ಹಾರ್ಮೊನಿಯಜ್ಜ!:ಬಿಜಾಪುರೆ ಇರುತ್ತಿದ್ದರೆ ಈಗವರಿಗೆ ನೂರಾಗುತ್ತಿತ್ತು


Team Udayavani, Jan 7, 2017, 3:15 PM IST

9.jpg

 ರಾಂಭಾವು ಬಿಜಾಪುರೆ ಅಂದರೆ ಕಣ್ಣ ಮುಂದೆ ಹುಸೇನ್‌ಬೋಲ್ಟನಂತೆ ಹಾರ್ಮೋನಿಯಂ ಮನೆಗಳ ಮೇಲೆ ಓಡುವ ಬೆರಳುಗಳು ಕಣ್ಣ ಮುಂದೆ ಬಂದು, ಅದರಿಂದ ತೇಯ್ದ ನಾದ ಕಿವಿಯಲ್ಲಿ ನಿನದಿಸದೇ ಇರದು. ಇವರು ಇದ್ದಿದ್ದರೆ ಇವತ್ತಿಗೆ ನೂರು ವರ್ಷ. ಇದಕ್ಕಾಗಿ ಬಿಜಾಪುರೆ ಹಾರ್ಮೋನಿಂಯ ಫೌಂಡೇಷನ್‌ ಅವರ ಹುಟ್ಟೂರಾದ ಕಾಗವಾಡದಲ್ಲಿ ಇಂದು ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ನೆಪದಲ್ಲಿ ಸಂಗೀತಜ್ಜ ಇಟ್ಟ ಹೆಜ್ಜೆ ಗುರುತುಗಳು ಇಲ್ಲಿದೆ. 

ಹಾರ್ಮೋನಿಯಂ ಅನ್ನೋದು ವಿದೇಶಿ ವಾದ್ಯ. ಇದಕ್ಕೆ ನಮ್ಮ ಸಂಗೀತವನ್ನು ಒಗ್ಗಿಸುವುದು ಹೇಗೆ? ಈ ಪ್ರಶ್ನೆಗೆ ಉತ್ತರದಂತೆ ಬದುಕಿದ್ದವರು ಪಂಡಿತ್‌ ರಾಂಭಾವು ಬಿಜಾಪುರೆ.  ಆ ಕಾಲದಲ್ಲಿ ಹಾರ್ಮೋನಿಯಂ ಬಳಕೆ ಮಾಡುತ್ತಿದ್ದದ್ದೇ ಹಿಂದೂಸ್ತಾನಿ ಸಂಗೀತದಲ್ಲಿ. ವೀಣೆ ಪಿಟೀಲು ಪ್ರವರ್ಧಮಾನಕ್ಕೆ ಬರುತ್ತಿರುವ ಹೊತ್ತಲ್ಲಿ ಹಾರ್ಮೋನಿಯಂ ಕರ್ನಾಟಕ ಸಂಗೀತದಲ್ಲಿ ತಳ ಊರಿತ್ತು. ಸಿಂತಸೈಜರ್‌, ಕೀಬೋರ್ಡು, ಪಿಟೀಲು ಹೀಗೆ ಸಾಲು ವಾದ್ಯಗಳ ಬಂದರೂ ಹಿಂದೂಸ್ತಾನಿ ಸಂಗೀತದಲ್ಲಿ ಹಾರ್ಮೋನಿಯಂ ಸ್ಥಾನವನ್ನು ಅಲ್ಲಾಡಿಸಲು ಆಗಲಿಲ್ಲ.  ಇಂಥ ಸಂದರ್ಭದಲ್ಲಿ ಸುಮಾರು 7-8 ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ, ಹಾರ್ಮೋನಿಯಂ ನಂಟು ಬೆಳಿಸಿಕೊಂಡಿದ್ದವರು ಈ ಸಂಗೀತಜ್ಜ. 

  ನೀವು ಹಾರ್ಮೋನಿಯಂ ಬಗ್ಗೆ ಮಾತನಾಡುವುದಾದರೆ ಈ ಅಜ್ಜನ ಬಗ್ಗೆ ಪ್ರಸ್ತಾಪಿಸಲೇ ಬೇಕಾಗುತ್ತದೆ.  ಹಾರ್ಮೋನಿಯಂ ಮನೆಗಳ ಮೇಲೆ ಹುಸೇನ್‌ ಬೋಲ್ಟ್ನಂತೆ ಓಡುವ ಬೆರಳುಗಳು, ಅದು ತೇಯುವ ನಾದದ ಬೆರಗಿನ ಸೊಬಗೇ ಬೇರೆ. ಅಲ್ಲದೇ ಅವರ ಚೀಜ್‌ಗಳ ಸಂಗ್ರಹ,  ಹಿರಿಯ ಕಲಾವಿದರೊಂದಿಗಿನ ಒಡನಾಟ-ಈ ರಾಂಭಾವು ಇವತ್ತೂ ಜೀವಂತವಾಗಿಟ್ಟಿದೆ. 

