ಥಿಯೇಟರ್‌ನಲ್ಲಿ ಇರುವಾಗಲೇ ಟಿವಿಯಲ್ಲಿ ಪ್ರಸಾರ ಕಂಡ ʼಗೇಮ್‌ ಚೇಜರ್‌ʼ: ಚಿತ್ರತಂಡ ಶಾಕ್

Team Udayavani, Jan 16, 2025, 12:57 PM IST

ಥಿಯೇಟರ್‌ನಲ್ಲಿ ಇರುವಾಗಲೇ ಟಿವಿಯಲ್ಲಿ ಪ್ರಸಾರ ಕಂಡ ʼಗೇಮ್‌ ಚೇಜರ್‌ʼ: ಚಿತ್ರತಂಡ ಶಾಕ್

ಹೈದರಾಬಾದ್:‌ ಗ್ಲೋಬಲ್‌ ಸ್ಟಾರ್‌ ರಾಮ್‌ಚರಣ್‌ (Ram Charan) ಅಭಿನಯದ ʼಗೇಮ್‌ ಚೇಂಜರ್‌ʼ ಚಿತ್ರ (Game Changer) ಥಿಯೇಟರ್‌ನಲ್ಲಿ ಪ್ರದರ್ಶನ ಕಾಣುತ್ತಿದೆ.

ಜ.10ರಂದು ರಿಲೀಸ್‌ ಆದ ʼಗೇಮ್‌ ಚೇಂಜರ್ʼ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೂ ಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಬರುತ್ತಿದ್ದಾರೆ. ʼಆರ್‌ ಆರ್‌ ಆರ್‌ʼ ಬಳಿಕ ರಾಮ್‌ಚರಣ್‌ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರ ಇದಾಗಿರುವುದರಿಂದ ನಿರೀಕ್ಷೆ ಹೆಚ್ಚಾಗಿಯೇ ಇದೆ. ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಶಂಕರ್‌ ನಿರ್ದೇಶನದ ಚಿತ್ರ ಬಾಕ್ಸಾಫೀಸ್‌ನಲ್ಲಿ  100 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದೆ.

ಇದನ್ನೂ ಓದಿ: Bigg Boss: ಟಾಸ್ಕ್‌ ಮೂಲಕ ನಡೆಯಿತು ಮಿಡ್‌ ವೀಕ್‌ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್

ಇತ್ತೀಚೆಗೆ ಸೌತ್‌ ಸಿನಿಮಾಗಳಿಗೆ ಪೈರಸಿ ಕಾಟ ಶುರುವಾಗಿದೆ. ʼಗೇಮ್‌ ಚೇಂಜರ್‌ʼ ಚಿತ್ರದ ಹೆಚ್ ಡಿ ಪ್ರಿಂಟ್‌ ಆನ್‌ಲೈನ್‌ನಲ್ಲಿ ಸೋರಿಕೆ ಆಗಿದೆ. ಈ ನಡುವೆ ಚಿತ್ರಕ್ಕೆ ಮತ್ತೊಂದು ಪೆಟ್ಟು ಬಿದ್ದಿದೆ.

ಸಿನಿಮಾ ಲೀಕ್‌ ಆದ ಬಳಿಕ ಇದೀಗ ಚಾನೆಲ್‌ವೊಂದರಲ್ಲಿ ಪ್ರಸಾರ ಮಾಡಲಾಗಿದೆ. ಆಂಧ್ರಪ್ರದೇಶದ ಸ್ಥಳೀಯ ಕೇಬಲ್ ಟಿವಿ ಚಾನೆಲ್‌ನಲ್ಲಿ ʼಗೇಮ್ ಚೇಂಜರ್ʼ ಚಿತ್ರವನ್ನು  ಪ್ರಸಾರ ಮಾಡಲಾಗಿದೆ.

ಅಕ್ರಮವಾಗಿ ಚಿತ್ರವನ್ನು ಪ್ರಸಾರ ಮಾಡಿರುವ ಸ್ಕ್ರೀನ್‌ ಶಾಟ್‌ಗಳನ್ನು ಹಂಚಿಕೊಂಡು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಂಧ್ರದ ಸ್ಥಳೀಯ ಕೇಬಲ್‌ ಚಾನೆಲ್‌ ಆಗಿರುವ ‘Ap Local TV’ ಎನ್ನುವ ವಾಹಿನಿಯಲ್ಲಿ ʼಗೇಮ್‌ ಚೇಂಜರ್‌ʼ ಚಿತ್ರದ ಹೆಚ್‌ ಡಿ ಪ್ರಿಂಟ್‌ ಪ್ರಸಾರ ಮಾಡಲಾಗಿದೆ. ಇದರ ಸ್ಕ್ರೀನ್‌ ಶಾಟ್ ಗಳನ್ನು ಎಲ್ಲೆಡೆ ಹಂಚಿಕೊಳ್ಳಲಾಗಿದ್ದು, ಇದು ನಿರ್ಮಾಪಕರ ಗಮನಕ್ಕೂ ಬಂದಿದೆ.

