ಬೈಕರ್‌ಗಳ ಸ್ವರ್ಗದಲ್ಲಿ ಒಂದಿನ


Team Udayavani, Jan 3, 2017, 3:50 AM IST

IMG_0606.jpg

ಯಾವ ಮೋಹನ ಮುರಳಿ ಕರೆಯಿತು
ದೂರ ತೀರಕೆ ನಿನ್ನನು

ಹಾಡು ಕಿವಿಗೆ ಹಾಕಿಕೊಂಡಿರುವ ಇಯರ್‌ ಫೋನ್‌ನಲ್ಲಿ ಗುನುಗುಡುತ್ತಿತ್ತು. ಪಾಂಗ್‌ ಹೋಗುವ ನಯ-ನಾಜೂಕಾದ ರಸ್ತೆಯಲ್ಲಿ ಬುಲೆಟ್‌ನ ಮೀಟರ್‌ ಮುಳ್ಳು 100 ದಾಟಿತ್ತು. ಬೆಳಿಗ್ಗೆ ಎದ್ದು ಸ್ನಾನ ಮಾಡಿ, ಲಗೇಜ್‌ಗಳನ್ನು ಪ್ಯಾಕ್‌ ಮಾಡಿಕೊಂಡು 7 ಘಂಟೆಗೆ ರೆಸಿಡೆನ್ಸಿಗೆ ಅಲ್ವಿದಾ ಹೇಳಿ ಹೊರಟೆವು. ಲೇಹ್‌ನಿಂದ ಸುಮಾರು 365 ಕಿಮೀವರೆಗೂ ಪೆಟ್ರೋಲ್‌ ಬಂಕ್‌ ಇಲ್ಲದಿರುವುದರಿಂದಾಗಿ, ಮುಂಚಿತವಾಗಿಯೇ ಬುಲ್ಲೆಟ್‌ಗಳು ಫ‌ುಲ್‌ ಟ್ಯಾಂಕ್‌ ಆಗಿದ್ದವು. ಅದರೊಂದಿಗೆ ಮುಂಜಾಗ್ರತೆಯಾಗಿ ತಲಾ 10-10 ಲೀಟರ್‌ಗಳಷ್ಟು ಪೆಟ್ರೋಲ್‌ ನಮ್ಮಿಬ್ಬರ ಬುಲ್ಲೆಟ್‌ ಕರಿಯರ್‌ನಲ್ಲಿರುವ ಕ್ಯಾನ್‌ಗಳಲ್ಲಿ ತುಂಬಿಸಿ ಇಟ್ಟುಕೊಂಡಿದ್ದೆವು.

ರಸ್ತೆಗಳು ದಿನಕ್ಕೊಂದು ಹೊಸ ಅನುಭವ ಕೊಡುವಂತೆ ಬೇರೆ ಬೇರೆಯಾಗಿದ್ದವು. ಲೇಹ್‌ನಿಂದ ಪಾಂಗ್‌ವರೆಗೂ ರಸ್ತೆ ಚೆನ್ನಾಗಿದೆ. ಅಲ್ಲಿಂದ ಮುಂದೆ ಅಷ್ಟಕ್ಕಷ್ಟೇ ಎಂದು ಕೇಳಿ ತಿಳಿದಿದ್ದೆವು. ರಾಷ್ಟ್ರೀಯ ಹೆದ್ದಾರಿ 1 ಎಂದಾಗ ಮೊದಲು ಬಾರ್ಡರ್‌ ರೋಡ್‌ ಆರ್ಗನೈಸೇಶನ್‌ ಬಗ್ಗೆ ಹೇಳಬೇಕು. ಗುಡ್ಡಗಳನ್ನು ಕೊರೆದು ನಿರ್ಮಿಸಿದ ಸುಸಜ್ಜಿತ ರಸ್ತೆಗಳಲ್ಲಿ ಪ್ರತಿಯೊಬ್ಬ ಪಯಣಿಗನಿಗೂ ಮನದಲ್ಲಿ ಅಚ್ಚಾಗುವ ಆ ಹೆಸರು ಬೀ.ಆರ್‌.ಒ. 

