ಬಾದಾಮಿ ಬನಶಂಕರಿ :ನೀರ ದಾಹ ತೀರಿಸಿದ ಮಹಾದೇವಿಯ ಕ್ಷೇತ್ರ


Team Udayavani, Jan 7, 2017, 12:22 PM IST

8.jpg

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯಕ್ಷೇತ್ರವೇ ಬನಶಂಕರಿ. ಇಲ್ಲಿ ಸಿಂಹವಾಹಿನಿಯಾಗಿ ನೆಲೆಸಿರುವ ಪಾರ್ವತಿ ದೇವಿಗೆ ಬನಶಂಕರಿ, ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತದೆ.  ಈ ಬನಶಂಕರಿ ದೇವಿಯು ನವದುರ್ಗೆಯರಲ್ಲಿ   6ನೇ ಅವತಾರವೆಂದು ಹೇಳಲಾಗುತ್ತದೆ.   ಹಿಂದೆ ಈ ಪ್ರದೇಶವು ಭಯಂಕರ ûಾಮದಿಂದ ತತ್ತರಿಸುತ್ತಿದ್ದಾಗ ಎಲ್ಲ ದೇವತೆಗಳು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು  ಮಹೇಶ್ವರರಲ್ಲಿ  ತಮ್ಮ  ಕಷ್ಟವನ್ನು  ನೀಗಿಸುವಂತೆ ಕೇಳಿಕೊಂಡರು, ಇದಕ್ಕೆ  ಪರಿಹಾರವೆಂದರೆ  ಬನಶಂಕರಿಯನ್ನು  ಬೇಡಿಕೊಳ್ಳೋಣ ಎಂದು ಎಲ್ಲರೂ ಕೂಡಿ  ತಿಲಕಾರಣ್ಯ ಪ್ರದೇಶಕ್ಕೆ ಬಂದು  ತಾಯಿ ಬನಶಂಕರಿಯನ್ನು  ಕುರಿತು, ಈ ಕ್ಷೇತ್ರದಲ್ಲಿ  ಮಳೆಯಿಲ್ಲದೇ  ಯಜ್ಞಯಾಗಾದಿಗಳು ನಿಂತು ಹೋಗಿ  ಬದುಕಲು ಕಷ್ಟವಾಗುತ್ತಿದೆ.  ಜಗತ್ತಿಗೆ ಜಲ ನೀಡಿ ಕಾಪಾಡು ನಮ್ಮನ್ನು  ರಕ್ಷಿಸು ಎಂದು ದೇವಿಯನ್ನು   ಪ್ರಾರ್ಥಿಸಿದರು.   ಇದರಿಂದ  ಪ್ರಸನ್ನಳಾದ ತಾಯಿ ಪ್ರತ್ಯಕ್ಷಳಾಗಿ  
ಭೂಮಿತಾಯಿಯ  ನೀರಿನ  ದಾಹವನ್ನು  ತೀರಿಸಿ ಎಲ್ಲರನ್ನೂ   ಕಾಪಾಡಿದಳು. ಅಲ್ಲದೇ  ತನ್ನ ತನುವಿನ ಶಾಖದಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟಗಳನ್ನು ನೀಗಿಸಿದಳಂತೆ.   ಹೀಗಾಗಿ ಈ ದೇವಿಗೆ ಶಾಕಾಂಬರಿ ಎನ್ನುವ ಹೆಸರು ಬಂತೆಂದು ಹೇಳಲಾಗುತ್ತಿದೆ.   ಇವಿಷ್ಟೇ ಅಲ್ಲದೇ  ಈ ಪ್ರದೇಶದಲ್ಲಿ  ಹರಿದ್ರಾತೀರ್ಥ, ತೈಲತೀರ್ಥ, ಪದ್ಮತೀರ್ಥ, ಕ್ಷಮಾತೀರ್ಥ ಹೀಗೆ ಸಾಕಷ್ಟು ತೀರ್ಥಕೊಳಗಳನ್ನು ಸೃಷ್ಟಿ ಮಾಡಿದಳಂತೆ.  ಅಂದಿನಿಂದ  ಈ ಪ್ರದೇಶ  ನಂದನವನವಾಗಿ   ಹಸಿರಿನಿಂದ ಕಂಗೊಳಿಸುತ್ತಿದೆ.   ಈ ಊರಿನ ಸುತ್ತ ದಟ್ಟವಾದ  ಅರಣ್ಯಪ್ರದೇಶವಿದ್ದು ತೆಂಗು, ಬಾಳೆ ಮತ್ತು ವೀಳೆÂದೆಲೆಯ ತೋಟಗಳಿವೆ ಹಾಗೂ ಹತ್ತಿರದಲ್ಲಿಯೇ ಸರಸ್ವತಿ  ಹೊಳೆಯೂ  ಹರಿಯುತ್ತಿದೆ.  ಈ ಕಾರಣದಿಂದಲೂ  ಈ ದೇವಿಗೆ  ಬನಶಂಕರಿ, ವನಶಂಕರಿ (ಬನದ ದೇವತೆ) ಎಂಬ ಹೆಸರು ಬಂದಿದೆ ಎನ್ನಲಾಗುತ್ತಿದೆ.