 ಹಾಗೇ ನೋಡಿದರೆ ರಾಂಭಾವು ಹಾರ್ಮೋನಿಯಂ ಕಲಿಯಬೇಕು ಅಂತ ಬರಲಿಲ್ಲ. ಅವರ ಗುರಿ ಇದ್ದದ್ದು ಹಾಡುಗಾರನಾಗಬೇಕು ಅಂತ. ಅದಕ್ಕಾಗಿ ಬೆಳಗಾವಿಯ ಪಂಡಿತ್‌ ಕಾಗಲ್ಕರ್‌ ಬುವಾ ಮತ್ತು ರಾಡವಾಡೆ, ಅಣ್ಣೀಕೇರಿ ಮಲ್ಲಯ್ಯ ಅವರಲ್ಲಿ ಹಾಡುಗಾರಿಕೆ ಶುರುಮಾಡುತ್ತಾರೆ. ಆದರೆ 15 ವಯಸ್ಸಲ್ಲಿ ದೈಹಿಕ ಮಾರ್ಪಾಡಿನಿಂದ ಹಾಡುಗಾರಿಕೆಗೆ ದನಿ (ದನಿ ಒಡಿಯಿತು) ಒಗ್ಗಲಿಲ್ಲ. ಆಗ ಕೈ ಇಟ್ಟದ್ದು ಹಾರ್ಮೋನಿಯಂ ಮೇಲೆ.  ಜೀವನ ನೊಗಕ್ಕೆ ಸಪ್ತಸ್ವರಗಳೇ ಮೇಳವಾಯಿತು. ಶಿರಹಟ್ಟಿ, ಬಿಜಾಪುರಗಳ ನಾಟಕ ಕಂಪೆನಿಗಳಲ್ಲಿ ಮಾಸ್ತರರಾದರು. 

  ಬಿಜಾಪುರೆ ಅವರ ದೊಡ್ಡ ತಿರುವು ದೊರೆತದ್ದು ಎಚ್‌.ಎಂ.ವಿ ರೆಕಾರ್ಡಿಂಗ್‌ ಕಂಪನಿ ಸೇರಿದಾಗ. ಅಲ್ಲಿ ಅಮೀರ್‌ಖಾನ್‌, ಕಿಶೋರ್‌ ಅಮೋನ್ಕರ್‌, ಭೀಮಸೇನ್‌ಜೋಶಿ, ಗಂಗೂಬಾಯಿ ಹಾನಗಲ್‌, ಬಸವರಾಜರಾಜಗುರು- ಹೀಗೆ ಅನೇಕರಿಗೆ ಪಕ್ಕಾ ಪಕ್ಕವಾದ್ಯಗಾರರಾದರು. 

  ಬಿಜಾಪುರೆ ಅವರ ಬೆರಳ ತುದಿಗೆ ಕಿರಾಣ, ಆಗ್ರಾ, ಗ್ವಾಲಿಯರ್‌, ಜೈಪುರ ಗರಾಣಗಳು ಅಂಟಿಕೊಂಡಿದ್ದವು. ಬೆಳಗಾವಿಯಲ್ಲಿ ಶ್ರೀರಾಮಸಂಗೀತವಿದ್ಯಾಲಯ ಪ್ರಾರಂಭಿಸಿದರು. ಇದೇನು ದುಡ್ಡಿಗಾಗಿ ಶುರುಮಾಡಿದ್ದಲ್ಲ. ಬದಲಾಗಿ ವಿದ್ಯಾರ್ಜನೆಗಾಗಿ. ಸಂಗೀತ ಪ್ರಸರಣಕ್ಕೆ.  