ಅದಕ್ಕೆ ಮುಖ್ಯ ಕಾರಣವೆಂದರೆ ಅಲ್ಲಲ್ಲಿ ಕಂಡುಬರುವ ಹಳದಿ ಬಣ್ಣದ ಸೂಚನಾ ಫ‌ಲಕಗಳು. ಕೆಲವೊಂದು ಸಂದೇಶಗಳನ್ನು ಭಾಷಾಂತರಿಸಲು ಪ್ರಯತ್ನಿಸಿದ್ದೇನೆ.
– ನನ್ನ ತಿರುವುಗಳನ್ನು ಅನುಭವಿಸು. ಪರೀಕ್ಷಿಸಬೇಡ.
– ವಿಸ್ಕಿಯ ನಂತರ ಡ್ರೆ„ವಿಂಗ್‌ ರಿಸ್ಕಿ.
– ಗಾಸಿಪ್‌ ಮಾಡಬೇಡ… ಅವನು ಡ್ರೆ„ವ್‌ ಮಾಡಲಿ.
– ಡಾರ್ಲಿಂಗ್‌ ಐ ಲವ್‌ ಯೂ.. ಆದರೆ ಇಷ್ಟು ವೇಗವಲ್ಲ.
– ನನ್ನ ತಿರುವುಗಳಲ್ಲಿ ಮೃದುವಾಗಿರು.
– ನೀನು ಮದುವೆಯಾಗಿದ್ದರೆ, ವೇಗಕ್ಕೆ ವಿಚ್ಛೇದನ ಕೊಡು.
– ಗೇರ್‌ ಕಡಿಮೆ ಮಾಡು, ತಿರುವು ಹತ್ತಿರವಿದೆ.
– ನರಕದಂತೆ ವಾಹನ ಚಲಾಯಿಸಿದರೆ ನೀನು ಅಲ್ಲಿ ತಲುಪುವೆ.
– ಬೀ ಮಿಸ್ಟರ್‌ ಲೇಟ್‌ ದ್ಯಾನ್‌ ಲೇಟ್‌ ಮಿಸ್ಟರ್‌.
– ಉ..ಹಾ..ಔಚ್‌..ಗಳಿಗೆ ಕ್ಷಮೆಯಿರಲಿ. ಸಮಸ್ಯೆಗಾಗಿ ವಿಷಾದಿಸುತ್ತೇವೆ.
ಹೀಗೆ ಬೋರ್ಡ್‌ಗಳನ್ನು ಓದುತ್ತಲೇ ಪಾಂಗ್‌ ತಲುಪಿದ್ದು ಗೊತ್ತಾಗಲಿಲ್ಲ. ಗುಡ್ಡಗಳ ಆಚೆ ಬಾಗಿರುವ ಹಿಮಶಿಖರ. ಮನಾಲಿ ಕಡೆಯಿಂದ ಲೇಹ್‌ ಕಡೆಗೆ ಬರುತ್ತಿರುವ ನೂರಾರು ಬೈಕರ್‌ಗಳ ಗುಂಪುಗಳು. ಎಲ್ಲೋ ಮಳೆ ಬರುವ ಸೂಚನೆ ದೂರದಲ್ಲಿ. ಹಾವಿನಂತೆ ಸುತ್ತಿರುವ ರಸ್ತೆಗಳ ಹೇರ್‌ ಪಿನ್‌ ಕರ್ವ್‌ಗಳನ್ನು ದಾಟಿಕೊಂಡು ಬಂದು ಮೇಲೆ ನಿಂತು, ಕೆಳಗಿನ ರಸ್ತೆಯ ಚಿತ್ತಾರವನ್ನು ವೀಕ್ಷಿಸಿದಾಗ ಸಿಗುವ ಮಜವೇ ಬೇರೆ. ಇದೇ.. ಬೈಕರ್‌ಗಳ ಸ್ವರ್ಗ… ದೀರ್ಘ‌ ಧ್ಯಾನ…

