ಇದೀಗ ನೋಕಿಯಾದಿಂದ ಆ್ಯಂಡ್ರಾಯ್ಡ ಫೋನ್!
Team Udayavani, Jan 9, 2017, 3:45 AM IST
ಹೊಸದಿಲ್ಲಿ: ಬಹುನಿರೀಕ್ಷಿತ, ಒಂದು ಕಾಲದಲ್ಲಿ ಜನರ ಮನಸ್ಸನ್ನು ಗೆದ್ದಿದ್ದ ನೋಕಿಯಾ ಫೋನ್‌ಗಳು ಇದೀಗ ಮತ್ತೆ ಮಾರುಕಟ್ಟೆ ಪ್ರವೇಶಿಸಿವೆ. ಅದೂ ಜನರ ಅತಿ ಬೇಡಿಕೆಯ ಆ್ಯಂಡ್ರಾಯ್ಡ ಫೋನ್ ರೂಪದಲ್ಲಿ. ನೋಕಿಯಾ ಬ್ರ್ಯಾಂಡ್‌ನ ಹಕ್ಕು ಹೊಂದಿರುವ ಎಚ್‌ಎಂಡಿ ಗ್ಲೋಬಲ್ ನೋಕಿಯಾ 6 ಹೆಸರಿನ ಆ್ಯಂಡ್ರಾಯ್ಡ ಆಪರೇಟಿಂಗ್ ಇರುವ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಸದ್ಯ ಇದು ಚೀನದಲ್ಲಿ ಮಾತ್ರ ಲಭ್ಯ.
ಆ್ಯಂಡ್ರಾಯ್ಡ ನೂತನ ಆವೃತ್ತಿ 7.0 ನುಗಾಟ್ ಅನ್ನು ಇದು ಹೊಂದಿದ್ದು, 5.5 ಇಂಚಿನ ಎಚ್‌ಡಿ ಡಿಸ್‌ಪ್ಲೇ ಹೊಂದಿದೆ. ಕ್ವಾಲಕ್¾ ಸ್ನಾಪ್‌ಡ್ರಾಗನ್ 430 ಎಸ್‌ಒಸಿ ಪ್ರೊಸೆಸರ್ ಹೊಂದಿದ್ದು, 4ಜಿಬಿ ರ್ಯಾಮ್ ಹೊಂದಿದೆ. 64 ಜಿಬಿ ಹಾರ್ಡ್ ಡ್ರೈವ್ ಹೊಂದಿದೆ. ನೋಕಿಯಾ 6 ಡ್ಯುಎಲ್ ಸಿಮ್ ಫೋನ್ ಆಗಿದ್ದು, 3000 ಎಮ್‌ಎಎಚ್ ಸಾಮರ್ಥ್ಯದ ಬ್ಯಾಟರಿ ಹೊಂದಿದೆ. 16 ಮೆಗಾಪಿಕ್ಸಲ್‌ನ ಹಿಂಬದಿ ಕ್ಯಾಮೆರಾ, 8 ಮೆಗಾಪಿಕ್ಸಲ್‌ನ ಮುಂಭಾಗದ ಕ್ಯಾಮೆರಾ ಹೊಂದಿದೆ. ಸದ್ಯ ಚೀನದಲ್ಲಿ ಇದರ ಬೆಲೆ 16,750 ರೂ. ಆಗಿದೆ. ಸದ್ಯ ಚೀನ ಬಿಟ್ಟು ಬೇರಾವುದೇ ದೇಶಗಳಲ್ಲಿ ನೋಕಿಯಾ ಫೋನ್ ಬಿಡುಗಡೆ ಮಾಡುವ ಉದ್ದೇಶವಿಲ್ಲ ಎಂದು ಎಚ್‌ಎಮ್‌ಡಿ ಕಂಪನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL : ಸಿಎಸ್‌ಕೆ ಮಾಲಿಕ ಶ್ರೀನಿವಾಸನ್ ವಿರುದ್ದ ಫಿಕ್ಸಿಂಗ್ ಆರೋಪ ಮಾಡಿದ ಲಲಿತ್ ಮೋದಿ
Ranchi: ಪ್ರೇಯಸಿಯನ್ನು ಕೊಂದು 40ರಿಂದ 50 ತುಂಡು ಮಾಡಿದ ಕಟುಕ!
Hunsur: ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
ICC ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಿಂದ ಸಂಪೂರ್ಣ ಸ್ಥಳಾಂತರ?: ಐಸಿಸಿ ಸಭೆಯಲ್ಲಿ ನಿರ್ಧಾರ
Maharashtra: ಬಿಜೆಪಿಗೆ ಮಹಾ ಸಿಎಂ ಅವಕಾಶ: ಇಬ್ಬರು ಮಿತ್ರರಿಗೂ ಡಿಸಿಎಂ ಪಟ್ಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.