Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು


Team Udayavani, Jan 16, 2025, 7:10 PM IST

Madikeri: ಕಾಡಾನೆ ದಾಳಿಯಿಂದ ಕಾರು ಜಖಂ; 6 ಮಂದಿ ಪ್ರಾಣಾಪಾಯದಿಂದ ಪಾರು

ಮಡಿಕೇರಿ: ವಿರಾಜಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಕಾರೊಂದರ ಮೇಲೆ ಕಾಡಾನೆ ದಾಳಿ ನಡೆಸಿ ಕಾರನ್ನು ಜಖಂಗೊಳಿಸಿರುವ ಘಟನೆ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಅರಣ್ಯ ವ್ಯಾಪ್ತಿಯಲ್ಲಿ ಬುಧವಾರ (ಜ.15ರಂದು) ರಾತ್ರಿ ನಡೆದಿದೆ.

ಕಾಡಾನೆ ದಾಳಿಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿರಾಜಪೇಟೆ ತಾಲೂಕಿನ ಬಿಳುಗುಂದ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುತ್ತಿರುವ ಅಶ್ವಕ್ ಎಂಬವರು ಕುಟುಂಬ ಸಮೇತರಾಗಿ ರಾತ್ರಿ ವೇಳೆ ಕಾರಿನಲ್ಲಿ ತಿತಿಮತಿ ಮಾರ್ಗವಾಗಿ ಮೈಸೂರಿಗೆ ತೆರಳುತ್ತಿದ್ದರು. ತಿತಿಮತಿ ಮಜ್ಜಿಗೆ ಹಳ್ಳ ಅರಣ್ಯ ಪ್ರದೇಶದ ಸಮೀಪ ರಸ್ತೆ ಉಬ್ಬು ಇದ್ದ ಹಿನ್ನೆಲೆಯಲ್ಲಿ ಕಾರು ಚಾಲಕ ಅರ್ಫತ್ ವಾಹನದ ವೇಗವನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದಾರೆ. ಈ ವೇಳೆ ಕಾಡಾನೆ ಏಕಾಏಕಿ ಕಾರಿನ ಮೇಲೆ ದಾಳಿ ನಡೆಸಿ ಸಂಪೂರ್ಣ ಜಖಂಗೊಳಿಸಿ ಕಾಡಿನಲ್ಲಿ ಮರೆಯಾಗಿದೆ.

ಈ ಘಟನೆಯಿಂದ ಅಶ್ವಕ್ ಕುಟುಂಬದ ಆರು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿರಾಜಪೇಟೆಯ ಖಾಸಗಿ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ.

ಮಾಹಿತಿ ಪಡೆದ ರಾಜ್ಯ ವನ್ಯ ಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಅವರು ರಾತ್ರಿ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗ ಕ್ಷೇಮ ವಿಚಾರಿಸಿದರು.

ತಿತಿಮತಿ ಅರಣ್ಯ ಪ್ರದೇಶದ ರಸ್ತೆಯಲ್ಲಿರುವ ರಸ್ತೆ ಉಬ್ಬುಗಳನ್ನು ತೆರವು ಮಾಡಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ವೈಜ್ಞಾನಿಕ ಕ್ರಮ ಕೈಗೊಳ್ಳಬೇಕು. ಆ ಮೂಲಕ ವನ್ಯಜೀವಿ ಸಂರಕ್ಷಣೆಯೊಂದಿಗೆ ಮಾನವ ಜೀವದ ಅಪಾಯವನ್ನು ತಪ್ಪಿಸಬೇಕಿದೆ ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

ಗೀತಾರ್ಥ ಚಿಂತನೆ-158: ಕಾಲದ ಚಿಕ್ಕ ಪರಿಧಿಯಲ್ಲಿ ದೊಡ್ಡದು, ದೊಡ್ಡ ಪರಿಧಿಯಲ್ಲಿ ಚಿಕ್ಕದು

1-kho-kho

Kho kho World Cup: ಭಾರತಕ್ಕೆ 71-34 ಅಂತರದ ಗೆಲುವು

Vinesh 2

ಶಾಸಕಿಯಾದ ಬಳಿಕ ವಿನೇಶ್‌ ಪೋಗಟ್‌ ಮತ್ತೆ ಕುಸ್ತಿ ಅಭ್ಯಾಸ?

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ

PM ವಿಶ್ವಕರ್ಮ ಯೋಜನೆ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡKasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

Kasaragod ಭಾಗದ ಅಪರಾಧ ಸುದ್ದಿಗಳು: ಗಾಂಜಾ ಸಾಗಾಟ: 2 ವರ್ಷ ಸಜೆ, ದಂಡ

MDK-Changappa

ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು

8-

Madikeri: ಕಾಡಾನೆ ದಾಳಿ-ವ್ಯಕ್ತಿ ಸಾವು : ಶಾಸಕರ ಭೇಟಿ

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

Madikeri: ಕಾಡಾನೆ ದಾಳಿ: ವ್ಯಕ್ತಿ ಸಾವು

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

1-nag

Nagpur-Mumbai ಸಮೃದ್ಧಿ ಹೆದ್ದಾರಿಗೆ ವರ್ಣಚಿತ್ರಗಳ ಅಲಂಕಾರ

canada

Canada; ರಾಜಕೀಯಕ್ಕೆ ವಿದಾಯ ಹೇಳಲು ಪ್ರಧಾನಿ ನಿರ್ಧಾರ?

India US

US ;ಬಾರ್ಕ್‌ ಸೇರಿ 3 ಸಂಸ್ಥೆಗಳ ಮೇಲಿನ ನಿಷೇಧ ತೆರವು

joe bided

America ಪ್ರಜಾಸತ್ತೆಗೆ ಅಪಾಯ: ವಿದಾಯ ಭಾಷಣದಲ್ಲಿ ಬೈಡೆನ್‌

1-PVS

India Open Super 750 Badminton: ಸಿಂಧು, ಕಿರಣ್‌ ಜಾರ್ಜ್‌ ಕ್ವಾರ್ಟರ್‌ಫೈನಲಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.