15,000 ಕೋಟಿ ಮೌಲ್ಯದ ದಾವೂದ್ ಆಸ್ತಿ ಜಪ್ತಿ
Team Udayavani, Jan 4, 2017, 3:45 AM IST
ಹೊಸದಿಲ್ಲಿ: ಸಂಯುಕ್ತ ಅರಬ್ ಸಂಸ್ಥಾನ (ಯುಎಇ)ದಲ್ಲಿ ಮುಂಬಯಿ ಸ್ಫೋಟದ ರೂವಾರಿ ದಾವೂದ್‌ಗೆ ಸೇರಿದ 15,000 ಕೋ. ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಮಾಧ್ಯಮ ವರದಿಯೊಂದು ಮಂಗಳವಾರ ಹೇಳಿದೆ.
ದಾವೂದ್‌ಗೆ ಸೇರಿದ ಹೊಟೇಲ್‌ಗಳು, ಆಸ್ತಿಪಾಸ್ತಿ ಗಳು ಮತ್ತು ಷೇರುಗಳು ಇದರಲ್ಲಿ ಸೇರಿವೆ. ಇತ್ತೀಚಿನ ದಿನಗಳಲ್ಲಿ ಈತನ ಆಸ್ತಿಪಾಸ್ತಿಗಳ ಬಗ್ಗೆ ಯುಎಇ ಸರಕಾರ ತನಿಖೆ ಆರಂಭಿ ಸಿತ್ತು ಎಂದು ವರದಿ ತಿಳಿಸಿದೆ.
ಕಳೆದ ವರ್ಷ ಯುಎಇಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದಾಗ ದಾವೂದ್ ಚಟುವಟಿಕೆಗಳು, ಆಸ್ತಿಪಾಸ್ತಿಗಳ ಬಗ್ಗೆ ಯುಎಇ ಸರಕಾರಕ್ಕೆ ಪಟ್ಟಿ ನೀಡಿ ಬಂದಿದ್ದರು. “ಗೋಲ್ಡನ್ ಬಾಕ್ಸ್’ ಎಂಬ ಬೇನಾಮಿ ಕಂಪೆನಿ ದಾವೂದ್‌ಗೆ ಸೇರಿದೆ. ಸೋದರ ಅನೀಸ್ ಇಬ್ರಾಹಿಂ ಹೆಸರಲ್ಲೂ ಸಾಕಷ್ಟು ಆಸ್ತಿಪಾಸ್ತಿಗಳಿವೆ ಎಂದು ತಿಳಿಸಲಾಗಿತ್ತು. ಇದರ ಆಧಾರ ದಲ್ಲಿ ಈಗ ಯುಎಇ ಕ್ರಮ ಜರಗಿಸುತ್ತಿದೆ ಎನ್ನಲಾಗಿದೆ.
ದಾವೂದ್ ಮೊರಕ್ಕೋ, ಸ್ಪೇನ್, ಸಿಂಗಾಪುರ, ಥಾಯ್ಲೆಂಡ್, ಸೈಪ್ರಸ್, ಟರ್ಕಿ, ಭಾರತ, ಪಾಕಿಸ್ಥಾನ ಮತ್ತು ಬ್ರಿಟನ್‌ನಲ್ಲೂ ಸಾಕಷ್ಟು ಆಸ್ತಿಪಾಸ್ತಿ ಹೊಂದಿದ್ದಾನೆ. ಈತ ಸದ್ಯ ಪಾಕಿಸ್ಥಾನದ ಕರಾಚಿಯಲ್ಲಿ ಇದ್ದಾನೆ ಎನ್ನಲಾಗಿದೆ.
ಶೀಘ್ರ ದಾವೂದ್ ಭಾರತಕ್ಕೆ: ರಾಜನಾಥ್ ಸಿಂಗ್
ಹೊಸದಿಲ್ಲಿ: ಮುಂಬಯಿ ಸರಣಿ ಸ್ಫೋಟದ ಹಂತಕ, ದೇಶಕ್ಕೆ ಬೇಕಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ನನ್ನು ಬಂಧಿಸಿ ಸದ್ಯದಲ್ಲಿಯೇ ದೇಶಕ್ಕೆ ಕರೆತರುವುದಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಈಗಾಗಲೇ ಪ್ರಯತ್ನ ಸಾಗಿದ್ದು ಅದು ಫಲ ಕೊಡುವ ಹಂತದಲ್ಲಿದೆ.ಅಲ್ಲದೆ ನೂರಾರು ಅಮಾಯಕ ಜನರ ಸಾವಿಗೆ ಕಾರಣನಾದ ದಾವೂದ್‌ನನ್ನು ದೇಶಕ್ಕೆ ಹಸ್ತಾಂತರ ಮಾಡುವಂತೆ ಪಾಕ್ ಮೇಲೆ ಒತ್ತಡ ಮುಂದುವರಿಯಲಿದೆ. ಇದಲ್ಲದೆ ಪಾಕ್ ಮೂಲದ ಜೈಶ್ ಎ-ಮೊಹಮ್ಮದ್ ಸಂಘಟನೆಯ ಮೌಲಾನ ಮಸೂದ್ ಅಜರ್‌ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದೂ ಸಾರುವಂತೆ ಚೀನದ ಮೇಲೂ ಸರಕಾರ ಒತ್ತಡ ಹಾಕುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra;ಏಕನಾಥ್ ಶಿಂಧೆ ಡಿಸಿಎಂ ಹುದ್ದೆ ಸ್ವೀಕರಿಸುವುದಿಲ್ಲ ಎಂದ ಶಿವಸೇನೆ!
Punjab; ಗುಂಡಿನ ಚಕಮಕಿ ಬಳಿಕ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಇಬ್ಬರ ಬಂಧನ
Gautam Adani, ಸೋದರಳಿಯ ಸಾಗರ್ ವಿರುದ್ಧ ಲಂಚದ ಆರೋಪ ಇಲ್ಲ: ಅದಾನಿ ಗ್ರೂಪ್
Cyclone Fengal: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ತಮಿಳುನಾಡಲ್ಲಿ 3 ದಿನ ಭಾರೀ ಮಳೆ
Ayodhya: ರಾಮಮಂದಿರ ಪ್ರಾಣಪ್ರತಿಷ್ಠೆ ಸಂಭ್ರಮ ಜ.22ರ ಬದಲು 11ಕ್ಕೆ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Ullal: ಬಾವಿ, ಬೋರ್‌ವೆಲ್‌ನಲ್ಲಿ ತೈಲಮಿಶ್ರಿತ ನೀರು; ಸಮಸ್ಯೆ ಇರುವ ಮನೆಗಳಿಗೆ ಪೈಪ್‌ಲೈನ್
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Ola Gig Electric Scooter: ಕೇವಲ 40 ಸಾವಿರ ರೂಪಾಯಿಗೆ ನೂತನ ಶ್ರೇಣಿಯ ಓಲಾ ಸ್ಕೂಟರ್!
Sagara: ಮಿಡಿ ಮಾವು, ವಿಶ್ವವಿದ್ಯಾಲಯದ ನಡೆದಾಡುವ ವಿಶ್ವಕೋಶ ಬಿ.ವಿ.ಸುಬ್ಬರಾವ್ ಇನ್ನಿಲ್ಲ
Perla: ರಸ್ತೆ ವಿಸ್ತರಣೆ, ನೇತ್ರಾವತಿ ನದಿ ತಡೆಗೋಡೆ ದುರಸ್ತಿಗೆ ಆಗ್ರಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.