“ಸಾವಿತ್ರಿ ಬಾಯಿಫ‌ುಲೆ ದಲಿತರ ಪಾಲಿನ ಆಶಾಕಿರಣ’

Team Udayavani, Jan 4, 2017, 12:01 PM IST

savithribahai-phule.jpg

ಮಹದೇವಪುರ: ದಲಿತರೂ ಶಿಕ್ಷಣ ಪಡೆಯುವಂತೆ ಮಾಡಿದ ಮಹಾಚೇತನ ಸಾವಿತ್ರಿಬಾಯಿ ಫ‌ುಲೆ ಎಂದು ಪೆರಿಯಾರ್‌ ವಾದಿಯಾದ ಕಲೈಸೆಲ್ವಿ ತಿಳಿಸಿದರು. ಕ್ಷೇತ್ರದ ಬಿದರಹಳ್ಳಿಯಲ್ಲಿ ಕರ್ನಾಟಕ ದಲಿತ ಮಹಿಳ ಒಕ್ಕೂಟದ ವತಿಯಿಂದ ಸಾವಿತ್ರಿ ಬಾಯಿ ಪುಲೆಯವರ 186ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಜಾಗೃತಿ ದಿನವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಪ್ರಪಂಚದಲ್ಲಿ ಅತ್ಯುನ್ನತ ನಾಗರಿಕತೆಗಳಲ್ಲಿ ಒಂದಾದ ಸಿಂಧು ಮತ್ತು ಹರಪ್ಪ ನಾಗರಿಕತೆ ಭಾರತದ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ್ದ ಜನಾಂಗದವರದ್ದಾಗಿತ್ತು.

ಈ ನಾಗರಿಕತೆಯಲ್ಲಿ ಹೆಣ್ಣಿಗೆ ಗೌರವವಿತ್ತು, ಸಾಮಾಜಿಕ ನ್ಯಾಯವೂ ಇತ್ತು. ಆದರೆ, ಬೇರೆಡೆಯಿಂದ ಬಂದ ಆರ್ಯನ್ನರಾದ ಬ್ರಾಹ್ಮಣರು ಮತ್ತು ಮೇಲ್ವವರ್ಗವೆಂದು ಕರೆದುಕೊಳ್ಳುವ ಜನಾಂಗದವರು, ಪ್ರಪಂಚದ ಪ್ರಾಚೀನ ನಾಗರಿಕ ಜೀವನದ ಮೇಲೆ ದಾಳಿ ಮಾಡಿ ಕೆಳ ವರ್ಗವೆಂಬ ಭೇದ ಸೃಷ್ಟಿಸಿದ್ದಾರೆ. ಮನುಸ್ಮತಿ ಎಂಬ ಗ್ರಂಥವನ್ನು ಸರ್ವೋತ್ಛವೆಂದು ದಲಿತರ ಮೇಲೆ ಹೇರಿದ ಪೇಶ್ವೆಗಳು ತಮ್ಮದೇ ಆದ ದಬ್ಟಾಳಿಕೆಯ ನಿಯಮಗಳಿಂದ ಶೋಷಣೆಯ ಮೆರೆದಿದ್ದಾರೆ ಎಂದರು.

ದಲಿತರನ್ನು ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿ, ಹಿಂದುಳಿಯಲು ನೇರ ಕಾರಣರಾಗಿರುವ ಮೇಲ್ವರ್ಗದ ನೀತಿಗೆ ಎದೆಯೊಡ್ಡಿ ನಿಂತು ಸವಾಲೆಸೆದ ವೀರ ಮಹಿಳೆ ಸಾವಿತ್ರಿಬಾಯಿ ಫ‌ುಲೆ. ದಲಿತ ಕುಟುಂಬವೊಂದರಲ್ಲಿ ಜನಿಸಿದ ಅವರು ಬ್ರಾಹ್ಮಣರ ಧಮನ ನೀತಿಗಳನ್ನು  ವಿರೋಧಿಸುತ್ತ, ದಲಿತ ಮಕ್ಕಳಿಗೆ ಶಿಕ್ಷಣ ಸಿಗುವಂತೆ ಮತ್ತು ಸ್ವಾಭಿಮಾನದಿಂದ ಜೀವಿಸುವಂತೆ ಮಾಡಿದ ಮಹಾ ಚೇತನವೆಂದು ಬಣ್ಣಿಸಿದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಸದಸ್ಯ ಶ್ರೀಧರ್‌ ಕಲ್ವಿàರ್‌ ಮಾತನಾಡಿ, ಅಂಬೇಡ್ಕರರ ತಂದೆಯೂ ಸಹ ಸಾವಿತ್ರಿಬಾಯಿ ಫ‌ುಲೆ ನಿರ್ಮಿಸಿದ್ದ ಶಾಲೆಯಲ್ಲೇ ಶಿಕ್ಷಣ ಪಡೆದರು. ಈ ಮೂಲಕ ಸಾವಿತ್ರಿ ಬಾಫ‌ುಲೆ ಅಂಬೇಡ್ಕರರಂತಹ ಮಹಾನ್‌ ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸಲು ಪರೋಕ್ಷವಾಗಿ ಕಾರಣರಾದರು ಎಂದು ತಿಳಿಸಿದರು.
ಮಹಿಳಾ ಒಕ್ಕೂಟದ ಪ್ರಮುಖರಾದ ಅನಿತಾ, ಚನ್ನಸಂದ್ರ ಶೋಭಾ, ವಿಜಯಾಕುಮರಿ, ಎಂ. ಗೋವಿಂದರಾಜು ಸೇರಿದಂತೆ ಅನೇಕರಿದ್ದರು.

ಟಾಪ್ ನ್ಯೂಸ್

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.