ಸುಂದರವಾದ ಕೋಟೆಯಂತೆ  ಕಾಣಿಸುವ ಪ್ರವೇಶ ದ್ವಾರ,  ಎದುರುಗಡೆ ಸುಮಾರು 360 ಅಡಿಗಳ ಚೌಕಾಕಾರದ ಕಲ್ಯಾಣಿ ನಮಗೆ ಕಾಣಸಿಗುತ್ತದೆ.   ಮಳೆಗಾಲದಲ್ಲಿ ಮಾತ್ರ ತುಂಬಿ ಹರಿಯುವ ಈ ಕಲ್ಯಾಣಿಯನ್ನು ನೋಡಲು ಎರಡು ಕಣ್ಣೂ ಸಾಲದು.  ಇನ್ನು ಈ  ಕಲ್ಯಾಣಿಯ ಸೊಬಗನ್ನು ನೋಡುತ್ತಾ ಮುಂದೆ ಸಾಗಿದರೆ ನಮಗೆ ಸಿಗುವುದು 7 ನೇ ಶತಮಾನದಲ್ಲಿ  ಕಲ್ಯಾಣಿ ಚಾಲುಕ್ಯರ ಅರಸನಾದ 1 ನೇ ಜಗದೇಕಮಲ್ಲನ ಕಾಲದಲ್ಲಿ ನಿರ್ಮಾಣವಾದ ಸುಂದರವಾದ ಬನಶಂಕರಿ ದೇವಾಲಯ.   ಕ್ರಿ.ಶ. 603ರಲ್ಲಿ  ಬನಶಂಕರಿ ದೇವಿಯ ಮೂರ್ತಿಯನ್ನು  ಪ್ರತಿಷ್ಠಾಪನೆ  ಮಾಡಲಾಗಿದೆ ಎಂಬುದನ್ನು ಇಲ್ಲಿ ಕೆಲವು ಶಾಸನಗಳು ಸಾರುತ್ತವೆ.  ದೇವಾಲಯದ ಆವರಣದಲ್ಲಿರುವ ಸ್ತಂಭಗಳ ಮೇಲೆ  ಮಾಡಿದ ಕುಸುರಿ ಕೆಲಸ ಚಾಲುಕ್ಯರ ವಾಸ್ತುಶಿಲ್ಪಕ್ಕೆ  ಕೈಗನ್ನಡಿಯಾಗಿದೆ.  ಈ ದೇವಸ್ಥಾನವನ್ನು  18ನೇ ಶತಮಾನದಲ್ಲಿ  ಮರಾಠರ ದಳವಾಯಿಗಳು ಪುನರ್‌ ನಿರ್ಮಾಣ ಮಾಡಿದರೆಂಬ ಉಲ್ಲೇಖವೂ ಇದೆ.   ಇನ್ನು ಗರ್ಭಗುಡಿಯಲ್ಲಿ  ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾಗಿರುವ ಪಾರ್ವತಿಯ ಸುಂದರ ಮೂರ್ತಿಯಿದೆ.  ಈ ದೇವಿಗೆ  ಶರಣು ಹೋದರೆ  ತಮ್ಮೆಲ್ಲ  ಅಭಿಷ್ಟೆಗಳೂ ಈಡೇರುತ್ತವೆ ಎಂಬುದೇ ಭಕ್ತರ ನಂಬಿಕೆ. ಪ್ರತಿವರ್ಷ ಪುಷ್ಯ ಮಾಸದಲ್ಲಿ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಬನಶಂಕರಿ ಜಾತ್ರೆಯು ಹುಣ್ಣಿಮೆಯ ಹತ್ತು ದಿನಗಳ ಮುಂಚಿತವಾಗಿ ಪ್ರಾರಂಭವಾಗುತ್ತದೆ. ಈ ಜಾತ್ರೆ ಅನೇಕ ವಿಶೇಷತೆಗಳನ್ನೊಳಗೊಂಡಿದೆ.  ಈ ಬನಶಂಕರಿ ಜಾತ್ರೆಗೆ ಸುಮಾರು 200 ವರ್ಷಗಳ ಇತಿಹಾಸವೇ ಇದೆ.  ಬರೀ ಕರ್ನಾಟಕ ಮಾತ್ರವಲ್ಲ  ನೆರೆಯ ಮಹಾರಾಷ್ಟ್ರದಿಂದಲೂ  ಸಾವಿರಾರು ಭಕ್ತ ಸಾಗರವೇ ಈ ದೇವಿಯ ದರ್ಶನಕ್ಕೆ  ಹರಿದು ಬರುತ್ತದೆ.  

