ಬೆಳ್ಳಂಬೆಳಗ್ಗೆ ಹೋಗಿ ನೋಡಬೇಕಾದ ಎರಡು ಮ್ಯಾಜಿಕ್‌ ತಾಣಗಳು 


Team Udayavani, Jan 7, 2017, 4:19 PM IST

5444.jpg

ಬೇಸಿಗೆ ಕಾಡುತ್ತಿದೆ. ಸೂರ್ಯ ಮೇಲೇರಿ ಬಂದಂತೆ ಹೆಚ್ಚು ಹೆಚ್ಚು ಆಕ್ರೋಶಿತನಾದಂತೆ ಭಾಸವಾಗುತ್ತಿದೆ. ಬಿಸಿಲಲ್ಲಿ ನಿಲ್ಲೋದು ಒಂದು ಸಾಹಸ. ಬಿಸಿ ನೆಲದಲ್ಲಿ ಓಡಾಡೋದು ಯುದ್ಧದಂತೆ ಅನ್ನಿಸುತ್ತಿದೆ. ಜಗತ್ತು ಈ ಪರಿ ಬಿಸಿಯಾದರೆ ಜನರೆಲ್ಲಾ ಏನು ಮಾಡುವುದಪ್ಪಾ. ತಂಪಾದ ಒಂದು ಜಾಗಕ್ಕೆ ಹೋಗೋದು ಒಳ್ಳೆ ಉಪಾಯ. ವಿಪರ್ಯಾಸವೆಂದರೆ ಈ ಬೇಸಿಗೆಯಲ್ಲಿ ಎಲ್ಲಾ ಜಾಗವೂ ಬಿಸಿಯಾಗಿಯೇ ಇದೆ. ತಂಪು ಹುಡುಕಿಕೊಂಡು ಹೋಗುವುದಾದರೂ ಎಲ್ಲಿಗೆ. ಒಂದೊಳ್ಳೆ ಐಡಿಯಾ ಏನೆಂದರೆ ಬೆಳ್ಳಂಬೆಳಗ್ಗೆ ಎದ್ದು ಒಂದು ಸುಂದರವಾದ, ತಂಪಾದ ಜಾಗಕ್ಕೆ ಹೊರಟುಬಿಡುವುದು. ಅಲ್ಲೊಂದಷ್ಟು ಗಂಟೆಗಳನ್ನು ಕಳೆದು ಬಂದರೆ ಮನಸ್ಸಿನಲ್ಲಿ ಆ ಜಾಗದ ತಂಪು ಉಳಿದುಹೋಗುತ್ತದೆ. ಅಂಥಾ ಎರಡು ಬ್ಯೂಟಿಫ‌ುಲ್‌ ತಾಣಗಳ ಪರಿಚಯ ಇಲ್ಲಿದೆ. ಒಂದು ದಿನ ಬೆಳಿಗ್ಗೆದ್ದು ಹೊರಟುಬಿಡಿ.  

ಹೆಸರಘಟ್ಟ ಕೆರೆ
ಬೆಳ್ಳಂಬೆಳಗ್ಗೆದ್ದು ಹೆಸರಘಟ್ಟಕ್ಕೆ ಕಾಲಿಟ್ಟು ನೋಡಿ. ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುವಂತಿರುವ ಹಸಿರು ನೆಲ ನಿಮ್ಮನ್ನು ಕೈ ಬೀಸಿ ಕರೆಯುತ್ತದೆ. ಹುಲ್ಲುಗಾವಲಿನಲ್ಲೆಲ್ಲೋ ಒಂದು ಕಡೆ ಅಡಗಿಕೊಂಡಿರುವ ಯಾವುದೋ ಒಂದು ಅಪರೂಪದ ಹಕ್ಕಿ ನಿಮ್ಮನ್ನು ನೋಡಿ ಕೂಗಿ ಕೂಗಿ ಸ್ವಾಗತಿಸುತ್ತದೆ. ತಂಪಾದ ಗಾಳಿ ನಿಮ್ಮನ್ನು ತಾಕಿ ಹೋಗುತ್ತಿದ್ದರೆ ಯಾವುದೋ ಒಂದು ಮಧುರವಾದ ಲೋಕಕ್ಕೆ ಕಾಲಿಟ್ಟಂತೆ ನಿಮಗನ್ನಿಸುತ್ತದೆ. ಹೆಸರಘಟ್ಟ ಇವತ್ತಿಗೂ ಅಪರೂಪದ ಹಕ್ಕಿಗಳನ್ನು ತನ್ನೊಳಗೆ ಅಡಗಿಸಿಟ್ಟುಕೊಂಡಿರುವ ತಾಣ. ಇಲ್ಲಿಗೆ ಹಕ್ಕಿಗಳ ಫೋಟೋ ತೆಗೆಯಲೆಂದೇ ಜನ ಬರುತ್ತಾರೆ. ಸೈಕ್ಲಿಂಗ್‌ ಅಂತಲೂ ಜನ ಈ ತಾಣಕ್ಕೆ ಆಗಮಿಸುತ್ತಾರೆ. ಕೆರೆಯ ಪಕ್ಕ ಕೂತು ಸ್ವಲ್ಪ ಹೊತ್ತು ಕಳೆಯುತ್ತೇನೆ ಎಂದು ಆಸೆ ಹೊತ್ತು ಬರುವವರ ಸಂಖ್ಯೆಯೂ ಜಾಸ್ತಿಯೇ ಇದೆ. ಈಗೀಗ ಮನುಷ್ಯನ ದುರಾಸೆಯಿಂದ ಇಂಥಾ ಮಧುರ ತಾಣ ಆಗಾಗ ಘಾಸಿಗೊಳ್ಳುತ್ತಲೇ ಇದೆ. ಅದನ್ನು ಹೊರತುಪಡಿಸಿದರೆ ಪ್ರಕೃತಿ ಪ್ರೇಮಿಗಳಿಗೆ ಭೇಟಿ ನೀಡಲು ಒಂದು ಅದ್ಭುತ ಜಾಗ ಇದು. ಕೆರೆಯಲ್ಲಿ ಈಗ ಸ್ವಲ್ಪ ನೀರು ಕಮ್ಮಿ ಇರಬಹುದು. ಅಡ್ಜಸ್ಟ್‌ ಮಾಡಿಕೊಳ್ಳಬೇಕಾಗುತ್ತದೆ. 