“ಹಾರ್ಮೋನಿಯಂ ಭವಿಷ್ಯ ಉಜ್ವಲವಾಗಬೇಕಾದರೆ ಅದನ್ನು ಕಲಿಯೋರ ಸಂಖ್ಯೆ ಜಾಸ್ತಿ ಆಗಬೇಕ್ರೀ. ಹಾಡುಗಾರರಷ್ಟು ನುಡಿಸಾಣಿಕೆ ಮಾಡೋರು ಇಲ್ಲ. ನುಡಿಸೋರು ಸಿಕ್ತಾರ. ಆದ್ರೆ ಶಾಸ್ತ್ರಬದ್ಧವಾಗಿ ನುಡಿಸೋರು ಸಂಖ್ಯೆ ಬಹಳ ಕಡಿಮೆ. ಹಾರ್ಮೋನಿಯಂ ಭವಿಷ್ಯ ನಿಂತಿರೋದು ಅದರ ಕಡೆ ಲಕ್ಷ್ಯಕೊಟ್ಟು ಅಭ್ಯಾಸ ಮಾಡೋರಿಂದ ಅಂದ ಮೇಲೆ ಅಂಥವರಿಗೆ ಮಾರ್ಗದರ್ಶನ ಮಾಡೋದು ಗುರುವಿನ ಕರ್ತವ್ಯ ಎನ್ನುತ್ತಲೇ ಜೀವನ ಮುಸ್ಸಂಜೆಯಲ್ಲೂ ಸಂಗೀತಾರ್ಜನೆ ಮಾಡುತ್ತಿದ್ದರು.   ಸುಮಾರು 5-6 ದಶಕಗಳ ಕಾಲ ಸಂಗೀತ ಕಲಿಸುತ್ತಲೇ ಹದಿನೈದು ಸಾವಿರ ವಿದ್ಯಾರ್ಥಿಗಳ ಗುರುವಾದರು. “ನಮ್ಮ ಗುರುಗಳು ಯಾರೂ ಆವಿಷ್ಕಾರ ಮಾಡದ ಹಾರ್ಮೋನಿಯಂನ ಹೊಸ ಮುಖ ತೋರಿಸಿದರು.  ಕೇವಲ ಟೈಪರೇಟರ್‌ ರೀತಿ  ಇದ್ದ ಹಾರ್ಮೋನಿಯಂಗೆ ಅಭಿವ್ಯಕ್ತಿ ತಂದರು. ಇವರ  ಪಾಠ ಉದ್ದೇಶ ಕಲಾಭಿರುಚಿ, ಸಂಗೀತ ಅಭಿರುಚಿ ಮೂಡಿಸೋದು ಅಂತ ನೆನಪಿಸಿಕೊಳ್ಳುತ್ತಾರೆ ಪಂಡಿತ್‌ ‘ ರವೀಂದ್ರಕಾಟೋಟಿ.

 ಒಳ್ಳೇವೇದಿಕೆ ಕಲಾವಿದರು ಒಳ್ಳೆ ಗುರುಗಳು ಆಗೋದಿಲ್ಲ ಅನ್ನೋದನ್ನು ಸುಳ್ಳು ಮಾಡಿದ ಕೀರ್ತಿ ಈ ಬಿಜಾಪುರೆ ಅವರದ್ದು. ಜೀವನ ಮುಸ್ಸಂಜೆಯಲ್ಲೂ ಮಕ್ಕಳಿಗೆ ಪಾಠ ಹೇಳಿಕೊಡೋದು ಬಿಜಾಪುರೆಯವರ ಖುಷಿ, ಖುಷಿಯಾದ ಸಂಗತಿ.

 ಅಜೊjàರೆ ಹಿಂಗ್ಯಾಕೇ ಅಂತ ಕೇಳಿದರೆ- ಸಂಗೀತ ಇಟ್ಟುಕೊಳ್ಳೋಕೆ ಅಲ್ಲ ಇರೋದು. ಮಂದಿಗೆ ಹಂಚೋಕೆ. 100ಜನಕ್ಕೆ ಹೇಳಿ ಕೊಟ್ರ. 10 ಜನರಲ್ಲಿ  ಸಂಗೀತ ಉಳಿತದ ಅಂತ ಹೇಳ್ಳೋರು.

