800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

ಹೇಗಿದೆ ʼಬಾಲಿವುಡ್‌ ನವಾಬʼನ ಪಟೌಡಿ ಪ್ಯಾಲೇಸ್?‌

ಸುಹಾನ್ ಶೇಕ್, Jan 16, 2025, 4:21 PM IST

800 ಕೋಟಿ ಮೌಲ್ಯ, 150 ಕೊಠಡಿ.. ʼಪಟೌಡಿ ಅರಮನೆʼಯ ನವಾಬನಾಗಿರುವ ಸೈಫ್‌ ಅಲಿ ಆಸ್ತಿ ಎಷ್ಟು?

ಬಾಲಿವುಡ್‌ ನಟ ಸೈಫ್‌ ಅಲಿಖಾನ್‌ (Saif Ali Khan) ಅವರಿಗೆ ಚಾಕು ಇರಿದು, ದರೋಡೆ ಮಾಡಲು ಯತ್ನಿಸಿರುವ ಘಟನೆ ಇಡೀ ಚಿತ್ರರಂಗ ಶಾಕ್‌ ಆಗುವಂತೆ ಮಾಡಿದೆ. ಸದ್ಯ ಸೈಫ್‌ ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಅಪಾಯದಿಂದ  ಪಾರಾಗಿದ್ದಾರೆ.

ಇತ್ತ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಮನೆ ಕೆಲಸ ಮಾಡುತ್ತಿದ್ದ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಸೈಫ್‌ ಅಲಿಖಾನ್ ಬಾಲಿವುಡ್‌ನಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ. ನವಾಬರ ಕುಟುಂಬದಲ್ಲಿ ಹುಟ್ಟಿ ಬೆಳೆದ ಸೈಫ್‌ ಅಲಿಖಾನ್‌ ಕೋಟಿ ಕುಳನಾಗಿದ್ದಾರೆ. ಸೈಫ್‌ ಅಲಿಖಾನ್‌ ಅವರ ತಂದೆ, ತಾತನ ಕಾಲದಲ್ಲಿ ಕಟ್ಟಿಸಿರುವ ಪಟೌಡಿ ಅರಮನೆ ಇಂದಿಗೂ ಭಾರತದಲ್ಲಿ ನವಾಬರ ಪ್ಯಾಲೇಸ್‌ ಆಗಿಯೇ ಗುರುತಿಸಿಕೊಂಡಿದೆ.

ಸೈಫ್‌ ಅಲಿಖಾನ್‌ ಅವರ ತಂದೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಭಾರತದ ಕೊನೆಯ ನವಾಬರೆಂದು ಕರೆಯಲಾಗುತ್ತದೆ. ಅವರು 9ನೇ ನವಾಬರಾಗಿದ್ದರು. ಅವರು ಭಾರತೀಯ ಕ್ರಿಕೆಟ್‌ ತಂಡದ ನಾಯಕರಾಗಿದ್ದರು. ಸೈಫ್ ಅಲಿ ಖಾನ್‌ರ ತಾತ ಇಫ್ತಿಕರ್ ಅಲಿಖಾನ್ ಪಟೌಡಿ ನವಾಬರಾಗಿ ಆಳ್ವಿಕೆ ಮಾಡಿದ್ದರು.

ಮನ್ಸೂರ್‌ ಅಲಿಖಾನ್‌ ಅವರ ಬಳಿಕ ʼನವಾಬʼನಾಗಿ ಸೈಫ್‌ ಅಲಿಖಾನ್‌ ಗುರುತಿಸಿಕೊಂಡಿದ್ದಾರೆ.

ತಂದೆಯ ಅರಮನೆ ಖರೀದಿಸಿದ್ದ ಸೈಫ್:‌

ಪಟೌಡಿ ಕುಟುಂಬ ಉತ್ತರ ಭಾರತದ ಹರಿಯಾಣ, ದೆಹಲಿ, ಭೋಪಾಲ್‌ ಭಾಗಗಳಲ್ಲಿ ಅರಮನೆಗಳು, ಕೋಟೆಗಳು ಮತ್ತು ಜಮೀನುಗಳು ಖರೀದಿಸಿದೆ. ಇದರಲ್ಲಿ ಗುರುಗಾಂವ್‌ನಲ್ಲಿರುವ ಅರಮನೆಯೂ ಒಂದು. ಇದನ್ನು ʼಪಟೌಡಿ ಅರಮನೆʼ ಹಾಗೂ ʼಇಬ್ರಾಹಿಂ ಕೋಠಿʼ ಎಂದೂ ಕರೆಯುತ್ತಾರೆ.

