Bajpe: 7 ಅಣೆಕಟ್ಟೆಗೆ ಹಲಗೆ; ತುಂಬಿದ ನೀರು
ಮೂಡು, ಪಡುಪೆರಾರ ಗ್ರಾಮಗಳಿಗೆ ಸಿಕ್ಕಿತು ಜಲ ಭರವಸೆ
Team Udayavani, Jan 16, 2025, 1:53 PM IST
ಬಜಪೆ: ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಪೆರಾರ ಹಾಗೂ ಪಡುಪೆರಾರ ಗ್ರಾಮದ ಒಟ್ಟು ಒಂಬತ್ತು ಕಿಂಡಿ ಅಣೆಕಟ್ಟುಗಳ ಪೈಕಿ ಏಳಕ್ಕೆ ಹಲಗೆ ಹಾಕುವ ಕಾರ್ಯ ಪೂರ್ಣಗೊಂಡಿದೆ. ನಳಿನಿ ನದಿಗೆ ಅಡ್ಡಲಾಗಿ ಕಟ್ಟಿರುವ ಈ ಅಣೆಕಟ್ಟುಗಳಿಗೆ ನೀರಾವರಿ ಇಲಾಖೆಯು ಕೃಷಿಕರ ಸಹಾಯದಿಂದ ಹಲಗೆ ಹಾಕಿದೆ. ಇದರಿಂದ ಅಣೆಕಟ್ಟುಗಳ ಮೇಲ್ಭಾಗದಲ್ಲಿ ನೀರು ತುಂಬಿದ್ದು, ಮೂಡು ಪೆರಾರ ಹಾಗೂ ಪಡುಪೆರಾರದ ಕೃಷಿಕರಿಗೆ ನೆಮ್ಮದಿ ತಂದಿದೆ. ಕೃಷಿ ಕಾರ್ಯಗಳಿಗೆ ನೀರು ದೊರೆಯುವ ಜತೆಗೆ, ಅಂತರ್ಜಲ ವೃದ್ಧಿಯೂ ಆಗಲಿದೆ.
ಮೂಡುಪೆರಾರ ಗ್ರಾಮದ ಮುಂಡಬೆಟ್ಟು, ಮಾಗಂದಡಿ, ಕೊಳಪಿಲದಲ್ಲಿರುವ ನಾಲ್ಕು ಅಣೆಕಟ್ಟುಗಳು, ಪಡುಪೆರಾರದ ಕುಡುಂಬದ ಕಟ್ಟ, ಶೆಟ್ಟಿ ಬೆಟ್ಟು, ನಾಲದೆ, ಕಟ್ಟಸ್ತಾನದಲ್ಲಿರುವ ನಾಲ್ಕು ಸೇರಿ ಒಟ್ಟು 7 ಅಣೆಕಟ್ಟಿಗೆ ಹಲಗೆ ಹಾಕಿ ನೀರು ನಿಲ್ಲಿಸಲಾಗಿದೆ. ಶೆಟ್ಟಿ ಬೆಟ್ಟು ಕಿಂಡಿ ಅಣೆಕಟ್ಟು ಭೋಜ ಸಫಲಿಗ ನೇತೃತ್ವದಲ್ಲಿ ಇಲಾಖೆಯ ಸಹಾಯದಿಂದ ಹಾಕಲಾಗಿದೆ. ಎಲ್ಲೆಡೆ ಸ್ಥಳೀಯರು ಸಹಕಾರ ನೀಡಿದ್ದಾರೆ. ಮೂಡುಪೆರಾರದ ಲಕ್ಕೆ ಅಣೆಕಟ್ಟಿಗೆ ಸದ್ಯವೇ ಹಲಗೆ ಹಾಕಲಾಗುವುದು ಎಂದು ಅಲ್ಲಿನ ಯುವಕರು ತಿಳಿಸಿದ್ದಾರೆ. ಅದರೆ ಹಳೆಯ ಗುರುಂಪೆ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಿಲ್ಲ. ಕಳೆದ ಬಾರಿ ಊರಿನವರ ಮನವೊಲಿಸಿ ಹಲಗೆ ಹಾಕಿಸಲಾಗಿತ್ತು.
3 ವರ್ಷದ ಹಿಂದೆ ನಿರ್ಮಾಣ
2021-22ನೇ ಸಾಲಿನ ಪಶ್ವಿಮ ವಾಹಿನಿ ಯೋಜನೆಯಡಿ ಶಾಸಕ ಡಾ| ಭರತ್ ಶೆಟ್ಟಿ ಅವರು ಅಸಕ್ತಿ ವಹಿಸಿ 9.99 ಕೋಟಿ ರೂ. ಅನುದಾನದಲ್ಲಿ ಆರು ಹೊಸ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿತ್ತು. ಮೂಡುಪೆರಾರ ಗ್ರಾಮದ ಲಕ್ಕೆ, ಮಾಗಂದಡಿ ಮತ್ತು ಕೊಳಪಿಲದಲ್ಲಿ ಹಾಗೂ ಪಡುಪೆರಾರ ಗ್ರಾಮದ ಕುಡುಂಬುದ ಕಟ್ಟ, ನಾಲದೆ, ಕಟ್ಟಲ್ತಾಯ ದೇವಸ್ಥಾನದ ಬಳಿ ಅಣೆಕಟ್ಟು ನಿರ್ಮಿಸಲಾಗಿತ್ತು.
