ಪಾಶ್ಚಾತ್ಯ ಬೂದುಕೊಕ್ಕರೆ
Team Udayavani, Jan 7, 2017, 1:56 PM IST
ಪಾಶ್ಚಾತ್ಯ ಬೂದುಕೊಕ್ಕರೆ, ಬೆಳ್ಳಹಕ್ಕಿ ಮತ್ತು ಈ ಬೂದು ಕೊಕ್ಕರೆಗೆ ತುಂಬಾ ಹೋಲಿಕೆ ಇದೆ. WSTERN REEF EGRET(Egreettagalaris) RM Village hen ++ ಕೆಲವೊಮ್ಮೆ ಏಕಾಂಗಿಯಾಗಿ ಇಲ್ಲವೇ ಹತ್ತು ಇಪ್ಪತ್ತರ ಸಂಖ್ಯೆಯಲ್ಲಿ ಚಿಕ್ಕ ಬೆಳ್ಳಕ್ಕಿ, ಕೊಕ್ಕಿನಹಕ್ಕಿ, ದನಗಾಹಿ ಕೊಕ್ಕರೆಯ ಗುಂಪಿನಲ್ಲಿ ಸಹ ಕಾಣಸಿಗುತ್ತದೆ. ಈ ಪಾಶ್ಚಾತ್ಯ ಬೂದು ಕೊಕ್ಕರೆಯು ಬೆಳ್ಳಕ್ಕಿಯ ಮಿಶ್ರತಳಿ ಎಂಬ ಭಾವನೆಯೂ ಇತ್ತು. ಮರಿ ಮಾಡುವ ಸಮಯದಲ್ಲಿ ಇದಕ್ಕೂ ಸಹ ತಲೆಯಲ್ಲಿ ಕಡ್ಡಿಯಂತಿರುವ ಉದ್ದ ಬಾಲ ಮೂಡುತ್ತದೆ. ಅದರಂತೆ ಎದೆಯಮೇಲೆ ಸಹ ಬೂದು ಬಣ್ಣದಉದ್ದಗರಿ ಮೂಡುವುದು. ಮರಿಮಾಡುವ ಸಮಯದಲ್ಲಿ ಚುಂಚಿನ ಮಧ್ಯ ಕೆಂಪು ಬಣ್ಣ ಸಹ ಕಾಣುತ್ತದೆ. ಸ್ಲೇಟ್ ಬೂದು ಬಣ್ಣದ ಹಕ್ಕಿ ಎಂದು ಇಂಗ್ಲೀಷಿನಲ್ಲಿ ಕರೆದಿದ್ದಾರೆ. ಈ ಹಕ್ಕಿ 63 ಸೆಂ.ಮೀ ದೊಡ್ಡದಾಗಿರುತ್ತದೆ.
ನೀರಿನ ಹೊಂಡ, ನದಿಗಳ ತೀರ, ಮೇಂಗ್ರೋಕಾಡಿನ ಉಪ್ಪು ನೀರಿನ ಪ್ರದೇಶ, ಜವಗು ಪ್ರದೇಶ ಇಲ್ಲಿ ನಡೆದಾಡುತ್ತಾ, ಬೆಳ್ಳಹಕ್ಕಿಗಳೊಡನೆ ಕೆಲವೊಮ್ಮೆ ಜಗಳಾಡುತ್ತಾ ಅದನ್ನು ಸೋಲಿಸಿ, ತನ್ನ ಪೌರುಶ ತೋರುತ್ತಿರುವ ದೃಶ್ಯ ಸಹ ಕಾಣುತ್ತದೆ. ಇದು ಮರಿಮಾಡುವ ಸಮಯದಲ್ಲಿ 100, 200 , ಕೆಲವೊಮ್ಮ ಅದಕ್ಕಿಂತ ಹೆಚ್ಚು ಒಂದೆಡೆ ಸೇರಿ, ಒಂದೇಕಡೆ ಕಾಲನಿಯಂತೆ ಹತ್ತಿರ, ಹತ್ತಿರಗೂಡುಕಟ್ಟಿ ಮರಿಮಾಡುವುವು. ಉಳಿದ ಸಮಯದಲ್ಲಿ ಏಕಾಂಗಿಯಾಗಿರುವುದು. ಇದು ಬೆಳ್ಳ ಹಕ್ಕಿಗಳ ಮಿಶ್ರತಳಿ ಎಂದು ಕೆಲಸಮಯ ತಿಳಿದಿದ್ದರು. ಆದರೆ ಈಚೆ ಇದರ ಲಕ್ಷಣ ಅಧ್ಯಯನ ನಡೆಸಿ ಪಾಶ್ಚಾತ್ಯ ಬೂದುಕೊಕ್ಕರೆ ಪ್ರತ್ಯೇಕ ಉಪಜಾತಿ ಎಂದು ಪರಿಗಣಿಸಿದ್ದಾರೆ. ಇದರಲ್ಲಿ ಕೆಲವು 55 ಸೆಂ.ಮೀ ಚಿಕ್ಕದು ಇದ್ದುದ್ದು ಸಿಕ್ಕಿದೆ. ಇದರ ರೆಕ್ಕೆಯ ಅಗಲ 85 ರಿಂದ 105 ಸೆಂ.ಮೀ ಇರುತ್ತದೆ. 300 ರಿಂದ 500 ಗ್ರಾಂ.