ತಂದೆಗೆ ಸೇರಿದ್ದ ಈ ಅರಮನೆಯನ್ನು ಸೈಫ್‌ ಅಲಿಖಾನ್‌ ಕಾನೂನು ಹೋರಾಟವನ್ನು ಮಾಡಿ ಖರೀದಿಸಿದ್ದರು. ಈ ಅರಮನೆಯನ್ನು ಸೈಫ್‌ ಅವರ ತಾತಾ ಇಫ್ತಿಕರ್ ಅಲಿ ಖಾನ್ 1900ರ ದಶಕದ ಆರಂಭದಲ್ಲಿ ನಿರ್ಮಿಸಿದ್ದರು.

ಈ ಅರಮನೆಯನ್ನು 2005 ರಿಂದ 2014 ರವರೆಗೆ ನೀಮ್ರಾನಾ ಹೋಟೆಲ್ ಗ್ರೂಪ್‌ಗೆ ಲೀಸ್‌ಗೆ ನೀಡಲಾಗಿತ್ತು. ಹೋಟೆಲ್‌ನ ಲೀಸ್ ಮೊತ್ತ ತೀರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಇದಕ್ಕಾಗಿ ಸೈಫ್‌ ಅಲಿಖಾನ್ ಕಾನೂನು‌ ಹೋರಾಟ ಮಾಡಿದ್ದರು.

ಅರಮನೆಯ ವಿಶೇಷತೆಗಳೇನು? : ಈ ಅರಮನೆಯನ್ನು 10 ಎಕ್ರೆ ವಿಶಾಲವಾದ ಜಾಗದಲ್ಲಿ ನಿರ್ಮಿಸಲಾಗಿದೆ. ಅರಮನೆಯಲ್ಲಿ 150 ಕೊಠಡಿಗಳಿವೆ. 7 ಬೆಡ್‌ ರೂಮ್ಸ್, 7 ಡ್ರೆಸ್ಸಿಂಗ್ ಕೊಠಡಿಗಳು ಮತ್ತು 7 ಬಿಲಿಯರ್ಡ್ ಕೊಠಡಿಗಳು ಸೇರಿದಂತೆ 150 ಕೊಠಡಿಗಳನ್ನು ಹೊಂದಿದೆ. ಇದರ ಮೌಲ್ಯ ಸುಮಾರು 800 ಕೋಟಿ ರೂ. ಎನ್ನಲಾಗಿದೆ.

ಶೂಟಿಂಗ್‌ ತಾಣವಾಗಿದೆ ಈ ಅರಮನೆ: ಪಟೌಡಿ ಅರಮನೆ (Pataudi Palace) ಒಂದು ವೈಭವಪೂರ್ವ ಬಂಗಲೆಯಾಗಿದೆ. ಇಲ್ಲಿ ಇದುವರೆಗೆ ಹತ್ತಾರು ಸಿನಿಮಾಗಳನ್ನು ಚಿತ್ರೀಕರಣ ಮಾಡಲಾಗಿದೆ. ಜನಪ್ರಿಯ ಸಿನಿಮಾಗಳಾದ  ಶಾರುಖ್‌ ಖಾನ್‌ – ಪ್ರೀತಿ ಜಿಂಟಾ ಅವರ ʼವೀರ್-ಜಾರಾʼ ‘ಮಂಗಲ್ ಪಾಂಡೆ’, ‘ಗಾಂಧಿ ಮೈ ಫಾದರ್’,’ಈಟ್ ಪ್ರೇ ಲವ್’, ʼಅನಿಮಲ್ʼ ಸೇರಿದಂತೆ ʼತಾಂಡವ್‌ʼ ಎನ್ನುವ ವೆಬ್‌ ಸಿರೀಸ್‌ಗಳ ಚಿತ್ರೀಕರಣವನ್ನು ಈ ಅರಮನೆಯಲ್ಲಿ ಚಿತ್ರೀಕರಿಸಲಾಗಿದೆ.

