ಸಿಡ್ನಿ ಟೆಸ್ಟ್‌: ಕಾಂಗರೂ ಕ್ಲೀನ್‌ ಸ್ವೀಪ್‌ ಸಾಧನೆ


Team Udayavani, Jan 8, 2017, 3:45 AM IST

aus-win.jpg

ಸಿಡ್ನಿ: ಪಾಕಿಸ್ಥಾನ ವಿರುದ್ಧದ ಸಿಡ್ನಿ ಟೆಸ್ಟ್‌ ಪಂದ್ಯವನ್ನು 220 ರನ್ನುಗಳ ಭಾರೀ ಅಂತರದಿಂದ ಗೆದ್ದ ಆಸ್ಟ್ರೇಲಿಯ ತನ್ನ ಕ್ಲೀನ್‌ ಸ್ವೀಪ್‌ ಯೋಜನೆಯನ್ನು ಅಧಿಕಾರಯುತವಾಗಿ ಸಾಕಾರಗೊಳಿಸಿದೆ. ಇದರೊಂದಿಗೆ ತವರಿನ ಸತತ 4 ಸರಣಿಗಳಲ್ಲಿ ಪಾಕಿಸ್ಥಾನಕ್ಕೆ 3-0 ವೈಟ್‌ವಾಶ್‌ ಮಾಡಿ ಏಕಚಕ್ರಾಧಿಪತ್ಯವನ್ನು ಸಾರಿದೆ.

ಗೆಲುವಿಗೆ 465 ರನ್ನುಗಳ ಅಸಾಧ್ಯ ಸವಾಲು ಪಡೆದಿದ್ದ ಪಾಕಿಸ್ಥಾನ, ಪಂದ್ಯದ ಅಂತಿಮ ದಿನವಾದ ಶನಿವಾರ ಎಂದಿನಂತೆ ಕಾಂಗರೂ ದಾಳಿಗೆ ಕಂಗಾಲಾಗಿ 244ಕ್ಕೆ ಸರ್ವಪತನ ಕಂಡಿತು. ವೇಗಿ ಹ್ಯಾಝಲ್‌ವುಡ್‌ ಮತ್ತು ಸ್ಪಿನ್ನರ್‌ ಓ’ಕೀಫ್ ಸೇರಿಕೊಂಡು ಪಾಕ್‌ ಬ್ಯಾಟಿಂಗ್‌ ಸರದಿಯನ್ನು ಸೀಳಿದರು. ಇಬ್ಬರೂ ತಲಾ 3 ವಿಕೆಟ್‌ ಕಿತ್ತರು. ಮತ್ತೂಬ್ಬ ಸ್ಪಿನ್ನರ್‌ ಲಿಯೋನ್‌ ಬುಟ್ಟಿಗೆ 2 ವಿಕೆಟ್‌ ಬಿತ್ತು.

ಪಾಕಿಸ್ಥಾನ ಒಂದಕ್ಕೆ 55 ರನ್‌ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಕೆಲವು ವಿಕೆಟ್‌ಗಳನ್ನು ಉಳಿಸಿಕೊಂಡು ಪಂದ್ಯವನ್ನು ಡ್ರಾ ಮಾಡುವ ಅವಕಾಶ ಮಿಸ್ಬಾ ಪಡೆಯ ಮುಂದಿತ್ತಾದರೂ ಇದರಲ್ಲಿ ಯಶಸ್ಸು ಲಭಿಸಲಿಲ್ಲ. ದಿನದ ಮೊದಲ ಓವರಿನಲ್ಲೇ ಅಜರ್‌ ಅಲಿ ವಿಕೆಟ್‌ ಬಿದ್ದಾಗಲೇ ಪಾಕ್‌ ಹಾದಿ ಎತ್ತ ಎಂಬುದರ ಸೂಚನೆ ಲಭಿಸಿತು. ಲಂಚ್‌ ಒಳಗೆ ಬಾಬರ್‌ ಆಜಂ (9), ಮತ್ತು ಯೂನಿಸ್‌ ಖಾನ್‌ (13) ಪೆವಿಲಿಯನ್‌ ಹಾದಿ ಹಿಡಿಯುವುದರೊಂದಿಗೆ ಆಸ್ಟ್ರೇಲಿಯದ ಗೆಲುವು ಖಾತ್ರಿಯಾಯಿತು. ಟೀ ವಿರಾಮದೊಳಗೆ ಪಾಕ್‌ ಕತೆ ಮುಗಿಯಿತು.