ಭಾರ ಇರುತ್ತದೆ. ಇದು ಬೂದು ಬಣ್ಣದ ಹಕ್ಕಿ. ಉದ್ದ ಭರ್ಚಿಯಂಥ ಕೊಕ್ಕು. ಸುಮಾರು 12 ಇಂಚ ಇರುತ್ತದೆ. ತುಂಬಾಚೂಪಾಗಿದ್ದು ಮೀನು ಹಿಡಿಯಲು ಸಹಕಾರಿಯಾಗಿದೆ. ಕೆಲವೊಮ್ಮ ಇದು ಚಿಕ್ಕದಿರುವಾಗ ಬಿಳಿ ಇದ್ದುಅಲ್ಲಲ್ಲಿ ಕಂದು ಬೂದು ಬಣ್ಣದ ಚುಕ್ಕಿಇದೆ. ಇದಕ್ಕೆ ತಿಳಿ ಹಳದಿ ಬಣ್ಣದ ಬಲವಾದಕಾಲಿದೆ. ಗಲ್ಲದ ಅಡಿಯ ಬಿಳಿಬಣ್ಣ ನೋಡಿ.
ಗ್ರೇ ಹೆರಾನ್ ಮತ್ತು ಇತರ ಬೂದು ಕೊಕ್ಕರೆಗಳಿಗಿಂತ ಬಿನ್ನವಾಗಿ ಇದನ್ನು ಗುರುತಿಲು ಸಹಕಾರಿಯಾಗಿದೆ.
ಇದರಂತೆ ಇರುವ ಗ್ರೇ ಹೆರಾನ್ ಇದಕ್ಕಿಂತ ಎತ್ತರ ಹೆಚ್ಚಿದೆ. ಇದರಗಲ್ಲದ ಕೆಳಗೆ ಇದಕ್ಕಿರುವಂತೆ ಬಿಳಿ ಬಣ್ಣ ಇಲ. ಗ್ರೇ ಹೆರಾನ್‌ನ ಕುತ್ತಿಗೆಯಲ್ಲಿ ಪಾರ್ಶ್ವದಲ್ಲಿ ಕುತ್ತಿಗೆಯಿಂದ ಆರಂಭಿಸಿ ರೆಕ್ಕೆ ಆರಂಭವಾಗುವರೆಗೆ ಅಚ್ಚ ಬೂದು ಬಣ್ಣದ ಚುಕ್ಕೆ ಇದೆ. ಇದು ಪಾಶ್ಚಾತ್ಯರೀಪ ಹೆರಾನ್ ನಲ್ಲಿ ಇಲ್ಲ. ಈ ಲಕ್ಷಣದಿಂದ ಇದನ್ನು ಪ್ರತ್ಯೆಕವಾಗಿ ಗುರುತಿಸಲು ಸಹಕಾರಿಯಾಗಿದೆ. ಇದರಂತೆ ತೋರುವ ವೈಟ್ ಬೆಲಿಡ್‌ಅಂದರೆ ಬಿಳಿ ಎದೆಯಗ್ರೇ ಬೆಳ್ಳ ಹಕ್ಕಿ ಇದರಷ್ಟೆ ದೊಡ್ಡ ಇದ್ದರೂ, ಕುತ್ತಿಗೆ ಅಡಿಯಲ್ಲಿರುವ ಬಿಳಿ ಮಚ್ಚೆ ಇದಕ್ಕಿಲ್ಲ ಮತ್ತು ಪಾಶ್ಚಾತ್ಯರೆಪ್ ಹೆರಾನ್ನನ ರೆಕ್ಕೆಯಲ್ಲಿರುವ ಬಿಳಿ ಮಚ್ಚೆ ವೈಟ್ ಬೆಲಿಡ್ ಹೆರಾನ್‌ಗೆ ಇರುವುದಿಲ್ಲ. ಪಾಶ್ಚಾತ್ಯ ಬೂದು ಕೊಕ್ಕರೆಯ ರೆಕ್ಕೆಯಲ್ಲಿರುವ ಬಿಳಿಬಣ್ಣ ಹಾರುವಾಗ ಸ್ಪಷ್ಟವಾಗಿಕಾಣುವುದು. ಬಿಳಿ ಎದೆಯ ಬೂದು ಕೊಕ್ಕರೆಯ ಕಾಲು ಕಂದು ಬಣ್ಣ ಇರುತ್ತದೆ. ಚುಂಚು ಸಹ ಗ್ರೇ ಬಣ್ಣ ಇದೆ. ಹೋಲಿಕೆ ಇದ್ದರೂ ಸೂಕ್ಷ್ಮವಾಗಿ ಗಮನಿಸಿದರೆ ಇವುಗಳಲ್ಲಿರುವ ಪ್ರತ್ಯೆಕತೆ ಸ್ಪಸ್ಟವಾಗಿ ತಿಳಿಯುತ್ತದೆ.
