ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ ಅರ್ಜುನ್ ಜನ್ಯಾ ನಿರ್ದೇಶನದ ʼ45ʼ ಸಿನಿಮಾ
Team Udayavani, Jan 16, 2025, 5:26 PM IST
ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಿರುವ ಮಲ್ಟಿಸ್ಟಾರರ್ ಸಿನಿಮಾ “45′ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಡೇಟ್ ಅನೌನ್ಸ್ ಮಾಡಿದೆ ತಂಡ. ಚಿತ್ರ ಆಗಸ್ಟ್ 15ರಂದು ತೆರೆಕಾಣುತ್ತಿದೆ. ಈ ಮೂಲಕ ಸಿನಿಮಾ ಪ್ರೇಮಿಗಳ ಕುತೂಹಲ ಕೂಡಾ ಹೆಚ್ಚಾಗಿದೆ.
ಇತ್ತೀಚೆಗೆ ಚಿತ್ರತಂಡ ಅದ್ಧೂರಿ ಕಾರ್ಯಕ್ರಮ ಮೂಲಕ ಡೇಟ್ ಅನೌನ್ಸ್ ಮಾಡಿದೆ. ಸಚಿವ ರಾಮಲಿಂಗಾ ರೆಡ್ಡಿ ಸೇರಿ ಕನ್ನಡ ಚಿತ್ರರಂಗದ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಚಿತ್ರದ ಮೇಲಿನ ನಿರೀಕ್ಷೆ ಬಗ್ಗೆ ಮಾತನಾಡಿದರು.
ರಮೇಶ್ ರೆಡ್ಡಿ ತಮ್ಮ ಸೂರಜ್ ಪ್ರೊಡಕ್ಷನ್ಸ್‌ನಡಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದ ಕುರಿತಾಗಿ ಮಾತನಾಡುವ ರಮೇಶ್ ರೆಡ್ಡಿ, “ನಾನು ಬಜೆಟ್ ಲೆಕ್ಕ ಹಾಕಿ ಈ ಸಿನಿಮಾ ಮಾಡಿಲ್ಲ. ಕಥೆಗೆ ಏನು ಬೇಕೋ ಅದನ್ನು ನೀಡಿದ್ದೇನೆ. ಇಡೀ ತಂಡ ಶ್ರಮಪಟ್ಟು ಒಂದೊಳ್ಳೆಯ ಸಿನಿಮಾ ಮಾಡಿದೆ. ಇಡೀ ಭಾರತೀಯ ಚಿತ್ರರಂಗ ತಿರುಗಿ ನೋಡುವ ಸಿನಿಮಾ ಇದಾಗಲಿದೆ’ ಎಂದರು.
ಅರ್ಜುನ್ ಜನ್ಯಾ ಚೊಚ್ಚಲ ನಿರ್ದೇಶನದ ಸಿನಿಮಾ “45′. ಮೊದಲ ಚಿತ್ರದಲ್ಲೇ ಮೂವರು ನಾಯಕ ನಟರ ಜೊತೆ ಸಿನಿಮಾ ಮಾಡಿದ್ದಾರೆ. “ಸಿನಿಮಾ ಅಂದುಕೊಂಡಂತೆ ಮೂಡಿಬಂದಿದೆ ಎಂದರೆ ಅದಕ್ಕೆ ಕಾರಣ ಸಿನಿಮಾದ ಕಲಾವಿದರು ಹಾಗೂ ತಾಂತ್ರಿಕ ವರ್ಗ. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚಿದ್ದು, ವಿದೇಶದ ಖ್ಯಾತ ಸಂಸ್ಥೆಯೊಂದು ಗ್ರಾಫಿಕ್ಸ್ ಮಾಡುತ್ತಿದ್ದು, ಮೇ ವೇಳೆಗೆ ನಮಗೆ ಗ್ರಾಫಿಕ್ಸ್ ಸಿಗಲಿದೆ’ ಎಂದರು.
ನಾಯಕರಾದ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕೂಡಾ ಅರ್ಜುನ್ ಜನ್ಯಾ ಅವರ ಶ್ರಮ ನಿರ್ಮಾಪಕರ ಸಿನಿಮಾ ಪ್ರೀತಿಯನ್ನು ಕೊಂಡಾಡಿದರು. ಚಿತ್ರದ ಸಾಹಸ ನಿರ್ದೇಶಕರಾದ ರವಿವರ್ಮ ಹಾಗೂ ಡಿಫರೆಂಟ್ ಡ್ಯಾನಿ ಸಿನಿಮಾದ ಸಾಹಸ ಸನ್ನಿವೇಶದ ಅನುಭವ ಹಂಚಿಕೊಂಡರು. ಛಾಯಾಗ್ರಾಹಕ ಸತ್ಯ ಹೆಗಡೆ ಕೂಡಾ ಮಾತನಾಡಿದರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.