ರೇಶನ್‌ ಬದಲು ಹಣ ಈ ತಿಂಗಳು ಅನುಮಾನ


Team Udayavani, Jan 5, 2017, 9:58 AM IST

04-ST-1.jpg

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಅನ್ನಭಾಗ್ಯ’ ಯೋಜನೆಯನ್ನು “ನಗದು ಭಾಗ್ಯ’ ಕಾರ್ಯಕ್ರಮವಾಗಿ ಪರಿವರ್ತಿಸಿ ಮೂರು ಜಿಲ್ಲೆಗಳ ಆಯ್ದ ಪಡಿತರದಾರರಿಗೆ ಜಾರಿಗೊಳಿಸುವ ಪ್ರಯತ್ನ ಈ ತಿಂಗಳು ಜಾರಿಯಾಗುವುದು ಅನುಮಾನವಾಗಿದೆ.

ಜನವರಿಯಿಂದ ಪ್ರಾಯೋಗಿಕವಾಗಿ ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ಮೂರು ಸಾವಿರ ಪಡಿತರ ಕಾಡ್‌ ìದಾರರಿಗೆ ಆಹಾರ ಧಾನ್ಯಗಳ ಕೂಪನ್‌ ಬದಲಿಗೆ “ನಗದು ಕೂಪನ್‌’ ವಿತರಿಸುವ ಬಗ್ಗೆ ಸರ್ಕಾರ ತೀರ್ಮಾನಿಸಿತ್ತಾದರೂ ಅದಕ್ಕೆ ಬೇಕಾದ ಸಾಫ್ಟ್ವೇರ್‌ ಇನ್ನೂ ಸಿದ್ಧವಾಗಿಲ್ಲ. ಇದರ ಜವಾಬ್ದಾರಿ ಹೊತ್ತಿದ್ದ ನ್ಯಾಷನಲ್‌ ಇನ್‌ಫಾರ್ಮೇಷನ್‌ ಸೆಂಟರ್‌ (ಎನ್‌ಐಸಿ) ಸಾಫ್ಟ್ವೇರ್‌ ಸಿದ್ಧಪಡಿಸಲು ವಿಳಂಬ ಮಾಡಿದ್ದರಿಂದ ಯೋಜನೆ  ಜಾರಿಗೊಳಿಸುವ ಕುರಿತು ಇನ್ನೂ ಅಂತಿಮನಿರ್ಧಾರಕ್ಕೆ ಬರಲಾಗಿಲ್ಲ.

ಇನ್ನು ನಾಲ್ಕೈದು ದಿನಗಳಲ್ಲಿ ಎನ್‌ ಐಸಿ ಸಾಫ್ಟ್ವೇರ್‌ ಸಿದ್ಧಪಡಿಸಿ ನೀಡಿದರೆ ಈ ತಿಂಗಳಲ್ಲೇ ಮೂರು ಜಿಲ್ಲೆಗಳ 3-4 ನ್ಯಾಯಬೆಲೆ ಅಂಗಡಿಗಳಲ್ಲಿ ನಗದು ಕೂಪನ್‌ ವಿತರಿಸುವ ಯೋಜನೆ ಜಾರಿಗೆ ತರಲಾಗುವುದು. ಇಲ್ಲದೇ ಇದ್ದರೆ ಫೆಬ್ರವರಿಯಿಂದ
ಜಾರಿಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ಹರ್ಷಗುಪ್ತಾ ತಿಳಿಸಿದ್ದಾರೆ.