ಮರಿಮಾಡುವ ಸಮಯದಲ್ಲಿ ನೆತ್ತಿಯಲ್ಲಿ ಉದ್ದ ಎರಡು ಕೂದಲಿನ ಜುಟ್ಟು ಮೂಡುತ್ತದೆ. ಇತರ ಬೆಳ್ಳಹಕ್ಕಿಗಳಂತೆ ಇದರ ಬಣ್ಣ ಬದಲಾವಣೆ ಆಗುವುದಿಲ್ಲ . ಇದು ಎಲ್ಲಾ ಸಮಯದಲ್ಲೂ ಅಚ್ಚ ಬೂದು ಬಣ್ಣ ಪ್ರಧಾನವಾಗಿ ಕಾಣುವ ಹಕ್ಕಿ. ನದೀತೀರ, ಗಜನೀ ಪ್ರದೇಶ, ಹಿನ್ನೀರು, ಮ್ಯಾಂಗ್ರೋ ಕಾಡಿರುವ ಜಾಗದಲ್ಲಿ ಇರುತ್ತವೆ. ಬಿಳಿ ಕೊಕ್ಕರೆ, ಐಬೀಸ್, ಗ್ಲೋಸಿ ಐಬೀಸ್ ಇವುಗಳ ಜೊತೆ ಸಹ ಕಾಣಸಿಗುತ್ತದೆ. ಹೊಳೆ, ಕೊಳ ನದೀತೀರದಲ್ಲಿ ಕಾಲಿನಿಂದ ಕೆಸರನ್ನುಕೆದರುತ್ತಾ ಮೇಲೆ ಬರುವ ಮೀನು, ಅದು ಸಿಗದಿದ್ದಾಗ, ಮೃದ್ವಂಗಿ, ಕೆಸರಿನ ಹುಳ, ಚಿಪ್ಪಿನ ಮೃದ್ವಂಗಿ, ಚಿಪ್ಪಿಕಲ್ಲಿನ ಹುಳು ಸಹ ತಿನ್ನುತ್ತದೆ. ಇತರ ಕೊಕ್ಕರೆಗಳಂತೆ ಕೋಲು ಪಾಚಿ ಸೇರಿಸಿ ಗೂಡು ನಿರ್ಮಿಸುತ್ತದೆ. ಮಧ್ಯದ ಮೆತ್ತನೆ ಭಾಗದಲ್ಲಿ 3-4 ಮೊಟ್ಟೆಇಡುವುದು. ಮಾರ್ಚ್ ದಿಂದ ಜುಲೈ ಅವಧಿಯಲ್ಲಿ ಮರಿಮಾಡುತ್ತವೆ. ಇದರ ಮೊಟ್ಟೆ ತಿಳಿ ಸೀಬ್ಲೂ ಅಥವಾ ಸೀಗ್ರೀನ್ ಬಣ್ಣದಲ್ಲಿರುತ್ತದೆ. ಗಂಡು ಹೆಣ್ಣು ಸೇರಿ ಮೊಟ್ಟೆಗೆ ಕಾವುಕೊಡುತ್ತವೆ. ಗುಟುಕು ನೀಡುವುದು, ರಕ್ಷಣೆ ಕಾರ್ಯ ನಿರ್ವಹಿಸುವುದು. ಭಾರತದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆ ಇದರ ಪ್ರಣಯ ಚಟುವಟಿಕೆ ಆರಂಭ. ಅದರಂತೆ ಗೂಡುಕಟ್ಟಲು ಸ್ಥಳ ಆಯ್ಕೆ, ಗೂಡಿಗೆ ಬೇಕಾದ ಸಾಮಗ್ರಿ ಸಂಗ್ರಹ ಎಲ್ಲವನ್ನು ಗಂಡು, ಹೆಣ್ಣು ಸೇರಿ ಮಾಡುತ್ತವೆ. ಭರತ್‌ಪುರ, ಪಶ್ಚಿಮ
ಭಾರತ, ಮೇಂಗ್ರೋಕಾಡಲ್ಲೂ ಇವು ಕಂಡಿವೆ. ಶ್ರೀಲಂಕಾ ಲಕ್ಷದ್ವೀಪದಲ್ಲಿ ಕಾಣಸಿಗುತ್ತವೆ.
ಅತಿ ಅಪರೈಪಕ್ಕೆ ಪೂರ್ವ ಕರಾವಳಿಯಲ್ಲು ಕಂಡಿವೆ. ಇದರ ಇರುನೆಲೆ ನಾಶ, ಬೇಟೆ ಇತ್ಯಾದಿಗಳಿಂದ ಇದರ ಸಂತತಿ ಅಳಿಯುತ್ತಿದೆ. ಇದನ್ನು ಉಳಿಸಬೇಕಾದ ಅನಿವಾರ್ಯತೆ ಕೂಡ ಇದೆ.
ಪಿ. ವಿ. ಭಟ್ ಮೂರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.