 ಬಿಜಾಪುರೆ ಅವರ ವಿಶೇಷತೆ ಇಷ್ಟೇ ಅಲ್ಲ. ಅವರೂ ಹತ್ತೂ ಬೆರಳುಗಳಲ್ಲಿ ಹಾರ್ಮೋನಿಯಂ ನುಡಿಸುವುದು. ಬಹುಶ ಇಂಥದ್ದೊಂದು ಪರಿಣಿತ ಪಂಡಿತರು ನಮ್ಮ ಸಂಗೀತ ಕ್ಷೇತ್ರದಲ್ಲಿ ಕಡಿಮೆ. ಅಂತೆಯೇ ರಾಂಭಾವು ಸಹವಾದ್ಯ, ಸ್ವತಂತ್ರವಾದ್ಯಗಾರರಾಗಿ ಬೆರಗು ಮೂಡಿಸಿದ್ದು.  ಸಹವಾದ್ಯ ಎಂದರೆ ಮುಖ್ಯಗಾಯಕನಿಗೆ ಏನು ಬೇಕು ಅದನ್ನು ನುಡಿಸುವುದು. ಅವರ ನಿರೀಕ್ಷೆಗೆ ತಕ್ಕಂತೆ, ಸ್ವರ, ಲಯ, ಭಾವಗಳನ್ನು ಸಮನ್ವಯಗೊಳಿಸುವ ಮಾಂತ್ರಿಕತೆ ಇವರಲ್ಲಿತ್ತು.  ಸ್ವತಂತ್ರವಾದ್ಯ ಎಂದರೆ ಸೋಲೋ.  ಇದನ್ನು ಕೇಳುವುದೇ ಸೌಭಾಗ್ಯ ಅನ್ನೋ ರೀತಿ ನುಡಿಸುತ್ತಿದ್ದರು ಬಿಜಾಪುರೆ. ಇವರ ಖಯ್ನಾಲ್‌, ಠುಮುರಿಗಳು ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಇರೋದು ಇದೇ ಕಾರಣಕ್ಕೆ.   ಬೆರಳ ತುದಿಗಳಿಂದ ಹುಟ್ಟುವ ಕಾಫಿ, ಮಾಲ್‌ಕೌಂಸ್‌ ರಾಗಗಳು, ಅಲಂಕಾರಗಳ ನುಡಿಸಾಣಿಕೆಯಲ್ಲಿ  ಬಹಳ ವಿಶೇಷವಾಗಿರುವುದು ಕೂಡ ಇಂಥಹುದೇ ಗುಣಗಳಿಂದ.  

  ರಾಂಭಾವು ಸಂಗೀತ ಜೊತೆ ಚೀಜ್‌ಗಳನ್ನು ಸಂಗ್ರಹಿಸುವ ಹವ್ಯಾಸವಿತ್ತು.  ಇದಕ್ಕಾಗಿ ಚೀಜ್‌ಗಳ ಕಣಜ ಅಂತಲೂ ಕರೆಯುತ್ತಿದ್ದರು. ಇದು ಬಂದದ್ದು ಅಪ್ಪನಿಗಿದ್ದ ಸಾಹಿತ್ಯದ ಆಸಕ್ತಿಯಿಂದ. ಸಾಥ್‌ ನೀಡಲು ಹೋದಾಗ ಗವಾಯಿಗಳು ಹಾಡುವ ಹೊಸ, ಹೊಸ ಚೀಜ್‌ಗಳನ್ನು ಕಾರ್ಯಕ್ರಮದ ನಂತರ ಕೇಳಿ, ಬರೆದು ಸಂಗ್ರಹಿಸಿಕೊಳ್ಳುತ್ತಿದ್ದರಂತೆ. ಹೀಗಾಗಿ ಹೆಚ್ಚಾ ಕಮ್ಮಿ 500ಕ್ಕೂ ಹೆಚ್ಚು ಚೀಜ್‌ಗಳ ಸಂಗ್ರಹವಿದ್ದವು.   90ರ ಹರೆಯದರಲ್ಲೂ ಬಿಜಾಪುರೆ ಅವರ ಹಾರ್ಮೋನಿಯಂಮೇಲೆ  ಕೈಯ್ನಾಡಿಸಿದರೆ ಅಲ್ಲಿ ನಾದಮಂಟಪ ನಿರ್ಮಾಣವಾಗಿಬಿಡೋದು. ಸ್ವರಗಳ ಜೊತೆ ಆಟವಾಡಲು ಕೂತರೆ ವಯಸ್ಸು ಕೂಡ ನಾಚಿ ಬಿಡುತ್ತಿತ್ತು.   ಜೀವನ ಮುಸ್ಸಂಜೆಯಲ್ಲೂ ಸಪ್ತಸ್ವರಗಳ ಎಳೆ ಬಿಸಿಲು ಕಾಯಿಸುತ್ತಾ ಕೂರುತ್ತಿದ್ದ ರಾಂಭಾವು ಅವರು ಇಹಲೋಕ ತ್ಯಜಿಸಿದರೂ ತಮ್ಮ ಚೀಜ್‌, ಠುಮರಿಗಳ ಮೂಲಕ ಇನ್ನೂ ಬದುಕಿದ್ದಾರೆ. ಅವರು ಇದ್ದಿದ್ದರೆ ಇವತ್ತಿಗೆ 100 ವರ್ಷ.

ಟಾಪ್ ನ್ಯೂಸ್

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

18

Men’s Senior Hockey Nationals: ಒಡಿಶಾ ಚಾಂಪಿಯನ್‌

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.