ಈ ಬಾರಿ ನಗರದ ಮೂರು ಕಡೆ “ಅವರೆ ಮೇಳ’
Team Udayavani, Jan 3, 2017, 11:50 AM IST
ಬೆಂಗಳೂರು: ಪ್ರತಿ ವರ್ಷ ನಗರದ ವಿವಿ ಪುರದ ಸಜ್ಜನ್‌ರಾವ್ ವೃತ್ತ ಬಳಿ ನಡೆಯುತ್ತಿದ್ದ “ಅವರೆ ಮೇಳ’ ಈ ಬಾರಿ ಮಲ್ಲೇಶ್ವರ ಹಾಗೂ ನಾಗರಬಾವಿ ಸೇರಿದಂತೆ ಮೂರು ಸ್ಥಳಗಳಲ್ಲಿ ನಡೆಯಲಿದೆ.
ಜನವರಿ 5ರಿಂದ 15 ರವರೆಗೆ ಸಜ್ಜನ್‌ರಾವ್ ವೃತ್ತದ ಬಳಿ ಹತ್ತು ದಿನಗಳ ಕಾಲ “ಅವರೆ ಮೇಳ’ ನಡೆಯಲಿದ್ದು, ಮೇಳದಲ್ಲಿ ಅವರೆ ಕಾಯಿಯಿಂದ ತಯಾರಿಸಿದ ಇಡ್ಲಿ, ದೋಸೆ, ಅವರೆ ಪಾಯಸ, ಅವರೆ ಚಕ್ಕುಲಿ, ನಿಪ್ಪಟ್ಟು ಸೇರಿದಂತೆ ಅವರೆಕಾಯಿಯ ಹಲವಾರು ಬಾಯೂರಿಸುವ ಪದಾರ್ಥಗಳು ಗ್ರಾಹಕರನ್ನು ಕೈ ಬೀಸಿ ಕರೆಯಲಿವೆ.
ಜ.18 ರಿಂದ 22 ರವರೆಗೆ ಮಲ್ಲೇಶ್ವರದ 18ನೇ ಕ್ರಾಸ್‌ನ ಸರಕಾರಿ ಶಾಲೆ ಮೈದಾನದಲ್ಲಿ ಅವರೆ ಮೇಳ ನಡೆಯಲಿದ್ದು, ಜ.25 ರಿಂದ 29ರವರೆಗೆ ನಾಗರಬಾವಿಯ ಚಂದ್ರಾ ಲೇಔಟ್ ಮುಖ್ಯರಸ್ತೆಯಲ್ಲಿ ಮೇಳ ಆಯೋಜಿಸಲಾಗಿದೆ.
ಸಜ್ಜನ್‌ರಾವ್ ವೃತ್ತದ ಬಳಿಯ ಅವರೆ ಮೇಳವನ್ನು ಕೇಂದ್ರ ಸಚಿವ ಅನಂತ್‌ಕುಮಾರ್ ಉದ್ಘಾಟನೆ ಮಾಡಲಿದ್ದು, ಮೇಯರ್ ಪದ್ಮಾವತಿ, ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ವಾಸವಿ ಕಾಂಡಿಮೆಂಟ್ಸ್‌ನ ಗೀತಾ ಶಿವಕುಮಾರ್ ಸೋಮವಾರದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮೇಳದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ಶಾಸಕ ಪ್ರಿಯಕೃಷ್ಣ, ವಿಧಾನ ಪರಿಷತ್ ಸದಸ್ಯೆ ತಾರಾ ವೇಣು, ವಿವಿಪುರಂನ ಬಿಬಿಎಂಪಿ ಸದಸ್ಯೆ ವಿ. ವಾಣಿ ರಾವ್, ದ್ವಾರಕನಾಥ್ ಗುರೂಜಿ, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಕೆ. ಮಂಜು ಸೇರಿದಂತೆ ಹಲವು ಗಣ್ಯರು ಸಹ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಮಲ್ಲೇಶ್ವರದಲ್ಲಿ ನಡೆಯಲಿರುವ ಅವರೇ ಮೇಳಕ್ಕೆ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಅಶ್ವತ್ಥ್ನಾರಾಯಣ್ ಚಾಲನೆ ನೀಡಲಿದ್ದಾರೆ. ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ.ಶರವಣ, ಬಿಬಿಎಂಪಿ ಸದಸ್ಯೆ ಲತಾ ನವೀನ್, ನಟ ರವಿಶಂಕರ್, ನಟಿ ವಂದನಾ ಪ್ರಿಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ನಾಗರಬಾವಿಯಲ್ಲಿ ನಡೆಯಲಿರುವ ಅವರೇ ಮೇಳವನ್ನು ವಸತಿ ಸಚಿವ ಕೃಷ್ಣಪ್ಪ ಹಾಗೂ ಶಾಸಕ ಪ್ರಿಯಕೃಷ್ಣ ಉದ್ಘಾಟಿಸಲಿದ್ದು, ಹಿರಿಯ ನಟ ರಮೇಶ್ ಭಟ್, ನಟರಾದ ಸೃಜನ್ ಲೋಕೇಶ್, ಯಶ್, ನಟಿ ರಚಿತಾರಾಮ್ ಸೇರಿದಂತೆ ಹಲವು ಕಲಾವಿದರು ಭಾಗವಹಿಸಲಿದ್ದಾರೆ ಎಂದರು.
ಅವರೆ ಮೇಳ
ಯಾವಾಗ? ಎಲ್ಲಿ?
* ಜ.5ರಿಂದ ಜ.15 ಸಜ್ಜನ್‌ರಾವ್‌ವೃತ್ತ, ವಿವಿ ಪುರ
* ಜ.18 ರಿಂದ ಜ.22 ಸರ್ಕಾರಿ ಆಟದ ಮೈದಾನ, ಮಲ್ಲೇಶ್ವರ
* ಜ.25 ರಿಂದ ಜ.29 ಚಂದ್ರಾ ಲೇಔಟ್ ಮುಖ್ಯರಸ್ತೆ, ನಾಗರಬಾವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್
Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.