ಸ್ಟಾರ್ಟ್‌ಅಪ್‌ನಿಂದ ಹೆಚ್ಚು ಉದ್ಯೋಗ ಸೃಷ್ಟಿ: ಗಣೇಶ್‌


Team Udayavani, Jan 4, 2017, 12:21 PM IST

startupp.jpg

ಮಹದೇವಪುರ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆಗಳ ಲ್ಲೊಂದಾದ ಸ್ಟಾರ್ಟ್‌ಅಪ್‌ಗೆ ಇಂದಿನ ಯುವಜನತೆ ಹೆಚ್ಚು ಆಕರ್ಷಿತರಾಗಿದ್ದಾರೆ. ಪ್ರತಿಭೆ ಅನಾವರಣದೊಂದಿಗೆ ಹೆಚ್ಚು ಉದ್ಯೋಗವೂ ಸೃಷ್ಟಿಯಾಗಲಿದೆ, ನಿರುದ್ಯೋಗ ಸಮಸ್ಯೆಗೂ ಪರಿಹಾರ ಲಭ್ಯವಾಗಲಿದೆ ಎಂದು ಗ್ಲೋಬಲ್‌ ಶಾಪ್ಪಿ ಡಾಟ್‌ ಕಾಂನ ಮುಖ್ಯಸ್ಥ ಗಣೇಶ್‌ ಭಟ್‌ ತಿಳಿಸಿದರು.

ಇಲ್ಲಿನ ಕಾಡುಗುಡಿ ಬಳಿಯ ಚನ್ನಸಂದ್ರದಲ್ಲಿ ನೂತನವಾಗಿ ಆರಂಭಗೊಳ್ಳುತ್ತಿರುವ ಗ್ಲೋಬಲ್‌ ಶಾಪ್ಪಿ ಡಾಟ್‌ ಕಾಂನ ಕಾರ್ಯವೈಖರಿ ಬಗ್ಗೆ ವಿವರಿಸಿದ ಅವರು, ಮಾರುಕಟ್ಟೆಯಲ್ಲಿ ಹಲವು ಆನ್‌ಲೈನ್‌ ವ್ಯಾಪರದಂತೆ ನಮ್ಮ ಸಂಸ್ಥೆ ಕಾರ್ಯನಿರ್ವಹಿಸುವುದಿಲ್ಲ. ಈ ವ್ಯಾಪಾರದ ಮುಖ್ಯ ಉದ್ದೇಶ ಉದ್ಯೋಗ ಸೃಷ್ಟಿ ಮತ್ತು ಗ್ರಾಹಕರಿಗೆ ತಾಜಾ ಹಾಗೂ ಅತಿ ಶೀಘ್ರವಾಗಿ ಅವಶ್ಯವಿರುವ ಪದಾರ್ಥಗಳನ್ನು ತಲುಪಿಸುವುದಾಗಿದೆ ಎಂದರು.

ಕರ್ನಾಟಕದ ಪ್ರತಿಯೊಂದು ಪಿನ್‌ಕೋಡ್‌ ವ್ಯಾಪ್ತಿಯ ಪ್ರದೇಶದಲ್ಲಿನ ಜನತೆಯ ಆರ್ಡ್‌ರನ್ನು ಸ್ವೀಕರಿಸುವ ನಮ್ಮ ಸಿಬ್ಬಂದಿ ಗ್ರಾಹಕರಿಂದ ಪಡೆದ ಆರ್ಡ್‌ರ್‌ಗೆ ಅನುಗುಣವಾದ ವಸ್ತುವನ್ನು ಕೇವಲ 4 ಗಂಟೆಯೊಳಗೆ ಸರಬರಾಜು ಮಾಡುತ್ತಾರೆ. ಗ್ರಾಹಕರಿಗೆ ನಾವು ತಲುಪಿಸಿದ ವಸ್ತುವಿನಲ್ಲಿ ಲೋಪದೋಷ ಕಂಡು ಬಂದರೆ ಸ್ಥಳದಲ್ಲೇ ಕೇವಲ ಒಂದು ಗಂಟೆಯೊಳಗೆ ಬೇರೆ ವಸ್ತುವನ್ನು ವಿನಿಮಯ ಮಾಡಿಕೊಡುವ ಸೌಲಭ್ಯವನ್ನು ನಮ್ಮ ಸಂಸ್ಥೆ ಕಲ್ಪಿಸಿದೆ. 

