ಪುಷ್ಪಕ ಬಾನಯಾನ ನೂರರ ಆಕಾಶದಲ್ಲಿ ರಮೇಶ್ ನಕ್ಷತ್ರ
Team Udayavani, Jan 5, 2017, 11:20 AM IST
ರಮೇಶ್ ಅರವಿಂದ್ ಅಭಿನಯದ ನೂರನೇ ಚಿತ್ರ “ಪುಷ್ಪಕ ವಿಮಾನ’ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಯಾವುದೇ ಒಬ್ಬ ಕಲಾವಿದನಿಗೂ, ನೂರನೆಯ ಚಿತ್ರ ಎಂದರೆ ಅದೊಂದು ಮೈಲಿಗಲ್ಲು. ರಮೇಶ್ ಅರವಿಂದ್ ಅವರಿಗೆ ಅದೊಂದು ಮೈಲಿಗಲ್ಲು ಎನ್ನುವುದಕ್ಕಿಂತ ಅದೊಂದು ವಿಭಿನ್ನ ಚಿತ್ರ ಎಂಬ ಖುಷಿ ಇದೆ. ಅದೇ ಕಾರಣಕ್ಕೆ “ಪುಷ್ಪಕ ವಿಮಾನ’ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಅವರು. ಈ ನಿರೀಕ್ಷೆ, ಕುತೂಹಲ, ತವಕ, ತಲ್ಲಣ, ಸಂತೋಷಗಳ ಜೊತೆಗೇ ಅವರು ಈ ಚಿತ್ರದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಅದೊಂದು ದಿನ ಐವರು ಹುಡುಗರು, ರಮೇಶ್ ಅರವಿಂದ್ ಅವರ ಅಪಾಯಿಂಟ್‌ಮೆಂಟ್ ಪಡೆದು ಅವರ ಮನೆಗೆ ಬಂದಿದ್ದರಂತೆ. “ಅದೇ ಸೋಫಾದಲ್ಲಿ ಕುಳಿತಿದ್ದರು ಅವರು. ತುಂಬಾ ನರ್ವಸ್ ಆಗಿದ್ದರು. ಎಲ್ಲರೂ ಹೊಸಬರೇ. ಸೋಫಾ ಎಡ್ಜ್ನಲ್ಲಿ ಕೂತಿದ್ದರು. ಒಂದು ಕಥೆ ಇದೆ ಎಂದರು. ಮಧ್ಯೆಮಧ್ಯೆ ಏನೇನೋ ಪೀಠಿಕೆ ಹಾಕುತ್ತಿದ್ದರು. ಮೊದಲು ಕಥೆ ಹೇಳಿ, ಇಷ್ಟ ಆದರೆ ಮುಂದೆ ನೋಡೋಣ ಅಂತ ಹೇಳಿದೆ. ಅದರಲ್ಲಿ ಒಬ್ಬರು ಕಥೆ ಹೇಳಿದರು.
ಕಥೆ ಕೇಳಿದಾಕ್ಷಣ ಇಷ್ಟಾ ಆಯಿತು. ಇಷ್ಟು ವರ್ಷಗಳಾಗಿವೆ, ಇಷ್ಟೊಂದು ಸಿನಿಮಾಗಳನ್ನು ಮಾಡಿದ್ದೀನಿ. ಈ ತರಹದ್ದೊಂದು ಪಾತ್ರ ಬೇಕಿತ್ತು. ಚಿತ್ರದಲ್ಲಿರುತ್ತೀನಿ ಎಂದು ಹೇಳಿದೆ. ಈ ಚಿತ್ರವನ್ನ ಯಾರು ನಿರ್ದೇಶಿಸುತ್ತಾರೆ ಎಂದು ಕೇಳಿದಾಗ, ಅಲ್ಲಿದ್ದವರೊಬ್ಬರನ್ನು ಎಲ್ಲಾ ತೋರಿಸಿ, ಇವರೇ ನಿರ್ದೇಶಕರು ಎಂದರು. ಅವರನ್ನು ರವಿ ಅಂತ ಪರಿಚಯ ಮಾಡಿಕೊಟ್ಟರು. ನಾನು ಫುಲ್ ರೀಡಿಂಗ್ ಕೊಡಿ ಎಂದೆ. ಅವರು ಒಂದು ತಿಂಗಳು ಟೈಮ್ ತೆಗೆದುಕೊಂಡರು. ಒಂದು ತಿಂಗಳಿಗೆ ಸರಿಯಾಗಿ ಫೋನ್ ಬಂತು …’
ಹೀಗೆ ಹೇಳುತ್ತಾ ಹೋದರು. “ಪುಷ್ಪಕ ವಿಮಾನ’ ಬಗ್ಗೆ ಹೇಳಿರಿ ಎಂದಾಕ್ಷಣ, ಅವರು ಚಿತ್ರತಂಡದವರು ತಮ್ಮ ಮನೆಗೆ ಬಂದು ಕಥೆ ಹೇಳಿದ್ದಲ್ಲಿಂದ ಶುರು ಮಾಡಿದರು. ಅಲ್ಲಿಂದ ಶುರುವಾದ ಅವರ ಮಾತು, ಚಿತ್ರದ ಬಿಡುಗಡೆಯವರೆಗೂ ಮುಂದುವರೆಯುತ್ತದೆ. ಹೇಗೆ ಶುರುವಾಯ್ತು, ಆಮೇಲೆ ಏನೆಲ್ಲಾ ಆಯ್ತು ಎಂದು ವಿವರವಾಗಿ ಹೇಳುತ್ತಾರೆ ರಮೇಶ್. “ಅದೊಂದು ದಿನ ರೀಡಿಂಗ್ ಕೊಡಿ ಎಂದು ಕರೆದೆ. ಬೆಳಿಗ್ಗೆ 7ಕ್ಕೆ ಎಲ್ಲಾ ರೆಡಿಯಾಗಿ ಬಂದಿದ್ದರು.
