Network Problem: ಮೊದಲು ಚೂರಾದರೂ ಇತ್ತು; ಈಗ ಇಲ್ಲವೇ ಇಲ್ಲ; ಕರೆ ಮಾಡಲು 3 ಕಿಮೀ ತೆರಳಬೇಕು

ಹೊಸಂಗಡಿ ಗ್ರಾಮದ ಭಾಗಿಮನೆ ಪ್ರದೇಶದ 65 ಮನೆಗಿಲ್ಲ ನೆಟ್ವರ್ಕ್‌; ತುರ್ತು ಸಂದರ್ಭಗಳಲ್ಲಿ ಪರದಾಟ

Team Udayavani, Jan 16, 2025, 2:35 PM IST

5

ಕುಂದಾಪುರ: ಇಲ್ಲಿನ ಮನೆಗಳಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಅಥವಾ ಏನಾದರೂ ಅವಘಡ ಸಂಭವಿಸಿದರೆ ಅಕ್ಕಪಕ್ಕದ ಮನೆಯವರನ್ನು ಫೋನ್‌ ಮಾಡಿ ಕರೆಯಲು ಸಾಧ್ಯವಿಲ್ಲ. ಕಾರಣ ನೆಟ್ವರ್ಕ್‌ ಇಲ್ಲ. ಅವರ ಮನೆ-ಮನೆಗೆ ಹೋಗಿ ಕರೆಯಬೇಕಾದ ಅನಿವಾರ್ಯತೆ ಹೊಸಂಗಡಿ ಗ್ರಾಮದ ಭಾಗಿಮನೆ ಪರಿಸರದ ಜನರದ್ದು.

ಇನ್ನು ತುರ್ತಾಗಿ ಯಾರನ್ನಾದರೂ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ ಅಥವಾ ಇನ್ನು ಯಾವುದಾದರೂ ವಾಹನಗಳನ್ನು ಅನ್ನು ಕರೆತರಬೇಕಾದರೆ 3 ಕಿ.ಮೀ. ದೂರದ ಹೊಸಂಗಡಿ ಪೇಟೆಗೆ ಅಥವಾ ಈಚೆ ಬದಿ 3 ಕಿ.ಮೀ. ದೂರದ ತೊಂಬಟ್ಟಿಗೆ ಹೋಗಿ ಕರೆಮಾಡಬೇಕು. ಅಷ್ಟರೊಳಗೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ? ಇದು ಬಾಗಿಮನೆ ಭಾಗದ ಜನರು ಕೇಳುತ್ತಿರುವ ಪ್ರಶ್ನೆ.

ಹೋರಾಟಕ್ಕೂ ಬೆಲೆಯಿಲ್ಲ
ಹೊಸಂಗಡಿ ಗ್ರಾಮ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಸಂಪರ್ಕ ಕೊಂಡಿ. ಎರಡೂ ಜಿಲ್ಲೆಗಳನ್ನು ಬಾಳೆಬರೆ ಘಾಟಿ ಮೂಲಕ ಸಂಪರ್ಕಿಸುವ ಗ್ರಾಮವಿದು. ಇಲ್ಲಿನ ಭಾಗಿಮನೆ ಪರಿಸರದ 65 ಮನೆಗಳಿಗೆ ಯಾವುದೇ ನೆಟ್ವರ್ಕ್‌ ಸಂಪರ್ಕವಿಲ್ಲ. ಅಲ್ಲಿನ ಜನ ಕಳೆದ 7-8 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದರೂ, ಯಾವುದೇ ಪ್ರಯೋಜನ ಆಗಿಲ್ಲ. ಹಿಂದಿನ ವಿಧಾನಸಭಾ ಚುನಾವಣೆ ಸಂದರ್ಭ ಬಹಿಷ್ಕಾರದ ಎಚ್ಚರಿಕೆ ಹಾಕಿದ್ದರೂ, ಆಗ ಇಲ್ಲಿಗೆ ಭೇಟಿ ನೀಡಿ, ಟವರ್‌ ಭರವಸೆ ನೀಡಿ ಮನವೊಲಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು, ಚುನಾವಣೆ ಮುಗಿದ ಬಳಿಕ ಕೊಟ್ಟ ಮಾತು ಮರೆತೇ ಬಿಟ್ಟಿದ್ದಾರೆ ಎನ್ನುವುದಾಗಿ ಆಕ್ರೋಶ ವ್ಯಕ್ತಪಡಿಸುತ್ತಾರೆ ಇಲ್ಲಿನ ನಿವಾಸಿಗರು.
ಮೊದಲು ಚೂರಾದರೂ ಇತ್ತು;