ಸಾಫ್ಟ್ವೇರ್‌ ಸಿದ್ಧವಾದ ಬಳಿಕ ಕುಟುಂಬದ ಹೆಣ್ಣುಮಗಳು ನಿಗದಿಪಡಿಸಿದ ಕೇಂದ್ರಕ್ಕೆ ಹೋಗಿ ತಮ್ಮ ಬೆರಳಚ್ಚು ನೀಡಿ ನಗದು ಕೂಪನ್‌ ಪಡೆಯಬೇಕಾಗುತ್ತದೆ. ಜತೆಗೆ ತರಾತುರಿಯಲ್ಲಿ ಯೋಜನೆ ಜಾರಿಗೆ ತಂದರೆ ಅದು ಮತ್ತೂಂದು ಸಮಸ್ಯೆಗೆ ಅವಕಾಶವಾಗುವ ಸಾಧ್ಯತೆ ಇದೆ. ಹೀಗಾಗಿ ಫೆಬ್ರವರಿಯಿಂದಲೇ ಜಾರಿಗೆ ತರುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದ್ದು, ಸಾಫ್ಟ್ವೇರ್‌ ಸಿದ್ಧವಾಗಿ ಬಂದ ಬಳಿಕವಷ್ಟೇ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ನಗದು ಕೂಪನ್‌ ಯೋಜನೆ ಜಾರಿಗಾಗಿ ಇದಕ್ಕಾಗಿ ಆಹಾರ ಇಲಾಖೆಯು ಖಾಸಗಿ ಚಿಲ್ಲರೆ ಅಥವಾ ಸಗಟು ಆಹಾರಧಾನ್ಯ ಮಾರಾಟ ಮಳಿಗೆಗಳನ್ನು (ಪ್ರಾವಿಷನ್‌ ಸ್ಟೋರ್) ನೋಂದಣಿ ಮಾಡಿಕೊಳ್ಳುತ್ತದೆ. ಅಂತಹ ಅಂಗಡಿಗಳಿಗೆ ಹೋಗಿ ಕೂಪನ್‌ ಕೊಟ್ಟು ಅದರ ಮೌಲ್ಯಕ್ಕೆ ಯಾವುದೇ ಆಹಾರ ಧಾನ್ಯ ಖರೀದಿಸಲು ಅವಕಾಶ ಇರುತ್ತದೆ. ಉತ್ತಮ ಗುಣಮಟ್ಟದ ಅಕ್ಕಿ, ಬೇಳೆ, ಬೆಲ್ಲ ಪಡೆದು ಕೂಪನ್‌ ಹಣದ ಜತೆಗೆ ವೈಯಕ್ತಿಕವಾಗಿಯೂ ಹಣ ಪಾವತಿಸಬಹುದು. ನಗದು ಕೂಪನ್‌ ಬೇಡ ಎನ್ನುವವರು ಆಹಾರ ಧಾನ್ಯಗಳ ಕೂಪನ್‌ ಬೇಕಾದರೂ ಪಡೆಯಬಹುದು. ಉದಾಹರಣೆಗೆ ಒಂದು ಕುಟುಂಬದಲ್ಲಿ ಐದು ಮಂದಿ ಸದಸ್ಯರಿದ್ದರೆ ಪ್ರತಿ ತಿಂಗಳು 800 ರೂ. ಮೌಲ್ಯದ ನಗದು ಕೂಪನ್‌ ದೊರೆಯಲಿದೆ. ಸದಸ್ಯರ ಸಂಖ್ಯೆ ಆಧಾರದ ಮೇಲೆ ಕೂಪನ್‌ನ ಮೊತ್ತ ಸಿಗಲಿದೆ. 