  ಈ  ಜಾತ್ರೆಯ ಸಂದರ್ಭದಲ್ಲಿ ದೇವಾಲಯವನ್ನು  ಮತ್ತು ಪಟ್ಟಣವನ್ನು   ಸಾವಿರಾರು ವಿದದ ಎಲೆಗಳು  ಮತ್ತು  ಹೂವುಗಳಿಂದ ಅಲಂಕರಿಸಲಾಗುತ್ತದೆ. ಈ ಪ್ರದೇಶದ ಜನರು  ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ಪಲ್ಯದ ಹಬ್ಬ (ತರಕಾರಿ ಉತ್ಸವ) ಎಂದು ಆಚರಿಸುತ್ತಾರೆ.   ಈ ತರಕಾರಿ  ಉತ್ಸವದಲ್ಲಿ  ಬನಶಂಕರಿ ದೇವಿಗೆ 108 ವಿಧಧ ತರಕಾರಿಗಳಿಂದ ತಯಾರಿಸಿದ ಖಾದ್ಯಗಳನ್ನು   ಸಮರ್ಪಿಸುವ ಮೂಲಕ ತಮ್ಮ ಕೃತಜ್ಞತೆ ಅರ್ಪಿಸುತ್ತಾರೆ.   ಈ ಋಣ ಸಂದಾಯದ ಹಬ್ಬವನ್ನು ಪಲೆÂàದ ಹಬ್ಬವೆಂದೇ ಹೇಳಲಾಗುತ್ತದೆ. ಈ ದೇವಿ  ಶಾಖಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿಯೂ ಕೂಡ ಉಲ್ಲೇಖವಿದೆ. ಈ ಜಾತ್ರೆಯ ಇನ್ನೊಂದು ವಿಶೇಷತೆಯೆಂದರೆ ದೇವಸ್ಥಾನದ ಕಲ್ಯಾಣಿಯಲ್ಲಿ ನಡೆಯುವ ತೆಪ್ಪೋತ್ಸವ. ಇಲ್ಲಿರುವ ಕಲ್ಯಾಣಿಯಲ್ಲಿ  ನವಜಾತ ಶಿಶುಗಳಿಗೆ ದೇವಿಯ ಆಶೀರ್ವಾದ ಸಿಗಲೆಂದು ಪಾಲಕರು  ಬಾಳೇ ದಿಂಡಿನಲ್ಲಿ ತಯಾರಿಸಲಾದ ತೆಪ್ಪದಲ್ಲಿ ಮಗುವನ್ನು  ಮಲಗಿಸಿ ಕಲ್ಯಾಣಿಯ ಸುತ್ತ ಮುತ್ತಲೂ ಪ್ರದಕ್ಷಿಣೆ  ಮಾಡಿಸುತ್ತಾರೆ.