ಈಗ ಇಲ್ಲವೇ ಇಲ್ಲ
ಭಾಗಿಮನೆ ಪ್ರದೇಶಕ್ಕೆ ಹೊಸಂಗಡಿಯ ಬಿಸ್ಸೆನ್ನೆಲ್‌ ಟವರ್‌ನಿಂದ ಮೊದಲು ಆಗಾಗ್ಗೆ ಅಲ್ಪ-ಸ್ವಲ್ಪವಾದರೂ ನೆಟ್ವರ್ಕ್‌ ಸಿಗುತ್ತಿತ್ತು. ಅದರಿಂದ ಕನಿಷ್ಠ ಕರೆ ಮಾಡಲು ಆದರೂ ಅನುಕೂಲ ಆಗ್ತಿತ್ತು. ಆದರೆ ಈಗ ಬಿಸ್ಸೆನ್ನೆಎಲ್‌ ಟವರ್‌ ಅನ್ನು 5ಜಿ ಮೇಲ್ದರ್ಜೆಗೆ ಏರಿಸಿದ ಬಳಿಕವಂತೂ ಬಾಗಿಮನೆ ಪ್ರದೇಶಕ್ಕೆ ನೆಟ್ವರ್ಕ್‌ ಸಂಪರ್ಕ ಸಂಪೂರ್ಣ ಬಂದ್‌ ಆಗಿದೆ. ಈಗ ಚೂರೇ ಚೂರು ನೆಟ್ವರ್ಕ್‌ ಸಹ ಸಿಗುತ್ತಿಲ್ಲ.

ಮತ್ತೆ ಹೋರಾಟಕ್ಕೆ ಮುಂದಾದ ಜನ
ಕಳೆದ ವರ್ಷ ಇಲ್ಲಿಗೆ ಬಿಎಸ್ಸೆನ್ನೆಲ್‌ ತಂಡ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿತು. ಆದರೆ ಇಲ್ಲಿಂದ 8-10 ಕಿ.ಮೀ. ದೂರದ ಬೆಚ್ಚಳ್ಳಿ ಪರಿಸರಕ್ಕೂ ಟವರ್‌ ಬೇಡಿಕೆ ಇದ್ದುದರಿಂದ ಅಲ್ಲಿಗೆ ಟವರ್‌ ಮಂಜೂರಾಗಿದೆ. ಹೊಸಂಗಡಿ ಗ್ರಾ.ಪಂ.ಗೆ ಎರಡು ಟವರ್‌ ಮಂಜೂರಾತಿ ಕೊಡಲು ಈಗ ಸಾಧ್ಯವಿಲ್ಲವೆಂದು ಭಾಗಿಮನೆ ಪ್ರದೇಶದ ಟವರ್‌ ಬೇಡಿಕೆ ಪ್ರಸ್ತಾವನೆಯನ್ನು ಕೈಬಿಡಲಾಗಿದೆ ಅನ್ನುವ ಮಾಹಿತಿಯಿದೆ. ಇದು ಹೀಗೆ ಆದರೆ ನಾವು ನೆಟ್ವರ್ಕ್‌ಗಾಗಿ ಇನ್ನೆಷ್ಟು ವರ್ಷ ಕಾಯಬೇಕು. ಪ್ರತೀ ಸಲವೂ ನಮ್ಮನ್ನು ನಿರ್ಲಕ್ಷಿಸುತ್ತಾ ಬರುತ್ತಿರುವ ಆಳುವ ವರ್ಗದ ವಿರುದ್ಧ ಜನ ಮತ್ತೂಂದು ಹಂತದ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಮೆಟ್ಕಲ್‌ಗ‌ುಡ್ಡಕ್ಕೂ ಅನುಕೂಲ…
ಭಾಗಿಮನೆ ಪರಿಸರದಲ್ಲಿ ಟವರ್‌ ನಿರ್ಮಾಣಗೊಂಡರೆ, ಇಲ್ಲಿಗೆ ಸಮೀಪದ ಧಾರ್ಮಿಕ ಪ್ರವಾಸಿ ಕೇಂದ್ರವಾದ ಮೆಟ್ಕಲ್‌ಗ‌ುಡ್ಡದ ಶ್ರೀ ಮಹಾಗಣಪತಿ ದೇವಸ್ಥಾನಕ್ಕೂ ನೆಟ್ವರ್ಕ್‌ ಸಂಪರ್ಕ ಸಾಧ್ಯವಾಗಲಿದೆ. ಎತ್ತರದ ಪ್ರದೇಶದಲ್ಲಿರುವುದರಿಂದ ಈಗ ಅಲ್ಲಿಗೆ ಅಲ್ಪ-ಸ್ವಲ್ಪ ನೆಟ್ವರ್ಕ್‌ ಸಿಕ್ಕರೂ, ಇನ್ನೂ ಪೂರ್ಣ ಪ್ರಮಾಣದ ನೆಟ್ವರ್ಕ್‌ ಸೌಲಭ್ಯ ಸಿಗುತ್ತಿಲ್ಲ. ಭೂಮಟ್ಟದಿಂದ ಸುಮಾರು 2 ಸಾವಿರ ಅಡಿ ಎತ್ತರದಲ್ಲಿರುವ ಮೆಟ್ಕಲ್‌ಗ‌ುಡ್ಡದಲ್ಲಿರುವ ಉದ್ಭವ ಗಣಪತಿ ದೇವಸ್ಥಾನಕ್ಕೆ ಬೇರೆ ಬೇರೆ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಅವರಿಗೂ ಪ್ರಯೋಜನ ಆಗಲಿದೆ. ಇಲ್ಲಿನ ಎತ್ತರದ ಸ್ಥಳದಿಂದ ವಾರಾಹಿ ನದಿ, ಹೊಸಂಗಡಿ ಪೇಟೆ, ಪಶ್ಚಿಮ ಘಟ್ಟಗಳ ಸೊಬಗನ್ನು ಕಾಣಬಹುದು.