ಪಾಕ್‌ ಸರದಿಯಲ್ಲಿ ಬ್ಯಾಟಿಮಗ್‌ ಹೋರಾಟ ಸಂಘಟಿಸಿದವರು ಇಬ್ಬರು ಮಾತ್ರ. 72 ರನ್‌ ಮಾಡಿ ಅಜೇಯರಾಗಿ ಉಳಿದ ಸಫ‌ìರಾಜ್‌ ಅಹ್ಮದ್‌ ಮತ್ತು ನೈಟ್‌ ವಾಚ್‌ಮನ್‌ ಆಗಿ ಬಂದು 128 ಎಸೆತ ನಿಭಾಯಿಸಿದ ಯಾಸಿರ್‌ ಶಾ (13). ನಾಯಕ ಮಿಸ್ಬಾ ಗಳಿಕೆ ಕೇವಲ 38 ರನ್‌.

ಇದು ಆಸ್ಟ್ರೇಲಿಯ ನೆಲದಲ್ಲಿ ಪಾಕಿಸ್ಥಾನ ಅನುಭವಿಸಿದ ಸತತ 12ನೇ ಸೋಲು. 22 ವರ್ಷಗಳ ಹಿಂದೆ, ಸಿಡ್ನಿಯಲ್ಲಿ ಗೆದ್ದ ಬಳಿಕ ಕಾಂಗರೂ ನೆಲದಲ್ಲಿ ಪಾಕ್‌ ಎಡವುತ್ತಲೇ ಬಂದಿದೆ. ಕ್ರಮವಾಗಿ 113 ಹಾಗೂ 55 ರನ್‌ ಸಿಡಿಸಿದ ಡೇವಿಡ್‌ ವಾರ್ನರ್‌ ಪಂದ್ಯಶ್ರೇಷ್ಠ, ಸ್ಟೀವನ್‌ ಸ್ಮಿತ್‌ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌:    8 ವಿಕೆಟಿಗೆ ಡಿಕ್ಲೇರ್‌ 538
ಪಾಕಿಸ್ಥಾನ ಪ್ರಥಮ ಇನ್ನಿಂಗ್ಸ್‌:        315
ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌:    2 ವಿಕೆಟಿಗೆ ಡಿಕ್ಲೇರ್‌ 241
ಪಾಕಿಸ್ಥಾನ ದ್ವಿತೀಯ ಇನ್ನಿಂಗ್ಸ್‌
(ಗೆಲುವಿನ ಗುರಿ 465 ರನ್‌)
ಅಜರ್‌ ಅಲಿ    ಸಿ ಮತ್ತು ಬಿ ಹ್ಯಾಝಲ್‌ವುಡ್‌    11
ಶಾರ್ಜೀಲ್‌ ಖಾನ್‌    ಸಿ ವಾರ್ನರ್‌ ಬಿ ಲಿಯೋನ್‌    40
ಯಾಸಿರ್‌ ಶಾ    ಸಿ ಬರ್ಡ್‌ ಬಿ ಓ’ಕೀಫ್    13
ಬಾಬರ್‌ ಆಜಂ    ಎಲ್‌ಬಿಡಬ್ಲ್ಯು ಹ್ಯಾಝಲ್‌ವುಡ್‌    9
ಯೂನಿಸ್‌ ಖಾನ್‌    ಸಿ ಹ್ಯಾಝಲ್‌ವುಡ್‌ ಬಿ ಲಿಯೋನ್‌    13
ಮಿಸ್ಬಾ ಉಲ್‌ ಹಕ್‌    ಸಿ ಲಿಯೋನ್‌ ಬಿ ಓ’ಕೀಫ್    38
ಅಸದ್‌ ಶಫೀಕ್‌    ಬಿ ಸ್ಟಾರ್ಕ್‌    30
ಸಫ‌ìರಾಜ್‌ ಅಹ್ಮದ್‌    ಔಟಾಗದೆ    72
ವಹಾಬ್‌ ರಿಯಾಜ್‌    ಸಿ ವೇಡ್‌ ಬಿ ಓ’ಕೀಫ್    12
ಮೊಹಮ್ಮದ್‌ ಆಮಿರ್‌    ರನೌಟ್‌    5
ಇಮ್ರಾನ್‌ ಖಾನ್‌    ಸಿ ಬರ್ಡ್‌ ಬಿ ಹ್ಯಾಝಲ್‌ವುಡ್‌    0
ಇತರ        1
ಒಟ್ಟು  (ಆಲೌಟ್‌)        244
ವಿಕೆಟ್‌ ಪತನ: 1-51, 2-55, 3-67, 4-82, 5-96, 6-136, 7-188, 8-202, 9-224.
ಬೌಲಿಂಗ್‌:
ಮಿಚೆಲ್‌ ಸ್ಟಾರ್ಕ್‌        17-2-57-1
ಜೋಶ್‌ ಹ್ಯಾಝಲ್‌ವುಡ್‌        18.2-7-29-3
ನಥನ್‌ ಲಿಯೋನ್‌        27-6-100-2
ಸ್ಟೀವ್‌ ಓ’ಕೀಫ್        17-4-53-3
ಸ್ಟೀವನ್‌ ಸ್ಮಿತ್‌        1-0-5-0

ಪಂದ್ಯಶ್ರೇಷ್ಠ: ಡೇವಿಡ್‌ ವಾರ್ನರ್‌
ಸರಣಿಶ್ರೇಷ್ಠ: ಸ್ಟೀವನ್‌ ಸ್ಮಿತ್‌

ಎಕ್ಸ್‌ಟ್ರಾ ಇನ್ನಿಂಗ್ಸ್‌
* ಆಸ್ಟ್ರೇಲಿಯ ಸತತ 4 ತವರಿನ ಸರಣಿಗಳಲ್ಲಿ ಪಾಕಿಸ್ಥಾನಕ್ಕೆ ವೈಟ್‌ವಾಶ್‌ ಮಾಡಿತು. ಇದಕ್ಕೂ ಮುನ್ನ 1999-00, 2004-05, 2009-10ರ ಸರಣಿಗಳಲ್ಲೂ 3-0 ಅಂತರದಿಂದ ಕ್ಲೀನ್‌ಸಿÌàಪ್‌ ಸಾಧಿಸಿತ್ತು.

* ಪಾಕಿಸ್ಥಾನ ಸತತ 6 ಟೆಸ್ಟ್‌ಗಳಲ್ಲಿ ಸೋಲನುಭವಿಸಿತು. ಪಾಕ್‌ ತನ್ನ ಟೆಸ್ಟ್‌ ಇತಿಹಾಸದಲ್ಲಿ ಅನುಭವಿಸಿದ ಅತ್ಯಧಿಕ ಸಂಖ್ಯೆಯ ಸತತ ಸೋಲು ಇದಾಗಿದೆ. ಇದಕ್ಕೂ ಮುನ್ನ 1999-2000ರಲ್ಲಿ ಸತತ 5 ಟೆಸ್ಟ್‌ಗಳಲ್ಲಿ ಸೋತದ್ದು “ದಾಖಲೆ’ಯಾಗಿತ್ತು.

* ಜಾಕ್ಸನ್‌ ಬರ್ಡ್‌ ಬದಲಿ ಆಟಗಾರನಾಗಿ ಟೆಸ್ಟ್‌ ಪಂದ್ಯವೊಂದರಲ್ಲಿ ಅತೀ ಹೆಚ್ಚು 4 ಕ್ಯಾಚ್‌ ಸಂಪಾದಿಸಿದರು. ಸ್ವಾರಸ್ಯವೆಂದರೆ, ಈವರೆಗಿನ 8 ಟೆಸ್ಟ್‌ಗಳಲ್ಲಿ ಬರ್ಡ್‌ ಪಡೆದದ್ದು ಕೇವಲ 2 ಕ್ಯಾಚ್‌ ಮಾತ್ರ!