ಮ್ಯಾಗಿ ಮ್ಯಾಟರ್‌ ಮತ್ತು ಪಸಂಗ್‌
ಕೆಲವು ಕ್ಷಣಗಳ ಆಫ್ ರೋಡಿಂಗ್‌ ನಂತರ ಡೇಬರಿಂಗ್‌ ಎಂಬ ಸ್ಥಳ ತಲುಪಿದೆವು. ಮನೆಯಂತಹ ಆ ಚಿಕ್ಕ ಹೋಟೆಲ್‌ನಲ್ಲಿ ಬ್ರೆಡ್‌ ಆಮ್ಲೆಟ್‌ ಹಾಗೂ ಮ್ಯಾಗಿ ಆರ್ಡರ್‌ ಮಾಡಿದೆವು. ಅಡಿಗೆ ಮಾಡುವ ಮಹಿಳೆ ಉಪ್ಪುಹೇಗಿರಬೇಕು? ಖಾರ ಹೇಗಿರಬೇಕು? ತರಕಾರಿಗಳು ಎಷ್ಟಿರಬೇಕು? ಎಂದೆಲ್ಲ ವಿವರವಾಗಿ ಕೇಳಿಕೊಂಡು ಹೋಗಿ ಒಂದು ಸ್ವಾದಿಷ್ಟ ಮ್ಯಾಗಿ ತಂದು ನಮ್ಮ ಮುಂದಿಟ್ಟಳು. 

ಅಷ್ಟರಲ್ಲಿ ವಿದೇಶಿ ಪ್ರಜೆಗಳಿಬ್ಬರನ್ನು ಲಡಾಖ್‌ ಟ್ರೆಕಿಂಗ್‌ಗೆ ಕರೆದುಕೊಂಡು ಹೋಗಿ ಬಂದ ಸ್ಥಳೀಯ ಮಾರ್ಗದರ್ಶಕರೊಬ್ಬರು ಅದೇ ಹೋಟೆಲ್‌ಗೆ ಬಂದು ಕುಳಿತರು. ಅವರ ಹೆಸರು ಪಸಂಗ್‌.. ಮಾತು ಬೆಳೆದು ಸ್ನೇಹವಾಗಲು ಸಮಯ ಹಿಡಿಯಲಿಲ್ಲ. ಅಲ್ಲಿನ ಸುತ್ತಮುತ್ತಲಿನ ಸೌಂದರ್ಯಗಳ ಬಗ್ಗೆ ವಿವರಿಸಿದರು. ಅವರ ಮಾತು ಕೇಳಿ ಮುಂದಿನ ಸಾರಿ ಬಂದಾಗ ಅವರೊಡನೆ ಹೋಗಬೇಕು ಎಂದು ನಿರ್ಧಾರ ಕೂಡ ಮಾಡಲಾಯಿತು.

