ಆನ್‌ಲೈನಲ್ಲಿ ಎಪಿಎಲ್ ಕಾರ್ಡ್ ಫಟಾಫಟ್ ವಿತರಣೆ ಜಾರಿ
Team Udayavani, Jan 10, 2017, 3:45 AM IST
– ಪುರಸಭೆ, ಪಾಲಿಕೆಯಲ್ಲೂ ಅರ್ಜಿ ಸಲ್ಲಿಸಬಹುದು
– ಅರ್ಜಿ ಸಲ್ಲಿಸಿದ ಮರುಕ್ಷಣವೇ ಕಾರ್ಡ್
ಬೆಂಗಳೂರು: ಇನ್ನು ಮುಂದೆ ಅರ್ಜಿ ಸಲ್ಲಿಸಿದ ಮರುಕ್ಷಣವೇ ಎಪಿಎಲ್ ಪಡಿತರ ಚೀಟಿ ನಿಮ್ಮ ಕೈಯಲ್ಲಿರುತ್ತದೆ!
– ಈ ನೂತನ ವ್ಯವಸ್ಥೆಗೆ ರಾಜ್ಯಾದ್ಯಂತ ಸೋಮವಾರ ಚಾಲನೆ ದೊರಕಿದೆ. ಹೊಸ ಆನ್‌ಲೈನ್ ವ್ಯವಸ್ಥೆಯಲ್ಲಿ ಎಪಿಎಲ್ ಕಾರ್ಡ್‌ಗಾಗಿ ಗ್ರಾಹಕರು ಯಾವುದೇ ಮೂಲೆಯಿಂದ ಅರ್ಜಿ ಸಲ್ಲಿಸಿದ ಮರುಕ್ಷಣವೇ “ತಾತ್ಕಾಲಿಕ ಎಪಿಎಲ್ ಕಾರ್ಡ್’ ಪಡೆಯಬಹುದು. ನಂತರ 15 ದಿನಗಳಲ್ಲಿ ಸ್ಪೀಡ್ ಪೋಸ್ಟ್ ಮೂಲಕ ಶಾಶ್ವತ ಎಪಿಎಲ್ ಕಾರ್ಡ್ ಮನೆಗೇ ಬರಲಿದೆ. ಇದಕ್ಕಾಗಿ ಗ್ರಾಹಕರು ನೂರು ರೂ. ಪಾವತಿಸಬೇಕಾಗುತ್ತದೆ.
ಆನ್‌ಲೈನ್ ವ್ಯವಸ್ಥೆ ಮೂಲಕ ಎಪಿಎಲ್ ಕಾರ್ಡ್ ಪಡೆಯುವ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿ ಮಾತನಾಡಿದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್, ರಾಜ್ಯಾದ್ಯಂತ ಎಪಿಎಲ್ ಕಾರ್ಡ್ ಅನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು. ಅರ್ಜಿ ಸಲ್ಲಿಸಿದ ತಕ್ಷಣ ತಾತ್ಕಾಲಿಕ ಚೀಟಿಯನ್ನು ಪಡೆಯಬಹುದು. 15 ದಿನಗಳಲ್ಲಿ ಎಪಿಎಲ್ ಕಾರ್ಡ್‌ನ ಮೂಲ ಪ್ರತಿ ಪಡೆಯಬಹುದು. ಎಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಸಂಖ್ಯೆ ಇದ್ದರೆ ಸಾಕು ಎಂದು ಹೇಳಿದರು.
ಈ ವ್ಯವಸ್ಥೆಯಿಂದ ಎಪಿಎಲ್ ಕಾರ್ಡ್ ಪಡೆಯಲು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ಸಕಾಲ ಯೋಜನೆಯಡಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್ ವಿತರಣೆ ಸೇರಿಸಲಾಗಿದೆ ಎಂದ ಅವರು, ಇದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆಯೂ ಬರಲಿದೆ. ವಿಳಾಸ ತಿದ್ದುಪಡಿ, ಕಾರ್ಡ್‌ಗೆ ಸಲ್ಲಿಸಿದ ಅರ್ಜಿಗಳ ಅಪ್‌ಡೇಟ್, ಹೆಸರುಗಳ ಸೇರ್ಪಡೆ ಸೇರಿದಂತೆ ಹಲವು ಉಪಯೋಗಗಳು ಆನ್‌ಲೈನ್ ವ್ಯವಸ್ಥೆಯಲ್ಲಿ ಲಭ್ಯ ಎಂದರು.
ಬಳಕೆ ಹೀಗೆ:
ಎಪಿಎಲ್ ಕಾರ್ಡ್ ಪಡೆಯಲು ಇರುವ ಹಂತಗಳು ಕೂಡ ಸುಲಭ. ಗ್ರಾಹಕರು ahara.kar.nic.inಗೆ ಹೋಗಿ ಅಲ್ಲಿ ಹೊಸ ಕಾರ್ಡ್‌ಗಾಗಿ ಇರುವ ಆಯ್ಕೆ ಗುಂಡಿಯನ್ನು ಒತ್ತಬೇಕು. ಅಲ್ಲಿ ಆಧಾರ್ ಸಂಖ್ಯೆ ಕೇಳುತ್ತದೆ. ನಂತರ ಅದನ್ನು ಭರ್ತಿ ಮಾಡಿದ ನಂತರ ಆಧಾರ್‌ನಲ್ಲಿ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಆಗ, ಅರ್ಜಿದಾರರ ಮೊಬೈಲ್‌ಗೆ “ಒನ್ ಟೈಮ್ ಪಾಸ್‌ವರ್ಡ್’ (ಒಟಿಪಿ) ಬರುತ್ತದೆ. ಅದನ್ನು ನಮೂದಿಸಿದ ತಕ್ಷಣ ಪರದೆ ಮೇಲೆ ಅರ್ಜಿದಾರರ ಎಪಿಎಲ್ ಕಾರ್ಡ್ ಮಾಹಿತಿ ಬರುತ್ತದೆ. ಅದನ್ನು ಪ್ರಿಂಟ್ ತೆಗೆದುಕೊಳ್ಳಬಹುದು ಎಂದು ವಿವರಿಸಿದರು.
ನಗರ ಪ್ರದೇಶದಲ್ಲಿರುವವರು ಪುರಸಭೆ ಮತ್ತು ಪಾಲಿಕೆಯಲ್ಲೂ ಅರ್ಜಿ ಸಲ್ಲಿಸಬಹುದು ಎಂದು ಯು.ಟಿ. ಖಾದರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯದರ್ಶಿ ಹರ್ಷ ಗುಪ್ತ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Congress; ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ: ಯತೀಂದ್ರ ಸಿದ್ದರಾಮಯ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.