ಈ ಬಾರಿ ವಿಳಂಬದಿಂದ ಸಮಸ್ಯೆ?
ಸಾಮಾನ್ಯವಾಗಿ ಕಿಂಡಿ ಅಣೆಕಟ್ಟುಗಳಿಗೆ ಡಿಸೆಂಬರ್ ತಿಂಗಳಲ್ಲಿ ಹಲಗೆ ಹಾಕಲಾಗುತ್ತದೆ. ಆದರೆ, ಈ ಬಾರಿ ಜನವರಿ 15ರ ಹೊತ್ತಿಗೆ ಹಾಕಲಾಗಿದೆ. ಇದರಿಂದ ಅಂತರ್ಜಲ ವೃದ್ಧಿಗೆ ದೊಡ್ಡ ಹೊಡೆತ ಬೀಳಲಿದೆ. ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜನರು ಕೃಷಿ ಹಾಗೂ ಕುಡಿಯುವ ನೀರಿಗೆ ಇದನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಬಾಕಿ ಉಳಿದ ಅಣೆಕಟ್ಟುಗಳ ಹಲಗೆ ಹಾಕುವ ಕಾರ್ಯ ನಡೆಸಬೇಕು ಎಂದು ಜನರು ಮನವಿ ಮಾಡಿದ್ದಾರೆ. ಅದೇ ಹೊತ್ತಿಗೆ ಊರಿನ ಜನರೂ ಬೆಂಬಲ ನೀಡಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ.
ಗುರುಂಪೆಗೆ ಹಲಗೆ ಬೀಳಬೇಕು
ಗುರುಂಪೆಯಲ್ಲಿರುವ ಕಿಂಡಿ ಅಣೆಕಟ್ಟು ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಳಿನಿ ನದಿಗೆ ಹಾಕಲಾಗುವ ಕೊನೆಯ ಕಿಂಡಿ ಅಣೆಕಟ್ಟು ಈ ಗ್ರಾಮಗಳ ಕೊನೆಯ ಅಣೆಕಟ್ಟು. ಹೀಗಾಗಿ ಇಲ್ಲಿ ನೀರು ನಿಲ್ಲಿಸುವುದು ತುಂಬ ಮುಖ್ಯವಾಗಿದೆ. ಇಲ್ಲಿ ಹಲಗೆ ಹಾಕಿದರೆ ಎಲ್ಲಾ ಕಿಂಡಿ ಅಣೆಕಟ್ಟಿನ ನೀರಿನ ಮಟ್ಟವನ್ನು ಹೆಚ್ಚಿಸಲಿದೆ ಎಂದು ಕೃಷಿಕರು ತಿಳಿಸಿದ್ದಾರೆ.
ಕಳೆದ ಬಾರಿಯೂ ಇಲ್ಲಿನ ಜನರು ನಿರಾಸಕ್ತಿ ತೋರಿಸಿದ್ದರು. ಕೊನೆಗೆ ಪತ್ರಿಕಾ ವರದಿಗಳು, ಪಂಚಾಯತ್ ಒತ್ತಡದಿಂದ ಜನರನ್ನು ಸೇರಿಸಿ ಹಲಗೆ ಹಾಕಿಸಲಾಗಿತ್ತು. ಈ ಬಾರಿಯೂ ಪಂಚಾಯತ್ ಈ ಬಗ್ಗೆ ಆಸಕ್ತಿ ವಹಿಸಬೇಕಾಗಿದೆ. ಜನರ, ಕೃಷಿಕರ ಮನವೊಲಿಕೆ ಮಾಡಬೇಕಾಗಿದೆ ಎಂಬ ಅಭಿಪ್ರಾಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surathkal: ಹುಷಾರು, ಅಂಗಡಿ ಮುಚ್ಚಿದರೂ ಶುಲ್ಕ ಕಟ್ಟಬೇಕು!
Mangaluru: ಅಂತಾರಾಷ್ಟ್ರೀಯ ಮಟ್ಟ ತಲುಪಿದ ಮಂಗಳೂರಿನ ಗಾಳಿಪಟ!
Mangaluru: 500 ಮನೆಗಳಿಗೆ ತಲುಪಿದ ಸಿಎನ್‌ಜಿ ಅನಿಲ; ಶೀಘ್ರ ಇನ್ನಷ್ಟು ಕಡೆ ವಿಸ್ತರಣೆ
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
UPCL Kasaragod Power line: ಕಂಪೆನಿಯಿಂದ ತಪ್ಪು ಮಾಹಿತಿ: ಹೋರಾಟ ಸಮಿತಿ ಒಕ್ಕೂಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.