ಬೇರೇನೂ ಬೇಡ, ನೆಟ್ವರ್ಕ್‌ ಕೊಡಿ
ಈಗ ನೆಟ್ವರ್ಕ್‌ ಅನ್ನುವುದು ಮೂಲ ಸೌಕರ್ಯದಷ್ಟೇ ಅಗತ್ಯವಿದೆ. ನೆಟ್ವರ್ಕ್‌ ಇಲ್ಲದಿದ್ದರಿಂದ ಮಕ್ಕಳ ವಿದ್ಯಾಭ್ಯಾಸ, ಯಾರಿಗಾದರೂ ಅನಾರೋಗ್ಯ ಉಂಟಾದಾಗ ತುರ್ತು ಸಂದರ್ಭದಲ್ಲಿ ತುಂಬಾ ಕಷ್ಟವಾಗುತ್ತಿದೆ. ಇದರಿಂದ ಉಂಟಾಗುವ ಸಾವು-ನೋವಿಗೆ ಬೆಲೆ ಕಟ್ಟಲು ಸಾಧ್ಯವೇ? ನಾವು ಬೇರೇನೂ ಕೇಳುತ್ತಿಲ್ಲ. ನೆಟ್ವರ್ಕ್‌ ಸೌಲಭ್ಯವೊಂದನ್ನು ಕಲ್ಪಿಸಿಕೊಡಿ.
– ಮಹೇಶ್‌ ಶೆಟ್ಟಿ ಭಾಗಿಮನೆ, ಊರವರು

-ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

Ashwin Vaishnav

Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ

Andhra-CM-Naidu

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ

Naxal BIG

Sukma; ಭೀಕರ ಗುಂಡಿನ ಕಾಳಗದಲ್ಲಿ 12 ನಕ್ಸಲರನ್ನು ಹೊಡೆದುರುಳಿಸಿದ ಭದ್ರತಾ ಪಡೆ

Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು

Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ

10

Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!

Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್‌ ಪರ್ಬ 25′

Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್‌ ಪರ್ಬ 25′

6-Udupi-Bidar

Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Nanjanagudu

Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!

congress

Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್

Ashwin Vaishnav

Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ

Andhra-CM-Naidu

ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.