ಸ್ತ್ರೀಯರ ತುಂಡುಡುಗೆಯಿಂದ ಕಾಮುಕರಿಗೆ ಪ್ರಚೋದನೆ: ಮಾತೆ
Team Udayavani, Jan 8, 2017, 3:45 AM IST
ಧಾರವಾಡ: ಸ್ವೇಚ್ಛಾಚಾರವೇ ಅತ್ಯಾಚಾರ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದ್ದು, ಅರಬ್ ದೇಶಗಳಲ್ಲಿ ಇರುವಂತೆ ಕಟ್ಟುನಿಟ್ಟಿನ ನಿಯಮಾವಳಿ ಭಾರತದಲ್ಲೂ ಜಾರಿ ಆಗದ ಹೊರತು ದೌರ್ಜನ್ಯಗಳಿಗೆ ಕಡಿವಾಣ ಹಾಕಲು ಅಸಾಧ್ಯ ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಬ್ ದೇಶಗಳಲ್ಲಿ ಕಟ್ಟುನಿಟ್ಟಿನ ನಿಯಮಾವಳಿ, ವಸ್ತ್ರಸಂಹಿತೆ ಇದೆ. ಇದರಿಂದ ಮಹಿಳೆಯರ ಮೇಲಿನ ದೌರ್ಜನ್ಯ ಕೃತ್ಯಗಳು ಕಡಿಮೆ.
ಕಾಲೇಜು, ವಿವಿಗಳಲ್ಲಿ ವಸ್ತ್ರ ಸಂಹಿತೆ ಹಾಗೂ ದೇಶದಲ್ಲಿ ಕಟ್ಟುನಿಟ್ಟಿನ ಶಿಕ್ಷೆಯ ಕಾಯ್ದೆ ಜಾರಿ ಮಾಡಿದರೆ ಇಂತಹ
ಹೀನಕೃತ್ಯಗಳು ಮರುಕಳಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ತುಂಡುಡುಗೆ ಸಲ್ಲದು: ಹೊಸ ವರ್ಷದ ಸಂಭ್ರಮಾಚರಣೆ ಹೆಸರಿನಲ್ಲಿ ಯುವತಿಯರು ನಮ್ಮ ಸಂಸ್ಕೃತಿ ಬಿಟ್ಟು
ಸ್ವೇಚ್ಛಾಚಾರಿಗಳಂತೆ ವರ್ತಿಸುವುದು ಸಲ್ಲದು. ತುಂಡು ಬಟ್ಟೆ ತೊಟ್ಟು ಸುತ್ತಾಟ, ರಾತ್ರಿ ವೇಳೆ ಸಂಭ್ರ ಮಾಚರಣೆ
ಮಾಡೋದು ನಮ್ಮ ಸಂಸ್ಕೃತಿಯಲ್ಲ. ಇದರಿಂದ ಕಾಮುಕರ ಕಣ್ಣಿಗೆ ಮಹಿಳೆಯರೇ ಪ್ರಚೋದನೆ ನೀಡಿದಂತಾಗುತ್ತದೆ. ಹೀಗಾಗಿ
ರಕ್ಷಣೆ ಹಿತದೃಷ್ಟಿಯಿಂದ ಈ ರೀತಿಯ ನಡೆಗಳಿಂದ ಯುವತಿಯರು ಸದಾ ದೂರ ಇರಬೇಕು ಎಂದು ಸಲಹೆ ನೀಡಿದರು.
ವಸ್ತ್ರಸಂಹಿತೆ ಜಾರಿಗೆ ತರಲಿ: ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ಪ್ರಕರಣ ದೇಶದ ಸಂಸ್ಕೃತಿಗೆ ಅವಮಾನಕರ. ಮಹಿಳೆಯರ ಬಗೆಗೆ ಈ ರೀತಿಯ ನಿಲುವು ತೋರಿರುವುದು ನಿಜಕ್ಕೂ ಬೇಸರದ ಸಂಗತಿ. ಈ ಎಲ್ಲ ಬಗೆಯ ಘಟನೆಗಳನ್ನು ಹತ್ತಿಕ್ಕಲು ಸರ್ಕಾರ ವಸ್ತ್ರಸಂಹಿತೆ ಜಾರಿಗೆ ತರಬೇಕು. ಮಠಾಧೀಶರು ಮತ್ತು ಜನಪ್ರತಿನಿಧಿಗಳು ಎಲ್ಲರೂ ಸೇರಿಕೊಂಡು ಸಮಾಜ ಸುಧಾರಣೆಯತ್ತ ಮುನ್ನುಗ್ಗಬೇಕಾದ ಅನಿವಾರ್ಯತೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ
Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ
Hubli: ರಾಜ್ಯದ ಕಾಂಗ್ರೆಸ್ ಸರ್ಕಾರ ಪತನಗೊಳ್ಳುವುದು ಖಚಿತ: ಜಗದೀಶ ಶೆಟ್ಟರ್
Shettar: ಪ್ರಧಾನಿ ಮೋದಿ ಭೇಟಿಯಾದ ಶೆಟ್ಟರ್; ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆಗೆ ಮನವಿ
Kalaburagi: ಡ್ರಗ್ಸ್ ದಂಧೆಕೋರನ ಮೇಲೆ ಕಲಬುರಗಿಯಲ್ಲಿ ಪೊಲೀಸ್ ಫೈರಿಂಗ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.