Kanakapura: ಕನಕಪುರ ಸರ್ಕಾರಿ ಬಸ್‌ನಲ್ಲಿ ಖಾಸಗಿ ವ್ಯಕ್ತಿ ಕಂಡಕ್ಟರ್!
Team Udayavani, Jan 16, 2025, 1:46 PM IST
ಕನಕಪುರ: ಸಾರಿಗೆ ಬಸ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ವಾಹಕನಂತೆ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಬಸ್ ನಿರ್ವಾಹಕನನ್ನು ಸೇವೆಯಿಂದ ಅಮಾನತು ಮಾಡಿ ವಿಭಾಗೀಯ ನಿಯಂತ್ರಣಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸಾರಿಗೆ ಬಸ್ ನಿರ್ವಾಹಕ ನವೀನ್ ಅಮಾನತುಗೊಂಡವರು.
ಆಗಿದ್ದೇನು?: ಮಂಗಳವಾರ ಮಧ್ಯಾಹ್ನ ಸುಮಾರು 3 ಗಂಟೆ ಸಮಯದಲ್ಲಿ ಕೋಡಿಹಳ್ಳಿ ಹುಣಸನಹಳ್ಳಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ ಕೋಡಿಹಳ್ಳಿಯಿಂದ ಕನಕಪುರಕ್ಕೆ ಸಂಚಾರ ಮಾಡುತ್ತಿತ್ತು. ಈ ವೇಳೆ, ಸಮ ವಸ್ತ್ರವಿಲ್ಲದ ಖಾಸಗಿ ವ್ಯಕ್ತಿಯೊಬ್ಬ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡು ತ್ತಿದ್ದ ಮಹಿಳಾ ಪ್ರಯಾಣಿಕರಿಗೆ ಸಂಸ್ಥೆಯ ಅಧಿಕೃತ ಮೆಷಿನ್‌ನಿಂದ ಫ್ರೀ ಟಿಕೆಟ್ ಕೊಟ್ಟರು. ಆದರೆ, ಪುರುಷ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ಕೊಡಲು ನಿರಾಕರಿಸಿದ್ದಾನೆ. ಈ ಘಟನೆಯನ್ನು ಪ್ರಯಾಣಿಕರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದರು. ಅಲ್ಲದೇ, ಟಿಕೆಟ್ ಕೇಳಿದಾಗ, ಇರಲಿ ಪರವಾಗಿಲ್ಲ ಬಿಡಿ, ಇದೆಲ್ಲಾ ಮಾಮೂಲಿ ಎಂದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಓರ್ವ ಪ್ರಯಾಣಿಕ ಹಣ ಕೊಟ್ಟ ಮೇಲೆ ಟಿಕೆಟ್ ಕೊಡಬೇಕು. ಮುಂದೆ ಚೆಕ್ಕಿಂಗ್ ಬಂದರೆ ನಾವು ದಂಡ ಕಟ್ಟ ಬೇಕಾಗು ತ್ತದೆ. ನೀವು ಸಂಸ್ಥೆಯ ಸಮವಸ್ತ್ರ ಹಾಕಿಲ್ಲ. ಬಸ್ ನಿರ್ವಾಹಕರು ಯಾರು? ಎಂದು ಪ್ರಯಾಣಿಕರು ಖಾಸಗಿ ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಖಾಸಗಿ ವ್ಯಕ್ತಿ. ನಿರ್ವಾಹಕ ನವೀನ್ ಅಲ್ಲಿ ಕುಳಿತಿದ್ದಾರೆ. ನಾನು ತರಬೇತಿ ಪಡೆಯುತ್ತಿದ್ದೇನೆ. ಇದೆಲ್ಲಾ ಮಾಮೂಲಿ, ಮಾಮೂಲಿ ಕೊಡುತ್ತೇವೆ, ಅದೆನ್ನೆಲ್ಲಾ ಹೇಳಬಾರದು ಎಂದು ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ಕೊಡದೆ ಹೋಗಿದ್ದಾನೆ. ಈ ಘಟನೆ ಮೊಬೈಲ್‌ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಕರಣ ದಾಖಲು: ಈ ಬೆನ್ನಲ್ಲೇ ಸಾರಿಗೆ ಘಟಕದ ಅಧಿಕಾರಿಗಳು ಕೋಡಿಹಳ್ಳಿ ಪೊಲೀಸರೊಂದಿಗೆ ಸ್ಥಳ ಮಹಜರು ನಡೆಸಿದ್ದಾರೆ. ಖಾಸಗಿ ವ್ಯಕ್ತಿ ನಿರ್ವಾಹಕನ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಹಾಗೂ ಪುರುಷ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ಕೊಡಲು ನಿರಾಕರಿಸಿರುವ ಸಂಬಂಧ ಸಾರಿಗೆ ಬಸ್ ನಿರ್ವಾಹಕ ನವೀನ್‌ನನ್ನು ವಿಭಾಗೀಯ ಅಧಿಕಾರಿಗಳು ಅಮಾ ನತು ಮಾಡಿ ಕ್ರಮ ಕೈಗೊಂಡಿದ್ದಾರೆ. ಕೋಡಿಹಳ್ಳಿ ಠಾಣೆಯಲ್ಲಿ ನಿರ್ವಾಹಕ ನವೀನ್, ಖಾಸಗಿ ವ್ಯಕ್ತಿ ಎನ್ನಲಾದ ಕೆಬ್ಬಳ್ಳಿ ರೇವಂತ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಸಾರಿಗೆ ಬಸ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬ ನಿರ್ವಾಹಕ ನಂತೆ ಪ್ರಯಾಣಿಕರಿಂದ ಹಣ ಪಡೆದು ಟಿಕೆಟ್ ನೀಡದ ಪ್ರಕರಣ ಸಂಬಂಧ ನಿರ್ವಾಹಕ ನವೀನ್‌ರನ್ನು ಅಮಾನತು ಮಾಡಲಾಗಿದೆ. ಜತೆಗೆ ನಿರ್ವಾಹಕ ನವೀನ್, ಖಾಸಗಿ ವ್ಯಕ್ತಿ ರೇವಂತ್ ವಿರುದ್ಧ ಕೋಡಿಹಳ್ಳಿ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ. -ನರಸಿಂಹರಾಜು, ಪ್ರಭಾರ ವ್ಯವಸ್ಥಾಪಕರು, ಸಾರಿಗೆ ಘಟಕ ಕನಕಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಬಸ್ ಪ್ರಯಾಣ ದರ ಹೆಚ್ಚಳ ಖಂಡಿಸಿ ಗ್ರಾಮಸ್ಥರಿಂದ ಪ್ರತಿಭಟನೆ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
Ramanagara: ಡ್ರೋನ್ ಮೂಲಕ ಕೃಷಿಭೂಮಿ ಮರು ಸರ್ವೇ ಯಶಸ್ವಿ: ದೇಶದಲ್ಲೇ ಮೊದಲು
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಕಣ್ವ ಜಲಾಶಯದಲ್ಲಿ ಪತ್ನಿಯೊಂದಿಗೆ ವಾಟರ್ ಬೋಟಿಂಗ್ ನಡೆಸಿದ ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು
Saif Ali Khan: ನಟ ಸೈಫ್ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ
BJP: ತಾಕತ್ತಿದ್ರೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿಸಿ: ರೇಣುಕಾಚಾರ್ಯ
Viral IIT Baba; ಸನ್ಯಾಸ ತೊರೆದು ಮನೆಗೆ ಹಿಂದಿರುಗಬೇಕೆಂದು ಬಯಸಿದ ಹೆತ್ತವರು
ED ವಾದದ ವಿರುದ್ಧ ಸುಪ್ರೀಂ ಕೋರ್ಟ್ ಬಲವಾದ ಟೀಕೆ;ನಾವು ಸಹಿಸುವುದಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.