ಹೆಬ್ಟಾಳ ಕೆರೆ


ಪಕ್ಷಿ ಪ್ರೇಮಿಗಳಿಗೆ ಈ ಕೆರೆ ಸ್ವರ್ಗ ಇದ್ದಂತೆ. ಎಲ್ಲಿಂದಲೋ ವಲಸೆ ಬರೋ ಹಕ್ಕಿಗಳು ಇಲ್ಲಿ ಬೀಡು ಬಿಡುತ್ತವೆ. ಅಲ್ಲಲ್ಲಿ ಇಂಥದ್ದೇ ಅಪರೂಪದ ಸುಮಾರು 70 ಥರದ ಹಕ್ಕಿಗಳನ್ನು ನೀವಿಲ್ಲಿ ನೋಡಬಹುದು ಮತ್ತು ನಿಮ್ಮ ಕ್ಯಾಮೆರಾದಲ್ಲಿ ನಿಮ್ಮ ಜೊತೆಗೆ ಮನೆಗೊಯ್ಯಬಹುದು. ಹೆಬ್ಟಾಳ ಕೆರೆ ಬೆಂಗಳೂರಿನ ಅತ್ಯಂತ ದೊಡ್ಡ ಕೆರೆಗಳಲ್ಲೊಂದು. ಬೆಳಗ್ಗಿನ ಹೊತ್ತು ನೀವಿಲ್ಲಿಗೆ ಹೋದರೆ ಸೂರ್ಯೋದಯದ ಅದ್ಭುತ ದೃಶ್ಯವನ್ನು ನೋಡಬಹುದು. ಈ ದೃಶ್ಯವನ್ನು ನೋಡಲಿಕ್ಕೆಂದೇ ಬಹುತೇಕರು ಈ ಕೆರೆಯ ದಡದಲ್ಲಿ ನಿಲ್ಲುತ್ತಾರೆ. ಅದರ ಜೊತೆಗೆ ಹತ್ತಾರು ಹಕ್ಕಿಗಳು ಒಮ್ಮೆಲೆ ಕೂಗಿ ನಿಮ್ಮನ್ನು ಮೈಮರೆಯುವಂತೆ ಮಾಡುತ್ತದೆ. ಪ್ರಕೃತಿ ವಿಸ್ಮಯನ್ನು ನೋಡುತ್ತಾ ನಿಂತಿದ್ದರೆ ಸಮಯ ಸಾಗಿದ್ದೇ ತಿಳಿಯುವುದಿಲ್ಲ. ಈ ಭಾನುವಾರ ಪುರ್ಸೊತ್ತು ಮಾಡಿಕೊಂಡು ಬೆಳ್ಳಂಬೆಳಗ್ಗೆ ಎದ್ದು ಹೆಬ್ಟಾಳ ಕೆರೆಗೆ ಹೋಗಿಬನ್ನಿ. ಹ್ಯಾಪ್ಪಿ ವೀಕೆಂಡ್‌.

ಟಾಪ್ ನ್ಯೂಸ್

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ravi-kumar

BJP ಸೋಲಿಗೆ ರಾಜ್ಯಾಧ್ಯಕ್ಷ ಒಬ್ಬರೇ ಹೊಣೆಯಲ್ಲ: ಎನ್‌. ರವಿಕುಮಾರ್‌

1-nikkki

JDS ಕಳೆದುಕೊಂಡಲ್ಲೇ ಹುಡುಕುತ್ತೇನೆ: ನಿಖಿಲ್‌ ಕುಮಾರಸ್ವಾಮಿ

Renukacharya

Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

CT RAVI 2

C T Ravi; ಸನಾತನ ಧರ್ಮ ಉಳಿದರೆ ದೇಶದ ಉಳಿವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.