Udupi: ಫೆ.7ರಿಂದ 9ರವರೆಗೆ ಮಹಿಳಾ ಉದ್ಯಮಿಗಳ ಆರ್ಥಿಕ ಬಲವರ್ಧನೆಗಾಗಿ “ಪವರ್ ಪರ್ಬ 25′
ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಮೇಳೈಸಲಿದೆ
Team Udayavani, Jan 16, 2025, 3:12 PM IST
ಉಡುಪಿ :ಗೃಹೋದ್ಯೋಗ ಹಾಗೂ ಕುಟುಂಬ ಉದ್ಯಮಗಳಲ್ಲಿ ತೊಡಗಿರುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು ಸದಸ್ಯರಾಗಿರುವ ಹಾಗೂ ಲಾಭದ ಉದ್ದೇಶವಿಲ್ಲದ ಸಂಸ್ಥೆ ಪವರ್ (ಪ್ಲ್ಯಾಟ್‌ಫಾರಂ ಆಫ್ ವ್ಯೂಮೆನ್ ಎಂಟರ್‌ಪ್ರನ್ಯೂರ್) ಆಶ್ರಯದಲ್ಲಿ ಈ ಬಾರಿ ಫೆ.7ರಂದು ಪ್ರಾರಂಭಗೊಂಡು ಫೆ.9ರ ವರೆಗೆ ಮಿಷನ್ ಕಂಪೌಂಡ್ ಬಳಿಯ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿರುವ “ಪವರ್ ಪರ್ಬ 25’ಕ್ಕೆ ಸಕಲ ಸಿದ್ಧತೆ ಭರದಿಂದ ನಡೆಯುತ್ತಿದ್ದು, ಅತಿಥಿ ಗಣ್ಯರನ್ನು ಆಹ್ವಾನಿಸಲಾಗುತ್ತಿದೆ.
ಪ್ರದರ್ಶನ ಮತ್ತು ಮಾರಾಟ
ಕೇಂದ್ರ ಸರಕಾರದ ಪಿಎಂಎಸ್ ಸ್ಕೀಮ್ ಆಫ್ ಎಂಎಸ್‌ಎಂಇ ಸಹಯೋಗದೊಂದಿಗೆ ಪರ್ಬ ಆಯೋಜಿಸುತ್ತಿದ್ದು, ಒಟ್ಟು 150ಕ್ಕೂ ಹೆಚ್ಚು ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗಾಗಿ ವ್ಯವಸ್ಥೆಗೊಳಿಸಲಾಗುತ್ತಿದೆ. ಪ್ರತಿಯೊಬ್ಬ ನೋಂದಾಯಿತ ಮಹಿಳಾ ಉದ್ಯಮಿಗಳಿಗೆ ಅವರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಪ್ರತ್ಯೇಕವಾದ ಸೌಕರ್ಯಗಳುಳ್ಳ ಮಳಿಗೆಯನ್ನು ಕಲ್ಪಿಸಲಾಗುವುದು. ಅಗತ್ಯವಿದ್ದಲ್ಲಿ ಮಳಿಗೆ ಪಡೆದ ಮಹಿಳೆಯರಿಗೆ ವಸತಿಗೆ ಅವಕಾಶ ಕಲ್ಪಿಸಿಕೊಡಲಾಗುವುದು.
ಪರ್ಬ ನಡೆಯುವ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ, ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ಬಸ್‌ನಿಲ್ದಾಣ ಸೌಕರ್ಯಗಳ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ ಪರ್ಬ ನಡೆಯುವ ಸ್ಥಳದಿಂದ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಸ್ಥಳೀಯ ಸಾರಿಗೆ ವ್ಯವಸ್ಥೆ ಲಭ್ಯವಿರಲಿದೆ.
ಕೌಶಲ ಸಾಮರ್ಥ್ಯಗಳ ಪೋಷಣೆ
ಮಹಿಳಾ ಉದ್ಯಮಿಗಳಿಗೆ ಪರಸ್ಪರ ಹಾಗೂ ಸಾಮೂಹಿಕ ಕಲಿಕೆ ಮತ್ತು ಗಳಿಕೆಗೆ ವೇದಿಕೆ ಕಲ್ಪಿಸಿಕೊಡುವ ಉದ್ದೇಶ ಹೊಂದಿದ್ದು, ಎಲ್ಲ ವಿಭಾಗದ ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸಿ ಅವರವರ ಕೌಶಲ ಸಾಮರ್ಥ್ಯವನ್ನು ಪೋಷಿಸಿ ಅವರ ಕನಸುಗಳನ್ನು ನನಸಾಗಿಸುವುದು ಸಂಸ್ಥೆಯ ಉದ್ದೇಶ. ಒಗ್ಗೂಡಿಸುವುದೇ ಪರ್ಬ ಇದು ಪವರ್ ಪರಿಕಲ್ಪನೆ. ಮಹಿಳಾ ಉದ್ಯಮಿಗಳನ್ನು ಆರ್ಥಿಕವಾಗಿ ಬಲಪಡಿಸುವುದೇ ಪವರ್ ತಂಡದ ಗುರಿಯಾಗಿದೆ.