ಬೇರೆ ಆನ್‌ಲೈನ್‌ ವ್ಯವಹಾರಗಳಲ್ಲಿ ಲೋಪವಿರುವ ವಸ್ತುವನ್ನು ಬದಲಿಸಲು 10ರಿಂದ 15 ದಿನ ತೆಗೆದುಕೊಳ್ಳುವ ವ್ಯವಸ್ಥೆಯಿಂದ ಬೇಸತ್ತಿರುವ ಗ್ರಾಹಕರಿಗೆ ನಮ್ಮ ಸೇವೆ ಅನುಕೂಲವಾಗಲಿದೆ ಎಂದರು. ನಮ್ಮ ಸಂಸ್ಥೆಯು ಗ್ರಾಹಕರಿಗೆ ಅವಶ್ಯವಿರುವ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್‌ ವಸ್ತುಗಳು, ಗೃಹಪಯೋಗಿ ವಸ್ತುಗಳು, ಕಾಸೆಟಿಕ್ಸ್‌ ಸೇರಿದಂತೆ ಹಳೆಯ ಮತ್ತು ಹೊಸ ವಸ್ತುಗಳ ಮಾರಾಟವನ್ನು ಸಹ ಮಾಡಲು ಉದ್ದೇಶಿಸಿದೆ.

ಇದಲ್ಲದೆ ನಮ್ಮ ಸಂಸ್ಥೆ ಬಿಡುಗಡೆಗೊಳಿಸಿರುವ ಆನ್‌ಲೈನ್‌ ಆ್ಯಪ್‌ನಿಂದ ಗ್ರಾಹಕರಿಗೆ ನಮ್ಮಲ್ಲಿ ಲಭ‌ವಿರುವ ವಸ್ತುಗಳು ಕುರಿತ ಸಮಗ್ರ ಮಾಹಿತಿ ಸಿಗಲಿದೆ. ಗ್ರಾಹಕರು ತಾವು ತರೆಸಿಕೊಂಡು ವಸ್ತುವಿನ ಗುಣಮಟ್ಟವನ್ನು ಪರೀಕ್ಷಿಸಿದ ನಂತರವೇ ಹಣ ಪಾವತಿಸುವಂತ ಅವಕಾಶವನ್ನೂ ಸಹ ಕಲ್ಪಿಸಿದ್ದೇವೆ ಎಂದರು. ಕಂಪನಿಯ ನಿರ್ದೇಶಕರಾದ ರಾಜೇಶ್‌ ಚೌಧರಿ, ವಿಜಯ್‌ ಕುಮಾರ್‌ ಷಾ, ಆನಂದ್‌ ಮಾನ್‌ಬಾಂಗ್‌ತಾಯಿ, ಬಿಷ್ಣು ಕುಮಾರ್‌, ಸಾಮಾಜಿಕ ಕಾರ್ಯಕರ್ತ ರಫೀಕ್‌ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್‌ ಜೈಲಿಗೆ

BGv-Cong-Ses

Congress Session: “ಜೈ ಬಾಪು, ಜೈ ಭೀಮ, ಜೈ ಸಂವಿಧಾನ’ ಸಮಾವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kusuma-RR-Nagar

Egg Thrown: “ಮೊಟ್ಟೆ ಅಟ್ಯಾಕ್‌’ ಚಿತ್ರದ ರಚನೆ, ನಿರ್ಮಾಣ ಸ್ವತಃ ಅವರದ್ದೇ: ಕುಸುಮಾ

Nandini-Dosa

New Products KMF: ಮಾರುಕಟ್ಟೆಗೆ ಬಂತು “ನಂದಿನಿ’ ಇಡ್ಲಿ, ದೋಸೆ ಹಿಟ್ಟು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

6

Belthangady: ಜೈನ ಧರ್ಮಕ್ಕೆ ಅವಹೇಳನ; ದೂರು ದಾಖಲು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.