ಸಂಚಿತ ವೇತನಕ್ಕಾಗಿ ಒತ್ತಾಯಿಸಿ ಸಫಾಯಿ ಕರ್ಮಚಾರಿಗಳ ಧರಣಿ

Team Udayavani, Jan 5, 2017, 12:33 PM IST

hub2.jpg

ಧಾರವಾಡ: ಸಂಚಿತ ವೇತನಕ್ಕಾಗಿ ಆಗ್ರಹಿಸಿ ಕವಿವಿ ಸಫಾಯಿ ಕರ್ಮಚಾರಿಗಳು ವಿವಿ ಆಡಳಿತ ಕಚೇರಿ ಎದುರು ಮಂಗಳವಾರದಿಂದ ಧರಣಿ ಆರಂಭಿಸಿದ್ದು, ಮೊದಲ ದಿನವೇ ರಕ್ತ ಪತ್ರ ಚಳವಳಿ ಕೈಗೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. 

ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ, ಪಂಗಡಗಳ ಪೌರ ಕಾರ್ಮಿಕರ ಹಾಗೂ ನೌಕರರ ಸಂಘದ ನೇತೃತ್ವದಲ್ಲಿ ಧರಣಿ ಕೈಗೊಂಡಿರುವ ಕವಿವಿಯಲ್ಲಿ ಕೆಲಸ ಮಾಡುವ 70 ಸಫಾಯಿ ಕರ್ಮಚಾರಿಗಳು ರಕ್ತದಿಂದ ಪತ್ರ ಬರೆದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಅವರಿಗೆ ಪತ್ರಗಳನ್ನು ರವಾನಿಸಿದ್ದಾರೆ.

ಕವಿವಿ ಕುಲಪತಿ ಹಾಗೂ ಕುಲಸಚಿವರು ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದು, ಈ ಕಾರಣದಿಂದ ಸಫಾಯಿ ಕರ್ಮಚಾರಿಗಳನ್ನು ಸಂಚಿತ ವೇತನದಿಂದ ವಂಚಿತಗೊಳಿಸಿ ದೂರ ಇಡಲಾಗಿದೆ. ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರೇ 3 ಸಲ ಸಭೆ ಕೈಗೊಂಡು ಸರಕಾರದ ಆದೇಶದ ಅನ್ವಯ ಸಂಚಿತ ವೇತನ ನೀಡುವಂತೆ ಸೂಚಿಸಿದ್ದರೂ ಈವರೆಗೂ ಕವಿವಿ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಲಕ್ಷéವಹಿಸಿಲ್ಲ ಎಂದು ದೂರಲಾಗಿದೆ.

ಕಾರ್ಮಿಕರಿಗೆ ಈವರೆಗೂ ಬಾಕಿ ವೇತನ ನೀಡದೇ ಕಾರ್ಮಿಕ ಕಾಯ್ದೆ ಸಹ ಅನುಷ್ಠಾನಗೊಳಿಸದೇ ಸೌಲಭ್ಯಗಳಿಂದ ವಂಚಿತಗೊಳಿಸಲಾಗಿದೆ. ಇದೆಲ್ಲದರ ಕುರಿತು ಎಸ್‌ಸಿ, ಎಸ್‌ಟಿ ಆಯೋಗ, ಸಚಿವರು ಹಾಗೂ ಉನ್ನತ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆಗೂ ಮನವಿ ಸಲ್ಲಿಸಲಾಗಿದೆ.  

ಸರಕಾರ ಆದೇಶ ನೀಡಿದ್ದರೂ ಅದಕ್ಕೆ ಮಣೆ ಹಾಕದೇ ವಿವಿ ಹೊಸದಾಗಿ ಟೆಂಡರ್‌ ಕರೆದು ನ್ಯಾಯಯುತ ಹಕ್ಕುಗಳನ್ನು ಕೇಳುತ್ತಿರುವ ದಲಿತ ಕಾರ್ಮಿಕ ಹಾಗೂ ಕುಟುಂಬಗಳನ್ನು ಬೀದಿ ಪಾಲು ಮಾಡುವ ಸಂಚು ರೂಪಿಸಿದೆ ಎಂದು ಆರೋಪಿಸಲಾಗಿದೆ. ಸಂಘದ ಜಿಲ್ಲಾಧ್ಯಕ್ಷ ವಿಜಯ ಗುಂಟ್ರಾಳ, ಗಂಗಯ್ಯ ಸಾಕೇನವರ, ಸುನಂದಾ ಮಾದರ, ಗಂಗಾಧರ ಪೆರೂರ, ಲಕ್ಷ್ಮಣ ಬಕ್ಕಾಯಿ, ಚಿಂತಮ್ಮ ಮಾದರ ಇದ್ದರು. 

