ವಿವಿಗಳಲ್ಲಿ ಹಣವಿಲ್ವಾ? ಎಲ್ಲೆಲ್ಲಿ ಎಫ್ಡಿ ಇಟ್ಟಿದ್ದಾರೆ ಹೇಳ್ತೇನೆ!
Team Udayavani, Jan 9, 2017, 3:45 AM IST
ಕೊಪ್ಪಳ: ಮುಂದಿನ ಒಂದು ವಾರದಲ್ಲಿ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಎಲ್ಲೆಲ್ಲಿ ಹಣವನ್ನು ಠೇವಣಿಯನ್ನಾಗಿ ಇಟ್ಟಿವೆ ಎನ್ನುವ ಮಾಹಿತಿಯನ್ನು ದಾಖಲೆ ಸಮೇತ ಬಹಿರಂಗ ಮಾಡುತ್ತೇನೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ವಿವಿಗಳಲ್ಲಿ ಹಣವಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಆದರೆ, ಕೆಎಸ್‌ಒಯು -650 ಕೋಟಿ, ಮೈಸೂರು ವಿವಿ 400 ಕೋಟಿ, ಕರ್ನಾಟಕ ವಿವಿ 150 ಕೋಟಿ ಹಣವನ್ನು ಠೇವಣಿಯಾಗಿ ಇಟ್ಟಿವೆ. ಆದರೂ, ಹಣವಿಲ್ಲ ಎಂದು ಆರೋಪ ಮಾಡುತ್ತಿವೆ. ಈ ಎಲ್ಲ ದಾಖಲೆಗಳನ್ನು ಸಿದ್ಧ ಮಾಡಲಾಗಿದೆ. ಒಂದು ವಾರದಲ್ಲಿ ಇದನ್ನು ಬಹಿರಂಗ ಪಡಿಸಲಾಗುವುದು. ಎಲ್ಲ ವಿವಿಗಳಲ್ಲಿ ಅಧಿಕ ಹಣವಿದೆ. ಎಲ್ಲಿಯೂ ಕೊರತೆ ಮಾಡಿಲ್ಲ ಎಂದರು. “ಎಲ್ಲ ವಿವಿಗಳ ಹಣಕಾಸು ವ್ಯವಹಾರದ ಕುರಿತು ಈವರೆಗೂ ಯಾರೂ ಸಭೆ ನಡೆಸಿ ಪರಿಶೀಲಿಸಿಲ್ಲ. ನಾನು ಮೊಟ್ಟ ಮೊದಲ ಬಾರಿಗೆ ಸಭೆ ನಡೆಸಿದ್ದೇನೆ. ಬೆಂಗಳೂರು ವಿವಿಗೆ ಸೇರಿದ 1,100 ಎಕರೆ ಭೂಮಿಯಿದೆ. ಅದರಲ್ಲಿ 100 ಎಕರೆ ಜಾಗ ಒತ್ತುವರಿಯಾಗಿದೆ. ಕೂಡಲೇ ತೆರವು ಮಾಡಲಾಗುವುದು’ ಎಂದರು.
ಸದ್ಯದಲ್ಲಿಯೇ ನಾಲ್ಕು ವಿವಿಗಳ ಹೆಸರು ಬದಲಾವಣೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ. ಕನಕದಾಸ, ವಾಲ್ಮೀಕಿ, ಬಸವಣ್ಣ ಹಾಗೂ ಅಂಬೇಡ್ಕರ್ ಅವರ ಹೆಸರನ್ನು ವಿವಿಗಳಿಗೆ ಇಡಲು ಚಿಂತನೆ ನಡೆಸಲಾಗಿದೆ. ಕಲಬುರಗಿಯಲ್ಲಿ ಕೇಂದ್ರ ಸರ್ಕಾರದ ಅಧಿಧೀನದ 1 ವಿವಿ ಇದ್ದು, ಅದಕ್ಕೆ ಅಂಬೇಡ್ಕರ್ ಹೆಸರಿಡಲು ಕೇಂದ್ರ ತಾತ್ವಿಕವಾಗಿ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.
ನಕಲು ತಡೆಯಲು
ಪಿಎಚ್‌ಡಿ ದಾಖಲೆಗೆ
ಚಿಪ್ ಅಳವಡಿಕೆ!
ರಾಜ್ಯ ಸರ್ಕಾರ ಪಿಎಚ್‌ಡಿ ದಾಖಲೆಗಳಿಗೆ ಚಿಪ್ ಅಳವಡಿಕೆ ಮಾಡಿ ನಕಲಿ ಪತ್ತೆ ಮಾಡಲು ಸಿದ್ಧತೆ ನಡೆಸಿದೆ. ಕೇಂದ್ರ ಸರ್ಕಾರಕ್ಕೂ ಪತ್ರ ಬರೆದು ಎಲ್ಲ ರಾಜ್ಯಗಳಲ್ಲಿನ ವಿವಿಗಳು ಚಿಪ್ ಅಳವಡಿಕೆ ಮಾಡಿ ನಕಲು ತಡೆಯುವಂತೆ ಸಲಹೆ ನೀಡಲಾಗುವುದು ಎಂದು ರಾಯರಡ್ಡಿ ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ ಐದು ಜತೆ ಡ್ರೆಸ್ ಬದಲಾವಣೆ ಮಾಡುತ್ತಾರೆ. ಒಂದು ದಿನಕ್ಕೆ ಬಟ್ಟೆಗಾಗಿ ಐದು ಲಕ್ಷಕ್ಕಿಂತ ಹೆಚ್ಚು ಖರ್ಚು ಮಾಡುತ್ತಾರೆ. ಅವರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ ಎನ್ನುವುದಾದರೆ ಮಹಾತ್ಮ ಗಾಂಧಿಧೀಜಿಯವರಂತೆ ಸರಳ ಉಡುಪು ಧರಿಸಲಿ. ಅವರಿಗೆ ವಿದೇಶ ಸುತ್ತೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ. ನೋಟ್ ಬ್ಯಾನ್‌ನಿಂದ ಜನರಿಗೆ ತೊಂದರೆಯಾಗಿದ್ದು ಬಿಟ್ಟರೆ ದೇಶಕ್ಕೆ ಮತ್ತೇನೂ ಪ್ರಯೋಜನವಾಗಿಲ್ಲ.
– ಬಸವರಾಜ ರಾಯರೆಡ್ಡಿ, ಉನ್ನತ ಶಿಕ್ಷಣ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Siddaramaiah ಸಂಪುಟ ಸೇರಲು ಭರ್ಜರಿ ಲಾಬಿ: ಆಕಾಂಕ್ಷಿಗಳು ಯಾರು? ಕೆಲವರಿಗೆ ಕೊಕ್?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.