ್.ಪುರ ಮತ್ತು ಕೊತ್ತನೂರು ಠಾಣೆ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.
ಓಜಿಕುಪ್ಪಂನ ಗೋಪಿ (35), ಅಭಿಷೇಕ್ (36) ಹಾಗೂ ಅಂಕಿತ್(36) ಬಂಧಿತರು. ಆರೋಪಿಗಳಿಂದ 46 ಲಕ್ಷ ರೂ. ಚಿನ್ನಾಭರಣ, ನಗದು ಜಪ್ತಿ ಮಾಡಲಾಗಿದೆ.
ದೇವಸಂದ್ರದ ನಿವಾಸಿಯೊಬ್ಬರು ನ.29 ರಂದು ಬ್ಯಾಂಕ್‌ನಿಂದ 4 ಲಕ್ಷ ರೂ. ಡ್ರಾ ಮಾಡಿ ಕಾರಿನಲ್ಲಿ ಹೋಗುತ್ತಿದ್ದಾಗ ಟಿ.ಸಿ.ಪಾಳ್ಯದ ಹತ್ತಿರ ಎರಡು ದ್ವಿಚಕ್ರ ವಾಹನಗಳಲ್ಲಿ ಕಾರು ಹಿಂಬಾಲಿಸಿದ ಆರೋಪಿಗಳು, ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನ ಟೈಯರ್ ಪಂಚರ್ ಆಗಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ. ಬಳಿಕ ಪಂಕ್ಚರ್ ಶಾಪ್‌ನಲ್ಲಿ ಪಂಚರ್ ಹಾಕಿಸಿ ಹಣ ಕೊಡಲು ಹೋದಾಗ ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿದ್ದ 4 ಲಕ್ಷ ರೂ. ಕಳವು ಮಾಡಿದ್ದ. ಈ ಬಗ್ಗೆ ಕೆ.ಆರ್.ಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಗೋಪಿ ಮತ್ತು ಅಂಕಿತ್‌ನನ್ನು ಬಂಧಿಸಿದ್ದಾರೆ. ಆತನಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು ಜಪ್ತಿ ಮಾಡಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಇದೇ ಆರೋಪಿಗಳು 2024ರ ಮೇ 16ರಂದು ಮಹಿಳೆಯೊಬ್ಬರು ಬ್ಯಾಂಕ್‌ನ ಲಾಕರ್‌ನಲ್ಲಿಟ್ಟಿದ್ದ ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳನ್ನು ತೆಗೆದುಕೊಂಡು ಬ್ಯಾಂಕ್ ಮುಂಭಾಗದ ಹೋಗುವಾಗ ಬೈಕ್‌ನಲ್ಲಿ ಬಂದು ಚಿನ್ನಾಭರಣ ಮತ್ತು ಬೆಳ್ಳಿಯ ವಸ್ತುಗಳಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದರು. ಕೆಲ ದಿನಗಳ ಬಳಿಕ ಇದೇ ತಂಡ ವೃದ್ಧರೊಬ್ಬರು ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಬ್ಯಾಗ್‌ನಲ್ಲಿ ತೆಗೆದುಕೊಂಡು ಹೋಗುವಾಗ ಹಿಂಬಾಲಿಸಿ ಕಸಿದುಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದಾಗ ತಲೆಮರೆಸಿ ಕೊಂಡಿದ್ದ ಅಭಿಷೇಕ್‌ನನ್ನು ಬಂಧಿಸಲಾಗಿದೆ. ಈತನಿಂದ 33.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drug Selling Case: 1 ತಿಂಗಳಲ್ಲಿ 85 ಆರೋಪಿಗಳ ಬಂಧನ
Arrested: ಮನೆ ಬಳಿ ಶೂನಲ್ಲಿಡುವ ಕೀ ಬಳಸಿ ಕನ್ನ ಹಾಕುತ್ತಿದ್ದ ಖತರ್ನಾಕ್ ಮಹಿಳೆ ಸೆರೆ
Lalbagh Flower Show: ಲಾಲ್‌ಬಾಗ್ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ನಿಷೇಧ
Lalbagh Flower Show: ಲಾಲ್‌ಬಾಗ್‌ನಲ್ಲಿ ಇಂದಿನಿಂದ 11 ದಿನ ಫಲಪುಷ್ಪ ಮೇಳ
Chamarajpete: ಕೆಚ್ಚಲು ಕೊಯ್ದ ಪ್ರಕರಣ: ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ
Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ
ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.