ಪರಸ್ಪರ ಮೊಬೈಲ್‌ ನಂಬರ್‌ ಚೇಂಜ್‌ ಮಾಡಿಕೊಂಡು ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು ಅಲ್ಲಿಂದ ಹೊರಟೆವು. ಆದಷ್ಟು ಬೇಗ ಮನಾಲಿ ತಲುಪಬೇಕು ಎಂದುಕೊಂಡು ಹೊರಟರೆ, ರಸ್ತೆ ಅಷ್ಟು ಚೆನ್ನಾಗಿರಲಿಲ್ಲ. ಮುಂಚೆ ಇದ್ದ ಪ್ಲಾನ್‌ ಪ್ರಕಾರವಾಗಿ ನಾವು ಸರ್ಚುವಿನಲ್ಲಿ ಒಂದು ದಿನ ಉಳಿದುಕೊಂಡು ಮರುದಿನ ಮನಾಲಿ ತಲುಪಬೇಕಿತ್ತು. ಕೆಲವೊಮ್ಮೆ ಸಂಜೆಯ ಹೊತ್ತು ತಾಪಮಾನ ತೀರಾ ಕಡಿಮೆಗೆ ಹೋಗುತ್ತದೆ ಎಂದು, ಅಲ್ಲಿ ತಂಗುವುದು ಸೂಕ್ತವಲ್ಲ ಎಂದು ನಮ್ಮ ಹಳೆಯ ಹೋಟೆಲ್‌ನಲ್ಲಿ ಸಿಕ್ಕ ಗೆಳೆಯರೊಬ್ಬರು ಹೇಳಿರುವುದರಿಂದ ನೇರವಾಗಿ ಮನಾಲಿಗೆ ಹೋಗುವುದು ಒಳ್ಳೆಯದೆಂದು ನಿರ್ಧರಿಸಿದ್ದೆವು.

ಅನಿರೀಕ್ಷಿತವಾಗಿ ಸಿಕ್ಕ ಹಿಮಹಾದಿ
ಮನಾಲಿ ಇನ್ನೂ 150 ಕಿಮೀ ದೂರವಿತ್ತು. ನಮ್ಮ ದೈನಂದಿನ ಎಣಿಕೆಯ ಪ್ರಕಾರ ಅಬ್ಬಬ್ಟಾ ಎಂದರೆ 3 ರಿಂದ 4 ಘಂಟೆ. ಆದರೆ ಅಂದುಕೊಂಡಂತೆ ಯಾವುದೂ ಆಗಲಿಲ್ಲ. ಸಂಜೆ ಆಗುತ್ತಿದ್ದಂತೆ ಸೂರ್ಯ ಕೆಂಪಾದಂತೆ, ಬೆಳಿಗ್ಗೆಯಿಂದ ಬಿಸಿಲಿನ ಬೇಗೆಗೆ ಕಾದು, ಹಿಮಗಳು ನೀರಾಗಿ ರಸ್ತೆಯಲ್ಲೆಲ್ಲಾ ಹರಿಯುತ್ತಿದ್ದವು. ಅಲ್ಲಲ್ಲಿ ಸಿಗುವ ಚಿಕ್ಕ ತೊರೆಗಳನ್ನು ದಾಟಿ ಹೋಗುವುದೇ ದೊಡ್ಡ ಸಮಸ್ಯೆಯಾಗಿತ್ತು. ನಮಗೆ ಇದರ ಬಗ್ಗೆ ಅರಿವು ಇರಲಿಲ್ಲ. ಯಾರೂ ಕೂಡ ಹೇಳಿರಲಿಲ್ಲ. ಯಾವುದೇ ಬ್ಲಾಗ್‌ಗಳಲ್ಲಿ ಓದಿರಲಿಲ್ಲ. ಅಲ್ಲಿಗೆ ಹಿಮಾಚಲದ ಗಡಿ ದಾಟಿದ್ದೆವು. ಲಡಾಖೀನ ಮಣ್ಣಿನ ಗುಡ್ಡ ಹಾಗೂ ಹಿಮಗಡ್ಡೆ ಯ ಅಲಂಕಾರ ಹಿಮಾಚಲದಲ್ಲಿ ಹಸಿರು ಹೊದ್ದಿತ್ತು. ಹಿಮಾಚಲದ ಗಡಿಯಿಂದ ಶುರುವಾದ ಹಸಿರು-ಮಣ್ಣು – ಹಿಮದ ರಾಶಿಗಳು, ಹಿಮಾಚಲ ಪ್ರದೇಶವನ್ನು ವಿಭಿನ್ನವಾಗಿ ತೋರಿಸಿದವು.

