ಬಾಲಕಿಯ ರೇಪ್: ತಲೆಮರೆಸಿಕೊಂಡಿದ್ದ ಮೇಘಾಲಯ ಶಾಸಕ ಅರೆಸ್ಟ್
Team Udayavani, Jan 7, 2017, 10:39 AM IST
ಗುವಾಹಟಿ /ಶಿಲ್ಲಾಂಗ್ : ಅಪ್ರಾಪ್ತ ವಯಸ್ಸಿನ ಹುಡುಗಿಯ ಅತ್ಯಾಚಾರ ಪ್ರಕರಣದಲ್ಲಿ ಓರ್ವ ಆರೋಪಿಯಾಗಿ ತನ್ನ ಹೆಸರು ಬಹಿರಂಗವಾದುದನ್ನು ಅನುಸರಿಸಿ ತಲೆ ಮರೆಸಿಕೊಂಡಿದ್ದ ಮೇಘಾಲಯದ ಪಕ್ಷೇತರ ಶಾಸಕ ಜೂಲಿಯಸ್ ಕಿತ್‌ಬಾಕ್ ದೋರ್ಫಾಂಗ್ ಅವರನ್ನು ಗುವಾಹಟಿಯ ಗರ್‌ಚುಕ್ ಎಂಬಲ್ಲಿ ಇಂದು ಶನಿವಾರ ಬಂಧಿಸಲಾಗಿದೆ.
ದೋರ್ಫಾಂಗ್ ಅವರ ಬಂಧನಕ್ಕೆ ಮೇಘಾಲಯ ಪೊಲೀಸರು ಲುಕ್‌ಔಟ್ ನೊಟೀಸ್ ಜಾರಿ ಮಾಡಿದ್ದರು. 14ರ ಹರೆಯದ ಬಾಲೆಯು ಒಳಗೊಂಡ ಸೆಕ್ಸ್ ಜಾಲದಲ್ಲಿ ಆರೋಪಿಯಾಗಿದ್ದ ದೋರ್ಫಾಂಗ್ ಅವರು ಪೊಲೀಸರಿಗೆ ಬೇಕಾಗಿದ್ದರು. ಇಂದು ಮೇಘಾಲಯ ಮತ್ತು ಅಸ್ಸಾಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶಾಸಕ ದೋರ್ಫಾಂಗ್ ಅವರನ್ನು ಸೆರೆ ಹಿಡಿದರು.
ದೋರ್ಫಾಂಗ್ ಅವರು ಮೇಘಾಲಯದಲ್ಲಿನ ಆಳುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹಿಂದೆ ಉಗ್ರ ಸಂಘಟನೆಯೊಂದನ್ನು ಹುಟ್ಟುಹಾಕಿದ್ದ ದೋರ್ಫಾಂಗ್ ಅವರು 2007ರಲ್ಲಿ ಶರಣಾಗತರಾಗಿದ್ದರು.
ಕಳೆದ ತಿಂಗಳಲ್ಲಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ್ದ ಗೆಸ್ಟ್ ಹೌಸ್ ನೌಕರನನ್ನು ಪೊಲೀಸರು ಬಂಧಿಸಿದಾಗ ಸೆಕ್ಸ್ ಜಾಲವು ಬೆಳಕಿಗೆ ಬಂದಿತ್ತು. ಈ ಗೆಸ್ಟ್ ಹೌಸ್ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ರಾಜ್ಯದ ಗೃಹ ಸಚಿವರಾಗಿರುವ ಎಚ್ ಡಿ ಆರ್ ಲಿಂಗ್‌ಡೋ ಅವರಿಗೆ ಸೇರಿದ್ದಾಗಿದೆ.
ಬಾಲಕಿಯನ್ನು ಪೊಲೀಸರು ಪಾರು ಗೊಳಿಸಿದ ಬಳಿಕ ಆಕೆ ಸೆಕ್ಸ್ ಜಾಲದಲ್ಲಿ ಇರುವ ಎಲ್ಲರ ಹೆಸರನ್ನು ಹೇಳಿದ್ದಳು. ಆ ಪ್ರಕಾರ ಬಂಧಿಸಲ್ಪಟ್ಟಿದ್ದ ಎಂಟು ಮಂದಿಯಲ್ಲಿ ನಾಲ್ವರು ಮಹಿಳೆಯರು ಸೇರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.