ಬಿಟೌನ್‌ ಪಾರ್ಟಿಗೆ ಹೇಳಿ ಮಾಡಿಸಿದ ಜಾಗ: ಸೈಫ್‌ ದಂಪತಿ ಆಗಾಗ ಈ ಅರಮನೆಯಲ್ಲಿ ಬಂದು ಇರುತ್ತಾರೆ. ಉಳಿದಂತೆ ಅರಮನೆಯ ಬಿಟೌನ್‌ ಎಲ್ಲರೂ ಜತೆಯಾಗಿ ಸೇರುವ ಪಾರ್ಟಿ ತಾಣವೂ ಆಗಿದೆ. ತೈಮೂರ್ ಅಲಿ ಖಾನ್ ಮತ್ತು ಕರೀನಾ ಅವರ ಹುಟ್ಟುಹಬ್ಬದ ಪಾರ್ಟಿಯನ್ನು ಇಲ್ಲೇ ಮಾಡಿ, ಬಿಟೌನ್‌ ಮಂದಿಗೆ ಆಹ್ವಾನ ನೀಡಲಾಗಿತ್ತು.

ಸೈಫ್ ಅಲಿ ಖಾನ್ ಅವರ ನಿವ್ವಳ ಮೌಲ್ಯ: ಸೈಫ್‌ ಅಲಿಖಾನ್‌ ಬಾಲಿವುಡ್‌ನ ಜನಪ್ರಿಯ ನಟರಲ್ಲಿ ಒಬ್ಬರು. ಸಿನಿಮಾಗಳಿಗೆ ಕೋಟಿ – ಕೋಟಿ ಸಂಭಾವನೆ ಪಡೆಯುತ್ತಾರೆ. ʼನವಾಬ್‌ ಆಫ್‌ ಬಾಲಿವುಡ್‌ʼ ಎಂದು ಅವರನ್ನು ಕರೆಯುತ್ತಾರೆ.

1993ರಲ್ಲಿ ʼಪರಂಪರಾʼ ಎನ್ನುವ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸೈಫ್‌ ಇಂದು ಸಾಧನೆಯ ಶಿಖರವನ್ನೇರಿ ಕೋಟಿ ಕುಳನಾಗಿ ಬೆಳೆದು ನಿಂತಿದ್ದಾರೆ.

ಮುಂಬೈ ಮನೆಗೆ ಶಿಫ್ಟ್:‌ ಸೈಫ್‌ ಅಲಿಖಾನ್‌ ದಂಪತಿ ಮುಂಬೈನ ಬಾಂದ್ರಾದಲ್ಲಿ ನಾಲ್ಕು ಅಂತಸ್ತಿನ ಮನೆಯನ್ನು 2021ರಲ್ಲಿ ಖರೀದಿಸಿದ್ದರು. ಇದರ ಮೌಲ್ಯ 103 ಕೋಟಿ ರೂ. ಆಗಿದೆ ಎನ್ನಲಾಗಿದೆ.

CNBC TV18 ಪ್ರಕಾರ, 2023 ರಲ್ಲಿ ಅವರ ನಿವ್ವಳ ಮೌಲ್ಯವು $ 150 ಮಿಲಿಯನ್ ಎಂದು ಅಂದಾಜಿಸಲಾಗಿದೆ ಇದು ಪ್ರಸ್ತುತ ವಿನಿಮಯ ದರದಲ್ಲಿ ಸುಮಾರು 1,300 ಕೋಟಿ ರೂ. ಆಗಿದೆ.

