Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ತಮ್ಮ ಧಾರ್ಮಿಕ ಅಭ್ಯಾಸದ ಭಾಗವಾಗಿ ಈ ಸಾಧನೆಯಲ್ಲಿ ತೊಡಗಿಕೊಂಡಿದ್ದಾರಂತೆ!
Team Udayavani, Jan 16, 2025, 3:42 PM IST
ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಆರಂಭಗೊಂಡಿರುವ ಮಹಾಕುಂಭ ಮೇಳದಲ್ಲಿ ಈಗಾಗಲೇ ಸಾಧು, ಸಂತರು, ಅಘೋರಿಗಳು ಹಾಗೂ ಭಕ್ತರು ಸೇರಿದಂತೆ ಕೋಟ್ಯಂತರ ಜನರು ಶಾಹಿ ಸ್ನಾನದಲ್ಲಿ ಪಾಲ್ಗೊಂಡಿದ್ದು, ಈ ಸಂದರ್ಭದಲ್ಲಿ ಹಲವು ಸಾಧು-ಸಂತರು ತಮ್ಮ ವಿಶಿಷ್ಟವಾದ ವೇಷಭೂಷಣ, ಆಚರಣೆಯ ಮೂಲಕ ಗಮನಸೆಳೆಯುತ್ತಿದ್ದಾರೆ. ಅವರಲ್ಲಿ ಕಾಂಟೆ ವಾಲೆ (ಮುಳ್ಳಿನ ಮೇಲೆ ಮಲಗುವ) ಬಾಬಾ ಅಲಿಯಾಸ್ ರಮೇಶ್ ಕುಮಾರ್ ಮಾಂಝಿ ಕೂಡಾ ಒಬ್ಬರಾಗಿದ್ದಾರೆ.
ಪ್ರಮುಖ ಆಕರ್ಷಣೆ ಈ ಬಾಬಾ!
“ಕಾಂಟೆ ವಾಲೆ ಬಾಬಾ” ಚೂಪಾದ ಮುಳ್ಳಿನ ಹಾಸಿಗೆ ಮೇಲೆ ಮಲಗಿರುವ ಅದ್ಭುತ ಸಾಧಕರಾಗಿದ್ದು, ಇವರು ಕುಂಭಮೇಳದ ಪ್ರಮುಖ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ. ಕಳೆದ 50ವರ್ಷಕ್ಕಿಂತಲೂ ಅಧಿಕ ಕಾಲದಿಂದ ತಮ್ಮ ಧಾರ್ಮಿಕ ಅಭ್ಯಾಸದ ಭಾಗವಾಗಿ ಈ ಸಾಧನೆಯಲ್ಲಿ ತೊಡಗಿಕೊಂಡಿದ್ದಾರಂತೆ!
ಗುರುವಿನ ಆಶೀರ್ವಾದದ ಬಲ:
ನಾನು ನನ್ನ ಗುರುವಿಗೆ ಮಾಡಿದ ಸೇವೆಯ ಪ್ರತಿಫಲವಾಗಿ ನನಗೆ ಅವರು ಈ ಮುಳ್ಳಿನ ಹಾಸಿಗೆಯ ಮೇಲೆ ಮಲಗುವ ಸಿದ್ಧಿಯನ್ನು ಕರುಣಿಸಿದ್ದಾರೆ. ಇದು ದೇವರ ಇಚ್ಛೆಯಾಗಿದ್ದು, ಪ್ರತಿ ಕುಂಭಮೇಳದಲ್ಲೂ ಯಾವುದೇ ನೋವನ್ನು ಅನುಭವಿಸದೇ ಈ ಸಾಧನೆ ಮಾಡುವ ಅವಕಾಶ ಒದಗಿಸಿಕೊಟ್ಟಿದೆ. ನಿಜ ಹೇಳಬೇಕೆಂದರೆ ಇದರಿಂದ ನನ್ನ ದೇಹಕ್ಕೆ ಲಾಭವಿದೆ ಎಂದು ಕಾಂಟೆ ವಾಲೆ ಬಾಬಾ ಹೇಳುತ್ತಾರೆ.
ತಾನು ಸ್ವೀಕರಿಸುವ ದಕ್ಷಿಣೆಯಲ್ಲಿ ಅರ್ಧದಷ್ಟನ್ನು ದಾನವಾಗಿ ಕೊಡುತ್ತಾರಂತೆ. ಉಳಿದ ಹಣವನ್ನು ತನ್ನ ದೈನಂದಿನ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಅವರ ಈ ವಿಧೇಯತೆ ಮತ್ತು ಆಧ್ಯಾತ್ಮಿಕತೆಯ ಸಮರ್ಪಣಾ ಭಾವ ಭಕ್ತರ ಮೆಚ್ಚುಗೆ ಗಳಿಸಿದೆ.
ಜ.16ರಂದು ಸಂಜೆ 21 ಮಂದಿ ವಿದೇಶಿ ಗಣ್ಯರಿಂದ ಪುಣ್ಯಸ್ನಾನ:
ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಭಾಗಿಯಾಗುತ್ತಿದ್ದಾರೆ. ಗುರುವಾರ ಭಾರತ ಸರಕಾರವೇ ಆಹ್ವಾನಿಸಿರುವ 10 ದೇಶಗಳ 21 ಮಂದಿಯ ತಂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಲಿದ್ದಾರೆ.
ಫಿಜಿ, ಫಿನ್ ಲ್ಯಾಂಡ್, ಗಯಾನಾ, ಮಲೇಶಿಯಾ, ಮಾರಿಷಸ್, ಸಿಂಗಾಪುರ, ದ.ಆಫ್ರಿಕಾ, ಶ್ರೀಲಂಕಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋ ಹಾಗೂ ಯುಎಇ ದೇಶಗಳಿಂದ 21 ಮಂದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ಆಹ್ವಾನಿಸಿದೆ. ಗುರುವಾರ ಸಾಯಂಕಾಲ 5 ಗಂಟೆಯಿಂದ 6.30ರೊಳಗೆ ಇವರು ಪುಣ್ಯಸ್ನಾನ ಮಾಡಲಿದ್ದಾರೆ ಎಂದು ಉತ್ತರ ಪ್ರದೇಶ ಸರಕಾರ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.