ಪಡಿತರ ಚೀಟಿ ವಿತರಣೆ 3 ದಿನದಲ್ಲಿ ಪುನಾರಂಭ 

ಈ ಮಧ್ಯೆ ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಂಡಿದ್ದ ಪಡಿತರ ಕಾರ್ಡ್‌ ವಿತರಣೆ ಕಾರ್ಯವನ್ನು ಇನ್ನು ಮೂನಾಲ್ಕು ದಿನಗಳಲ್ಲಿ ಆರಂಭ ಮಾಡಲು ಇಲಾಖೆ ತೀರ್ಮಾನಿಸಿದೆ. ಕಳೆದ ಅಕ್ಟೋಬರ್‌ನಿಂದಲೇ ಕಾರ್ಡ್‌ ವಿತರಣೆ ಆರಂಭಿಸುವ ಉದ್ದೇಶ ಇತ್ತಾದರೂ ಎನ್‌ಐಸಿಯಿಂದ ಸಾಫ್ rವೇರ್‌ ಸಿದ್ಧಗೊಳ್ಳುವುದು ತಡವಾಗಿತ್ತು. ಹೀಗಾಗಿ ಜನವರಿಯಿಂದ ಕಾರ್ಡ್‌ ವಿತರಿಸಲು ತೀರ್ಮಾನಿಸಲಾಗಿತ್ತು. ಇದೀಗ ಸಾಫ್ಟ್ವೇರ್‌ ಸಿದ್ಧವಾಗಿದ್ದು, ಇನ್ನು 2-3 ದಿನಗಳಲ್ಲಿ ಎಪಿಎಲ್‌ ಕಾಡ್‌ ìಗೆ ಅರ್ಜಿ ಸ್ವೀಕಾರ ಮತ್ತು ಕಾರ್ಡ್‌ ವಿತರಣೆ ಆರಂಭಿಸಲಾಗುವುದು. ಇದಾಗಿ 10 ದಿನಗಳ ನಂತರ ಬಿಪಿಎಲ್‌ ಕಾರ್ಡ್‌ ವಿತರಣೆ
ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಪಿಎಲ್‌ ಕಾರ್ಡ್‌ಗೆ ಆಧಾರ್‌ ಕಡ್ಡಾಯ. ಎಪಿಎಲ್‌ ಕಾರ್ಡ್‌ ಬೇಕಾದವರು ತಮ್ಮ ಮನೆಯಲ್ಲೇ ಕುಳಿತು ಸ್ವಯಂ ಘೋಷಣೆ ಮಾಡಿ ನೋಂದಣಿ ಮಾಡಿ ಕಾರ್ಡ್‌ (ಪ್ರಿಂಟ್‌ಔಟ್‌) ಪಡೆಯಬಹುದು. ಶಾಶ್ವತ ಕಾರ್ಡ್‌ ಬೇಕಾದರೆ ಸ್ಪೀಡ್‌ ಪೋಸ್ಟ್‌ಗೆ 100 ರೂ. ಹಾಗೂ ಕಾರ್ಡ್‌ ಮುದ್ರಣ ಶುಲ್ಕ ಭರಿಸಬೇಕಾಗುತ್ತದೆ. ಅದೇ ರೀತಿ  ಬಿಪಿಎಲ್‌ ಕಾರ್ಡ್‌ಗಳಿಗೆ ಪಂಚಾಯತ್‌ ಅಧಿಕಾರಿ ಅಥವಾ ಪಾಲಿಕೆಗಳಲ್ಲಿ
ವಾರ್ಡ್‌ ಮಟ್ಟದ ಅಧಿಕಾರಿಗೆ ಅರ್ಜಿ ಸಲ್ಲಿಸಿ ಆಧಾರ್‌ ಕಾರ್ಡ್‌ ಹಾಗೂ ಕುಟುಂಬ ಸದಸ್ಯರ ಬೆರಳಚ್ಚು ಸಲ್ಲಿಸಿದರೆ ಹದಿನೈದು ದಿನಗಳಲ್ಲಿ ಕಾರ್ಡ್‌ ಮನೆಗೆ ತಲುಪಲಿದೆ. ಅಷ್ಟರಲ್ಲಿ ಇಲಾಖೆ ಅಧಿಕಾರಿಗಳು ತಪಾಸಣೆ ಮತ್ತು ದಾಖಲೆ ಪರಿಶೀಲನೆ ಮಾಡಿ ಕಾರ್ಡ್‌ 
ಸಿದ್ಧಪಡಿಸಿಕೊಡಲಿದ್ದಾರೆ.

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

CM DCM

Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್‌?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.