ಬಿಸಿಸಿಐ ಸ್ಫೂರ್ತಿ: ಪಿಸಿಬಿ ಪದಾಧಿಕಾರಿಗಳಿಗೂ ವಯೋಮಿತಿ?
Team Udayavani, Jan 8, 2017, 3:45 AM IST
ಕರಾಚಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಪದಾಧಿಕಾರಿಗಳಿಗೆ ಸರ್ವೋಚ್ಚ ನ್ಯಾಯಾಲಯ 70 ವರ್ಷ ಗರಿಷ್ಠ ವಯೋಮಿತಿ ಹೇರಿದೆ. ಇದರ ಪರಿಣಾಮ ಬಿಸಿಸಿಐನಲ್ಲಿ 70 ವರ್ಷ ಮೀರಿದವರು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ.
ಇದನ್ನು ಸ್ಫೂರ್ತಿಯಾಗಿಸಿಕೊಂಡಿರುವ ಪಾಕ್ ಕ್ರಿಕೆಟ್ ಮಂಡಳಿ ಕೂಡ ತನ್ನ ಪದಾಧಿಕಾರಿಗಳಿಗೆ ಕೂಡ 70 ವರ್ಷದ ಮಿತಿ ಹೇರಲು ಚಿಂತನೆ ನಡೆಸಿದೆ. ಪಿಸಿಬಿ ಅಧ್ಯಕ್ಷ ಶಹರ್ಯಾರ್‌ಗೆ 82 ವರ್ಷವಾಗಿದೆ. ಒಂದು ವೇಳೆ ಇದು ಜಾರಿಯಾದರೆ ಶಹರ್ಯಾರ್ ಅಧಿಕಾರ ಕಳೆದುಕೊಳ್ಳಬೇಕಾಗಬಹುದು. ಈ ನಿಟ್ಟಿನಲ್ಲಿ ಮಂಡಳಿ ಮಾಜಿ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ತಂಡಕ್ಕೆ ವ್ಯವಸ್ಥಾಪಕರಾಗಿದ್ದ ಮಾಜಿ ನಾಯಕ, 76 ವರ್ಷದ ಇಂತಿಕಾಬ್ ಆಲಂ ಅವಧಿ ಕಳೆದ ವರ್ಷದ ಇಂಗ್ಲೆಂಡ್ ಪ್ರವಾಸದ ವೇಳೆ ಅಂತ್ಯವಾಗಿದೆ. ಈ ಜಾಗಕ್ಕೆ 68 ವರ್ಷದ ವಾಸಿಂ ಬರಿಯನ್ನು ನೇಮಕ ಮಾಡಲಾಗಿದೆ. ಇದೇ ರೀತಿ ಬೇರೆ ಬೇರೆ ಹುದ್ದೆಗೆ ಹೊಸದಾಗಿ ಮಾಡಿಕೊಂಡಿರುವ ಪಿಸಿಬಿ ಪಟ್ಟಿಯಲ್ಲಿ 70 ವರ್ಷಕ್ಕಿಂತ ಕಡಿಮೆ ಇರುವ ಇಕ್ಬಾಲ್ ಖಾಸಿಂ, ಹರೂನ್ ರಶೀದ್, ತಲತ್ ಅಲಿ, ಮೊಯಿನ್ ಖಾನ್, ಜಲಾಲುದ್ದೀನ್, ನದೀಮ್ ಖಾನ್, ಇಕ್ಬಾಲ್ ಸಿಕಂದರ್ ಹೆಸರು ಕೇಳಿಬರುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.