SP, BSP ಮೋದಿ ಹಠಾವೋ ಅಂತಿವೆ; ನಾನು ಗರೀಬೀ ಹಠಾವೋ ಅಂತೇನೆ
Team Udayavani, Jan 2, 2017, 3:19 PM IST
ಲಕ್ನೋ : “ಎಸ್‌ಪಿ, ಬಿಎಸ್‌ಪಿ ಪಕ್ಷಗಳು ಮೋದಿ ಹಠಾವೋ ಅಂತ ಹೇಳುತ್ತಿವೆ; ಆದರೆ ನಾನು ಗರೀಬಿ ಹಠಾವೋ, ಭಷ್ಟಾಚಾರ್ ಹಠಾವೋ ಅಂತ ಹೇಳುತೇನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಂದು ಇಲ್ಲಿ ನಡೆದ ಪರಿವರ್ತನ್ ರಾಲಿಯಲ್ಲಿ ಅಭೂತಪೂರ್ವ ಜನಸಮಾವೇಶವನ್ನು ಉದ್ದೇಶಿಸಿ ಕಿವಿಗಡಚಿಕ್ಕುವ ಕರತಾಡನದ ನಡುವೆ ಹೇಳಿದರು.
ಉತ್ತರ ಪ್ರದೇಶದ ಅಭಿವೃದ್ದಿಕ್ಕಾಗಿ ಕೇಂದ್ರ ಸರಕಾರ 2.50 ಲಕ್ಷ ಕೋಟಿ ರೂ. ಕೊಟ್ಟರೂ ಆಳುವ ಸಮಾಜವಾದಿ ಪಕ್ಷ ಚಿಕ್ಕಾಸಿನ ಅಭಿವೃದ್ಧಿಯನ್ನು ಮಾಡಿಲ್ಲ; ಜನರಿಗೆ ಯಾವುದೇ ಪ್ರಯೋಜನವನ್ನು ದೊರಕಿಸಿಕೊಟ್ಟಿಲ್ಲ; ಹೀಗಿರುವ ರಾಜ್ಯದಲ್ಲಿ ಬದಲಾವಣೆ ಆಗಬೇಕಾಗಿರುವುದು ಅಗತ್ಯ ಮತ್ತು ಅನಿವಾರ್ಯ; ಆದುದರಿಂದ ಜನರೇ ಆ ಬದಲಾವಣೆಯನ್ನು ತರಬೇಕು ಎಂದು ಮೋದಿ ಹೇಳಿದರು.
“ಎಸ್‌ಪಿ, ಬಿಎಸ್‌ಪಿಗಳು ಯಾವತ್ತೂ ಪರಸ್ಪರ ಕಚ್ಚಾಡುವ ಪಕ್ಷಗಳು; ಆದರೆ ಅವೀಗ ಒಂದಾಗಿವೆ ಮತ್ತು ಮೋದಿ ಹಠಾವೋ ಮಂತ್ರವನ್ನು ಜಪಿಸುತ್ತಿವೆ, ಕಾರಣ ಚುನಾವಣೆಗಳು ಈಗ ಹತ್ತಿರವಾಗಿವೆ; ನಾನು ರಾಜ್ಯದ ಜನರಿಗೆ ಕೊಡುವ ಉತ್ತರವೇನೆಂದರೆ “ಗರೀಬೀ ಹಠಾವೋ, ಭ್ರಷ್ಟಾಚಾರ್ ಹಠಾವೋ, ಪರಿವರ್ತನ್ ಲಾವೋ’ ಎಂದು ಮೋದಿ ಹೇಳಿದರು.
ನಾನು ಈ ವರೆಗೆ ಭಾಗವಹಿಸಿರುವ ರಾಜಕೀಯ ರಾಲಿಗಳಲ್ಲಿ ಇಷ್ಟೊಂದು ದೊಡ್ಡ ಜನಸಮೂಹ ಸೇರಿರುವುದನ್ನು ಎಲ್ಲಿಯೂ ಕಂಡಿಲ್ಲ; ಇಲ್ಲಿನ ಅಪಾರ ಜನರಾಶಿಯನ್ನು ಕಂಡು ನಾನು ಆನಂದ ತುಂದಿಲನಾಗಿದ್ದೇನೆ; ಜನರು ಬದಲಾವಣೆ ಬಯಸುವುದನ್ನು ಕಾಣುತ್ತಿದ್ದೇನೆ. ಆದುದರಿಂದ ಉತ್ತರ ಪ್ರದೇಶದ ಮತದಾರರು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ಹಾಕುವರೆಂಬ ವಿಶ್ವಾಸ ನನಗಿದೆ ಎಂದು ಮೋದಿ ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.