ಡೈಲಾಗ್ ಸಮೇತ ಫುಲ್ ರೀಡಿಂಗ್ ಕೊಟ್ಟರು. ನನಗೆ ಅವರ ಉತ್ಸಾಹ ಇಷ್ಟವಾಯಿತು. ಒಂದು ತಿಂಗಳ ಸಮಯ ಕೇಳಿ, ಅಷ್ಟರಲ್ಲಿ ಸರಿಯಾಗಿ ರೆಡಿಯಾಗಿ ಬಂದಿದ್ದರು. ಅವರ ಉತ್ಸಾಹ ಒಂದು ಕಡೆ, ಇನ್ನೊಂದು ಕಡೆ ಅವರು ಮಾಡಿಕೊಂಡು ಬಂದ ಕೆಲಸ … ಇವೆರಡರಿಂದ ಖುಷಿಯಾಗಿ, ಚಿತ್ರದಲ್ಲಿ ನಟಿಸುತ್ತೀನಿ ಎಂದೆ. ಅಲ್ಲಿಂದ ಕೆಲಸ ಶುರು ಆಯ್ತು. ಅನಂತರಾಮಯ್ಯನ ಪಾತ್ರಕ್ಕೆ ನಾನೊಂದು ಕಡೆ ತಯಾರಿ ಮಾಡಿಕೊಳ್ಳುತ್ತಿದ್ದೆ. ಇನ್ನೊಂದು ಕಡೆ ಹುಡುಗರೆಲ್ಲಾ ಟ್ರೇಲರ್ ಶೂಟ್ ಮಾಡೋದಕ್ಕೆ ಪ್ಲಾನ್ ಮಾಡುತ್ತಿದ್ದರು …’
“ಅದೊಂದು ದಿನ ಟ್ರೇಲರ್ ಶೂಟ್ ಅಂತಾಯ್ತು. ಹೊಸಬರಲ್ಲಿ ಟೆನ್ಶನ್ ಎದ್ದು ಕಾಣುತಿತ್ತು. ಸೆಟ್ ಇನ್ನೂ ತಯಾರಾಗಿರಲಿಲ್ಲ. ಬೇರೆ ಏನಾದರೂ ಮಾಡಬೇಕು ಎಂದು ಅಲ್ಲಿಂದ ಇಲ್ಲಿಯವರೆಗೂ ಮಾರ್ಚ್ ಫಾಸ್ಟ್ ಮಾಡಿಕೊಂಡು ಬನ್ನಿ ಎಂದರು. ಬಂದೆ, ಅದೇ ಐಕಾನಿಕ್ ಆಗಿ ಹೋಯ್ತು. ಅಲ್ಲಿಂದ ಒಂದೊಂದೇ ಶಾಟ್ ತೆಗೆಯುತ್ತಾ ಹೋದರು. ಪ್ರತಿಯೊಂದು ದೃಶ್ಯ ಸಹ ಚೆನ್ನಾಗಿ ಬರುತಿತ್ತು. ಶೂಬಿಂದ ಮೀನು ಬೀಳುವ ದೃಶ್ಯ ಇತ್ತಲ್ಲ, ಅದು ಮುಂಚೆ ಬೇರೆ ಇತ್ತು.
