ಮಹಿಳೆಗೆ ಕಿರುಕುಳ ನೋಡಿ ಸುಮ್ಮನಿದ್ದವರು ಗಂಡಸರೇ ಅಲ್ಲ
Team Udayavani, Jan 7, 2017, 11:22 AM IST
ನವದೆಹಲಿ: ಬೆಂಗಳೂರಿನಲ್ಲಿ ವರ್ಷಾಚರಣೆಯಂದು ಮಹಿಳೆ ಯರ ಮೇಲೆ ನಡೆದ ದೌರ್ಜನ್ಯದ ಘಟನೆಯನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕಟುವಾಗಿ ಟೀಕಿಸಿದ್ದಾರೆ. ಜೊತೆಗೆ ಇಂಥದ್ದೊಂದು ಘಟನೆ ನಡೆಯುತ್ತಿದ್ದರೂ ಸಮೀಪದಲ್ಲೇ ಇದ್ದ ಜನ ತಮ್ಮ ಪಾಡಿಗೆ ತಾವು ಇದ್ದದ್ದಕ್ಕೂ ಆಕ್ರೋಶ ವ್ಯಕ್ತಪಡಿಸಿರುವ ಕೊಹ್ಲಿ, ಅವರೆಲ್ಲಾ ನಿಜವಾಗಿ ಗಂಡಸರೇ ಅಲ್ಲ ಎಂದಿದ್ದಾರೆ.
ಟ್ವೀಟರ್ನಲ್ಲಿ ಈ ಕುರಿತು ಹೇಳಿಕೆ ಪ್ರಕಟಿಸಿರುವ ಅವರು, “ಬೆಂಗಳೂರಿನಲ್ಲಿ ನಡೆದ ಘಟನೆ ನಿಜಕ್ಕೂ ಮನಸ್ಸು ಕಲಕುವ ಘಟನೆ. ಮಹಿಳೆಯ ಮೇಲೆ ದೌರ್ಜನ್ಯ ನಡೆಯುತ್ತಿದ್ದದ್ದನ್ನು ಮೌನವಾಗಿ ನೋಡುತ್ತಿದ್ದವರಿಗೆ ತಮ್ಮನ್ನು ತಾವು ಪುರುಷರೆಂದು ಕರೆದುಕೊಳ್ಳಲು ಯಾವ ಹಕ್ಕೂ ಇರುವುದಿಲ್ಲ. ನಿಮ್ಮ ಕುಟುಂಬದ ಮಹಿಳೆ ಮೇಲೆ ಈ ರೀತಿಯ ದೌರ್ಜನ್ಯ ನಡೆಯುತ್ತಿದ್ದರೆ, ಆಗಲೂ ಇದೇ ರೀತಿ ನೋಡುತ್ತಾ ಸುಮ್ಮನೆ ನಿಲ್ಲುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗಲೆಲ್ಲಾ ಮಹಿಳೆಯರ ವಸ್ತ್ರ ಆಯ್ಕೆಯನ್ನು ದೂರುವುದನ್ನು ಒಪ್ಪಲಾಗುವುದಿಲ್ಲ. ಅಧಿಕಾರದಲ್ಲಿರುವವರೂ ಮಹಿಳೆಯ ಧರಿಸುವ ಬಟ್ಟೆ ಕುರಿತು ಆಕ್ಷೇಪ ವ್ಯಕ್ತಪಡಿಸುವುದು ಖಂಡನಾರ್ಹ ಎಂದು ವಿರಾಟ್ ಕೊಹ್ಲಿ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.