Vodafone Super Hour Offer: 16 ರೂಗೆ ಅನ್‌ಲಿಮಿಟೆಡ್ 3/4ಜಿ ಡಾಟಾ
Team Udayavani, Jan 7, 2017, 4:40 PM IST
ಹೊಸದಿಲ್ಲಿ : ಟೆಲಿಕಾಂ ಸಂಸ್ಥೆ ವೋಡಾಫೋನ್ ಇಂದು ಶುಕ್ರವಾರ SuperHour scheme (ಸೂಪರ್ ಅವರ್ ಸ್ಕೀಮ್) ಪ್ರಟಿಸಿದೆ. ಈ ಯೋಜನೆಯಡಿ ಅದು ತನ್ನ ಪ್ರೀಪೇಡ್ ಗ್ರಾಹಕರಿಗೆ 16ರೂ.ಗಳ ಒಂದು ತಾಸಿನ ಆರಂಭದ ದರದಲ್ಲಿ ಅನ್‌ಲಿಮಿಟೆಡ್ 3ಜಿ ಅಥವಾ 4ಜಿ ಡಾಟಾವನ್ನು ನೀಡಲಿದೆ. ಮಾತ್ರವಲ್ಲದೆ ಅದು ತನ್ನ ಜಾಲದೊಳಗೆ ಗ್ರಾಹಕರಿಗೆ ಅನ್‌ಲಿಮಿಟೆಡ್ ಲೋಕಲ್ ವಾಯ್ಸ್ ಕಾಲ್‌ಗಳನ್ನು 7 ರೂ.ಗೆ ಒಂದು ತಾಸಿನ ವ್ಯಾಲಿಡಿಟಿಯೊಂದಿಗೆ ನೀಡಲಿದೆ.
SuperHour schemeನಡಿ ಗ್ರಾಹಕರು ಸಾಮಾನ್ಯ ನಿಗದಿತ ದರದಲ್ಲಿ ಒಂದು ತಾಸಿನ ಮಟ್ಟಿಗೆ ತಮಗೆ ಬೇಕೆನಿಸುವಷ್ಟು ಡಾಟಾವನ್ನು ಬಳಸಿಕೊಳ್ಳಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ಅನಿರ್ಬಂಧಿತ ಮರಳಿ ಖರೀದಿಯೊಂದಿಗೆ (repeat purchase) ಗ್ರಾಹಕರು ಪ್ರತೀ ತಾಸನ್ನು SuperHour ಆಗಿ ಮಾಡಿಕೊಳ್ಳಬಹುದು ಎಂದು ವೋಡಾಫೋನ್ ಇಂಡಿಯಾ ಇದರ ಚೀಫ್ ಕಮರ್ಷಿಯಲ್ ಆಫೀಸರ್ ಸಂದೀಪ್ ಕಟಾರಿಯಾ ಹೇಳಿದ್ದಾರೆ.
ಗ್ರಾಹಕರು ಕೇವಲ 7 ರೂ.ಗೆ ವೋಡಾಫೋನ್‌ನಿಂದ ವೋಡಾಫೋನಿಗೆ ಅನ್‌ಲಿಮಿಟೆಡ್ ಲೋಕಲ್ ಕಾಲ್‌ಗಳನ್ನು ಮಾಡಲು ಸೂಪರ್ ಅವರ್ ಪ್ಯಾಕ್ ಅನ್ನು ಖರೀದಿಸಬಹುದಾಗಿದೆ ಎಂದವರು ಹೇಳಿದ್ದಾರೆ.
16 ರೂ.ಗಳ ಆರಂಭಿಕ ದರದೊಂದಿಗೆ ಒಂದು ತಾಸಿನ 4ಜಿ/3ಜಿ ಅನ್‌ಲಿಮಿಟೆಡ್ ಡಾಟಾ ಬಳಕೆಯನ್ನು ಪ್ರೀಪೇಡ್ ಗ್ರಾಹಕರು ಜನವರಿ 9ರ ಸೋಮವಾರದಿಂದ ಎಲ್ಲ ಸರ್ಕಲ್‌ಗಳಲ್ಲಿ ಪಡೆಯಬಹುದಾಗಿದೆ. ಇಂದು ಶನಿವಾರ ಜ.7ರಂದು ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಆದರೆ ದರಗಳು ವಲಯದಿಂದ ವಲಯಕ್ಕೆ ಸ್ವಲ್ಪ ಮಟ್ಟಿನ ವ್ಯತ್ಯಾಸ ಹೊಂದಿರುತ್ತವೆ ಎಂದು ಸಂದೀಪ್ ಹೇಳಿದ್ದಾರೆ.
ಹಾಗಿದ್ದರೂ ಈ ಕೊಡುಗೆ ಬಿಹಾರ-ಜಾರ್ಖಂಡ್, ಮಧ್ಯಪ್ರದೇಶ-ಛತ್ತೀಸ್‌ಗಢ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರಪ್ರದೇಶ-ತೆಲಂಗಾಣಗಳಲ್ಲಿ ಲಭ್ಯವಿರುವುದಿಲ್ಲ.
ಈ ಯೋಜನೆಯಡಿ 2ಜಿ ಗ್ರಾಹಕರು ಕೇವಲ 5 ರೂ.ಗೆ ಅನ್‌ಲಿಮಿಟೆಡ್ ಡಾಟಾ ಪಡೆಯಬಹುದಾಗಿದೆ. ಅಂತೆಯೇ ಗ್ರಾಹಕರು ವಾಯ್ಸ ಮತ್ತು ಡಾಟಾ ಪ್ಯಾಕ್‌ಗಳ ಅಪರಿಮಿತ ಮರು ಖರೀದಿಯನ್ನು ಮಾಡಬಹುದಾಗಿದೆ.
ಅನ್‌ಲಿಮಿಟೆಡ್ ಡಾಟಾ ಆಫರನ್ನು ಗ್ರಾಹಕರು ವೈವಿಧ್ಯಮ ವಿಡಿಯೋಗಳು ಹಾಗೂ ಸಿನೇಮಾಗಳನ್ನು ವೋಡಾಫೋನ್ ಪ್ಲೇಯಲ್ಲಿ ವೀಕ್ಷಿಸಲು ಬಳಸಬಹುದಾಗಿದೆ. ಇದರ ಸಬ್‌ಸ್ಕ್ರಿಪ್‌ಶನ್ 2017ರ ಮಾರ್ಚ್ 31ರ ವರೆಗೆ ಉಚಿತವಾಗಿರುತ್ತದೆ ಎಂದು ಸಂದೀಪ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ
Google;ಗೂಗಲ್ ಮ್ಯಾಪ್ ಜತೆ ಮಾತಾಡುತ್ತಾ ಡ್ರೈವ್ ಮಾಡಬಹುದು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.