New Scam…ಇದು ನಿಮ್ಮ ಬ್ಯಾಂಕ್‌ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್‌ ಎಚ್ಚರಿಕೆ

ಅಪರಿಚಿತ ಹೇಗೆ ವಂಚಿಸುತ್ತಾನೆ…ಇದನ್ನು ತಡೆಯುವುದು ಹೇಗೆ?

Team Udayavani, Jan 16, 2025, 1:09 PM IST

New Scam…ಇದು ನಿಮ್ಮ ಬ್ಯಾಂಕ್‌ ಖಾತೆಯ ಹಣವನ್ನು ಖಾಲಿ ಮಾಡಿಬಿಡುತ್ತೆ! ಕಾಮತ್‌ ಎಚ್ಚರಿಕೆ

ಮುಂಬೈ: ಜೆರೋಧಾ ಸಹ ಸ್ಥಾಪಕ ಮತ್ತು ಸಿಇಒ ನಿತಿನ್‌ ಕಾಮತ್‌ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಬ್ಯಾಂಕ್‌ ಖಾತೆಯಲ್ಲಿನ ಹಣವನ್ನು ದೋಚುವ ಹೊಸ ಸೈಬರ್‌ ಕ್ರೈಂ ಕುರಿತು ಬಳಕೆದಾರರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.

ಜೆರೋಧಾ ಸಂಸ್ಥೆ ತಯಾರಿಸಿರುವ ವಿಡಿಯೋದಲ್ಲಿ ಈ ಬಗ್ಗೆ ಕಾಮತ್‌ ಅವರು, ವಂಚಕರು ಯಾರನ್ನು ಗುರಿಯಾಗಿರಿಸಿಕೊಳ್ಳುತ್ತಾರೆ, ಇಂತಹ ವಂಚನೆಗಳಿಂದ ಜನರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎಂಬ ಬಗ್ಗೆ ವಿವರಿಸಿದ್ದಾರೆ.

ಈ ಸನ್ನಿವೇಶವನ್ನು ಊಹಿಸಿಕೊಳ್ಳಿ, ಒಬ್ಬ ಅಪರಿಚಿತ ವ್ಯಕ್ತಿ ನಿಮ್ಮ ಬಳಿ ಬಂದು, ನನಗೆ ತುರ್ತು ಕರೆಯೊಂದು ಮಾಡುವುದಿದೆ, ಸ್ವಲ್ಪ ನಿಮ್ಮ ಮೊಬೈಲ್‌ ಕೊಡುತ್ತೀರಾ ಎಂದು ಕೇಳುತ್ತಾನೆ. ಬಹುತೇಕ ಜನರು ಆತನನ್ನು ನಂಬಿ ತಮ್ಮ ಫೋನ್‌ ಅನ್ನು ಆತನಿಗೆ ಕೊಡಬಹುದು. ಆದರೆ ಇದೊಂದು ವಂಚನೆಯ ಹೊಸ ವಿಧಾನವಾಗಿದೆ ಎಂದು ಎಚ್ಚರಿಸಿರುವ ಕಾಮತ್‌, ಆ ವ್ಯಕ್ತಿ ನಿಮ್ಮ ಒಟಿಪಿಯನ್ನು ಪ್ರತಿಬಂಧಿಸುವ ಮೂಲಕ ನಿಮ್ಮ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ಖಾಲಿ ಮಾಡಿಬಿಡಬಹುದು. ವಂಚಕ ನಿಮಗೆ ಅರಿವಿಲ್ಲದೆಯೇ ಮೋಸಗೊಳಿಸುತ್ತಾನೆ ಜಾಗೃತೆಯಾಗಿರಿ ಎಂದು ಸಲಹೆ ನೀಡಿದ್ದಾರೆ.

ಅಪರಿಚಿತ ಹೇಗೆ ವಂಚಿಸುತ್ತಾನೆ…ಇದನ್ನು ತಡೆಯುವುದು ಹೇಗೆ?

ಹೊಸ ವಿಧಾನದ ಮೂಲಕ ಸ್ಕ್ಯಾಮರ್‌ ಹೇಗೆ ವಂಚಿಸುತ್ತಾನೆ ಎಂಬುದನ್ನು ಕಾಮತ್‌ ವಿಡಿಯೋದಲ್ಲಿ ವಿವರಿಸಿದ್ದು ಹೀಗೆ…

“ಸ್ಕ್ಯಾಮರ್‌ (ವಂಚಕ) ನಿಮ್ಮ ಮೊಬೈಲ್‌ ಅನ್ನು ಬಳಸುತ್ತಿರುವಂತೆ ನಟಿಸಿ, ಹೊಸ Apps ಅನ್ನು ಡೌನ್‌ ಲೋಡ್‌ ಮಾಡಿಕೊಳ್ಳಬಹುದು ಇಲ್ಲವೇ ವೈಯಕ್ತಿಕ ಮಾಹಿತಿಯನ್ನು ಡೌನ್‌ ಲೋಡ್‌ ಮಾಡಲು ಅಸ್ತಿತ್ವದಲ್ಲಿರುವ ಅಪ್ಲಿಕೇಶನ್‌ ಗಳನ್ನು ತೆರೆಯಬಹುದು ಅಥವಾ ನಿಮಗೆ ಬರುವ ಕರೆ, ಬ್ಯಾಂಕ್‌ ಅಲರ್ಟ್‌ ಸಂದೇಶ ಸೇರಿದಂತೆ ಎಲ್ಲವು ತನ್ನ ಮೊಬೈಲ್‌ ನಂಬರ್‌ ಗೆ ಬರುವಂತೆ ನಿಮ್ಮ ಫೋನ್‌ ಸೆಟ್ಟಿಂಗ್ಸ್‌ ಬದಲು ಮಾಡಬಹುದು.! ನಂತರ ಸ್ಕ್ಯಾಮರ್ಸ್‌ ಗೆ ಬ್ಯಾಂಕ್‌ ಅಕೌಂಟ್‌ ಖಾತೆಯ ವಿವರ, ಒಟಿಪಿ ಲಭ್ಯವಾಗುವ ಮೂಲಕ ಅನಧಿಕೃತವಾಗಿ ನಿಮ್ಮ ಖಾತೆಯಲ್ಲಿದ್ದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಳ್ಳಬಹುದು.!