* ಸಿಡ್ನಿ ಟೆಸ್ಟ್‌ ಮುಕ್ತಾಯದೊಂದಿಗೆ ಯೂನಿಸ್‌ ಖಾನ್‌ ಅವರ ಒಟ್ಟು ರನ್‌ ಗಳಿಕೆ 9,977ಕ್ಕೆ ಏರಿತು. 10 ಸಾವಿರ ರನ್‌ ಪೇರಿಸಿದ ಪಾಕಿಸ್ಥಾನದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಯಿಂದ ಅವರು ಸ್ವಲ್ಪದರಲ್ಲೇ ದೂರ ಉಳಿದರು.

* ಈ ಸರಣಿಯಲ್ಲಿ ಯಾರೂ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿಸಿದ ಸಾಧನೆ ಮಾಡಲಿಲ್ಲ. ಇದು 3 ಹಾಗೂ ಅದಕ್ಕಿಂತ ಹೆಚ್ಚಿನ ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಕಂಡುಬಂದ ಕೇವಲ 2ನೇ ಸಂದರ್ಭ. ಮೊದಲ ದೃಷ್ಟಾಂತಕ್ಕೆ ಸಾಕ್ಷಿಯಾಗುವುದು 1964-65ರ ನ್ಯೂಜಿಲ್ಯಾಂಡ್‌-ಪಾಕಿಸ್ಥಾನ ಸರಣಿ. ಅಂದಹಾಗೆ ಆಸೀಸ್‌-ಪಾಕ್‌ ನಡುವಿನ ಈ ಸರಣಿಯ ಅತ್ಯುತ್ತಮ ಬೌಲಿಂಗ್‌ ದಾಖಲಿಸಿದವರು ಮಿಚೆಲ್‌ ಸ್ಟಾರ್ಕ್‌ (36ಕ್ಕೆ 4).

ಟಾಪ್ ನ್ಯೂಸ್

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

vidhana-Soudha

Cast Census: ಲಿಂಗಾಯತ, ಒಕ್ಕಲಿಗ ಜಂಟಿ ಸಮರ?

1-bajaj

L&T CEO ಹೇಳಿಕೆಗೆ ತಿರುಗೇಟು;ಮೊದಲು ಬಾಸ್‌ ವಾರಕ್ಕೆ 90 ಗಂಟೆ ದುಡಿಯಲಿ: ಬಜಾಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eweweewqe

Novak Djokovic; ಆಹಾರದಲ್ಲಿ ವಿಷ: ಜೊಕೋ ಆಘಾತಕಾರಿ ಹೇಳಿಕೆ

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

1-man

Gael Monfils;  35ನೇ ಎಟಿಪಿ ಫೈನಲ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

BSY–1

ಬಿಜೆಪಿ ಸಭೆಯಲ್ಲಿ ಭಿನ್ನರ ವಿರುದ್ಧ ಕಿಡಿ; ಯತ್ನಾಳ್‌ ಬಣದ ವಿರುದ್ಧ ಮಾಜಿ ಶಾಸಕರು ಅಸಮಾಧಾನ

Sunil-kumar

Naxal Surrender: ನಕ್ಸಲ್‌ ಶರಣಾಗತಿ ಪೂರ್ವಯೋಜಿತ ಸ್ಟೇಜ್‌ ಶೋ ಅಲ್ಲವೇ?

Debt

Finance Debt: ಫೈನಾನ್ಸ್‌ ಸಾಲ ವಸೂಲಿಗೆ ಹೆದರಿ ಊರನ್ನೇ ಬಿಟ್ಟರು!

CT-Ravi

Naxal Surrender: ರಾಜ್ಯ ಸರಕಾರವೇ ನಕ್ಸಲರಿಗೆ ಶರಣಾಗಿದೆಯೋ?: ಸಿ.ಟಿ. ರವಿ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Manipal: ನಾಲ್ವರು ಅನುಪಮ ಸಾಧಕರಿಗೆ ಇಂದು ಹೊಸ ವರ್ಷದ ಪ್ರಶಸ್ತಿ ಪ್ರದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.