![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Jan 4, 2017, 12:09 PM IST
ನವದೆಹಲಿ: ಹುಡುಗಿಯರಿಗೆ ಚುಡಾಯಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಅದನ್ನು ಎದುರಿಸಿ ನಿಲ್ಲುವವರು ಕಡಿಮೆ. ಅದರಲ್ಲೂ ಮತ್ತೂಬ್ಬರಿಗೆ ನೆರವಾಗುವ ಸಾಹಸ ಮಾಡುವವರು ಇನ್ನೂ ಕಡಿಮೆ. ಆದರೆ ಕಾಮನ್‌ವೆಲ್ತ್ ಚಿನ್ನದ ಪದಕ ವಿಜೇತೆ ಕೃಷ್ಣಾ ಪೂನಿಯಾ ಇದೆಲ್ಲದಕ್ಕೂ ಅಪವಾದವಾಗಿದ್ದಾರೆ. ಅವರು ಹುಡುಗರ ಕಾಟಕ್ಕೆ ತುತ್ತಾಗಿದ್ದ ಮೂವರು ಹುಡುಗಿಯರ ನೆರವಿಗೆ ಧಾವಿಸಿದ್ದಾರೆ. ಹುಡುಗರನ್ನು ಓಡಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಆಗಿದ್ದೇನು?
ಜ.1ರಂದು ರಾಜಸ್ಥಾನದ ಚುರು ಜಿಲ್ಲೆಯ ರಾಜಗಢದಲ್ಲಿ ಈ ಘಟನೆ ನಡೆದಿದೆ. 39 ವರ್ಷದ ಕೃಷ್ಣ ಪೂನಿಯಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲ್ವೇ ಕ್ರಾಸಿಂಗ್ ಸಮೀಪ ಒಂದಷ್ಟು ಹುಡುಗರು ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಕಾಣಿಸಿತು. ತಕ್ಷಣ ಕಾರು ನಿಲ್ಲಿಸಿ ಹತ್ತಿರ ಹೋಗಿ ಘಟನೆ ಏನೆಂದು ವಿಚಾರಿಸಿದರು. ಹುಡುಗರು ಕಿರುಕುಳ ನೀಡಿದ್ದನ್ನು, ಅದರಲ್ಲಿ ಒಬ್ಟಾಕೆ ಮೇಲೆ ಕೈ ಮಾಡಿದ್ದನ್ನು ಅಳುತ್ತಲೇ ವಿವರಿಸಿದರು. ತಕ್ಷಣ ಆ ಹುಡುಗರನ್ನು ಪೂನಿಯಾ ಅಟ್ಟಿಸಿಕೊಂಡು ಹೋದರು. ಅದರಲ್ಲಿ ಇಬ್ಬರು ಪರಾರಿಯಾದರೆ ಒಬ್ಬ ಕೈಗೆ ಸಿಕ್ಕ. ತಕ್ಷಣ ಆತನನ್ನು ಪೊಲೀಸರ ಕೈಗೆ ಒಪ್ಪಿಸಲಾಯಿತು.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2010ರ ಕಾಮನ್ ವೆಲ್ತ್ ಗೇಮ್ಸ್‌ನಲ್ಲಿ ಪೂನಿಯಾ ಚಿನ್ನದ ಪದಕ ಗೆದ್ದಿದ್ದಾರೆ. ಎರಡು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದಾರೆ.
ಕೇವಲ ಎರಡು ನಿಮಿಷದ ದಾರಿಯಲ್ಲಿ ಪೊಲೀಸ್ ಠಾಣೆಯಿದೆ. ಇಂತಹ ಸ್ಥಳದಲ್ಲಿಯೂ ಮಹಿಳೆಯರ ಮೇಲೆ ಕಿರುಕುಳ ನಡೆಯುತ್ತಿದೆ.
* ಕೃಷ್ಣಾ ಪೂನಿಯಾ
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.