ಬೇರೆ ಏನಾದರೂ ಮಾಡೋನ, ಒಂದು ಮೀನು ಸಿಗುತ್ತಾ ಎಂದೆ. ಹತ್ತು ನಿಮಿಷದಲ್ಲಿ ಕೈಲಿ ಮೀನಿತ್ತು. ಸಾಮಾನ್ಯವಾಗಿ ಏನಾದರೂ ಕೇಳಿದರೆ, ಆಗಲ್ಲಾ ಅಂತಾರೆ. ಏನೇನೋ ಸಬೂಬುಗಳು ಬರುತ್ತವೆ. ಆದರೆ, ಈ ತಂಡದವರು ಮಾತ್ರ ಸೀನ್ ಬ್ಯೂಟಿಗೆ ಏನು ಬೇಕಾದರೂ ಮಾಡುವುದಕ್ಕೆ ತಯಾರಾಗುತ್ತಿದ್ದರು. ಜೈಲು ದೃಶ್ಯಗಳಿವೆಯಲ್ಲಾ, ಅದಕ್ಕಾಗಿ ಒಂದು ದೊಡ್ಡ ಸೆಟ್ ಹಾಕಿಸಿಬಿಟ್ಟಿದ್ದರು …’ ತಂಡದ ಬಗ್ಗೆ ಖುಷಿಯಿಂದ ಹೇಳುತ್ತಾ ಹೋದರು ರಮೇಶ್. “ಹೋಗಿ ನೋಡಿದರೆ ಫುಲ್ ಸೆಟ್ ಹಾಕಿಸಿದ್ದಾರೆ. ಚಿತ್ರದ ಬಹುತೇಕ ಚಿತ್ರೀಕರಣ ಅಲ್ಲೇ ನಡೆಯಿತು.
ಒಟ್ಟು 40 ದಿನಗಳ ಕಾಲ ಚಿತ್ರಕ್ಕೆ ಚಿತ್ರೀಕರಣ ಮಾಡಿದ್ದೇವೆ. ಎಲ್ಲವನ್ನೂ ಚೆನ್ನಾಗಿ ಮಾಡಬೇಕು ಎಂಬ ಆಸೆಯಿಂದ ಚಿತ್ರ ಮಾಡಿದ್ದಾರೆ. ಅಲ್ಲಿದ್ದವರೆಲ್ಲಾ ಫಾರಿನ್ ಸಿನಿಮಾ ನೋಡಿಕೊಂಡವರು. ಬೇರೆಬೇರೆ ಚಿತ್ರಗಳ ಫ್ರೆಮ್ಸ್, ಲೈಟಿಂಗ್, ಕಲರ್‌ಗಳನ್ನ ರೆಫೆರೆನ್ಸ್ ಆಗಿ ತೋರಿಸಬಲ್ಲವರು. ಹಾಗಾಗಿ ಪ್ರತಿಯೊಂದು ದೃಶ್ಯಕ್ಕೂ ಒಂದೊಂದು ವಿಷಯವನ್ನು ಆ್ಯಡ್ ಮಾಡುತ್ತಾ ಮಾಡುತ್ತಾ ಇವತ್ತು ಈ ಚಿತ್ರ ರೂಪುಗೊಂಡಿದೆ. ನನಗೆ ನಿಜವಾಗಲೂ ಈ ಚಿತ್ರದ ಬಗ್ಗೆ ಹೆಮ್ಮೆ ಇದೆ. ಚಿತ್ರದಲ್ಲಿ ಸಂಗೀತ, ಅಭಿನಯ, ಛಾಯಾಗ್ರಹಣ ಎಲ್ಲವೂ ಚೆನ್ನಾಗಿದೆ’ ಎನ್ನುತ್ತಾರೆ ರಮೇಶ್.
ಅವರು ಹೇಳುವಂತೆ ಇದೊಂದು ಸಂಬಂಧಗಳ ಸಂಭ್ರಮಿಸುವ ಕಥೆಯಂತೆ. “ಪ್ರತಿ ಚಿತ್ರ ಹೀರೋ ಮತ್ತು ಹೀರೋಯಿನ್ ಸಂಬಂಧದ ಕಥೆ ಹೇಳಿದರೆ, ಇಲ್ಲಿ ತಂದೆ-ಮಗಳ ಸಂಬಂಧದ ಕಥೆ ಇದೆ. ಇದೊಂದು ಹೃದಯ ಮುಟ್ಟುವ ಚಿತ್ರ. ನಿಮ್ಮಲ್ಲಿರುವ ನವಿರಾದ ಭಾವನೆಯನ್ನು ತಟ್ಟುವ ವಿಷಯ ಈ ಚಿತ್ರದಲ್ಲಿದೆ. ಇಲ್ಲಿ ಅನಂತರಾಮಯ್ಯ ಎಂಬ ಪಾತ್ರ ಮಾಡಿದ್ದೀನಿ. ಕಪಟ ಗೊತ್ತಿರದ, ಪರಿಶುದ್ಧ ಮನಸ್ಸಿನ ಪಾತ್ರವಾದು. ಅವನ ಮುಗ್ಧ ಪ್ರಪಂಚಕ್ಕೆ ಸಿಡಿಲು ಹೊಡೆದರೆ ಏನಾಗತ್ತೆ ಎನ್ನುವುದು ಚಿತ್ರದ ಕಥೆ’ ಎನ್ನುತ್ತಾರೆ ರಮೇಶ್. ಅದರ ಜೊತೆಗೆ ಇಂಥದ್ದೊಂದು ಚಿತ್ರವನ್ನು ನೋಡಿ, ಪ್ರೋತ್ಸಾಹಿಸಬೇಕು ಎನ್ನುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.