ಹುಣ್ಣಿಮೆಯ ದಿನವನ್ನು  ವಿಶೇಷವಾಗಿ ಆಚರಿಸುವ ಭಕ್ತರು ಸುಮಾರು 16 ಅಡಿ  ಎತ್ತರದ ಕಟ್ಟಿಗೆಯ ರಥವನ್ನು  ತಣಿರು ತೋರಣ, ಹೂವು, ಹಣ್ಣುಗಳಿಂದ ಅಲಂಕರಿಸಿ ತಾಯಿ ಬನಶಂಕರಿ ದೇವಿಯ ವಿಗ್ರಹ ಅದರ ಜೊತೆಗೆ ಇನ್ನು ಹಲವಾರು ದೇವ, ದೇವತೆಗಳ  ಉತ್ಸವ ಮೂರ್ತಿಗಳನ್ನು  ಕುಳ್ಳಿರಿಸಿ  ಊರ ತುಂಬಾ ಮೆರವಣಿಗೆ ಮಾಡುತ್ತಾರೆ.   ಈ ಹಬ್ಬವು ಉತ್ತರ ಕರ್ನಾಟಕದವರಿಗೆ  ಅತ್ಯಂತ ವಿಶೇಷವಾದ ಹಬ್ಬವಾಗಿದೆ.

  ತಲುಪುವ ಮಾರ್ಗ 
      ಬೆಂಗಳೂರಿನಿಂದ 425 ಕಿ.ಮೀ ಅಂತರದಲ್ಲಿರುವ ಬಾದಾಮಿ ತಲುಪಲು ರೈಲು, ಬಸ್ಸುಗಳ ವ್ಯವಸ್ಥೆಯೂ ಇದೆ.   ಬಾದಾಮಿಗೆ ಬೆಂಗಳೂರು, ಬಿಜಾಪುರ, ಬಾಗಲಕೋಟೆ, ಹುಬ್ಬಳ್ಳಿ – ಧಾರವಾಡ, ಗದಗ ಮುಂತಾದ ಕಡೆಗಳಿಂದ ಬಸ್‌ ವ್ಯವಸ್ಥೆ ಇದೆ.  ಅಲ್ಲದೇ  ಗದಗ – ಸೊಲ್ಲಾಪುರ ರೈಲು ಮಾರ್ಗವೂ ಬಾದಾಮಿಯನ್ನು  ಹಾಯ್ದು ಹೋಗುತ್ತದೆ.  ಬಾದಾಮಿ ರೈಲು ನಿಲ್ದಾಣದಿಂದ ಕೇವಲ 10 ನಿಮಿಷಗಳಲ್ಲಿ  ಬನಶಂಕರಿ ದೇವಸ್ಥಾನವನ್ನು ನಾವು ತಲುಪಬಹುದು. ಇನ್ನು  ಇಡೀ ಭಾರತದ ಸಂಸ್ಕೃತಿಗಳ ಮೇಲೆ ತಮ್ಮ ಅಚೊÂàತ್ತಿದ್ದ ಚಾಲುಕ್ಯರ ರಾಜಧಾನಿ ಬಾದಾಮಿ ಸರ್ವಥಾ ಪ್ರೇಕ್ಷಣೀಯ ಮತ್ತು ಸರ್ವಥಾ ಆದರಣೀಯ ಕ್ಷೇತ್ರವಾಗಿದೆ. 

 ಆಶಾ ಎಸ್‌. ಕುಲಕರ್ಣಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.