ಟಾಪ್ ನ್ಯೂಸ್

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

Mahalaya

Mahalaya Shraddha: ಋಣಮುಕ್ತಗೊಳಿಸಿ, ವಂಶವನ್ನು ಬೆಳಗಿಸುವ ಮಹಾಲಯ ಕಾರ್ಯ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

GRUHALAKHMI

Congress Guarantee: ರಾಜ್ಯದ 1.82 ಲಕ್ಷ ಗೃಹಲಕ್ಷ್ಮೀಯರಿಗೆ ಇನ್ನೂ 1 ಕಂತೂ ಸಿಕ್ಕಿಲ್ಲ !

Mysuru-CM

IPS Officer letter: ತಪ್ಪು ಮಾಡಿ ಬೇರೆಯವರ ಮೇಲೆ ಆರೋಪಿಸುವ ಎಚ್‌ಡಿಕೆ: ಸಿಎಂ ಸಿದ್ದರಾಮಯ್ಯ

Shivamogga: ಚೀನ ಬೆಳ್ಳುಳ್ಳಿ: 8 ಕಡೆ ದಾಳಿ; 50 ಕೆ.ಜಿ. ವಶ

Shivamogga: ಚೀನ ಬೆಳ್ಳುಳ್ಳಿ: 8 ಕಡೆ ದಾಳಿ; 50 ಕೆ.ಜಿ. ವಶ

1-asdadad

IPL; ತಂಡಗಳಲ್ಲಿ ಉಳಿದುಕೊಳ್ಳಬಲ್ಲ ಸಂಭಾವ್ಯ ಆಟಗಾರರು ಯಾರ್ಯಾರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-joshi

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Hubli: ರಾಡ್‌ ಬಿದ್ದು ಎಎಸ್‌ಐ ಸಾವು ಪ್ರಕರಣದಲ್ಲಿ ಮತ್ತೋರ್ವನ ಬಂಧನ

Yathanal

MUDA Case: ಸಿದ್ದರಾಮಯ್ಯ ಅಧಿಕಾರದಲ್ಲಿದ್ರೆ ತನಿಖೆ ಮೇಲೆ ಪ್ರಭಾವ ಖಚಿತ: ಶಾಸಕ ಯತ್ನಾಳ್‌

Let Siddaramaiah bow to the court order and resign: Pramod Muthalik

Hubli; ಕೋರ್ಟ್ ಆದೇಶಕ್ಕೆ ತಲೆಬಾಗಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿ: ಪ್ರಮೋದ ಮುತಾಲಿಕ್

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

State Govt: ಮಾದಕ ನೋವು ನಿವಾರಕ ಮಾತ್ರೆ ಮಾರಾಟದ ಮೇಲೆ ಆನ್‌ಲೈನ್‌ ಕಣ್ಣು !

Mahalaya

Mahalaya Shraddha: ಋಣಮುಕ್ತಗೊಳಿಸಿ, ವಂಶವನ್ನು ಬೆಳಗಿಸುವ ಮಹಾಲಯ ಕಾರ್ಯ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

Chikkamela: ಯಕ್ಷಗಾನಕ್ಕೆ ಮುಸ್ಲಿಂ, ಕ್ರೈಸ್ತರ ಮನೆಗಳಲ್ಲೂ ಸ್ವಾಗತ

GRUHALAKHMI

Congress Guarantee: ರಾಜ್ಯದ 1.82 ಲಕ್ಷ ಗೃಹಲಕ್ಷ್ಮೀಯರಿಗೆ ಇನ್ನೂ 1 ಕಂತೂ ಸಿಕ್ಕಿಲ್ಲ !

fraudd

Cake: ಆರ್ಡರ್‌ ಕೊಟ್ಟು ಅಂಗಡಿಯವರಿಂದಲೇ ಹಣ ವರ್ಗಾಯಿಸಿಕೊಳ್ಳಲು ಯತ್ನಿಸಿದರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.