ಪರ್ಬದ ಮುಖ್ಯ ಉದ್ದೇಶ
ಮಹಿಳಾ ಉದ್ಯಮಿಗಳೂ ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ವೇದಿಕೆಯನ್ನು ಸೂಕ್ತ ಪ್ರಚಾರದೊಂದಿಗೆ ಕಲ್ಪಿಸುವುದು. ಗ್ರಾಮ ಹಾಗೂ ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳನ್ನು ಒಂದೇ ಸೂರಿನಡಿ ಒಗ್ಗೂಡಿಸುವುದು. ಗ್ರಾಮ ಮತ್ತು ನಗರ ಪ್ರದೇಶಗಳ ಮಹಿಳಾ ಉದ್ಯಮಿಗಳ ನಡುವೆ ಪರಸ್ಪರ ವ್ಯವಹಾರಿಕ ಬಾಂಧವ್ಯ ಕಲ್ಪಿಸುವುದು. ಮಹಿಳಾ ಉದ್ಯಮಿಗಳ ಕೌಶಲವನ್ನು ಗ್ರಾಹಕರಿಗೆ ಪರಿಚಯಿಸುವುದು. ಉದ್ಯಮಕ್ಕೆ ಸಂಬಂಧಿಸಿದಂತೆ ಮಾರುಕಟ್ಟೆ, ನಿರ್ವಹಣೆ ಹಾಗೂ ತಾಂತ್ರಿಕ ಜ್ಞಾನ ನೀಡುವುದು. ಗ್ರಾಹಕರ ಸಂಪರ್ಕ ಬೆಳೆಸುವ ಮೂಲಕ ಉದ್ಯಮ ಅಭಿವೃದ್ಧಿ ಪಡಿಸಿಕೊಳ್ಳಲು ಸಹಕರಿಸುವುದು.
ಪಾಲ್ಗೊಳ್ಳುವ ಮಳಿಗೆಗಳು
ಆಭರಣ, ವಸ್ತ್ರ-ವಿನ್ಯಾಸ, ಗೃಹಾಲಂಕಾರ, ಆಹಾರ, ಸೌಂದರ್ಯ ವರ್ಧಕಗಳು, ಸಿದ್ಧ ಉಡುಪುಗಳು, ಚಿತ್ರಕಲೆ, ಕ್ರಿಯಾತ್ಮಕ ವಸ್ತುಗಳು, ಅಲಂಕಾರಿಕ ವಸ್ತುಗಳು, ಕರಕುಶಲ ವಸ್ತುಗಳು, ವಿಶೇಷ ಆಕರ್ಷಕ ವಸ್ತುಗಳ ಸಹಿತ ಇನ್ನಿತರ ವಸ್ತುಗಳ ಮಳಿಗೆಗಳು ಪಾಲ್ಗೊಳ್ಳಲಿವೆ.
ಇನ್ನು ಕೆಲವೇ ಮಳಿಗೆಗಳಿವೆ
ಎಂಎಸ್‌ಎಂಇ ನೆರವಿನಡಿ (ಉತ್ಪಾದನೆ ಮತ್ತು ಸೇವಾ ಕ್ಷೇತ್ರದ ಉದ್ಯಮಗಳಿಗೆ) ಸಾಮಾನ್ಯ ವರ್ಗದವರಿಗೆ ಸ್ಥಳಾವಕಾಶದ ಬಾಡಿಗೆಯ ಶೇ.80ರಷ್ಟು ಸಬ್ಸಿಡಿ, ಎಸ್‌ಸಿ/ಎಸ್‌ಟಿ/ಮಹಿಳಾ/ಎನ್‌ಇಆರ್/ಪಿಎಚ್ ಅವರಿಗೆ ಶೇ.ನೂರರಷ್ಟು ಸಬ್ಸಿಡಿ ದೊರೆಯಲಿದೆ. ಮಳಿಗೆಗಳ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. 20 ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸಲಿದ್ದು, ಇನ್ನು ಕೆಲವೇ ಮಳಿಗೆಗಳು ಮಾತ್ರ ಬಾಕಿ ಉಳಿದಿವೆ. ಹೆಚ್ಚಿನ ಮಾಹಿತಿಗೆ ಸುಪ್ರಿಯಾ ಕಾಮತ್ (ಮಳಿಗೆಗಳ ನೋಂದಣಿ ಚೇರ್‌ಮನ್) ಫೋ: 9980152848, ಸುಗುಣಾ ಶಂಕರ್ ಸುವರ್ಣ (ಸಂಯೋಜಕರು) ಫೋ: 9900253365 ಅವರನ್ನು ಸಂಪರ್ಕಿಸಬಹುದು. ಮಹಿಳಾ ಉದ್ಯಮಿಗಳಿಗೊಂದು ಸುವರ್ಣಾವಕಾಶ ಬೇಗ ಬನ್ನಿ ಸದುಪಯೋಗ ಪಡಿಸಿಕೊಳ್ಳಿ. ಆರ್ಥಿಕವಾಗಿ ಸುದೃಢರಾಗಿರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Swadesh Darshan scheme: ಕೇಂದ್ರದ ಸ್ವದೇಶ್ ದರ್ಶನ್ ಯೋಜನೆಗೆ ಬೀದರ್, ಉಡುಪಿ ಆಯ್ಕೆ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
MUST WATCH
ಹೊಸ ಸೇರ್ಪಡೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.