ಸೈಫ್‌ ವಾರ್ಷಿಕವಾಗಿ 30 ಕೋಟಿ ರೂ. ಗಳಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ಶುಲ್ಕವನ್ನು ಶೇಕಡಾ 70 ರಷ್ಟು ಹೆಚ್ಚಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಅವರು ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಗೆ 1-5 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ ಎಂದು ವರದಿ ಆಗಿದೆ. ಪ್ರತಿ ಸಿನಿಮಾಕ್ಕೆ ಸೈಫ್‌ 10-15 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ನಟನಾಗಿಯೂ ಮಾತ್ರವಲ್ಲದೆ ನಿರ್ಮಾಪಕರಾಗಿ, ಬ್ಯುಸಿನೆಸ್‌ ಮ್ಯಾನ್‌ ಆಗಿಯೂ ಸೈಫ್‌ ಗುರುತಿಸಿಕೊಂಡಿದ್ದಾರೆ.

ಅವರ ಬಟ್ಟೆ ಬ್ರಾಂಡ್‌ ಗೆ ಹೌಸ್ ಆಫ್ ಪಟೌಡಿ ಎಂದು ಹೆಸರಿಟ್ಟಿದ್ದಾರೆ. ಇದಲ್ಲದೆ ಇಲ್ಯುಮಿನಾಟಿ ಫಿಲ್ಮ್ಸ್ ಮತ್ತು ಬ್ಲ್ಯಾಕ್ ನೈಟ್ ಫಿಲ್ಮ್ಸ್ ಎಂಬ ಎರಡು ಪ್ರೂಡಕ್ಷನ್‌ ಬ್ಯಾನರ್‌ಗಳನ್ನು ಹೊಂದಿದ್ದಾರೆ.

ದುಬಾರಿ ಕಾರುಗಳ ಒಡೆಯ: ಸೈಫ್‌ ಅಲಿಖಾನ್‌ ಅವರ ಬಳಿ ಅತ್ಯಂತ ದುಬಾರಿಗಳ ಕಾರುಗಳ ಸಂಗ್ರಹವಿದೆ. ಅವರು 1.71 ಕೋಟಿ ರೂಪಾಯಿ ಮೌಲ್ಯದ Mercedes-Benz S350, ರೂ 85-95 ಲಕ್ಷ ಮೌಲ್ಯದ Audi Q7 ಮತ್ತು 62.64-66.64 ಲಕ್ಷ ರೂ. ಮೌಲ್ಯದ ಜೀಪ್ ರಾಂಗ್ಲರ್ ಅನ್ನು ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.

ಚಿತ್ರರಂಗದಲ್ಲಿ ಸೈಫ್:‌  ಹಿಂದಿ ಚಿತ್ರರಂಗದಲ್ಲಿ ಸ್ಟಾರ್‌ ನಟನಾಗಿ ಬೆಳೆದಿರುವ ಸೈಫ್‌ ಅಲಿಖಾನ್‌ ಇತ್ತೀಚೆಗಿನ ವರ್ಷದಲ್ಲಿ ಪ್ಯಾನ್‌ ಇಂಡಿಯಾ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ʼದೇವರʼದಂತಹ ಚಿತ್ರದಲ್ಲಿ ಸೈಫ್‌ ಅವರು ನಟನೆಗೆ ಬಣ್ಣ ಹಚ್ಚಿದ್ದಾರೆ. 60ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

-ಸುಹಾನ್‌ ಶೇಕ್

ಟಾಪ್ ನ್ಯೂಸ್

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡKasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

1-ree

Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

Ashwin Vaishnav

Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ree

Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

Saif Ali Khan: ನಟ ಸೈಫ್‌ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ

Saif Ali Khan: ನಟ ಸೈಫ್‌ ಅಲಿಖಾನ್‌ಗೆ ಚಾಕು ಇರಿತ; ಸಿಸಿಟಿವಿಯಲ್ಲಿ ಶಂಕಿತನ ದೃಶ್ಯ ಸೆರೆ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ

2-saif

Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

Bollywood: ರಿಲೀಸ್‌ಗೂ ಮುನ್ನವೇ ಕಂಗನಾ ʼಎಮರ್ಜೆನ್ಸಿʼಗೆ ಬ್ಯಾನ್‌ ಬಿಸಿ; ಕಾರಣವೇನು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡKasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

1-ree

Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.