![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
Team Udayavani, Jan 7, 2017, 10:58 AM IST
ವಾಷಿಂಗ್ಟನ್ : 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಾಟ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಎದುರು ಸ್ಪರ್ಧಿಸಿದ್ದ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಗೆಲುವಿಗೆ ಸೈಬರ್ ಅಭಿಯಾನದ ಮೂಲಕ ನೆರವಾಗುವ ಯತ್ನಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಆದೇಶಿಸಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿದೆ.
ರಶ್ಯದ ಉದ್ದೇಶ ಕೇವಲ ಟ್ರಂಪ್ ಅವರ ವಿಜಯಕ್ಕೆ ನೆರವಾಗುವುದು ಮಾತ್ರವಲ್ಲ; ಆ ಮೂಲಕ ಅಮೆರಿಕದ ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸವನ್ನು ನಾಶ ಮಾಡುವುದು ಕೂಡ ಆಗಿತ್ತು. ಜತೆಗೆ ಹಿಲರಿ ಕ್ಲಿಂಟನ್ ಜಯವನ್ನು ಅಸಾಧ್ಯಗೊಳಿಸುವುದು ಮತ್ತು ಒಂದೊಮ್ಮೆ ಆಕೆ ಅಮೆರಿಕದ ಅಧ್ಯಕ್ಷೆಯಾಗಿ ಚುನಾಯಿತಳಾದಲ್ಲಿ ಆಕೆಗೆ ಹಾನಿಯುಂಟುಮಾಡುವುದು – ಇವೆಲ್ಲ ಪುತಿನ್ ಗೇಮ್ ಪ್ಲಾನ್ ಆಗಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೋರ್ವರು ಬಿಡುಗಡೆ ಮಾಡಿರುವ ಅವರ್ಗೀಕೃತ ವರದಿಯಲ್ಲಿ ಹೇಳಲಾಗಿದೆ.
ವರದಿಯು ವರ್ಗೀಕೃತ ವಿವರಗಳನ್ನು ಕೈಬಿಟ್ಟಿದೆಯಾದರೂ ಅಮೆರಿಕದ ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದು ರಶ್ಯದ ಉದ್ದೇಶವಾಗಿತ್ತು ಎಂದು ಹೇಳಿದೆ.
ಇಲೆಕ್ಟೋರಲ್ ಕಾಲೇಜ್‌ನಲ್ಲಿ ಟ್ರಂಪ್ ಅವರ ವಿಜಯಕ್ಕೆ ಅಮೆರಿಕದ ಸಂಸತ್ತು ನಿನ್ನೆ ಶುಕ್ರವಾರ ಅಧಿಕೃತ ಪರಿಪತ್ರ ನೀಡಿದೆಯಾದರೂ ಹಿಲರಿ ಕ್ಲಿಂಟನ್ ಅವರು ಜನಪ್ರಿಯ ಮತಗಳನ್ನು 30 ಲಕ್ಷದ ಸನಿಹದಲ್ಲಿ ಗೆದ್ದಿರುವುದು ವಿಪರ್ಯಾಸವಾಗಿದೆ ಎಂದು ವರದಿ ಹೇಳಿದೆ.
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Obama Is Queer: ಮಾಜಿ ಅಧ್ಯಕ್ಷ ಒಬಾಮಾ ಪತ್ನಿ ಮಿಚೆಲ್ ಗಂಡಸು: ಮಸ್ಕ್ ತಂದೆ
Cut Down: ವೆಚ್ಚ ಕಡಿತ: ಅಮೆರಿಕ ಸರಕಾರಿ ಉದ್ಯೋಗಿಗಳೇ ವಜಾ!
Mexico:ಯುರೋಪ್ ನ Most ವಾಂಟೆಡ್ ಕ್ರಿ*ಮಿನಲ್, ಡ್ರ*ಗ್ ಕಿಂಗ್ ಪಿನ್ ಮಾರ್ಕೋ ಹ*ತ್ಯೆ
Bourbon Whiskey: ಅಮೆರಿಕದ ಬೌರ್ಬನ್ ವಿಸ್ಕಿ ಆಮದು ಸುಂಕ ಕಡಿತ ಮಾಡಿದ ಭಾರತ
Line of Control: ಭಾರತ, ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ: ಯಾವುದೇ ಅಪಾಯವಿಲ್ಲ
Inter Faith: ಅಂತರ್‌ಧರ್ಮೀಯ ವಿವಾಹಗಳು ತಪ್ಪಲ್ಲ: ಮಹಾರಾಷ್ಟ್ರ ಸಿಎಂ ಫಡ್ನವೀಸ್
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್‌ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
You seem to have an Ad Blocker on.
To continue reading, please turn it off or whitelist Udayavani.