ಅಷ್ಟೇ ಅಲ್ಲ ನಿಮ್ಮ ಮೊಬೈಲ್‌ ನ ಪಾಸ್‌ ವರ್ಡ್ಸ್‌ ಅನ್ನು ಬದಲಾಯಿಸಬಹುದು. ಈ ನಿಟ್ಟಿನಲ್ಲಿ ಇಂತಹ ವಂಚನೆಗಳಿಂದ ನೀವು ನಿಮ್ಮನ್ನು ರಕ್ಷಿಸಿಕೊಳ್ಳಬೇಕು. ಆದ್ದರಿಂದ ಯಾರೇ ನಿಮ್ಮ ಬಳಿ ಮೊಬೈಲ್‌ ಕೇಳಿದರೂ ಅವರ ಕೈಗೆ ನೇರವಾಗಿ ಮೊಬೈಲ್‌ ಕೊಡಬೇಡಿ. ಒಂದು ವೇಳೆ ಯಾರಾದರು ನಿಮ್ಮಲ್ಲಿ ಮೊಬೈಲ್‌ ಕೊಡುವಂತೆ ವಿನಂತಿಸಿಕೊಂಡರೆ, ಅವರಿಗೆ ಬೇಕಾದವರ ನಂಬರ್‌ ಡಯಲ್‌ ಮಾಡಿ, ಫೋನ್‌ ಸ್ಪೀಕರ್‌ ಅನ್ನು ಆನ್‌ ಮಾಡಿ ಮಾತನಾಡಿಸಿ ಎಂದು ಕಾಮತ್‌ ವಿಡಿಯೋದಲ್ಲಿ ಸಲಹೆ ನೀಡಿದ್ದಾರೆ.

ಕಾಮತ್‌ ಅವರು ಶೇರ್‌ ಮಾಡಿರುವ ಈ ಪೋಸ್ಟ್‌ ಈಗಾಗಲೇ 4,50,000 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. “ನಿಮ್ಮ ಸಲಹೆಗೆ ಧನ್ಯವಾದಗಳು..ಆದರೆ ಇದು ತುಂಬಾ ದುರದೃಷ್ಟಕರ. ಯಾಕೆಂದರೆ ಈಗಾಗಲೇ ಸಮಾಜದಲ್ಲಿ ಸೈಬರ್‌ ಕ್ರೈಂ ಎಷ್ಟು ನಷ್ಟ ಮಾಡಬೇಕೋ ಅದಕ್ಕಿಂತಲೂ ಅಧಿಕ ನಷ್ಟವನ್ನು ಉಂಟು ಮಾಡಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಟಾಪ್ ನ್ಯೂಸ್

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

1-saif

Saif Ali Khan ಬೆನ್ನುಮೂಳೆಯಿಂದ ಚಾಕು ತೆಗೆದ ವೈದ್ಯರು; ಅಪಾಯದಿಂದ ಪಾರು

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

Thirthahalli: ನೇಣಿಗೆ ಶರಣಾದ ಹೋಟೆಲ್ ಉದ್ಯಮಿ… ಕಾರಣ ನಿಗೂಢ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

Siachen: ವಿಶ್ವದ ಅತಿ ಎತ್ತರದ ಯುದ್ಧಭೂಮಿಯಲ್ಲಿ ಜಿಯೋ 5ಜಿ

1-poco

POCO X7 5G; ಇದೀಗ ತಾನೆ ಬಿಡುಗಡೆಯಾದ ಫೋನ್ ನಲ್ಲಿ ಏನೇನಿದೆ?

5-one-plus

OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

US Satellite: ಅಮೆರಿಕದ ಸಂವಹನ ಉಪಗ್ರಹ ಭಾರತದ ರಾಕೆಟ್‌ನಿಂದ ಲಾಂಚ್‌

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

WhatsApp Pay: ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ ಇನ್ನು ಎಲ್ಲರಿಗೂ ಲಭ್ಯ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

CO2

ಶೂನ್ಯ ಇಂಗಾಲದ ಗುರಿ: ಜಾಗತಿಕ ಸಹಭಾಗಿತ್ವ ಅಗತ್ಯ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

Bigg Boss ಫಿನಾಲೆ ಯಾವಾಗ?; ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು? – ಇಲ್ಲಿದೆ ಮಾಹಿತಿ

Arjun Janya’s ’45’ to hit the screens on August 15

ಆಗಸ್ಟ್‌ 15ಕ್ಕೆ ತೆರೆಗೆ ಬರಲಿದೆ ಅರ್ಜುನ್‌ ಜನ್ಯಾ ನಿರ್ದೇಶನದ ʼ45ʼ ಸಿನಿಮಾ

1-devendra

Mumbai Unsafe; ಒಂದು ಘಟನೆಯಿಂದ ಹೀಗೆ ಹೇಳುವುದು ಸರಿಯಲ್ಲ: ಸಿಎಂ ಫಡ್ನವಿಸ್

RCB

RCB: ‌ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇಂಗ್ಲೆಂಡ್‌ ಆಫ್‌ ಸ್ಪಿನ್ನರ್ ಎಂಟ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.