ನಿರ್ಮಾಪಕರು ಹೇಳಿದ್ದೇನು?:

“ಇದು ನಿಜಕ್ಕೂ ಬೇಸರದ ಸಂಗತಿ ಮತ್ತು ಸ್ವೀಕಾರಾರ್ಹವಲ್ಲ. ಕೇವಲ 4-5 ದಿನಗಳ ಹಿಂದೆ ಬಿಡುಗಡೆಯಾದ ಚಲನಚಿತ್ರವು ಸ್ಥಳೀಯ ಕೇಬಲ್ ಚಾನೆಲ್‌ಗಳು ಮತ್ತು ಬಸ್‌ಗಳಲ್ಲಿ ಪ್ರಸಾರವಾಗುತ್ತಿರುವುದು ಗಂಭೀರ ಕಳವಳವನ್ನು ಉಂಟುಮಾಡುತ್ತದೆ. ಸಿನಿಮಾ ಎಂದರೆ ಕೇವಲ ನಾಯಕ, ನಿರ್ದೇಶಕ ಅಥವಾ ನಿರ್ಮಾಪಕರದ್ದಲ್ಲ. ಇದು 3-4 ವರ್ಷಗಳ ಪರಿಶ್ರಮ, ಸಮರ್ಪಣೆ ಮತ್ತು ಸಾವಿರಾರು ಜನರ ಕನಸುಗಳ ಫಲಿತಾಂಶವಾಗಿದೆ. ಈ ರೀತಿ ಮಾಡುವ ಮುನ್ನಈ ಚಲನಚಿತ್ರಗಳ ಯಶಸ್ಸಿನ ಮೇಲೆ ಜೀವನೋಪಾಯವನ್ನು ಅವಲಂಬಿಸಿರುವ ವಿತರಕರು ಮತ್ತು ಪ್ರದರ್ಶಕರ ಮೇಲೆ ಆಗುವ ಪರಿಣಾಮದ ಬಗ್ಗೆ ಯೋಚಿಸಿ. ಇಂತಹ ಕ್ರಮಗಳು ಅವರ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತವೆ ಮತ್ತು ಚಿತ್ರರಂಗದ ಭವಿಷ್ಯಕ್ಕೆ ಅಪಾಯವನ್ನುಂಟು ಮಾಡುತ್ತವೆ. ಇದನ್ನು ಕೊನೆಗಾಣಿಸಲು ಗೌರವಾನ್ವಿತ ಸರ್ಕಾರಗಳು ಮುಂದಾಗಬೇಕು ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸಮಯ ಇದು. ಚಿತ್ರರಂಗಕ್ಕೆ ಉತ್ತಮ ಭವಿಷ್ಯವನ್ನು ರೂಪಿಸಲು ಎಲ್ಲರೂ ಒಗ್ಗೂಡಿ ದೃಢವಾಗಿ ನಿಲ್ಲೋಣ” ಎಂದು ನಿರ್ಮಾಪಕ ಶ್ರೀನಿವಾಸ್ ಕುಮಾರ್ (SKN) ಟ್ವೀಟ್‌ ಮಾಡಿದ್ದಾರೆ.

ಈ ಸಂಬಂಧ ಚಿತ್ರತಂಡ ಸೈಬರ್ ಕ್ರೈಮ್ ಅಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಟಾಪ್ ನ್ಯೂಸ್

Supreme Court

ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ

Husband-wife fight: Wife hits husband on the head with a whip

Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

1-saif

Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಐದನೇ ಬಾರಿ ಜತೆಯಾದ ಧನುಷ್‌ – ವೆಟ್ರಿಮಾರನ್; ತೆರೆಮೇಲೆ ʼಕೆಜಿಎಫ್‌ʼ ರಿಯಲ್‌ ಕಹಾನಿ?

ಅಧಿಕೃತವಾಗಿ ಅನೌನ್ಸ್‌ ಆಯಿತು ʼಜೈಲರ್‌ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ

ಅಧಿಕೃತವಾಗಿ ಅನೌನ್ಸ್‌ ಆಯಿತು ʼಜೈಲರ್‌ -2ʼ; Tiger Ka Hukum.. ಎನ್ನುತ್ತಲೇ ಮಿಂಚಿದ ತಲೈವಾ

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Kollywood: ರೀ ರಿಲೀಸ್‌ ಆಗಲಿದೆ ರಜಿನಿಕಾಂತ್‌ ಐಕಾನಿಕ್‌ ಚಿತ್ರ ʼಬಾಷಾʼ

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Supreme Court

ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ

Husband-wife fight: Wife hits husband on the head with a whip

Aranthodu: ಗಂಡ-ಹೆಂಡತಿ ಜಗಳ; ಪತಿಯ ತಲೆಗೆ ಸೌಟಿನಿಂದ ಹೊಡೆದ ಪತ್ನಿ, ಚಿಮ್ಮಿದ ರಕ್ತ

ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ

ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.