ಪ್ರಶ್ನೆಗೆ ನಿಖರ ಉತ್ತರ ಪಡೆಯುವುದೇ ವಿಜ್ಞಾನ
Team Udayavani, Jan 9, 2017, 12:40 PM IST
ಧಾರವಾಡ: ವಿಜ್ಞಾನವೆಂದರೆ ಕೇವಲ ಮಾಹಿತಿ ಮತ್ತು ವಿಷಯಗಳನ್ನು ತಲೆಗೆ ತುಂಬುವುದಲ್ಲ. ಆತ್ಮದಲ್ಲಿ ಕುತೂಹಲವನ್ನು ಜಾಗೃತಗೊಳಿಸಿ ಪ್ರತಿಯೊಂದನ್ನು ಏನು? ಏಕೆ? ಹೇಗೆ? ಎಂಬ ವಿಶ್ಲೇಷಣೆಯೊಂದಿಗೆ ಎಲ್ಲ ಪ್ರಶ್ನೆ-ಪ್ರಮೇಯಗಳಿಗೆ ನಿಖರ ಉತ್ತರ ಪಡೆಯುವುದೇ ವಿಜ್ಞಾನವಾಗಿದೆ ಎಂದು ಬೆಂಗಳೂರಿನ ಡ್ರೀಮ್ಸ್ ಅಲೈವ್ ಫೌಂಡೇಶನ್ ನ ಸ್ಥಾಪಕ ಸಂಜಯ್ ಬನ್ಸಲ್ ಹೇಳಿದರು.
ಇಲ್ಲಿಯ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ಹು-ಧಾ ಮಹಾನಗರಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಂಘಟಿಸಿದ್ದ “ಸಾಯಿನ್ಸ್ ಕಾರ್ನಿವಲ್’ನ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಸಮಾವೇಶದಲ್ಲಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ್ದ ವಿಜ್ಞಾನ ಉಪಕರಣಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಅವರ ಆಸಕ್ತಿ ವಿಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಕ್ರಿಯಾಶೀಲರಾಗುವಂತೆ ಮಾಡಲು ವಿಜ್ಞಾನದ ಚಟುವಟಿಕೆಗಳ ಸಾಯಿನ್ಸ್ ಕಾರ್ನಿವಲ್‌ನ ಮುಂದುವರಿದ ಭಾಗವಾಗಿ ನಡೆದ ಈ ಸಮಾವೇಶದಲ್ಲಿ ಅನೇಕ ವಿದ್ಯಾರ್ಥಿಗಳು ತಾವೇ ಆಸಕ್ತಿಯಿಂದ ಸಿದ್ಧಪಡಿಸಿದ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದನ್ನು ನೋಡಿದಾಗ ಈ ಭಾಗದಲ್ಲಿ ವೈಜ್ಞಾನಿಕ ಕ್ರಾಂತಿಯಾಗುವುದರಲ್ಲಿ ಸಂಶಯವಿಲ್ಲ.
ಪಾಲಕರು ತಮ್ಮ ಮಕ್ಕಳಲ್ಲಿರುವ ವಿಜ್ಞಾನದ ಆಸಕ್ತಿಯನ್ನು ಬೆಳೆಸಿ ಪೋಷಿಸಬೇಕು ಎಂದರು. ಎ.ಆರ್.ಸಿ. ಪ್ರತಿಷ್ಠಾನ ಅಧ್ಯಕ್ಷ ಅರುಣ ಚರಂತಿಮಠ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಅನ್ವೇಷಣೆ ಹಾಗೂ ಚಿಂತನೆಯಲ್ಲಿ ವಿಶೇಷ ಆಸಕ್ತಿ ಹುಟ್ಟಿಸಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯೊಂದಿಗೆ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆ ಒಡಂಬಡಿಕೆ ಮಾಡಿಕೊಂಡ ಮೊದಲ ಶಾಲೆಯಾಗಿ ಹೊರ ಹೊಮ್ಮಲಿದೆ.
ಜೊತೆಗೆ ಬರುವ ಶೈಕ್ಷಣಿಕ ವರ್ಷದಿಂದ ಶಾಲೆಯು ಇಂಟರ್ ಷನಲ್ ಜನರಲ್ ಸರ್ಟಿμಕೇಟ್ ಆಫ್ ಸೆಕೆಂಡಟರಿ ಎಜ್ಯುಕೇಷನ್ (ಐಜಿಸಿಎಸ್‌ಇ) ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಿರುವ ಹುಬ್ಬಳ್ಳಿ -ಧಾರವಾಡದ ಮೊದಲ ಶಾಲೆಯಾಗಲಿದೆ ಎಂದರು. ಈ ವಿಜ್ಞಾನ ಪ್ರದರ್ಶನದಲ್ಲಿ ಪ್ರದರ್ಶಿಸಿದ ಮಾದರಿ ಪ್ರಾತ್ಯಕ್ಷಿಕೆಗಳನ್ನು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕ ಡಾ|ಭಜಂತ್ರಿ,
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ, ಕವಿವಿ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್ ಸಂದೀಪ ಅವರು ಮೌಲ್ಯಮಾಪಕರಾಗಿ ಮಾದರಿಗಳನ್ನು ಪರಿಶೀಲಿಸಿ ಅಂಕಗಳನ್ನು ದಾಖಲಿಸಿದರು. ಶಾಲೆಯ ಪ್ರಾಂಶುಪಾಲ ಅಶ್ವನಿಕುಮಾರ, ವೀಣಾ ಮಣಿ, ಅನುಷಾ ಚರಂತಿಮಠ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Actor Darshan: 6 ತಿಂಗಳ ಬಳಿಕ ದರ್ಶನ್ ಭೇಟಿ: ಪವಿತ್ರಾ ಭಾವುಕ
Nimma Vasthugalige Neeve Javaabdaararu review: ಜವಾಬ್ದಾರಿಯಿಂದ ಸಿನಿಮಾ ನೋಡಿ
Bangladesh: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್
Mangaluru: ಹಿಂದಿ ರಾಷ್ಟ್ರ ಭಾಷೆ ಅಲ್ಲ… ಆರ್.ಅಶ್ವಿನ್ ಹೇಳಿಕೆಗೆ ಅಣ್ಣಾಮಲೈ ಹೇಳಿದ್ದೇನು?
Mudhol: ರೈತರ ಜಮೀನಿನಲ್ಲಿ ಮೊಸಳೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.