ಒಂದು ಕಡೆಯಂತೂ ನನ್ನ ಬುಲೆಟ್‌ನ ಟೈಯರ್‌ ನೀರಿನ ಮಧ್ಯದಲ್ಲಿ ಯಾವುದೋ ಕಲ್ಲಿಗೆ ಸಿಕ್ಕಿ ಹಾಕಿಕೊಂಡಿದ್ದರಿಂದ ಇಳಿದು ಅದನ್ನು ಗೇರ್‌ನಲ್ಲಿ ನಡೆಸಿಕೊಂಡು ದಾಟಿಸಿದಾಗ ಸುಸ್ತಾಗಿತ್ತು. ಶೂಸ್‌, ಸಾಕ್ಸ್‌ ಎಲ್ಲಾ ಒದ್ದೆಯಾಗಿ ಸ್ವಲ್ಪ$ಸಮಯ ವ್ಯರ್ಥವಾಯಿತು. ಕೊನೆಗೂ 105ಕಿಮೀ ದೂರವಿರುವ ಕೇಯ್ಲೊಂಗ್‌ ತಲುಪಲು ನಮಗೆ 4 ಘಂಟೆ ಬೇಕಾಯಿತು. ಸ್ಪಿತಿಯಲ್ಲಿ ಬ್ರಿಡ್ಜ್ ದಾಟಿದ ಮೇಲೆ ಚಹಾ ಕುಡಿಯಲು ನಿಲ್ಲಿಸಿದೆವು. 

ಧಾಬಾಗಳಂತೆ ಇರುವ ಎಲ್ಲಾ ಹೋಟೆಲ್‌ಗ‌ಳಲ್ಲೂ ಉಳಿಯುವ ವ್ಯವಸ್ಥೆ ಇತ್ತು. ತಲಾ 100 ರೂ.ನಂತೆ ಚಾರ್ಜ್‌ ಮಾಡುತ್ತಿದ್ದರು. ಪಾರ್ಕಿಂಗ್‌ ವ್ಯವಸ್ಥೆ ಸರಿಯಾಗಿ ಇಲ್ಲದಿದ್ದ ಕಾರಣ ಹಾಗೂ ಲಗೇಜ್‌ ತುಂಬಾ ಇರುವುದರಿಂದ ಕೇಯ್ಲೊಂಗ್‌ ನಗರದ ಒಳಗೆ ಹೋಗಿ ಯಾವುದಾದರೂ ಹೋಟೆಲ್‌ಗ‌ಳನ್ನು ಹುಡುಕೋಣ ಎಂದು ನಿರ್ಧರಿಸಿದೆವು.

ಮುಖ್ಯ ರಸ್ತೆಯಿಂದ ಒಳಗಡೆ ಹೊರಟು, ಕೇಯ್ಲೊಂಗ್‌ ಶಹರದಲ್ಲಿ ಹೋಗಿ ನೋಡಿದರೆ ಅದಿಂದು ಪುಟ್ಟ ಗುಡ್ಡಗಾಡು ಪ್ರದೇಶ. ಇರುವ ಎರಡು ಹೋಟೆಲ್‌ಗ‌ಳು ಫ‌ುಲ್‌ ಆಗಿದ್ದವು. ಮೊಬೈಲ್‌ ನೆಟ್‌ವರ್ಕ್‌ ಕೂಡ ಸಿಗುತ್ತಿರಲಿಲ್ಲ.

(ಮುಂದುವರೆಯುವುದು)

– ವಿಶ್ವಜಿತ್‌ ನಾಯಕ್‌

ಟಾಪ್ ನ್ಯೂಸ್

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

Mike Tyson: 58 ವರ್ಷದ ಬಾಕ್ಸಿಂಗ್‌ ದಂತಕಥೆ ಟೈಸನ್‌ಗೆ 27 ವರ್ಷದ ಪೌಲ್‌ ಎದುರು ಸೋಲು

ACC U-19 Asia Cup: ರಾಜ್ಯದ ಮೂವರು

ACC U-19 Asia Cup: ರಾಜ್ಯದ ಮೂವರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.