ಅರುಣಾಚಲ ಪ್ರದೇಶ, ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಭೂಕಂಪನ
Team Udayavani, Jan 4, 2017, 12:21 PM IST
ಹೊಸದಿಲ್ಲಿ : ಈಶಾನ್ಯ ಭಾರತದಲ್ಲಿ ಭೂಕಂಪನ ಮುಂದುವರಿದಿದೆ. ಇಂದು ನಸುಕಿನ ವೇಳೆ ಅರುಣಾಚಲ ಪ್ರದೇಶ ಹಾಗೂ ಭಾರತ-ಮ್ಯಾನ್ಮಾರ್ ಗಡಿ ಪ್ರದೇಶದಲ್ಲಿ, ರಿಕ್ಟರ್ ಮಾಪಕದಲ್ಲಿ 5.4 ಅಂಕಗಳಲ್ಲಿ ದಾಖಲಾಗಿರುವ, ಭೂಕಂಪನ ಅನುಭವಕ್ಕೆ ಬಂದಿದೆ. ಜೀವ ಹಾನಿ, ನಾಶ ನಷ್ಟದ ವರದಿಯಾಗಿಲ್ಲ
ರಿಕ್ಟರ್ ಮಾಪಕದಲ್ಲಿ 4.3 ಅಂಕಗಳ ತೀವ್ರತೆಯಲ್ಲಿ ದಾಖಲಾಗಿರುವ ಭೂಕಂಪನಗಳು ಭಾರತ-ಮ್ಯಾನ್ಮಾರ್ ಗಡಿಯಲ್ಲಿ ಉಂಟಾಗಿವೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಕೇಂದ್ರ ತಿಳಿಸಿದೆ.
ಅರುಣಾಚಲ ಪ್ರದೇಶದ ಕುರುಂಗ್ ಕುಮ್ನೇ ಜಿಲ್ಲೆಯಲ್ಲಿ ಬುಧವಾರ ನಸುಕಿನ 1 ಗಂಟೆ 20 ನಿಮಿಷ ಹೊತ್ತಿನಲ್ಲಿ ಭೂಕಂಪನಗಳು ಸಂಭವಿಸಿವೆ. ನಿನ್ನೆಯಷ್ಟೇ ಭಾರತ – ಬಾಂಗ್ಲಾ ಗಡಿಯಲ್ಲಿ, ತ್ರಿಪುರದ ಅಂಬಾಸಾದಲ್ಲಿ 5.7 ಅಂಕಗಳ ತೀವ್ರತೆಯ ಭೂಕಂಪ ಸಂಭವಿಸಿತ್ತು. ಅಗರ್ತಲಾದಿಂದ ಸುಮಾರು 59 ಕಿಮೀ.ದೂರದಲ್ಲಿ ಅಂಬಾಸಾ ಇದೆ.
ವಿಶ್ವದ ಆರನೇ ಪ್ರಮುಖ ಭೂಕಂಪಗ್ರಸ್ತ ಪಟ್ಟಿ ಎಂದು ಪರಿಗಣಿಸಲ್ಪಟ್ಟಿರುವ ಭಾರತದ ಈಶಾನ್ಯ ಭಾಗದ ಅಸ್ಸಾಂ, ಮೇಘಾಲಯ, ಮಿಜೋರಾಂ, ತ್ರಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮಣಿಪುರ ರಾಜ್ಯಗಳಲ್ಲಿ ಭೂಕಂಪಗಳು ಆಗೀಗ ಎಂಬಂತೆ ಸಂಭವಿಸುತ್ತಲೇ ಇರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.